Powered By Blogger

Tuesday, 29 November 2011

KOLAVER DI


ಒಂದು ವಾರದಲ್ಲಿ ಐದು ಮಿಲಿಯನ್ “ಯೂ ಟ್ಯೂಬ್ ” ವಿಕ್ಷಕರನ್ನು ಪಡೆದ “ಕೊಳವರಿ ಕೊಳವರಿ ಡಿ”


Posted on  by ವಿಶ್ವ ಕನ್ನಡಿಗ ನ್ಯೂಸ್



ಚಿತ್ರ ಜಗತ್ತು ಅಂದರೆ  ವಿಸ್ಮಯಗಳ ದಾಖಲೆಗಳ  ಪ್ರಪಂಚ ಎಂದರೆ  ತಪ್ಪಾಗಲಾರದು . ಇಲ್ಲಿ ದಿನಕ್ಕೊಂದು ಹೊಸ ಹೊಸ  ದಾಖಲೆಗಳು  ಹುಟ್ಟಿಕೊಳ್ಳುತ್ತವೆ . ಇದೀಗ ಇಲ್ಲೊಂದು ಹೊಸ ದಾಖಲೆ ಹೊಸದಾಗಿ ಮೂಡಿ ಬಂದಿದೆ . ತಮಿಳು   ಚಿತ್ರ  “೩ ” ಯ ಹಾಡು  “ಕೊಳವರಿ ಕೊಳವರಿ ಡಿ” ಒಂದೇ ವಾರದಲ್ಲಿ ” ಯೂ ಟ್ಯೂಬ್ ” ನಲ್ಲಿ ಐದು ಮಿಲಿಯನ್ ವಿಕ್ಷಕರನ್ನು ಪಡೆದು ಕೊಂಡಿದೆ. ತಮಿಳು  ಚಿತ್ರ ರಂಗದ  ಸೂಪರ್ ಸ್ಟಾರ್  ರಜನೀಕಾಂತ್  ಅವರ ಅಳಿಯ  ಧನುಶ್  ಸ್ವತಃ  ಹಾಡಿರುವ ಈ ಹಾಡು ಯಾರೂ  ಊಹಿಸದಷ್ಟು ಯಶಸ್ಸನ್ನು   ಪಡೆದು ಕೊಂಡಿದೆ  . ಹಾಡು ಭಾರತದಲ್ಲಿ ಮಾತ್ರವಲ್ಲ ಅಮೇರಿಕಾ , ಕೆನಡಾ , ಮಲೇಶಿಯಾ ಸೇರಿದಂತೆ ಅನೇಕ ದೇಶಗಳಲ್ಲಿ  ಜನಪ್ರಿಯವಾಗಿದೆ .
 ಚಿತ್ರದ ಬಂಡವಾಳ  ಕೇವಲ  ಈ ಹಾಡಿನ ಮೂಲಕ  ಸಿಕ್ಕಿರೋದು ಈ ಹಾಡಿ ನ  ಯಶಸ್ಸನ್ನು  ತೋರಿಸುತ್ತೆ  .  ಈ ಚಿತ್ರ ಇನ್ನೂ ಅನೇಕ  ವಿಶೇಷತೆಗಳನ್ನು ಒಳಗೊಂಡಿದೆ.   ಚಿತ್ರದ ನಿರ್ಮಾಪಕರು ಕಸ್ತೂರಿ  ರಾಜ  . ಚಿತ್ರದ ಸಂಗೀತ ನಿರ್ದೇಶಕ ೨೨ ವಯಸ್ಸಿನ  ಹೊಸ ಪ್ರತಿಭೆ ಅನಿರುಧ್  ,   ಚಿತ್ರದ ನಾಯಕಿ  ಖ್ಯಾತ   ನಟ  ಕಮಲ್ ಹಾಸನ್  ಅವರ ಪುತ್ರಿ  ಪ್ರಿಯ ಹಾಸನ್ , ಚಿತ್ರದ ನಾಯಕ ನಟ  ಧನುಶ್,   ಚಿತ್ರಕ್ಕೆ  ಕಥೆ   ಬರೆದು  ನಿರ್ದೆಶಿಸಿರುವುದು ರಜನಿ ಕಾಂತ್  ಪುತ್ರಿ  ಐಶ್ವರ್ಯ  ಧನುಶ್ .  ನಾಯಕ ನಟನ  ಪತ್ನಿಯೇ   ಈ ಚಿತ್ರದ ನಿರ್ದೇಶಕಿ ಆಗಿರೋದು ಈ ಚಿತ್ರದ ವಿಶೇಷತೆಗಳಲ್ಲೊಂದು .
 ಜನಪ್ರಿಯ ಕೊಳವರಿ  ಕೊಳವರಿ ಡಿ ಹಾಡಿನ ವಿಡಿಯೋ ಇಲ್ಲಿದೆ . ನೀವೊಮ್ಮೆ ಕೇಳಿ 
 
 
ನಿತಿನ್  ರೈ ಕುಕ್ಕುವಳ್ಳಿ ( ವರದಿಗಾರರು . ವಿಕೆ ನ್ಯೂಸ್)

Tuesday, 22 November 2011

ಏರ್ ಇಂಡಿಯಾ ಪಕ್ಷಿ ಆಕಾಶದಲ್ಲಿ ಹಾರಲು ………………30ಸಾವಿರ ಕೋಟಿ ಬೇಕಂತೆ…!


Posted on  by ಸಲೀಂ,ಅಮ್ಚಿನಡ್ಕ,ಪುತ್ತೂರು.

ನವದೆಹಲಿ, ನ.22: ಸರಕಾರಿ ಒಡೆತನದ ಏರ್ ಇಂಡಿಯಾ ವಿಮಾನಗಳು ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸರ್ಕಾರದ ಸಹಾಯ ಹಸ್ತ ಚಾಚುತ್ತಿದೆ. ಪ್ರಸಕ್ತ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಇನ್ನೂ ಆರ್ಥಿಕ ಬಿಕ್ಕಟ್ಟಿನ ಪಂಜರದಿಂದ ಹೊರ ಬಂದಿಲ್ಲ . ಈ ನಡುವೆ ಏರ್ ಇಂಡಿಯಾ ವಿಮಾನಗಳು ಸರ್ಕಾರದ ಸಹಾಯವನ್ನು ಬೇಡುತ್ತಿದೆ.
ಉನ್ನತ ಮಟ್ಟದ ಕಾರ್ಯದರ್ಶಿಗಲ ಸಭೆಯಲ್ಲಿ ಏರ್ ಇಂಡಿಯಾ ಪುನುರುತ್ಥಾನಕ್ಕೆ ಸುಮಾರು 30,000 ಕೋಟಿ ರು ನೀಡಲು ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಏರ್ ಇಂಡಿಯಾ ಸಂಸ್ಥೆ ಮತ್ತೆ ಲಾಭದಾಯಕ ಸ್ಥಿತಿಗೆ ಮರಳುವವರೆಗೂ ಸರ್ಕಾರದ ಬಂಡವಾಳ ಹೂಡಿಕೆ ಮುಂದುವರೆಸಲಿದೆಯೇ ಎಂಬುದರ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಆದರೆ, ಈ ಬೇಲ್ ಔಟ್ ಯೋಜನೆಗೆ ಹಲವರ ವಿರೋಧ ವ್ಯಕ್ತವಾಗಿದೆ. ಏರ್ ಲೈನ್ ಗೆ ಸಹಾಯ ಹಸ್ತ ಚಾಚುವ ಮೂಲಕ ಖಾಸಗಿಯವರಿಗೆ ತನ್ನ ಷೇರುಗಳನ್ನು ಮಾರಾಟ ಮಾಡುವುದೇ ಸರ್ಕಾರದ ಉದ್ದೇಶ ಎನ್ನಲಾಗುತ್ತಿದೆ. 
ಏರ್ ಇಂಡಿಯಾ ಸಂಸ್ಥೆ 2018ರ ಆರ್ಥಿಕ ವರ್ಷದ ಕೊನೆಗೆ ಲಾಭದಾಯಕ ಸಂಸ್ಥೆಯಾಗಿ ಹೊರ ಹೊಮ್ಮಲಿದೆ ಎಂದು ಸಮಿತಿ ಲೆಕ್ಕಾಚಾರ ಹಾಕಿ ಹೇಳುತ್ತಿದೆ. ಲೀಸ್ ಆಧಾರದ ಮೇಲೆ ಏರ್ ಕ್ರಾಫ್ಟ್ ಬಳಸುವ ಬಗ್ಗೆ ಕೂಡಾ ಚಿಂತಿಸಲಾಗಿದೆ.
ಕಳೆದ ದಶಕದಲ್ಲಿ ನಾಗರೀಕ ವಿಮಾನಯಾನ ಕ್ಷೇತ್ರದಲ್ಲಿ ಗೋ ಇಂಡಿಗೋ ಸಂಸ್ಥೆ ಮಾತ್ರ ಸ್ವಲ್ಪಮಟ್ಟಿನ ಲಾಭ ಪಡೆದಿದೆ. ಉಳಿದಂತೆ ಕಿಂಗ್ ಫಿಷರ್ ಸೇರಿ ಎಲ್ಲಾ ಸಂಸ್ಥೆಗಳು ನಷ್ಟದಲ್ಲೇ ವಿಮಾನವನ್ನು ಆಕಾಶದಲ್ಲಿ ಹಾರಿಸುತ್ತಿದೆ.

Saturday, 19 November 2011

ಉಪ್ಪಿನಂಗಡಿ : ಆಯಿಷಾ ಕೊಲೆ ಪ್ರಕರಣ , ಗಲ್ಫ್ ಗಂಡ ಪೋಲಿಸ್ ವಶದಲ್ಲಿ

Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಉಪ್ಪಿನಂಗಡಿ : ಜುಲೈ ತಿಂಗಳಿನಲ್ಲಿ ಉಪ್ಪಿನಂಗಡಿ ಪುಳಿತ್ತಾಡಿ ಎಂಬಲ್ಲಿ  ನಡೆದ ಆಯಿಷಾ (೨೫) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಸುಲೈಮಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈನಲ್ಲಿ ಆಯಿಷಾ ಅವರನ್ನು ನೀರಿನ ಹೊಂಡಕ್ಕೆ ತಳ್ಳಿ ಕೊಲೆ ಮಾಡಲಾಗಿತ್ತು. ಈ ಕುರಿತು ಆಕೆಯ ತಂದೆ ಸಂಶಯ ವ್ಯಕ್ತಪಡಿಸಿ ಆಕೆಯ ಪತಿ ಸುಲೈಮಾನ್ ವಿರುದ್ಧ ದೂರು ನೀಡಿದ್ದರು .
ಆಯಿಷಾ ಅವರನ್ನು ಗಲ್ಫ್ ಉದ್ಯೋಗಿಯಾಗಿದ್ದ ಸುಲೈಮಾನ್ ಗೆ ನಾಲ್ಕು ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು . ಇವರಿಗೆ ಮೂರು ವರ್ಷದ ಮಗಳು ಸಹ ಇದ್ದಾಳೆ. ಸುಲೈಮಾನ್ ಆಯಿಷಾಗೆ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದ್ದು ಬೇರೆ ಮದುವೆ ಆಗುವ ಉದ್ದೇಶದಿಂದ ಆಕೆಯನ್ನು ಹೊಂಡಕ್ಕೆ ತಳ್ಳಿ ಕಾಲು ಜಾರಿ ಬಿದ್ದಳು ಅನ್ನುವ ಕಥೆ ಕಟ್ಟಿದ್ದ. ಇದೀಗ ಆರೋಪಿ ಪೋಲೀಸರ ಕೈಗೆ ಸಿಕ್ಕಿದ್ದು ತನಿಖೆ ಮುಂದುವರೆದಿದೆ.

Friday, 18 November 2011

Why did whole world jealous of fastest growing Islam religion?


Jealousy is a disease of the heart. It is, perhaps, one of the oldest problems of human beings. Some Islamic scholars say that this is the first sin that was committed. When Allah said to the angels to bow down to Adam, Iblis refused to bow because he was jealous of the honor that Allah gave to Adam. He said to Allah,

Type of jealousy
  • 1:One has animosity for a person or group and does not want to see anything good happen to that person or group.
  • 2: It hurts a person to see someone else ahead or above him/her.
  • 3: When a person is self conceited and arrogant, he/she feels very jealous to see anyone else going ahead or doing better.
  • 4: Some time a person feels astonished that another person could do better than him/her. He/she feels surprised: “How come that person became so rich, so successful, so popular, etc.?”
  • 5: Fear that if another person would have such and such thing, then he/she may not have it.
  • 6: Sometimes a person becomes jealous because he/she want to make oneself great by putting others down.
  • 7: Some people just do not like to see others happy. They want to see the whole world in misery and difficulty except their own selves.
 Normally jealousy occurs among people who know each other. It happens among siblings, among family members, people of the same profession and age. A Muslim must always keep in mind that jealousy is forbidden. Rasulullah (SAW) said, “Do not be jealous of each other, do not boycott each other, do not hate each other, do not contrive against each other. Be all of you brothers to each other, O Servants of Allah.”

Sunday, 13 November 2011

ಮಂಗಳೂರು ಕಂದ ನೀನೆಷ್ಟು ಚೆಂದ

ಮಂಗಳೂರು ಕಂದ ನೀನೆಷ್ಟು ಚೆಂದ




ಗೆಳೆಯರೇ ನಿಮ್ಮ ಮಕ್ಕಳ ಫೋಟೋ ಸೆಂಡ್ ಮಾಡಿ, ಹೆಚ್ಚು ಲೈಕ್ ಕಾಮೆಂಟ್ಸ್ ಯಾರಿಗೆ ಸಿಗುತ್ತದೆ ಅವರೇ ನಮ್ಮ ಇವತ್ತಿನ ಮಂಗಳೂರು ಬ್ಯೂಟಿಫುಲ್ ಕಂದ.
WINNER GET AMAZING GIFT FOR MANGALOREANSFORU GROUP. 

ಮಂಗಳೂರು : ಗುರುಪುರ ರವೀಂದ್ರ ಚೂರಿ ಇರಿತ ಪ್ರಕರಣದ ಆರೋಪಿಗಳ ಶೀಘ್ರ ಬಂಧನಕ್ಕೆ ಕ್ರಮ – ಕಮೀಷನರ್


ಮಂಗಳೂರಿಗೆ ಶಾಪವಾದ 11/11/11... ಮಂಗಳೂರಿನಲ್ಲಿ ಸತತ ಮೂರುದಿನಗಳಿಂದ ಹೆಚ್ಚುತ್ತಿರುವ ಅಪರಾಧ ಪ್ರಕರಣ -ಮೊದಲ ದಿನ ಜೋಡಿಕೊಲೆ... ಮರುದಿನವೇ ಅಪಘಾತದಲ್ಲಿ ಇಬ್ಬರ ದುರ್ಮರಣ - ಇದೀಗ ಮೂರನೇ ಪ್ರಕರಣದಲ್ಲಿ ಸಾವು ಬದುಕಿನ ಹೋರಾಟದಲ್ಲಿ ರಿಕ್ಷಾ ಚಾಲಕ...


ಮಂಗಳೂರು,ನವೆಂಬರ್.13:ಮಾರುತಿ ಓಮ್ನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಿಕ್ಷಾ ಚಾಲಕನನ್ನು ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾದ ಘಟನೆ ಗುರುಪುರ ಕೈಕಂಬ ಕಂದಾವರದಲ್ಲಿ ಇಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಸಂಭವಿಸಿದೆ.

ಬಾಡಿಗೆಗೆ ತೆರಳಿದ್ದ ಸ್ಥಳೀಯ ರಿಕ್ಷಾ ಚಾಲಕ ರವೀಂದ್ರ(29)ಎಂಬಾತನನ್ನು ಕಂದಾವರ ಒಳ ರಸ್ತೆಯಲ್ಲಿ ಬರುತ್ತಿದ್ದಾಗ ಸಿಲ್‌ವರ್ ಬಣ್ಣದ ಮಾರುತಿ ಓಮ್ನಿ (ಕೆ.ಎ.19 ಪಿ.2528)ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯ ಗೊಂಡಿದ್ದ ರವೀಂದ್ರರನ್ನು ನಗರದ ಸಿಟಿ ಆಸ್ಪತ್ರೆಗೆ ದಾಖಲುಪಡಿಸಲಾಗಿದೆ.ತಲೆ,ಮುಖ, ಕೈ,ಕಾಲುಗಳಿಗೆ ಬಲವಾದ ಏಟುಗಳಾಗಿದ್ದು ತೀವ್ರ ನಿಗಾ ಘಟಕದಲ್ಲಿಡಲಾಗಿದೆ.ಕೂಡಲೇ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ವಿವಾಹಿತರಾಗಿರುವ ರಂವೀಂದ್ರ ಅವರು ಬಜರಂಗದಳದ ಸಕ್ರೀಯ ಕಾರ್ಯಕರ್ತರಾಗಿದ್ದರು ಎನ್ನಲಾಗಿದೆ.

ಇದೀಗ ಗುರುಪುರ ಪರಿಸರದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ರಿಕ್ಷಾ ಚಾಲಕರು ಬಲವಾಂತವಾಗಿ ಬಂದ್‌ಗೊಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರಿಂದ ವ್ಯಾಪಾಕ ಪೊಲೀಸ್ ಬಿಗಿ ಬಂದೋ ಬಸ್ತ್ ಗೊಳಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಅಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಡಿದ್ದಾರೆ.ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿ.ಸಿ ರೋಡಿನಲ್ಲಿ ಭಜರಂಗದಳ ಕಾರ್ಯಕರ್ತನಿಗೆ ಚೂರಿ ಇರಿತ , ಪರಿಸ್ಥಿತಿ ಉದ್ವಿಗ್ನ


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಬಂಟ್ವಾಳ : ಬಿಸಿ ರೋಡ್ ಕೈಕಂಬ ಮೂರುಕೆರೆ ಜಂಕ್ಷನ್ ಬಳಿ ಭಜರಂಗದಳದ ಕಾರ್ಯಕರ್ತನಿಗೆ ಚೂರಿಯಿಂದ ಇರಿದ ಪ್ರಕರಣ ನಡೆದಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗುರುಪುರದ ಆಟೋ  ಚಾಲಕ ರವೀಂದ್ರ (೪೫) ಎಂಬುವವರು ಕೈಕಂಬ ಜಂಕ್ಷನ್ ಬಳಿ ರಿಕ್ಷಾದಲ್ಲಿದ್ದ ಸಮಯದಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿ ಮಾರಕಾಯುಧಗಳಿಂದ ಕೊಚ್ಚಿದ್ದಾರೆ. ತೀವ್ರವಾಗಿ ಗಾಯಗೊಂಡ ರವೀಂದ್ರ ಅವರನ್ನು ಮಂಗಳೂರಿನ ಸಿಟಿ ಆಸ್ಪತ್ರೆಗೆ ಸಾಗಿಸಲಾಗಿದೆ.
ರವೀಂದ್ರ ಭಜರಂಗದಳ ಸಂಘಟನೆಯ ಕಾರ್ಯಕರ್ತರಾಗಿದ್ದರು. ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಆಟೋ ಚಾಲಕರು ತಮ್ಮ ಆಟೋ ಸಂಚಾರವನ್ನು ಸ್ಥಗಿತಗೊಳಿಸಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ. ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ವ್ಯಾಪಕ ಬಂದೋಬಸ್ತ್ ಕಾರ್ಯದಲ್ಲಿ ನಿರತರಾಗಿದ್ದಾರೆ.

Friday, 11 November 2011

ಮುಸ್ಲಿಂ ಯುವಕನ ಮನೆಯಲ್ಲಿ ಹಿಂದೂ ಯುವತಿ : ತುಂಬೆಯಲ್ಲಿ ಆತಂಕದ ಪರಿಸ್ಥಿತಿ


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ಹಿಂದೂ ಸಮುದಾಯದ ಯುವತಿಯೋರ್ವಳು ಮುಸ್ಲಿಂ ಸಮುದಾಯದ ಯುವಕನ ಮನೆಯಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಗುರುವಾರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿದ ಘಟನೆ ತುಂಬೆಯಲ್ಲಿ ನಡೆದಿದ್ದು, ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.
ರಾಯಿ ಗ್ರಾಮದ ಯುವತಿ ಸವಿತಾ ಎಂಬಾಕೆ ತುಂಬೆಯ ಅಹಮ್ಮದ್ ಎಂಬವರ ಮನೆಯಲ್ಲಿರುವುದನ್ನು ಅರಿತ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿದ್ದರು. ಮಾಹಿತಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಮಂಗಳೂರು ನಿವಾಸಿ ಸಂತೋಷ್ ಎಂಬಾತ ಯುವತಿಯನ್ನು ಆಲ್ಬಂ ತಯಾರಿಕೆಯ ನೆಪದಲ್ಲಿ ಕರೆದುಕೊಂಡು ಹೋಗಿದ್ದು, ಬಳಿಕ ತುಂಬೆಯಲ್ಲಿ ಅಹಮ್ಮದ್ ಎಂಬವರ ಮನೆಯಲ್ಲಿ ಕುಳ್ಳಿರಿಸಿ ಹೋಗಿದ್ದ ಎನ್ನಲಾಗಿದೆ.
- ಪಿ.ಎಂ.ಎ. ಪಾಣೆಮಂಗಳೂರು, (ವರದಿಗಾರರು, ವಿ ಕೆ ನ್ಯೂಸ್).

ದಾವೂದ್ ಇಬ್ರಾಹಿಂ ಗೆ ಮುಂಬಯಿಯಲ್ಲಿ ಮಣ್ಣಾಗುವ ಆಸೆ


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಮುಂಬಯಿ: ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ  ಪಾತಕ ಲೋಕದ ಮೂಲಕ ಮುಂಬೈ ಮಹಾ ನಗರವನ್ನೇ ರಕ್ತಧೋಕುಳಿ  ಹರಿಸಿದ ಈ ಪತಾಕಿ ಇದೇ ನಗರದಲ್ಲಿ ತನ್ನ ಕೊನೆಯ ಆಸೆಯನ್ನು ನೆರವೇರಿಸಲು  ವ್ಯಕ್ತಪಡಿಸಿದ್ದಾನೆ ಎಂದು ಕ್ರೈಂ ವರದಿಯೊಂದು ತಿಳಿಸಿದೆ. ದಾವೂದ್ ನ ಆರೋಗ್ಯ ತೀರ ಹದೆಗೆಟ್ಟಿದ್ದು,ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಹೃದಯಾಘಾತಗಳಾಗಿವೆ. ತನ್ನ ಮರಣಾನಂತರ ಹುಟ್ಟೂರಾದ ರತ್ನಗಿರಿ ಜಿಲ್ಲೆಯ ಖೇಡ್ ಎಂಬಲ್ಲಿ ಅಥವಾ ತನ್ನ ಬಾಲ್ಯ ಜೀವನ ಕಳೆದ ಮುಂಬೈ ಮಹಾ ನಗರದಲ್ಲಿ ದಫನ ಮಾಡುವಂತೆ ಸೂಚಿಸಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದಿದ.
೮೬ ಹರೆಯ ತುಂಬಿದ ದಾವೂದ್ ಇದೀಗ ಪಾಕಿಸ್ತಾನದ ಕರಾಚಿ ಯಲ್ಲಿ ದಿನದ ೨೪ ತಾಸುಗಳು ವೈದ್ಯರ ನಿಗಾದಲಿದ್ದಾನೆ.ಎರಡನೇ ಹೃದಯಾಘಾತವಾದ ಬಳಿಕ ದಾವೂದ್ ಕಿರಿಯ ಸಹೋದರನ ಮಗಳನ್ನು ಮದುವೆ ನಿಗಧಿಯಾದ ದಿನಾಂಕದಿಂದ ಮೊದಲೇ ಮದುವೆ ಮಾಡಿ ಮುಗಿಸಿದ್ದಾನೆ. ದಾವೂದ್ ಮಗಳನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಮಗನೊಂದಿಗೆ ನೆರವೇರಿಸಿದ್ದರೆ,ಮಗ ಇಂಗ್ಲೆಂಡ್ ಉದ್ಯಮಿಯೊಬ್ಬರ ಮಗಳ ಕೈ ಹಿಡಿದಿದ್ದಾನೆ. ದಾವೂದ್ ತನ್ನ ಅಂತ್ಯಭಿಲಾಷೆಯನ್ನು ಭಾರತ ಮಣ್ಣಲೇ ಮಾಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದು ಮುಂಬೈ ಕ್ರೈಂ ಬ್ರಾಂಚ್ ಗೂ ತಿಳಿದಿರುತ್ತದೆ.

ಮಂಗಳೂರಿನಲ್ಲಿ ಡಬಲ್ ಮರ್ಡರ್ ! ವಾಮಂಜೂರು ರೋಹಿ ಕೊಲೆ ಆರೋಪಿಗಳು ಫಿನಿಶ್


Posted on  by ವಿಶ್ವ ಕನ್ನಡಿಗ ನ್ಯೂಸ್

ಮಂಗಳೂರು : ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದೆ. ಇಂದು ಮಧ್ಯಾಹ್ನ ಒಂದು ಮೂವತ್ತರ ಸುಮಾರಿಗೆ ನಡೆದ ಘಟನೆಯಲ್ಲಿ ವಾಮಂಜೂರು ರೋಹಿ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಮುರುಗೇಶ್ (೩೫) ಮತ್ತು ಉಪೇಂದ್ರ (೩೩) ಎಂಬುವವರನ್ನು ಆಟೋದಲ್ಲಿ ಬಂದ ದುಷ್ಕರ್ಮಿಗಳು  ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ . ಮಂಗಳೂರು ಸಮೀಪದ ಮೂಡುಶೆಡ್ಡೆಯ ಶಿವನಗರ ದೇವಿ ಟೆಂಪಲ್ ಬಳಿ ಈ ಘಟನೆ ನಡೆದಿದ್ದು ಹಂತಕರ ತಲವಾರಿನೇಟಿಗೆ ಗಂಭೀರವಾಗಿ ಗಾಯಗೊಂಡ ಮುರುಗೇಶ್ ಸ್ಥಳದಲ್ಲೇ ಪ್ರಾಣ ಬಿಟ್ಟರೆ ಉಪೇಂದ್ರ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.
೨೦೦೯ ರಲ್ಲಿ ವಾಮಂಜೂರು ಜ್ಯೋತಿ ನಗರದಲ್ಲಿ ಮಂಗಳೂರಿನ ರೌಡಿ ವಾಮಂಜೂರು ರೋಹಿಯನ್ನು ತಲವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು . ಈ ಪ್ರಕರಣದಲ್ಲಿ ಇವರಿಬ್ಬರೂ ಆರೋಪಿಗಳಾಗಿದ್ದರು. ಇವರೂ ಸಹ ರೌಡಿ ಶೀಟರ್ ಪಟ್ಟಿಯಲ್ಲಿದ್ದಾರೆ . ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಧಾವಿಸಿದ್ದು ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ.

ಮಂಗಳೂರು : ಡಬಲ್ ಮರ್ಡರ್ ಆರೋಪಿಗಳಾದ ರಘು , ಗೋಪಾಲ್ , ಫೈಝಲ್ ಅರೆಸ್ಟ್


Posted on  by ವಿಶ್ವ ಕನ್ನಡಿಗ ನ್ಯೂಸ್

ಮಂಗಳೂರು :ಮೂಡುಶೆಡ್ಡೆ ಇಂದು ಮಧ್ಯಾಹ್ನ ನಡೆದ ವಾಮಂಜೂರು ರೋಹಿ ಹತ್ಯೆ ಆರೋಪಿಗಳ  ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಶೆಡ್ಡೆಯ ರಘು, ಶಿವನಗರದ ಗೋಪಾಲ್ ಹಾಗೂ ಮೂಡುಶೆಡ್ಡೆಯ ಫೈಝಲ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ .ಮಧ್ಯಾಹ್ನ ೧.೩೦ ಕ್ಕೆ ಕೊಲೆ ನಡೆಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದು ಕಂಟ್ರೋಲ್ ರೂಂನ ಸಹಕಾರದೊಂದಿಗೆ ನಗರಾದ್ಯಂತ ನಾಕಾಬಂಧಿ ನಡೆಸಿ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಹಾಗೂ ಕೊಲೆಯಾದವರು ಈ ಹಿಂದೆ ಒಂದೇ ಗುಂಪಿನಲ್ಲಿದ್ದವರು. 2002ರಲ್ಲಿ ಪಿಲಿಕುಳದಲ್ಲಿ ನಡೆದ ನಾಗೇಶ್ ಪೂಜಾರಿ ಎಂಬಾತನ ಕೊಲೆ ಪ್ರಕರಣದ ಆರೋಪಿಗಳು.ಇದೇ ಗುಂಪಿನ ಕೆಲವು ಸದಸ್ಯರು 2009ರ ಹೊತ್ತಿಗೆ ಪ್ರತ್ಯೇಕಗೊಂಡಿದ್ದರು.ಪ್ರತ್ಯೇಕಗೊಂಡ ಗುಂಪು ವಾಮಂಜೂರು ರೋಹಿಯ ಕೊಲೆ ನಡೆಸಿತ್ತು ಎಂದು ಪೋಲಿಸ್ ಕಮೀಷನರ್  ಸೀಮಂತಕುಮಾರ್ ಸಿಂಗ್ ವಿವರ ನೀಡಿದ್ದಾರೆ .

Thursday, 10 November 2011

ಸಕಲೇಶಪುರ : 8.27000 ನೀಡಿ ಪಡೆದ ಫ್ಯಾನ್ಸಿ ಮೊಬೈಲ್ ನಂಬರ್ ನೂರು ರೂಪಾಯಿಗೆ ಇನ್ನೊಬ್ಬನ ಕೈಗೆ !


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ


ಸಕಲೇಶಪುರ : ಫ್ಯಾನ್ಸಿ ಸಿಮ್ ನಂಬರ್ ಗಾಗಿ ರೂ. ೮.೨೭ ಲಕ್ಷ ನೀಡಿ ಖರಿದಿಸಿದ ಸಿಮ್ ಅನ್ನು ಮತ್ತೊಬ್ಬ ಕೇವಲ ರೂ. ೧೦೦ ನೀಡಿ ಉಪಯೋಗಿಸುತ್ತಿರುವ ಪ್ರಕರಣ ಪಟ್ಟಣದಲ್ಲಿ ನಡೆದಿದೆ. ರಿಲೆಯನ್ಸ್ ಸಂಸ್ಥೆಯ ೮೦೮೮೮೮೮೮೮ ನಂಬರನ್ನು ಪಟ್ಟಣದ ನಿವಾಸಿ ಎಂ.ಪಿ ಬೇಗ್ ೮.೨೭ ಲಕ್ಷ ರೂಪಾಯಿಗೆ ಖರೀದಿಸಿ ಬಳಸುತ್ತಿದ್ದರು. ಇದೇ ನಂಬರನ್ನು ಹಾವೇರಿ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಸಿಮ್ ಕಳೆದು ಹೊಗಿದೆ ಎಂದು ರೂ. ೧೦೦ ನೀಡಿ ನಕಲು ಸಿಮ್ ಪಡೆದು ಬಳಸುತ್ತಿದ್ದ.  ಇದ್ದಕಿದ್ದ ಹಾಗೆ ಬೇಗ್ ರವರು ಮೋಬೈಲ್ ಸೇವೆ ಸ್ಥಗಿತ ಗೊಂಡು ಮತ್ತೊಬ್ಬ ವ್ಯಕ್ತಿ ಈ ನಂಬರನ್ನು ಉಪಯೊಗಿಸುತ್ತಿರುವ  ಬಗ್ಗೆ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂಸ್ಥೆ ತನಿಖೆ  ನಡೆಸಿ ಮತ್ತೊಂದು ನಕಲು ಸಿಮ್ ಅನ್ನು ಬೇಗ್ ರವರಿಗೆ ನೀಡಿದೆ.
ಬೇಗ್ ಅರೋಪ : ಯಾವುದೇ ಅನಾಮಿಕ ವ್ಯಕ್ತಿ ತನ್ನ ಸಿಮ್ ಕಳೆದು ಹೋಗಿದೆ ಎಂದು ದೂರು ನೀಡಿದರೆ ಅವರ ಪರಿಶೀಲಿಸದೆ ಸಿಮ್ ನೀಡುತ್ತಾರೆಂದರೆ ಈ ಬಗ್ಗೆ ನಾವು ಗಂಭೀರವಾಗಿ ಚಿಂತಿಸ ಬೇಕಾಗಿದೆ ಒಬ್ಬ ಮನುಷ್ಯನ ವ್ಯವಹಾರಿಕ ದೃಷ್ಟಿಯಿಂದ ಮಾತ್ರವಲ್ಲ ಇಂತಹ ಪ್ರಕರಣ ದೇಶದ ಭದ್ರತೆಗೂ ಮಾರಕ ನಮ್ಮ ದೂರನ್ನು ಸಂಬಂದ ಪಟ್ಟ ಇಲಾಖೆಯ ಆಧಿಕಾರಿಗಳು ಪರಿಶೀಲಿಸಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದರು.
 ವರದಿ ; ಅಕ್ಬರ್ ಜುನೈದ್ ( ವರದಿಗಾರರು .ವಿಕೆ ನ್ಯೂಸ್)

ಐಶ್ವರ್ಯ ರೈಗೆ ಮಗು ಜನಿಸುವಾಗ ಮಾಧ್ಯಮಗಳಿಗೆ ನಿಬಂಧನೆ !


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ, ಕರವಳಿ ಬೆಡಗಿ,  ಐಶ್ವರ್ಯ ರೈಗೆ ಎಂದು ಹೆರಿಗೆ ಆಗುತ್ತದೆ ? ಹುಟ್ಟುವ ಮಗು ಗಂಡೋ, ಹೆಣ್ಣೋ? ಅವಳಿ-ಜವಳೀನಾ? ಎಂಬಿತ್ಯಾದಿ ವಿಷಯಗಳ ಬಗ್ಗೆ ದಿನದಿಂದ ದಿನಕ್ಕೆ  ಸುದ್ದಿವಾಹಿನಿಗಳಲ್ಲಿ ವಿಶೇಷ ಕಾರ್ಯಕರ್ಮಗಳನ್ನು ಅಳವಡಿಸುತ್ತಿದೆ. ಕೆಲವು ಮಾಧ್ಯಮಗಳು ಜ್ಯೋತಿಷಿಗಳ ಪ್ರಕಾರ ಐಶ್ ಗೆ ಮುಂಬರುವ ನವಂಬರ ೧೧(೧೧.೧೧ ೧೧ )ವಿಶೇಷ ದಿನದಂದು  ಹೆರಿಗೆ ಖಚಿತ ಎಂದು ಹೇಳುತ್ತಿದೆ. ಈ ಮೂಲದ ಪ್ರಕಾರ  ಆ  ದಿನವೇ  ಹೆರಿಗೆ ಎಂದು ಮಾಧ್ಯಮ ವರ್ಗ ಆಸ್ಪತ್ರೆಯ ಮುಂದೆ ಸಾಲುಗಟ್ಟಿ ನಿಲ್ಲಲು ತಾಯರು ಮಾಡುತ್ತಿದೆ. ಆದರೆ ಇದೀಗ ಬಚ್ಚನ್  ಕುಟುಂಬ ಐಶ್ ಹೆರಿಗೆ ಸಂದರ್ಭ ಕೆಲವು ನಿಬಂಧನೆ ಗಳನ್ನು ಮಾದ್ಯಮಗಳ ಮುನ್ನಡೆ ಇಟ್ಟಿದೆ.ಈ ನಿಬಂಧನೆ ಹೊರ ಬರುತ್ತಿದ್ದಂತೆ ಮಾಧ್ಯಮ ವರ್ಗ ಮೂಕ ವಿಸ್ಮಿತರಾದರು.
ನಿಬಂದನೆಗಳ ಪ್ರಮುಖ ಅಂಶ ಈ ಕೆಳಗಿನಂತಿವೆ.
  •  ಹೆರಿಗೆಗೂ ಮುನ್ನ ಆ ಬಗ್ಗೆ ಯಾವುದೇ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುವ ಹಾಗಿಲ್ಲ.
  •  ಆಸ್ಪತ್ರೆ ಅಥವಾ ಐಶ್‌ ಕುಟುಂಬದ ಸದಸ್ಯರು ಅಧಿಕೃತ ಪ್ರಕಟಣೆ ಹೊರಡಿಸಿದ ಮೇಲಷ್ಟೇ ಸುದ್ದಿ ವಾಹಿನಿಯಲ್ಲಿ  ಪ್ರಕಟಿಸಬೇಕು.
  • ಮಗು ಹುಟ್ಟಿದ ಸುದ್ದಿಯನ್ನು ಬ್ರೇಕಿಂಗ್‌ ನ್ಯೂಸ್‌ ಆಗಿ ಪ್ರಸಾರ ಮಾಡುವಂತಿಲ್ಲ.
  • ಆಸ್ಪತ್ರೆ ಮುಂಭಾಗ ಅಥವಾ ಮನೆ ಮುಂದೆ ನೇರಪ್ರಸಾರದ ವಾಹನಗಳನ್ನು  ಕೊಂಡೊಯ್ಯಬಾರದು.
  •  ಮಗು ಮತ್ತು ಐಶ್ವರ್ಯ ಫೋಟೋ ತೆಗೆಯಲು ಅಧಿಕೃತವಾಗಿ ಆಹ್ವಾನ ಸಿಕ್ಕರಷ್ಟೇ ಹೋಗಬೇಕು.
  •  ಮಗುವಿನ ಎಂಎಂಎಸ್‌ ಅಥವಾ ಫೋಟೋಗಳನ್ನು ಪ್ರಕಟಿಸಬಾರದು.
  •  ಮಗುವಿನ ಭವಿಷ್ಯದ ಕುರಿತು ಯಾವುದೇ ಜ್ಯೋತಿಷ್ಯದ ಕಾರ್ಯಕ್ರಮ ಪ್ರಸಾರ ಮಾಡಕೂಡದು.
  •  11-11-2011ಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡಕೂಡದು.
  •  ಐಶ್‌ ದಾಖಲಾಗುವ ಆಸ್ಪತ್ರೆಗೆ  ಅಕ್ರಮ ಪ್ರವೇಶ ಮಾಡಬಾರದು.

ಬಂಟ್ವಾಳ : ಈದ್ ಆಚರಣೆ MITHTHABAIL JUMMA MASJID B.C.ROAD


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ನಾಡಿನೆಲ್ಲೆಡೆ ಸೋಮವಾರ ಮುಸ್ಲಿಂ ಬಾಂಧವರು ಸಂಭ್ರಮದ ಬಕ್ರಿದ್ ಹಬ್ಬವನ್ನಾಚರಿಸಿದ್ದು, ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಕೇಂದ್ರದಲ್ಲಿರುವ ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಕಂಡು ಬಂದ ಬಕ್ರೀದ್ ಸಂಭ್ರಮ.
- ಪಿ.ಎಂ.ಎ. ಪಾಣೆಮಂಗಳೂರು, (ವರದಿಗಾರರು, ವಿ ಕೆ ನ್ಯೂಸ್).

ತಸ್ಲೀಮಾ ನಸ್ರೀನ್ ಬಂಧಿಸಿ ಆಕೆಯ ವಿರುದ್ಧ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಲಿ


Posted on  by ವಿಶ್ವ ಕನ್ನಡಿಗ ನ್ಯೂಸ್

ತಸ್ಲೀಮಾ ನಸ್ರೀನ್ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಹಜ್ ಕುರಿತು ಬರೆದುಕೊಂಡ ಟ್ವೀಟ್
ಭಾರತದಲ್ಲಿದ್ದುಕೊಂಡು ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯ ಮೂಲಕ ಧರ್ಮ ವಿಶ್ವಾಸಿಗಳ ಮನನೋಯಿಸುವಂತಹ ಮಾತುಗಳನ್ನಾಡುತ್ತಾ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಶ್ರಮಿಸುತ್ತಿರುವ ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನು ಬಂಧಿಸಿ ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಭಾರತ ಸರ್ಕಾರ ಮುಂದಾಗಬೇಕಿದೆ. ತನ್ನ ಲಜ್ಜಾ ಎಂಬ ಕಾದಂಬರಿಯ ಮೂಲಕ ಇಸ್ಲಾಮಿಕ್ ವಿರೋಧಿ ವಿಚಾರಗಳನ್ನು ಬರೆದ ತಸ್ಲೀಮಾ ನಸ್ರೀನ್ ಅನ್ನು ಜನರ ಪ್ರತಿಭಟನೆಗೆ ಮಣಿದ ಬಾಂಗ್ಲಾದೇಶ ಆಕೆಯನ್ನು ಗಡೀಪಾರು ಮಾಡಿತ್ತು.
ತನ್ನ ಸ್ವಂತ ದೇಶದಿಂದ ಗಡೀಪಾರು ಗೊಂಡ ಈಕೆ ಇದೀಗ ಭಾರತ ಸರ್ಕಾರದ ಆಶ್ರಯದಲ್ಲಿ ದಿನ ಕಳೆಯುತ್ತಿದ್ದಾಳೆ. ನಮ್ಮ ತೆರಿಗೆ ಹಣದಲ್ಲಿ ವಾಸಕ್ಕೆ ಮನೆ , ಆಹಾರ ಜೊತೆಗೆ ಭದ್ರತೆಯನ್ನೂ ಸರ್ಕಾರ ಈಕೆಗೆ ನೀಡುತ್ತಿದೆ. ಇಷ್ಟಕ್ಕೇ ಈಕೆ ಸುಮ್ಮನಿದ್ದರೆ ಹೋಗಲಿ ಬಿಡಿ ಎನ್ನಬಹುದಿತ್ತು. ಆದರೆ ಇತ್ತೀಚೆಗೆ ತಸ್ಲೀಮಾ ನೀಡುತ್ತಿರುವ ಹೇಳಿಕೆಗಳು ದೇಶದಲ್ಲಿ ಆಕೆಯ ವಿರುದ್ಧ ಮುಸ್ಲಿಂ ಸಮುದಾಯದವರಲ್ಲಿ ಅಸಮಾಧಾನದ ಅಲೆಯನ್ನೇ ಮೂಡಿಸಿದೆ. ಲೇಖಕನಿಗೆ ಸ್ವಾತಂತ್ರ್ಯವಿರಬೇಕು ಎನ್ನುವುದೇನೋ ನಿಜ. ಆದರೆ ಆ ಸ್ವಾತಂತ್ರ್ಯದ ಸದುಪಯೋಗವಾಗಬೇಕು. ಇಲ್ಲಿ ತಸ್ಲೀಮಾ ಅದನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ.
ಇತ್ತೀಚಿನ ಆಕೆಯ ಹೇಳಿಕೆಗಳನ್ನು ಗಮನಿಸಿದರೆ ಆಕೆ ಭಾರತದಲ್ಲಿ ಯಾವುದೋ ಒಂದು ಶಕ್ತಿಯ ಏಜೆಂಟ್ ಆಗಿ ಈಕೆ ದೇಶದಲ್ಲಿ ಕಲಹ ಎಬ್ಬಿಸಲು ಪ್ರಯತ್ನಿಸುತ್ತಿದ್ದಾಳೆಯೇ ಎಂಬ ಸಂಶಯವನ್ನೂ ಮೂಡಿಸುತ್ತದೆ. ಕೆಲ ದಿನಗಳ ಹಿಂದೆ ಶಾರುಖ್ ಖಾನ್ ಅನ್ನು ಸಲಿಂಗಿ ಎಂದು ಕರೆದ ಈಕೆ ತಾನು ಸಹ ಸಲಿಂಗಿಯಾಗಳು ಬಯಸುವುದಾಗಿ ಲಜ್ಜೆಗೆಟ್ಟ ಹೇಳಿಕೆ ನೀಡಿದಳು . ಸತ್ಯ ಸಾಯಿ ಬಾಬಾ ನಿಧನರಾದಾಗ ಒಬ್ಬ ಜಾದುಗಾರನ ನಿಧನಕ್ಕೆ ದೇಶ ದುಃಖ ಪಡುವ ಅಗತ್ಯವಿಲ್ಲ ಎಂದಳು .
ಇತ್ತೀಚಿನ ದಿನಗಳಲ್ಲಂತೂ ಎಲ್ಲಾ ಎಲ್ಲೆಯನ್ನೂ ಮೀರಿ ಮುಸ್ಲಿಮರ ಬಕ್ರೀದ್ ಆಚರಣೆ ಮತ್ತು ಹಜ್ ಕರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ. ಇದೀಗ ಈಕೆಯನ್ನು ದೇಶದಲ್ಲಿ ಇಟ್ಟುಕೊಳ್ಳುವುದು ಸರ್ವಧರ್ಮಮವನ್ನು ಸಮಭಾವದಿಂದ ಕಾಣುವ ನಮ್ಮ ದೇಶದ ಸಂಸ್ಕೃತಿಗೆ ಒಗ್ಗುವಂತಹದಲ್ಲ. ಸರ್ಕಾರ ಕೂಡಲೇ ಈಕೆಯನ್ನು ಬಂಧಿಸಬೇಕು ಮತ್ತು ಈಕೆಯ ವಿರುದ್ಧ ಧರ್ಮ ನಿಂದನೆಯ ಪ್ರಕರಣದಡಿ ಮೊಕದ್ದಮೆ ದಾಖಲಿಸಬೇಕು. ಸರ್ಕಾರಕ್ಕೆ ಅದೂ ಸಾಧ್ಯವಿಲ್ಲ ಎನ್ನುವುದಾದರೆ ಈಕೆಯನ್ನು ದೇಶದಿಂದ ಗಡೀಪಾರು ಮಾಡಬೇಕು. ಶಾಂತಿ ಸೌಹಾರ್ದತೆ ಧರ್ಮ ನಿರಪೇಕ್ಷತೆಯ ರಾಷ್ಟ್ರದಲ್ಲಿ ಇಂತಹ ಕಿಚ್ಚು ಹಚ್ಚುವ ವಿಷ ಕನ್ಯೆಯನ್ನು ಇಟ್ಟುಕೊಳ್ಳುವುದು ಸರ್ಕಾರಕ್ಕೆ ಶೋಭೆ ತರುಂತಹದ್ದಲ್ಲ. ಜನರ ಆಕ್ರೋಶ ಭುಗಿಲೇಳುವ ಮೊದಲು ಕೇಂದ್ರದ ಯುಪಿಎ ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸುವುದು ಒಳಿತು .
ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಶ್ವ ಕನ್ನಡಿಗ ನ್ಯೂಸ್

ಸೌದಿ ಅರೇಬಿಯಾದ ರಾಜಧಾನಿಯಲ್ಲೊಂದು ಬತಾ ಎಂಬ ವಿದೇಶಿಯರ ಸಾಮ್ರಾಜ್ಯ


Posted on  by ವಿಶ್ವ ಕನ್ನಡಿಗ ನ್ಯೂಸ್

ನಿತಿನ್ ರೈ ಕುಕ್ಕುವಳ್ಳಿ .vknewz.com
ರಿಯಾದ್ :  ಸೌದಿ ಅರೇಬಿಯಾ  ಅಂದಾಕ್ಷಣ ನೆನಪಿಗೆ  ಬರೋದು  ಇಸ್ಲಾಂ ನ  ಪವಿತ್ರ  ಸ್ಥಳಗಳಾದ  ಮಕ್ಕಾ ಮತ್ತು ಮದೀನ  . ಸೌದಿ ಅರೇಬಿಯಾಕ್ಕೆ ಜೀವನ  ಅರಸಿಕೊಂಡು  ಬರೋರು ಅದೆಷ್ಟೋ  ವಿದೇಶಿಯರು .  ಸೌದಿ ಅರೇಬಿಯಾದ  ಮರಳು ಗಾಡು ಅದೆಷ್ಟೋ ಭಾರತೀಯರನ್ನು   , ಬಾಂಗ್ಲಾದೇಶಿಯರನ್ನು   ಯಮನಿಯರನ್ನು  , ಶ್ರೀಲಂಕಾ , ಪಾಕಿಸ್ತಾನಿಯರನ್ನು  ಹೀಗೆ ವಿಶ್ವದ ಹಲವು  ದೇಶದ ಕೆಲಸ ಗಾರರನ್ನು  ಕೈಬೀಸಿ ಕರೆದು ತನ್ನ ಬಳಿಯಲ್ಲಿ  ಕೆಲಸವನ್ನು   ನೀಡಿದೆ.
ಸೌದಿ  ಅರೇಬಿಯಾದ ರಾಜಧಾನಿ  ರಿಯಾದ್  ನ ಒಂದು ಸ್ಥಳ   ಮಾತ್ರ  ಸೌದಿ ಅರೇಬಿಯಾ ದಲ್ಲಿ  ಅತಿ ಹೆಚ್ಚು  ವಿದೇಶೀಯರನ್ನು   ಹೊಂದಿರುವಂತ  ಸ್ಥಳ  ಅದುವೇ ” ಬತಾ  “. ಇದೊಂದು ಮಾರುಕಟ್ಟೆ ಪ್ರದೇಶ .ಈ ಬತಾ ಎಂಬ ಪ್ರಪಂಚಕ್ಕೆ ಪ್ರವೇಶ  ಮಾಡಿದರೆ  ಬೆರಳೆಣಿಕೆಯಷ್ಟು ” ಸೌದಿ ಪ್ರಜೆಗಳು”  ಕಾಣಸಿಗುತ್ತಾರೆ . ಇನ್ನು ಆ  ಪ್ರಪಂಚ ತುಂಬಾ ತುಂಬಿರುವವರು ವಿದೇಶಿ  ಪ್ರಜೆಗಳು. ಅಂದರೆ ಭಾರತ , ಬಾಂಗ್ಲಾದೇಶ , ಪಾಕಿಸ್ತಾನ ,ಫಿಲಿಪೈನ್ ,ಯಮನಿ  ಈ ರೀತಿಯ ವಿದೇಶಿ ಪ್ರಜೆಗಳು.  ಇಲ್ಲಿನ ವ್ಯವಹಾರ ಬಹಳ ವಿಶೇಷವಾದದ್ದು .  ಬತ ದಲ್ಲಿ  ಕೇರಳ ಮಾರುಕಟ್ಟೆ ,ಬಂಗಾಳಿ ಮಾರುಕಟ್ಟೆ ,ಫಿಲಿಪೈನಿ ಮಾರುಕಟ್ಟೆ  ಹೀಗೆ ಒಂದೊಂದು ಹೆಸರಿನ ಮಾರುಕಟ್ಟೆಗಳಿವೆ. ಸೌದಿ ಯಿಂದ  ವಿದೇಶಕ್ಕೆ  ಅತಿಹೆಚ್ಚು ಹಣ  ಹೋಗುವುದು ಕೂಡ  ಇಲ್ಲಿಂದಲೇ .
ಈ ಬತಾ ಅನ್ನೋ  ಸ್ಥಳ ದಲ್ಲಿ ಅನೇಕ ರೀತಿಯ ವ್ಯಾಪಾರಗಳು ನಡಯುತ್ತದೆ . ಅಂಗಡಿ ಮುಂಗಟ್ಟು  ಹೊಂದಿ ವ್ಯಾಪಾರ  ಮಾಡುವವರ ಜೊತೆಗೆ ರಸ್ತೆ ಬದಿಯ ವ್ಯಾಪಾರವೂ ಇಲ್ಲಿ ಸಾಮಾನ್ಯ . ಹಾಗೆ ಸೌದಿ ಅರೇಬಿಯಾದಂತಹ  ಅತೀ  ಕಟ್ಟು ಪಾಡು ಇರೋ ದೇಶದಲ್ಲಿ  ಅತಿ ಹೆಚ್ಚು ಅಕ್ರಮಗಳು ನಡಯುವಂತ ಸ್ಥಳ  ಕೂಡ ಬತಾ .  ಇಲ್ಲಿ ನಡೆಯದ ವ್ಯಾಪಾರಗಲಿಲ್ಲ . ಪವಿತ್ರ  ಇಸ್ಲಾಂ ಪ್ರಕಾರ  ಬಡ್ಡಿ ದರದಲ್ಲಿ  ಹಣವನ್ನು ಕೊಡೋದು  ಅತೀ   ನೀಚ  ಕೃತ್ಯ . ಅದು ನಿಷಿದ್ಧ ಕೂಡ.  ಆದರೆ  ಈ ಬತಾದಲ್ಲಿ  ಬಡ್ಡಿ ಲೆಕ್ಕದಲ್ಲಿ  ಕೋಟಿ ಕೊಟಿ ಹಣ  ಚಲಾವಣೆಯಲ್ಲಿ  ನಡಯುತ್ತೆ ಅನ್ನುತ್ತಾರೆ ಕೆಲವರು. ಆದರೆ ಅದು ಇಲ್ಲಿನ ಆಡಳಿತದ  ಕಣ್ಣು ತಪ್ಪಿಸಿ ನಡೆಯುವ ಕಾರಣ ಹೆಚ್ಚಿನ ಈ ವ್ಯವಹಾರದ  ಜನ ಸಿಕ್ಕಿ ಬೀಳುವುದಿಲ್ಲ.  ಸಿ ಡಿ ವ್ಯಾಪಾರ ಇಲ್ಲಿನ ಮತ್ತೊಂದು ಪ್ರಮುಖ ವ್ಯವಹಾರ .  ಇದರಲ್ಲೇ ಜೀವನ  ಮಾಡೋರನ್ನ ನಾವು  ಬತಾದ ಗಲ್ಲಿ ಗಲ್ಲಿ ಯಲ್ಲಿ ನೋಡುತ್ತೇವೆ . ಮಟ್ಕಾ ದಂಧೆ  ಇಲ್ಲಿ ಅವಿರತವಾಗಿ  ನಡಯುತ್ತಿವೆ ಅನ್ನುತ್ತಾರೆ ಕೆಲವರು .
ಬತಾದಲ್ಲಿ  ಒಳ್ಳೇದು  ಇದೆ ಹಾಗೆ  ಕೆಟ್ಟದ್ದೂ  ಇದೆ . ಒಂದಂತೂ ನಿಜ  . ಕಷ್ಟಪಡುವ  ಅನೇಕ ಜನರಿಗೆ   ಜೀವನ ಕಟ್ಟಿ  ಕೊಟ್ಟಂತಹ  ಸ್ಥಳ  ಅಂದ್ರೆ ಬತಾ . ಇಲ್ಲಿ  ಮತ್ತೆ ಕೆಲವು ಘಟನೆಗಳು ಸಾಮಾನ್ಯ . ನೈಜಿರಿಯ  ಮೂಲದವರು ಇಲ್ಲಿ ಅವಿರತವಾಗಿ  ಒಂಟಿ ವಿದೇಶಿ ಯರು ಸಿಕ್ಕಿದರೆ  ದೋಚುತ್ತಾರೆ ಎಂಬ ದೂರುಗಳು ಆಗಾಗ ಕೇಳಿ ಬರುತ್ತಿರುತ್ತದೆ. ಸಾಮಾನ್ಯ  ರಾತ್ರಿ  ೧೨ ರ ನಂತರ ಇಲ್ಲಿ ಓಡಾಡುವುದು ಬಹಳ  ಕಷ್ಟದ  ವಿಷಯ . ಯಾರದೋ   ದುಡ್ಡು ಯಲ್ಲಮನ  ಜಾತ್ರೆ  ಮಾಡೋರು  ಇಲ್ಲಿ ಇದ್ದಾರೆ. ಆದರೂ ಇಲ್ಲಿ ವಿದೇಶಿ  ಯರ ಸಂಖ್ಯೆ  ಮಾತ್ರ ದಿನದಿಂದ ದಿನಕ್ಕೆ  ಹೆಚ್ಚುತ್ತಲೇ  ಇದೆ.  ಏನೇ ಆದರೂ ಸೌದಿ ಅರೇಬಿಯಾದ  ಒಳಗೊಂದು  ಪ್ರಪಂಚವನ್ನು  ಕಟ್ಟಿದ  ವಿದೇಶಿಯರ  ಸಾಮರ್ಥ್ಯವನ್ನು ಮೆಚ್ಚಲೇ ಬೇಕು.
ವಿಶೇಷ ಲೇಖನ : ನಿತಿನ್ ರೈ ಕುಕ್ಕುವಳ್ಳಿ
ವರದಿಗಾರರು .ವಿಕೆ ನ್ಯೂಸ್ . ರಿಯಾದ್

Wednesday, 9 November 2011

ಗಡಾಫಿಯ ಸುಂದರಿ ಮಹಿಳಾ ಅಂಗರಕ್ಷಕಿಯರನ್ನೂ ಬಿಡದ ಬಂಡುಕೋರರು !


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

 ಟ್ರಿಪೋಲಿ : ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿ ಆಡಳಿತ ಒಂದು ರೀತಿಯಲ್ಲಿ ಲಿಬಿಯಾವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದರೆ ಅವರ ರಕ್ಷಣಾ ಶೈಲಿ ಇನ್ನೊಂದು  ರೀತಿಯಲ್ಲಿ ವಿಸ್ಮಯ ಮೂಡಿಸುವಂತಿತ್ತು. ಗಡಾಫಿ ಸುತ್ತಲೂ ಸೇನಾ ಸಮವಸ್ತ್ರ ಧರಿಸಿದ ಮಹಿಳಾ ಅಂಗರಕ್ಷಕರು ಇರುತ್ತಿದ್ದರು. ಹಾಗಂತ ಪುರುಷರು ಇರಲಿಲ್ಲ ಅಂತಲ್ಲ. ಪುರುಷ ಅಂಗರಕ್ಷಕರಿಗಿಂತಲೂ ಹೆಚ್ಚಾಗಿ ಮಹಿಳಾ ಅಂಗರಕ್ಷಕಿಯರು ಗಡಾಫಿ ಅಕ್ಕ ಪಕ್ಕ ಕಂಡು ಬರುತ್ತಿದ್ದರು. 
ಯಾವುದೇ ಸಾರ್ವಜನಿಕ ಸಮಾರಂಭವಾಗಲೀ ಅಥವಾ ಲಿಬಿಯಾಕ್ಕೆ  ಬರುವ ವಿದೇಶೀ ರಾಷ್ಟ್ರದ ಅಧ್ಯಕ್ಷರನ್ನು ಸ್ವಾಗತಿಸುವ ಕಾರ್ಯಕ್ರಮವಾಗಲೀ ಅಲ್ಲಿ ಗಡಾಫಿ ಸುತ್ತ ಮುತ್ತ ಮಹಿಳಾ ಅಂಗರಕ್ಷಕಿಯರು ಇರುತ್ತಿದ್ದರು. ಗಡಾಫಿ ನ್ಯಾಟೋ ಪಡೆ ಹಾಗೂ ಬಂಡುಕೋರರ ಕೈಗೆ ಸಿಕ್ಕು ಹತನಾದ ನಂತರ ಆ ಸುಂದರಿ ಮಹಿಳಾ ಅಂಗರಕ್ಷಕಿಯರು ಏನಾದರು ? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಬಂಡುಕೋರ ಸೈನಿಕರು  ಗಡಾಫಿ ಹತ್ಯೆಯ ನಂತರ ಆತನ ಅಂಗರಕ್ಷಕಿಯರನ್ನೂ ಅತ್ಯಂತ ಭೀಬತ್ಸವಾಗಿ ಕೊಂದಿದ್ದಾರೆ.  ಈ ಕುರಿತ ಚಿತ್ರಗಳನ್ನು ವೆಬ್ ಸೈಟ್ ಒಂದು ಬಿಡುಗಡೆ ಮಾಡಿದೆ. ಹೆಚ್ಚಿನ ಚಿತ್ರಗಳಲ್ಲಿ ಆ ಮಹಿಳಾ ಸೈನಿಕರಿಗೆ ಚಿತ್ರಹಿಂಸೆ ಕೊಟ್ಟು ಕೊಂದ  ಬರ್ಬರತೆ ಎದ್ದು ಕಾಣುತ್ತಿದೆ. ಈ ರೀತಿ ಬಂಡುಕೋರರು ಗಡಾಫಿ ಜೊತೆಗೆ ಆತನ ಮಹಿಳಾ ಸೈನಿಕರನ್ನೂ ಹತ್ಯೆ ಮಾಡಿ ತಮ್ಮ ಅಮಾನವೀಯ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ . ಗಡಾಫಿ ಮಹಿಳಾ ಅಂಗರಕ್ಷಕಿಯೊಬ್ಬಳ ಮೃತ ಚಿತ್ರವನ್ನು ಕೆಳಗೆ ಪ್ರಕಟಿಸಿದ್ದೇವೆ.
ಹೆಚ್ಚಿನ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟಿಸುವ ಸ್ಥಿತಿಯಲ್ಲಿ ಇಲ್ಲ. ಅಷ್ಟೊಂದು ಭೀಕರವಾಗಿದೆ. ಆ ಕಾರಣಕ್ಕಾಗಿ ವೆಬ್ ಸೈಟ್ ಬಿಡುಗಡೆ ಮಾಡಿರುವ ಚಿತ್ರಗಳ ಪೈಕಿ ಒಂದು ಚಿತ್ರವನ್ನು ಮಾತ್ರ ಹಾಕಲಾಗಿದೆ.

Tuesday, 8 November 2011

“ಬಿಗ್ ಬಾಸ್ ” ಪ್ರಪಂಚಕ್ಕೆ ಇಂದು ಸ್ವಾಮಿ ಅಗ್ನಿವೇಶ್ ಪ್ರವೇಶ


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

 
ಮುಂಬೈ :ಸಾಮಾಜಿಕ  ಕಾರ್ಯಕರ್ತ  ಹಾಗೂ  ಅಣ್ಣಾ  ಟೀಮ್  ನಿಂದ ಹೊರಬಿದ್ದ  ಕಾವಿಧಾರಿ   ಸ್ವಾಮಿ ಅಗ್ನಿವೇಶ್   ಇಂದು  ಬಿಗ್ ಬಾಸ್   ರಿಯಾಲಿಟಿ  ಕಾರ್ಯಕ್ರಮಕ್ಕೆ  ಪ್ರವೇಶ  ಮಾಡಲಿದ್ದಾರೆ . ಅಣ್ಣಾ  ಟೀಮ್  ವಿರುದ್ದ  ಸಿಡಿದೆದ್ದ   ಅಗ್ನಿವೇಶ್   ಈ  ಕಾರ್ಯಕ್ರಮದ ಮೂಲಕ ತಾನು ಯುವ ಜನತೆಗೆ ಅಣ್ಣ ತಂಡದ ಸದಸ್ಯರ ಕುರಿತು  ಮಾಹಿತಿ ನೀಡುವುದರ ಜೊತೆಗೆ ಯುವಜನತೆಗೆ ಸಾಮಾಜಿಕ ಪಿಡುಗುಗಳ ಬಗ್ಗೆಯೂ ಜಾಗೃತಿ ಮೂಡಿಸಲು ಯತ್ನಿಸುವುದಾಗಿ ಹೇಳಿದ್ದಾರೆ .
 ಮಾಡೆಲ್  , ನಟಿಯರಿಂದ  ಕೂಡಿರುವ ಈ  ಕಾರ್ಯಕ್ರಮದಲ್ಲಿ  ಈ ಕಾವಿಧಾರಿ   ಯಾವ ರೀತಿಯ ಸಂದೇಶ  ನೀಡುತ್ತಾರೋ  ದೇವರೇ  ಬಲ್ಲ . ಈ ಕಾರ್ಯಕ್ರಮದಲ್ಲಿ  ೫ ನೇ   ಪುರುಷ ಸ್ಪರ್ಧಿ  ಅಗ್ನಿವೇಶ್ .  ಈ ಕಾರ್ಯಕ್ರಮದ  ವಿಶೇಷ ಅಂದರೆ  ಹೆಂಗಳೆಯರ  ಜಗಳ,  ಹೊಡೆದಾಟ, ಅಸಭ್ಯ   ನಡವಳಿಕೆ , ಅಸಭ್ಯ   ಶಬ್ದಗಳ  ಬಳಕೆ  ಇದರ  ನಡುವೆ ಈ ಅಗ್ನಿವೇಶ್  ಸಿಕ್ಕಿ  ಏನಾಗುತ್ತಾರೋ  ?   ಎಷ್ಟು ದಿನ ಈ ಬಿಗ್  ಬಾಸ್  ಮನೆ ಯಲ್ಲಿ  ಇರ್ತಾರೋ ? ಕಾದು ನೋಡೋಣ..ಏನೇ  ಇರಲಿ  ಅಗ್ನಿವೇಶ್   ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಣ್ಣಾ  ಕೆಲವೊಂದು  ಬಾಂಬ್  ಗಳನ್ನು   ಸಿಡಿಸುವುದಂತೂ  ಖಂಡಿತ  .
- ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)

ಮೈ ಡಿಯರ್ ಎಕ್ಸ್ ಐ ಮಿಸ್ ಯೂ ಎಂದ ವೀಣಾ ಮಲಿಕ್


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಮುಂಬೈ :  ಪಾಕಿಸ್ತಾನದ ಮೂವರು ಆಟಗಾರರು  ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿ  ಜೈಲು ಪಾಲಾಗುತ್ತಿದ್ದಂತೆ  ಅವರ ಬಗ್ಗೆ  ಅವರ  ಅನೇಕ ಮಂದಿ  ಸ್ನೇಹಿತರು  ಅಭಿಮಾನಿಗಳು  ಬೇಸರ ,ಕೋಪ  ವ್ಯಕ್ತಪಡಿಸುತ್ತಿದ್ದರೆ  ಆಸೀಫ್  ಅವರ ಮಾಜಿ  ಪ್ರೇಯಸಿ  ಪಾಕಿಸ್ತಾನಿ ಮಾಡೆಲ್ , ಬಾಲಿವುಡ್ ನಟಿ ವೀಣಾ ಮಲಿಕ್  ಕೂಡ  ಆಸೀಫ್   ಗೆ ಜೈಲು ಶಿಕ್ಷೆ ಆಗಿರುದರಿಂದ  ತೀವ್ರ  ನೊಂದಿದ್ದು ಆಸೀಫ್ ಐ ಮಿಸ್ ಯೂ ಎಂದಿದ್ದಾರೆ.
ಆಸೀಫ್ ತನ್ನ  ಜೀವನದಲ್ಲಿ ಬಂದ  ವಿಶೇಷ  ವ್ಯಕ್ತಿ  , ಇತ್ತಿಚಿನ ದಿನಗಳಲ್ಲಿ   ಆಸೀಫ್  ನಮ್ಮ ಸಂಬಂಧವನ್ನು   ಮತ್ತೆ  ಜೋಡಿಸಲು ತುಂಬಾ  ಪ್ರಯತ್ನಗಳನ್ನ  ನಡೆಸಿದ್ದರು  ಆದರೆ ನಾನೇ ಅವರನ್ನ ದೂರ ಮಾಡುತ್ತಿದ್ದೆ . ಏಕೆಂದರೆ  ಆಸೀಫ್ ಈಗ  ಬೇರೆ  ಮದುವೆ ಆಗಿದ್ದು ಅವರ  ಜೀವನದಲ್ಲಿ  ಪ್ರವೇಶಿಸಿ  ತಾನು ಕೆಟ್ಟವಳು ಅನ್ನಿಸಿ ಕೊಳ್ಳುವುದು ತನಗೆ   ಬೇಕಾಗಿರಲಿಲ್ಲ  ಎಂದು  ವೀಣಾ ಹೇಳಿದ್ದಾರೆ  . ೨೦೦೮ ರ ತನಕ  ವೀಣಾ ಮತ್ತು ಆಸೀಫ್  ಒಂದೇ ಮನೆಯಲ್ಲಿ  ವಾಸವಾಗಿದ್ದರು ಹಾಗೂ   ಮದುವೆಯಾಗುವ ಮುಂಚೆಯೇ   ಲೀವಿಂಗ್  ಟುಗೆದರ್ ಜೀವನ ನಡೆಸುತ್ತಿದ್ದರು.
ನಾನು ಆಸೀಫ್ ಜೊತೆ  ೨೦೦೮ ರ ತನಕ  ಉತ್ತಮ ಸಂಬಂಧವನ್ನು   ಹೊಂದಿದ್ದೆ . ಆತ  ಯಾವಾಗ  ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ  ಅಂತ ತಿಳಿದು ಬಂತೋ  ಅವತ್ತು ಅವರ ಸಂಬಂಧಕ್ಕೆ  ಕೊನೆ ಹಾಡಿದೆ  ಎಂದು ವೀಣಾ  ತಿಳಿಸಿದರು . ವೀಣಾ  ಬೇರ್ಪಟ್ಟ  ಬಳಿಕ  ಆಸೀಫ್ ಬೇರೆ ಮದುವೆ ಆಗಿದ್ದರು . ಆಸೀಫ್  ಗೆ  ಅನೇಕ ಬಾರಿ  ಎಚ್ಚರಿಕೆ  ನೀಡಲು ನಾನು ಬಯಸಿದ್ದೆ  ಮತ್ತು ಅದರಂತೆ ಎಚ್ಚರಿಕೆ ಕೂಡ ನೀಡಿದ್ದೆ.ಆದರೆ ಆತ  ಅದನ್ನ  ಕೇಳಲಿಲ್ಲ  . ಅದಕ್ಕೆ ನಾನೇ ಆತನಿಂದ ದೂರವಾದೆ  ಎಂದು ವೀಣಾ ಮಲಿಕ್  ತಿಳಿಸಿದರು .  ಆಸೀಫ್ ಪತ್ನಿಯ ಬಗ್ಗೆ  ಹೇಳಿದ ವೀಣಾ  ಮದುವೆಗೆ  ಮುಂಚೆ  ಅವರು ನನಗೆ  ಫೋನ್ ಮಾಡಿ ನನ್ನ ಹಾಗೂ  ಆಸೀಫ್  ಸಂಬಂಧ ದ ಬಗ್ಗೆ ವಿಚಾರಿಸಿದ್ದರು  . ಅವರನ್ನ ಆಸೀಫ್ ಜೊತೆ ಮದುವೆ  ಆಗುವಂತೆ ನಾನೇ  ಸೂಚಿಸಿದ್ದೆ .  ಆಸೀಫ್ ನ  ಈ  ಸ್ಥಿತಿ  ಗೆ ಸ್ವತಃ ಆಸೀಫ್  ಅವರೇ ಕಾರಣ  ಎಂದು  ವೀಣಾ ಬೇಸರ ವ್ಯಕ್ತ ಪಡಿಸಿದ್ದಾಳೆ .
ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)

ಹಾಜಿಗಳು ಮಕ್ಕಾದ ಅರಫಾತ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ದ್ರಶ್ಯ


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಲಕ್ಷಾಂತರ ಮುಸ್ಲಿಮ್ ಯಾತ್ರಿಕರು ಶನಿವಾರ ಮಕ್ಕಾ ಮಸೀದಿಯ  ಸಮೀಪದ ಅರಫಾತ್‌ನಲ್ಲಿರುವ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಭವ್ಯ ಚಿತ್ರ.

ಕೋಲ್ಕತ್ತ ಪ್ರವೇಶಿಸಲಿರುವ ರೋನಲ್ದೋ..


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಜಗತ್ತಿನ  ಪ್ರಸಿದ್ದ  ಫುಟ್ಬಾಲ್ ಆಟಗಾರ  ಬ್ರಿಜಿಲ್  ತಂಡದ  ಮಾಜಿ ಆಟಗಾರ  ರೋನಲ್ದೋ  ಕೋಲ್ಕತ್ತಕ್ಕೆ ಬಂದು ಪ್ರದರ್ಶನ ಪಂದ್ಯದಲ್ಲಿ  ಪಾಲ್ಗೊಳಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.  ಡಿಸೆಂಬರ್  ನಲ್ಲಿ   ನಡೆಯುವ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಲು ರೋನಲ್ದೋ  ಭಾರತ  ಕ್ಕೆ ಬರಲಿದ್ದಾರೆ, ಎಂದು ಸುದ್ದಿ ಮಾಹಿತಿ ಪ್ರಸಾರ ಮಾಡಿದೆ. ಭಾರತದಲ್ಲಿ  ರೋನಾಲ್ಡ್  ಅವರಿಗೆ ಅಪಾರ  ಅಭಿಮಾನಿ ಬಳಗವಿದ್ದು, ರೋನಲ್ದೋ  ಆಗಮನ ಎಲ್ಲರಲ್ಲೂ  ಹೊಸ ಸಂಚಲನವನ್ನ  ಮೂಡಿಸುವಂತಿದೆ. ರೋನಲ್ದೋ ಜೊತೆ  ಬ್ರಿಜಿಲ್  ವಿಶ್ವ ಕಪ್  ವಿಜೇತ  ತಂಡದ  ನಾಯಕ  ಕ್ಹಫು ಕೂಡ  ಆಗಮಿಸಲಿದ್ದಾರೆ. ಈ ಪ್ರದರ್ಶನ ಪಂದ್ಯ ಭಾರತಿಯ ಚಲನ ಚಿತ್ರ  ನಟರು ಹಾಗು ಮಾಜಿ  ಫುಟ್ಬಾಲ್ ಆಟಗಾರರ  ಮದ್ಯೆ ನಡೆಯಲಿದ್ದು  ಭಾರತಿಯ   ಫುಟ್ಬಾಲ್ ತಂಡದ ಮಾಜಿ  ನಾಯಕ ಬೈಚುಂಗ್ ಭುತಿ ಯವರು   ಪಾಲ್ಗೊಳ್ಳಲಿದ್ದಾರೆ.
- ನಿತಿನ್ ರೈ  ಕುಕ್ಕುವಳ್ಳಿ  (ವರದಿಗಾರರು ವಿಕೆ ನ್ಯೂಸ್ )

ಮತ್ತೆ ಮುಸ್ಲಿಮರ ಧಾರ್ಮಿಕ ಭಾವನೆ ಕೆದಕಿದ ತಸ್ಲೀಮಾ ! ಈ ಬಾರಿ ದೇವರ ಅಸ್ತಿತ್ವಕ್ಕೆ ಸವಾಲು !


Posted on  by ವಿಶ್ವ ಕನ್ನಡಿಗ ನ್ಯೂಸ್

ಈ ಹಿಂದೆ ಹೈದರಾಬಾದಿನಲ್ಲಿ ಪ್ರತಿಭಟನಾಕಾರರಿಂದ ತಸ್ಲೀಮಾ ಒದೆ ತಿಂದ ದೃಶ್ಯ
ನವದೆಹಲಿ : ಸದಾ ಮುಸ್ಲಿಂ ಹಾಗೂ ಇಸ್ಲಾಂ ವಿರೋಧಿ ಬರವಣಿಗೆಗಳ ಮೂಲಕ ಪ್ರಚಾರ ಪಡೆದ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಇಂದು ಮತ್ತೊಂದು ರೀತಿಯ ಹೇಳಿಕೆಯ ವಿವಾದ ಹುಟ್ಟುಹಾಕಿದ್ದಾರೆ. ಇಡೀ ದೇಶ ಇಂದು ಸಂಭ್ರಮದಿಂದ ಬಕ್ರೀದ್ ಆಚರಿಸಿ ಬಲಿದಾನದ ಸಂಕೇತವಾಗಿ ಕುರ್ಬಾನಿ ನೀಡುತ್ತಿದ್ದರೆ ಇತ್ತ ತಸ್ಲೀಮಾ ಸಾವಿರಾರು ಮೂಕ ಪ್ರಾಣಿಗಳ  ಬಲಿ ಬಯಸುವ ಅಲ್ಲಾಹ್ ಹೇಗೆ ಮಹಾನ್ ಆಗಲು ಸಾಧ್ಯ ಎಂಬ ಹೇಳಿಕೆ ನೀಡಿ ಮತ್ತೆ ಮುಸ್ಲಿಮರ ಧಾರ್ಮಿಕ ಭಾವನೆ ಕೆದಕಿದ್ದಾರೆ.
 ಈಕೆ ಈ ಹಿಂದೆ ವಿವಾದಾತ್ಮಕ ಮುಸ್ಲಿಂ  ವಿರೋಧಿ ಲಜ್ಜಾ ಕಾದಂಬರಿ ಬರೆಯುವ ಮೂಲಕ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಬಾಂಗ್ಲಾದೇಶದಿಂದ ಗಡಿಪಾರುಗೊಂಡಿದ್ದಳು. ತದನಂತರ ಭಾರತದಲ್ಲಿ ಆಶ್ರಯ ಪಡೆದಿರುವ ತಸ್ಲೀಮಾ ತನ್ನ ಮುಸ್ಲಿಂ ವಿರೋಧಿ ಬರವಣಿಗೆ ಮುಂದುವರೆಸುತ್ತಾ ಬಂದಿದ್ದಾಳೆ. ಈ ಹಿಂದೆ ಹೈದರಾಬಾದಿನಲ್ಲಿ ಈಕೆ ಭಾಗವಹಿಸಿದ್ದ ಸಮಾರಂಭವೊಂದರಲ್ಲಿ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಕಾರ್ಯಕರ್ತರು ಈಕೆಯ ಮೇಲೆ ಹಲ್ಲೆ ನಡೆಸಿ ಈಕೆಯನ್ನು ಭಾರತದಿಂದ ಗಡಿಪಾರು ಮಾಡುವಂತೆ ಸಹ ಒತ್ತಾಯಿಸಿದ್ದರು.
ಮುಸ್ಲಿಂ ಪುರುಷರು ನಾಲ್ಕು ವಿವಾಹವಾಗಲು ಸಾಧ್ಯವಾಗುವುದಾದರೆ ಮಹಿಳೆ ನಾಲ್ಕು ಪುರುಷರನ್ನು ಮದುವೆ ಏಕಾಗಬಾರದು ಎಂದು ಈ ಹಿಂದೆ ಈಕೆ ಹೇಳಿದ್ದಳು.  ಸನ್ಮಾರ್ಗದಲ್ಲಿ ನಡೆದ ಪುರುಷರಿಗೆ ಸ್ವರ್ಗದಲ್ಲಿ ಎಪ್ಪತ್ತೆರಡು ಸ್ವರ್ಗವಾಸಿ ಕನ್ಯೆಯರು ಸಿಗುತ್ತಾರೆ ಎಂಬ ವಚನವೊಂದನ್ನು ಹಿಯಾಳಿಸಿದ್ದ ಈಕೆ ಈ ಭಾಗ್ಯ ಮಹಿಳೆಯರಿಗೆ ಇಲ್ಲ. ಆದ ಕಾರಣ ಮಹಿಳೆಯರು ಭೂಲೋಕದಲ್ಲೇ ಎಪ್ಪತ್ತೆರಡು ಪುರುಷರ ಜೊತೆ ಸೆಕ್ಸ್ ಮಾಡಬಹುದು ಎಂದಿದ್ದಳು. ಈ ರೀತಿ ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದ ಈಕೆ ಬಾರಿ ಸಾವಿರಾರು ಮೂಕ ಪ್ರಾಣಿಗಳ  ಬಲಿಪಡೆಯುವ ಅಲ್ಲಾಹ್ ಹೇಗೆ ಮಹಾನ್ ಆಗಲು ಸಾಧ್ಯ. ಈ ಬಲಿಗಾಗಿ ಅಲ್ಲಾಹ್ ಈ ಪ್ರಾಣಿಗಳ ಕ್ಷಮೆ ಕೇಳಬೇಕು ಎಂದಿದ್ದಾಳೆ.