Saturday, 29 October 2011
BMW ಕಂಪೆನಿಯಿಂದ ಎಲೆಕ್ಟ್ರಿಕ್ ಸ್ಕೂಟರ್
ದುಬೈ : ಜಗತ್ತಿನ ಖ್ಯಾತ ವಾಹನ ತಯಾರಿಕಾ ಕಂಪೆನಿ ಬಿ .ಎಂ. ಡಬ್ಲ್ಯೂ ಇ ಎಲೆಕ್ಟ್ರಾನಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುತ್ತಿದ್ದು ಅದು ಗ್ರಾಹಕರನ ಮನಗೆಲ್ಲಲಿದೆ ಎಂಬ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ . ಈ ಸ್ಕೂಟರ್ ಬ್ಯಾಟರಿ ಅನ್ನು ಮೊಬೈಲ್ ಮಾದರಿಯಲ್ಲಿ ಮನೆಯ ವಿದ್ಯುಚ್ಚಕ್ತಿ ಮೂಲಕ ರೀಚಾರ್ಜ್ ಮಾಡಬಹುದಾಗಿದ್ದು ಮೂರು ಗಂಟೆಯ ರೀಚಾರ್ಜಿನಲ್ಲಿ ಸುಮಾರು ೬೦ ಮೈಲಿ ದೂರ ಸಂಚರಿಸಲಿದೆ.
ಗ್ರಾಮೀಣ ಪ್ರದೇಶದ ಚಿಕ್ಕಪುಟ್ಟ ರಸ್ತೆಯಲ್ಲಿ ಸಂಚರಿಸುವ ಗ್ರಾಹಕರಿಗೆ ಈ ಸ್ಕೂಟರ್ ಹೆಚ್ಚು ಉಪಕಾರಿಯಾಗಲಿದ್ದು ಅವರನ್ನು ಗಮನದಲ್ಲಿಟ್ಟು ಇದನ್ನು ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿದೆ. ಸ್ಕೂಟರ್ ನಲ್ಲಿ ಎಲ್ .ಸಿ .ಡಿ ಸ್ಕ್ರೀನ್ ಇದ್ದು ಹಿಂಬದಿಯ ದೃಶ್ಯಗಳು ಅದರಲ್ಲಿ ಮೂಡಿಬರಲಿವೆ. ಈ ಕಾರಣದಿಂದ ಸೈಡ್ ಮಿರರ್ ಬಳಸುವ ಅವಶ್ಯಕತೆ ಇರುವುದಿಲ್ಲ. ಎಲ್.ಸಿ.ಡಿ ಮುಖಾಂತರವೇ ಸ್ಕೂಟರಿನ ವೇಗ , ಬ್ಯಾಟರಿ ಸಾಮರ್ಥ್ಯ ಹಾಗೂ ಇತರ ಮಾಹಿತಿಗಳು ಮೂಡಿಬರಲಿವೆ.
ಶೈನಿ ಅಹುಜಾ ವಿರುದ್ಧ ಸಯಾಲಿ ಭಗತ್ ಲೈಂಗಿಕ ಆರೋಪ , ಅಮಿತಾಬ್ ಸಹ ಆಕೆಯ ಎದೆಗೆ ಕೈ ಹಾಕಿದ್ದರಂತೆ !
ಮುಂಬೈ : ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿ ಹಲವು ಸಮಯ ಜೈಲು ಕಂಬಿಯ ಹಿಂದೆ ಇದ್ದ ಹಿಂದಿ ಚಿತ್ರ ನಟ ಶೈನಿ ಆಹುಜಾ ಜಾಮೀನಿನ ಮೇಲೆ ಬಿಡುಗಡೆ ಆಗಿ ಬಂದ ನಂತರ ಈಗ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿದ್ದು ಶೈನಿ ಅಹುಜಾ ನಟಿಸುತ್ತಿರುವ ಹೊಸ ಚಿತ್ರ ” ಗೂಸ್ಟ್ “ ಚಿತ್ರ ದ ನಾಯಕಿ ಸಯಾಲಿ ಭಗತ್ ಶೈನಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ . ಶೂಟಿಂಗ್ ಸಂದರ್ಭದಲ್ಲಿ ವಿನಾ ಕಾರಣ ನನ್ನ ಮೈ ಮುಟ್ಟೋದು ಅಸಭ್ಯ ರೀತಿ ಯಲ್ಲಿ ವರ್ತಿಸಿ ತನಗೆ ಮಾನಸಿಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅಪಾದಿಸಿದ್ದಾರೆ.
ಈ ಘಟನೆ ಏಪ್ರಿಲ್ ನಲ್ಲೇ ನಡೆದಿದ್ದು ವಿಷಯ ತಿಳಿದ ಅಹುಜಾ ಹೆಂಡತಿ ತನಗೆ ಫೋನ್ ಮಾಡಿ ಈ ವಿಚಾರವನ್ನು ಪೊಲೀಸರಿಗೆ ಹಾಗೂ ಮಾಧ್ಯಮದವರಿಗೆ ತಿಳಿಸಬಾರದು ಎಂದು ಬೇಡಿಕೊಂಡಳು . ಹಾಗೇ ನಾನು ಇದುವರೆಗೂ ಸುಮ್ಮನಿದ್ದೆ . ಆದರೆ ಅಹುಜಾ ಉಪಟಳ ಜಾಸ್ತಿ ಆಯಿತು . ಅದಕ್ಕಾಗಿ ಈಗ ಮಾಧ್ಯಮದ ಮುಂದೆ ಹೇಳಿಕೊಂಡೆ ಎಂದಿದ್ದಾರೆ .ನಂತರ ಅಹುಜಾ ಹೆಂಡತಿ ಅನುಪಮ ತನಗೆ ಫೋನ್ ಮಾಡಿ ಬೆದರಿಕೆ ಒಡ್ಡಿದ್ದಾಳೆ ಎಂದು ಆರೋಪಿಸಿದ್ದಾಳೆ . ಹಿಂದಿನ ಪ್ರಕರಣ ದಲ್ಲಿ ಪತಿ ಯ ವಿರುದ್ಧವಾಗಿದ್ದ ಅನುಪಮ ಈ ವಿಚಾರದಲ್ಲಿ ತನ್ನ ಪತಿ ಭಾಗಿಯಾಗಿಲ್ಲ ಎಂದು ಪತಿಯ ಪರವಾಗಿ ನಿಂತಿದ್ದಾಳೆ .
ಇಪ್ಪತ್ತೇಳರ ಹರೆಯದ ಸಯಾಲಿ ಭಗತ್ ಆರೋಪ ಇಷ್ಟಕ್ಕೇ ನಿಂತಿಲ್ಲ. ಬಾಲಿವುಡ್ ಚಿತ್ರರಂಗಕ್ಕೆ ನಾನು ಪ್ರವೇಶ ಮಾಡುವಾಗ ನನ್ನ ವಯಸ್ಸು ಇಪ್ಪತ್ತಾಗಿತ್ತು. ಈ ಏಳು ವರ್ಷದಲ್ಲಿ ನಾನು ಅನೇಕ ರೀತಿಯ ಲೈಂಗಿಕ ಕಿರುಕುಳವನ್ನು ಇಲ್ಲಿ ಎದುರಿಸಿರುವುದಾಗಿ ಸಹ ಹೇಳಿಕೊಂಡಿದ್ದಾಳೆ. ಈ ಕಾರಣಕ್ಕಾಗಿ ನೊಂದು ನಾನು ಇನ್ನು ಮುಂದೆ ಚಿತ್ರರಂಗದಿಂದ ವಿದಾಯ ಹೇಳುವುದಾಗಿಯೂ ಹೇಳಿದ್ದಾಳೆ . ಆಕೆಯ ಪ್ರಕಾರ ಟೀನು ವರ್ಮಾ ಅವರ ದಿಸ್ ವೀಕೆಂಡ್ ಚಿತ್ರ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾನು ಅವರ ಆಶೀರ್ವಾದ ಪಡೆಯಲು ಅವರ ಕಾಲಿಗೆ ಬಿದ್ದಾಗ ಅಮಿತಾಬ್ ನನ್ನ ಎದೆಗೆ ಕೈ ಹಾಕಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾಳೆ. ಎಪ್ಪತ್ತು ವರ್ಷದ ನನ್ನ ಅಜ್ಜನ ವಯಸ್ಸಿನ ಈ ನಟನ ವರ್ತನೆ ನನಗೆ ಒಂದು ರೀತಿಯಲ್ಲಿ ಆಘಾತ ಉಂಟು ಮಾಡಿತು ಎಂದಿದ್ದಾಳೆ . ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಸಹ ನನ್ನನ್ನು ಚಿತ್ರದ ಕುರಿತಾಗಿ ಮಾತುಕತೆಗೆ ಕಚೇರಿಗೆ ಕರೆದು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ . ಈ ರೀತಿಯ ಹಲವು ಕೆಟ್ಟ ಅನುಭವಗಳ ಕಾರಣ ಬಾಲಿವುಡ್ ಚಿತ್ರರಂಗದಿಂದ ದೂರ ಹೋಗುವುದಾಗಿ ಹೇಳಿದ್ದಾಳೆ .
ಭಟ್ಕಳ : ಅಡ್ವಾಣಿಯ ರಥಯಾತ್ರೆಯಲ್ಲಿ ಹಿಂದುಗಳು ಯಾರೂ ಭಾಗವಹಿಸಬೇಡಿ – ಶ್ರೀರಾಮ ಸೇನೆ ಕರೆ
ಭಟ್ಕಳ : ಭಟ್ಕಳದ ಮೂಲಕ ಹಾದು ಹೋಗುವ ಅಡ್ವಾಣಿಯ ರಥಯಾತ್ರೆಗೆ ಶ್ರೀ ರಾಮ ಸೇನೆ ಬೆಂಬಲ ನೀಡುವುದಿಲ್ಲ ಎಂದು ಶ್ರೀರಾಮ ಸೇನೆಯ ಭಟ್ಕಳ ಘಟಕ ಹೇಳಿದೆ. ಗುರುವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಅಡ್ವಾಣಿಯವರಿಗೆ ದೇಶದ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮುಖ್ಯವಾಗಿದೆ. ಅವರು ರಥಯಾತ್ರೆಯ ನಾಟಕವಾಡಿ ಓಟ್ ಬ್ಯಾಂಕನ್ನು ಗಟ್ಟಿಗೊಳಿಸುತ್ತಿದ್ದಾರೆ. ಅಡ್ವಾಣಿಯ ರಥಯಾತ್ರೆಯಲ್ಲಿ ಹಿಂದುಗಳು ಯಾರೂ ಭಾಗವಹಿಸಕೂಡದು ಎಂದು ಶ್ರೀರಾಮ ಸೇನೆಯ ಭಟ್ಕಳ ಘಟಕವು ಕರೆ ನೀಡಿದೆ.
ಅಡ್ವಾಣಿಯು ಹಿಂದು ಮತ್ತು ರಾಮನ ಹೆಸರಿನಲ್ಲಿ ಹಲವಾರು ಯಾತ್ರೆಗಳನ್ನು ಮಾಡಿದ್ದಾರೆ. ಇದರಿಂದ ಹಿಂದು ಧರ್ಮಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ತಾವು ರಾಜಕೀಯ ಲಾಭವನ್ನು ಗಳಿಸಿಕೊಂಡಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರಗಳಿಗೆ ಹಿಂದು ಧರ್ಮದ ರಕ್ಷಣೆಯ ಕುರಿತಂತೆ ಯಾವುದೇ ಹಿತಾಸಕ್ತಿಯಿಲ್ಲ. ಬದಲಾಗಿ ಈ ರೀತಿಯ ಯಾತ್ರೆಗಳ ಮೂಲಕ ಬಿಜೆಪಿಗೆ ಓಟ್ ಬ್ಯಾಂಕ್ ದೊರೆತಿದೆ ಎಂದರು. ಡಾ.ಚಿತ್ತರಂಜನ್ ಕೊಲೆಯಾದ ಸಂದರ್ಭ ಭಟ್ಕಳಕ್ಕೆ ಬಂದ ಅಡ್ವಾಣಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ 24 ಗಂಟೆಗಳ ಒಳಗಾಗಿ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಹೇಳಿಕೆ ನೀಡಿದ್ದರು. ಅದರ ನಂತರ ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೂ ಏನನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಶ್ರೀರಾಮಸೇನೆ ಆಪಾದಿಸಿದೆ . ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಮುಖಂಡ ಶಂಕರ್ ನಾಯ್ಕ, ಸುರೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಣೆಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಮೈಸೂರಿನಲ್ಲಿ ಅದ್ಧೂರಿ ಟಿಪ್ಪು ಸುಲ್ತಾನ್ ಉರೂಸ್ ಆಚರಣೆ
ಮೈಸೂರು : ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್.ಡಿ.ಪಿ.ಐ ) ವತಿಯಿಂದ ಗುರುವಾರದಂದು ಮೈಸೂರಿನಲ್ಲಿ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಮೈಸೂರು ಹುಲಿ ಶಹೀದ್ ಎ ಮಿಲ್ಲತ್ ಹಝರತ್ ಟಿಪ್ಪು ಸುಲ್ತಾನ್ (ರ.ಅ) ರವರ ಉರೂಸ್ ಶರೀಫ್ ಅನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ ಹನ್ನೊಂದು ಗಂಟೆಗೆ ಮಿಶನ್ ಆಸ್ಪತ್ರೆ ಸರ್ಕಲ್ ನಿಂದ ಹೊರಟ ಮೆರವಣಿಗೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡರು. ಮೆರವಣಿಗೆಯಲ್ಲಿ ಟಿಪ್ಪು ಆಡಳಿತಾವಧಿಯ ಧ್ವಜಗಳನ್ನು ಹಾಗೂ ಎಸ್ .ಡಿ.ಪಿ.ಐ ಪಕ್ಷದ ಧ್ವಜಗಳನ್ನು ಹಿಡಿದ ಕಾರ್ಯಕರ್ತರ ಜೊತೆ ಟಿಪ್ಪು ವೇಷ ಧರಿಸಿದ್ದ ಪುಟಾಣಿ ಮಕ್ಕಳು ಸಹ ಗಮನ ಸೆಳೆದರು. ಮಿಶನ್ ಆಸ್ಪತ್ರೆ ಸರ್ಕಲ್ ನಿಂದ ಹೊರಟ ಈ ಮೆರವಣಿಗೆ ಅಶೋಕ ರಸ್ತೆಯ ಮೀಲಾದ್ ಬಾಗ್ ಸರ್ಕಲ್ ನಲ್ಲಿ ಕೊನೆಗೊಂಡಿತು.
ಕಾರ್ಯಕ್ರಮದಲ್ಲಿ ಎಸ್.ಡಬ್ಲ್ಯೂ.ಸಿ ಯ ಜನಾಬ್ ಶಬೀರ್ ಮುಸ್ತಫಾ , ಎಸ್.ಡಿ.ಪಿ.ಐ ಮೈಸೂರು ಜಿಲ್ಲಾಧ್ಯಕ್ಷರಾದ ಮಹಮ್ಮದ್ ಫೈಸಲ್ , ಕಾರ್ಯದರ್ಶಿ ಮತೀನ್ ಬೇಗ್ , ಖಜಾಂಚಿ ಫಜಲುಲ್ಲಾ , ಎಸ್.ಡಿ.ಪಿ.ಐ ಚಾಮರಾಜ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ತಬ್ರೀಜ್ ಸೇಟ್ , ೩೯ ನೇ ವಾರ್ಡಿನ ಅಧ್ಯಕ್ಷ ಇಕ್ಬಾಲ್ , ಪಿ.ಎಫ್.ಐ ಅಧ್ಯಕ್ಷ ಅತಾವುಲ್ಲಾ ಪಾಲ್ಗೊಂಡಿದ್ದರು . ಟಿಪ್ಪು ಜಯಂತಿಯನ್ನು ಸರ್ಕಾರ ರಜಾ ದಿನವನ್ನಾಗಿ ಘೋಷಣೆ ಮಾಡಬೇಕು ಮತ್ತು ರಾಜ್ಯದ ಯಾವುದಾದರೂ ವಿಮಾನ ನಿಲ್ಧಾಣವೊಂದಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಊ ಲಾಲಾ ಊ ಲಾಲಾ . ಸಿಲ್ಕ್ ಜೀವನ ಕುರಿತ ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ
ಮುಂಬೈ : ಒಂದು ಕಾಲದ ಹಾಟ್ ನಟಿ ಸಿಲ್ಕ್ ಸ್ಮಿತಾ ಜೀವನದ ಕುರಿತಾದ ದಿ ಡರ್ಟಿ ಪಿಕ್ಚರ್ ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ಬಪ್ಪಿ ಲಹರಿ ಹಾಡಿರುವ ಚಿತ್ರದ ಊ ಲಾಲಾ ಊ ಲಾ ತೂ ಹೈ ಮೇರಿ ಫ್ಯಾಂಟಸಿ ಹಾಡಂತೂ ಈಗಾಗಲೇ ಸೂಪರ್ ಹಿಟ್ ಆಗಿದೆ . ಚಿತ್ರದಲ್ಲಿ ಬಾಲಿವುಡ್ ನಟಿ ಬಂಗಾಳಿ ಬೆಡಗಿ ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಅಭಿನಯಿಸಿದ್ದಾರೆ . ನಾಸಿರುದ್ದೀನ್ ಷಾ , ತುಷಾರ್ ಕಪೂರ್ , ಇಮ್ರಾನ್ ಹಾಶ್ಮಿ ಸಹ ಚಿತ್ರದಲ್ಲಿದ್ದಾರೆ. ಚಿತ್ರದ ಸೂಪರ್ ಹಿಟ್ ಊ ಲಾಲಾ ಊ ಲಾಲಾ ಹಾಡಿನ ಒಂದು ಝಲಕ್ ಇಲ್ಲಿದೆ . ನೋಡಿ …
Subscribe to:
Posts (Atom)