Powered By Blogger

Thursday, 10 November 2011

ತಸ್ಲೀಮಾ ನಸ್ರೀನ್ ಬಂಧಿಸಿ ಆಕೆಯ ವಿರುದ್ಧ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಲಿ


Posted on  by ವಿಶ್ವ ಕನ್ನಡಿಗ ನ್ಯೂಸ್

ತಸ್ಲೀಮಾ ನಸ್ರೀನ್ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಹಜ್ ಕುರಿತು ಬರೆದುಕೊಂಡ ಟ್ವೀಟ್
ಭಾರತದಲ್ಲಿದ್ದುಕೊಂಡು ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯ ಮೂಲಕ ಧರ್ಮ ವಿಶ್ವಾಸಿಗಳ ಮನನೋಯಿಸುವಂತಹ ಮಾತುಗಳನ್ನಾಡುತ್ತಾ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಶ್ರಮಿಸುತ್ತಿರುವ ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನು ಬಂಧಿಸಿ ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಭಾರತ ಸರ್ಕಾರ ಮುಂದಾಗಬೇಕಿದೆ. ತನ್ನ ಲಜ್ಜಾ ಎಂಬ ಕಾದಂಬರಿಯ ಮೂಲಕ ಇಸ್ಲಾಮಿಕ್ ವಿರೋಧಿ ವಿಚಾರಗಳನ್ನು ಬರೆದ ತಸ್ಲೀಮಾ ನಸ್ರೀನ್ ಅನ್ನು ಜನರ ಪ್ರತಿಭಟನೆಗೆ ಮಣಿದ ಬಾಂಗ್ಲಾದೇಶ ಆಕೆಯನ್ನು ಗಡೀಪಾರು ಮಾಡಿತ್ತು.
ತನ್ನ ಸ್ವಂತ ದೇಶದಿಂದ ಗಡೀಪಾರು ಗೊಂಡ ಈಕೆ ಇದೀಗ ಭಾರತ ಸರ್ಕಾರದ ಆಶ್ರಯದಲ್ಲಿ ದಿನ ಕಳೆಯುತ್ತಿದ್ದಾಳೆ. ನಮ್ಮ ತೆರಿಗೆ ಹಣದಲ್ಲಿ ವಾಸಕ್ಕೆ ಮನೆ , ಆಹಾರ ಜೊತೆಗೆ ಭದ್ರತೆಯನ್ನೂ ಸರ್ಕಾರ ಈಕೆಗೆ ನೀಡುತ್ತಿದೆ. ಇಷ್ಟಕ್ಕೇ ಈಕೆ ಸುಮ್ಮನಿದ್ದರೆ ಹೋಗಲಿ ಬಿಡಿ ಎನ್ನಬಹುದಿತ್ತು. ಆದರೆ ಇತ್ತೀಚೆಗೆ ತಸ್ಲೀಮಾ ನೀಡುತ್ತಿರುವ ಹೇಳಿಕೆಗಳು ದೇಶದಲ್ಲಿ ಆಕೆಯ ವಿರುದ್ಧ ಮುಸ್ಲಿಂ ಸಮುದಾಯದವರಲ್ಲಿ ಅಸಮಾಧಾನದ ಅಲೆಯನ್ನೇ ಮೂಡಿಸಿದೆ. ಲೇಖಕನಿಗೆ ಸ್ವಾತಂತ್ರ್ಯವಿರಬೇಕು ಎನ್ನುವುದೇನೋ ನಿಜ. ಆದರೆ ಆ ಸ್ವಾತಂತ್ರ್ಯದ ಸದುಪಯೋಗವಾಗಬೇಕು. ಇಲ್ಲಿ ತಸ್ಲೀಮಾ ಅದನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ.
ಇತ್ತೀಚಿನ ಆಕೆಯ ಹೇಳಿಕೆಗಳನ್ನು ಗಮನಿಸಿದರೆ ಆಕೆ ಭಾರತದಲ್ಲಿ ಯಾವುದೋ ಒಂದು ಶಕ್ತಿಯ ಏಜೆಂಟ್ ಆಗಿ ಈಕೆ ದೇಶದಲ್ಲಿ ಕಲಹ ಎಬ್ಬಿಸಲು ಪ್ರಯತ್ನಿಸುತ್ತಿದ್ದಾಳೆಯೇ ಎಂಬ ಸಂಶಯವನ್ನೂ ಮೂಡಿಸುತ್ತದೆ. ಕೆಲ ದಿನಗಳ ಹಿಂದೆ ಶಾರುಖ್ ಖಾನ್ ಅನ್ನು ಸಲಿಂಗಿ ಎಂದು ಕರೆದ ಈಕೆ ತಾನು ಸಹ ಸಲಿಂಗಿಯಾಗಳು ಬಯಸುವುದಾಗಿ ಲಜ್ಜೆಗೆಟ್ಟ ಹೇಳಿಕೆ ನೀಡಿದಳು . ಸತ್ಯ ಸಾಯಿ ಬಾಬಾ ನಿಧನರಾದಾಗ ಒಬ್ಬ ಜಾದುಗಾರನ ನಿಧನಕ್ಕೆ ದೇಶ ದುಃಖ ಪಡುವ ಅಗತ್ಯವಿಲ್ಲ ಎಂದಳು .
ಇತ್ತೀಚಿನ ದಿನಗಳಲ್ಲಂತೂ ಎಲ್ಲಾ ಎಲ್ಲೆಯನ್ನೂ ಮೀರಿ ಮುಸ್ಲಿಮರ ಬಕ್ರೀದ್ ಆಚರಣೆ ಮತ್ತು ಹಜ್ ಕರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ. ಇದೀಗ ಈಕೆಯನ್ನು ದೇಶದಲ್ಲಿ ಇಟ್ಟುಕೊಳ್ಳುವುದು ಸರ್ವಧರ್ಮಮವನ್ನು ಸಮಭಾವದಿಂದ ಕಾಣುವ ನಮ್ಮ ದೇಶದ ಸಂಸ್ಕೃತಿಗೆ ಒಗ್ಗುವಂತಹದಲ್ಲ. ಸರ್ಕಾರ ಕೂಡಲೇ ಈಕೆಯನ್ನು ಬಂಧಿಸಬೇಕು ಮತ್ತು ಈಕೆಯ ವಿರುದ್ಧ ಧರ್ಮ ನಿಂದನೆಯ ಪ್ರಕರಣದಡಿ ಮೊಕದ್ದಮೆ ದಾಖಲಿಸಬೇಕು. ಸರ್ಕಾರಕ್ಕೆ ಅದೂ ಸಾಧ್ಯವಿಲ್ಲ ಎನ್ನುವುದಾದರೆ ಈಕೆಯನ್ನು ದೇಶದಿಂದ ಗಡೀಪಾರು ಮಾಡಬೇಕು. ಶಾಂತಿ ಸೌಹಾರ್ದತೆ ಧರ್ಮ ನಿರಪೇಕ್ಷತೆಯ ರಾಷ್ಟ್ರದಲ್ಲಿ ಇಂತಹ ಕಿಚ್ಚು ಹಚ್ಚುವ ವಿಷ ಕನ್ಯೆಯನ್ನು ಇಟ್ಟುಕೊಳ್ಳುವುದು ಸರ್ಕಾರಕ್ಕೆ ಶೋಭೆ ತರುಂತಹದ್ದಲ್ಲ. ಜನರ ಆಕ್ರೋಶ ಭುಗಿಲೇಳುವ ಮೊದಲು ಕೇಂದ್ರದ ಯುಪಿಎ ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸುವುದು ಒಳಿತು .
ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಶ್ವ ಕನ್ನಡಿಗ ನ್ಯೂಸ್

No comments:

Post a Comment