Powered By Blogger

Tuesday, 31 December 2013

36 ಬಾಲ್'ಗೆ ಆಂಡರ್ಸನ್ ಶತಕ; ಹೊಸ ವಿಶ್ವದಾಖಲೆ

36 ಬಾಲ್'ಗೆ ಆಂಡರ್ಸನ್ ಶತಕ; ಹೊಸ ವಿಶ್ವದಾಖಲೆ


ಕ್ವೀನ್ಸ್'ಟೌನ್(ಜ.01): ನ್ಯೂಜಿಲೆಂಡ್ ದೇಶದ ಉದಯೋನ್ಮುಖ ಆಲ್'ರೌಂಡರ್ ಕೋರೀ ಆಂಡರ್ಸನ್ ಹೊಸ ಅಂತಾರಾಷ್ಟ್ರೀಯ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಂಡರ್ಸನ್ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ ಹೆಸರಿನಲ್ಲಿದ್ದ 17 ವರ್ಷದ ಹಿಂದಿನ ದಾಖಲೆಯನ್ನ ಆಂಡರ್ಸನ್ ಅಳಿಸಿಹಾಕಿದ್ದಾರೆ.

ಕೇವಲ 7ನೇ ಪಂದ್ಯ ಆಡುತ್ತಿದ್ದ ಕೋರೀ ಆಂಡರ್ಸನ್ ಮತ್ತು ಜೆಸ್ಸಿ ರೈಡರ್ ಇಬ್ಬರೂ ಕೆರಿಬಿಯನ್ನರ ದಾಳಿಯನ್ನ ಅಕ್ಷರಶಃ ಧೂಳೀಪಟ ಮಾಡಿದರು. ಆಂಡರ್ಸನ್ ಅತೀ ವೇಗದ ಶತಕ ಸಿಡಿಸಿದಷ್ಟೇ ಅಲ್ಲ ಕೇವಲ 47 ಎಸೆತಗಳಲ್ಲಿ ಅಜೇಯ 131 ರನ್ ಚಚ್ಚಿದರು.

ರೋಹಿತ್ ಶರ್ಮಾ ದಾಖಲೆ ಬಚಾವ್...
ಕೋರೀ ಆಂಡರ್ಸನ್ ಆಡುತ್ತಿದ್ದ ಪರಿ ನೋಡಿದರೆ ಇನ್ನಷ್ಟು ದಾಖಲೆಗಳು ಅಳಿಸಲ್ಪಡುತ್ತವೆಂಬ ನಿರೀಕ್ಷೆಗಳಿದ್ದವು. ಆಂಡರ್ಸನ್ ಅವರ ಇನಿಂಗ್ಸಲ್ಲಿ ಬರೋಬ್ಬರಿ 14 ಸಿಕ್ಸರ್ ಹಾಗೂ 6 ಬೌಂಡರಿಗಳಿದ್ದವು. ಇನ್ನು 3 ಸಿಕ್ಸರ್ ಸಿಡಿಸಿದಿದ್ದರೆ ರೋಹಿತ್ ಶರ್ಮಾ ಅವರ ದಾಖಲೆಯನ್ನ ಅಳಿಸುವ ಅವಕಾಶ ಸಿಗುತ್ತಿತ್ತು...

ಜೆಸ್ಸಿ ರೈಡರ್ ಅಬ್ಬರ...
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೋರೀ ಆಂಡರ್ಸನ್ ಜೊತೆ ಜೆಸ್ಸಿ ರೈಡರ್ ಕೂಡ ಅಬ್ಬರಿಸಿ ಬೊಬ್ಬಿರಿದರು. ಆರಂಭಿಕ ಆಟಗಾರನಾಗಿ ಬಂದ ರೈಡರ್ 51 ಚೆಂಡುಗಳಲ್ಲಿ 104 ರನ್ ಸಿಡಿಸಿ ಕೆರಿಬಿಯನ್ನರ ಗಾಯದ ಮೇಲೆ ಬರೆ ಎಳೆದರು. 21 ಓವರುಗಳಿಗೆ ಮೊಟಕುಗೊಂಡ ಈ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 283 ರನ್ ಪೇರಿಸಿತು. 20 ಓವರುಗಳ ಪಂದ್ಯದಂತೆ ಪರಿಗಣಿಸಿದರೆ ಈ ಮೊತ್ತವೂ ವಿಶ್ವದಾಖಲೆಯೇ...!

ಏಕದಿನ ಕ್ರಿಕೆಟ್'ನಲ್ಲಿ ಅತೀ ವೇಗದ ಶತಕಗಳ ಸರದಾರರು...
1) ಕೋರೀ ಆಂಡರ್ಸನ್(ನ್ಯೂಜಿಲೆಂಡ್) 36 ಎಸೆತ -  2013
2) ಶಾಹಿದ್ ಅಫ್ರಿದಿ(ಪಾಕಿಸ್ತಾನ) 37 ಎಸೆತ - 1996
3) ಮಾರ್ಕ್ ಬೌಷರ್(ದ.ಆಫ್ರಿಕಾ) 44 ಎಸೆತ - 2006
4) ಬ್ರಿಯಾನ್ ಲಾರಾ(ವೆಸ್ಟ್ ಇಂಡೀಸ್) 45 ಎಸೆತ - 2006
5) ಶಾಹಿದ್ ಅಫ್ರಿದಿ(ಪಾಕಿಸ್ತಾನ) 45 ಎಸೆತ - 2005

Source: Suvarna News