Posted on November 8, 2011 by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ
ಮುಂಬೈ :ಸಾಮಾಜಿಕ ಕಾರ್ಯಕರ್ತ ಹಾಗೂ ಅಣ್ಣಾ ಟೀಮ್ ನಿಂದ ಹೊರಬಿದ್ದ ಕಾವಿಧಾರಿ ಸ್ವಾಮಿ ಅಗ್ನಿವೇಶ್ ಇಂದು ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮಕ್ಕೆ ಪ್ರವೇಶ ಮಾಡಲಿದ್ದಾರೆ . ಅಣ್ಣಾ ಟೀಮ್ ವಿರುದ್ದ ಸಿಡಿದೆದ್ದ ಅಗ್ನಿವೇಶ್ ಈ ಕಾರ್ಯಕ್ರಮದ ಮೂಲಕ ತಾನು ಯುವ ಜನತೆಗೆ ಅಣ್ಣ ತಂಡದ ಸದಸ್ಯರ ಕುರಿತು ಮಾಹಿತಿ ನೀಡುವುದರ ಜೊತೆಗೆ ಯುವಜನತೆಗೆ ಸಾಮಾಜಿಕ ಪಿಡುಗುಗಳ ಬಗ್ಗೆಯೂ ಜಾಗೃತಿ ಮೂಡಿಸಲು ಯತ್ನಿಸುವುದಾಗಿ ಹೇಳಿದ್ದಾರೆ .
ಮಾಡೆಲ್ , ನಟಿಯರಿಂದ ಕೂಡಿರುವ ಈ ಕಾರ್ಯಕ್ರಮದಲ್ಲಿ ಈ ಕಾವಿಧಾರಿ ಯಾವ ರೀತಿಯ ಸಂದೇಶ ನೀಡುತ್ತಾರೋ ದೇವರೇ ಬಲ್ಲ . ಈ ಕಾರ್ಯಕ್ರಮದಲ್ಲಿ ೫ ನೇ ಪುರುಷ ಸ್ಪರ್ಧಿ ಅಗ್ನಿವೇಶ್ . ಈ ಕಾರ್ಯಕ್ರಮದ ವಿಶೇಷ ಅಂದರೆ ಹೆಂಗಳೆಯರ ಜಗಳ, ಹೊಡೆದಾಟ, ಅಸಭ್ಯ ನಡವಳಿಕೆ , ಅಸಭ್ಯ ಶಬ್ದಗಳ ಬಳಕೆ ಇದರ ನಡುವೆ ಈ ಅಗ್ನಿವೇಶ್ ಸಿಕ್ಕಿ ಏನಾಗುತ್ತಾರೋ ? ಎಷ್ಟು ದಿನ ಈ ಬಿಗ್ ಬಾಸ್ ಮನೆ ಯಲ್ಲಿ ಇರ್ತಾರೋ ? ಕಾದು ನೋಡೋಣ..ಏನೇ ಇರಲಿ ಅಗ್ನಿವೇಶ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಣ್ಣಾ ಕೆಲವೊಂದು ಬಾಂಬ್ ಗಳನ್ನು ಸಿಡಿಸುವುದಂತೂ ಖಂಡಿತ .
- ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)