Powered By Blogger

Tuesday 1 November 2011

ಮಂಗಳೂರು : ಹಿಂದೂ ಜಾಗರಣ ವೇದಿಕೆ ಚೇತು ಕೊಲೆ ಆರೋಪಿಗಳ ಖುಲಾಸ


Posted on  by ವಿಶ್ವ ಕನ್ನಡಿಗ ನ್ಯೂಸ್

ಮಂಗಳೂರು : ೨೦೦೯ ರ ಮೇ ೨೮ ರಂದು ಮಂಗಳೂರಿನ ಜೆಪ್ಪು  ಮಾರ್ನಮಿಕಟ್ಟೆಯಲ್ಲಿರುವ ತನ್ನ ಅಂಗಡಿಯಲ್ಲಿ ಮಾರಣಾಂತಿಕವಾಗಿ ತಲವಾರಿನಿಂದ ಹಲ್ಲೆಗೊಳಗಾಗಿ ಮೃತಪಟ್ಟ ಹಿಂದೂ ಜಾಗರಣ ವೇದಿಕೆಯ ಸದಸ್ಯ ಚೇತನ್ ಶೆಟ್ಟಿ ಆಲಿಯಾಸ್ ಚೇತು (೨೯) ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ದಕ್ಷಿಣ ಕನ್ನಡ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ.  ಮಾರ್ನಮಿಕಟ್ಟೆಯಲ್ಲಿ ಪೂರ್ಣೆಶ್ ಸ್ಟೋರ್ ಎಂಬ ಅಂಗಡಿ ಹೊಂದಿದ್ದ ಚೇತುವಿನ ಅಂಗಡಿ ಎದುರು ಚೇತುವಿನ ಹತ್ಯೆ ನಡೆಯುವ ಕೆಲ ದಿನ ಮುಂಚೆ ಮಹಮ್ಮದ್ ಅಶ್ರಫ್ ಎಂಬುವವನ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಗಾಯಗೊಂಡ ಸ್ಥಿತಿಯಲ್ಲಿ ಅಶ್ರಫ್ ಆಸ್ಪತ್ರೆಗೆ ದಾಖಲಾಗಿದ್ದ . ಆದರೆ ಆತ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ದಿನವೇ ರಾತ್ರಿ ಹತ್ತು ಗಂಟೆಗೆ ಚೇತುವಿನ ಅಂಗಡಿಗೆ ಬಂದ ಹಂತಕರು ಆತನನ್ನು ಕೊಚ್ಚಿ ಕೊಂದಿದ್ದರು.
ನಗರದಲ್ಲಿ ಈ ಪ್ರಕರಣ ಸ್ವಲ್ಪ ಮಟ್ಟಿಗಿನ ಉದ್ವಿಗ್ನ ಪರಿಸ್ಥಿತಿಯನ್ನೂ ಉಂಟುಮಾಡಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮುಸ್ತಫಾ , ಹಮೀದ್ ಸರ್ಫಾನ್ , ಮೊಹಮ್ಮದ್ ಅಜರುದ್ದೀನ್ , ಅಲ್ತಾಫ್ ಹಾಗೂ ಮಹಮ್ಮದ್ ಅಶ್ರಫ್ ಎಂಬ ಆರೋಪಿಗಳನ್ನು ಬಂಧಿಸಿದ್ದರು.
ಚೇತು ಹತ್ಯೆ ನಡೆದ ಆತನ ಅಂಗಡಿಯ ದೃಶ್ಯ
ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಚೇತನ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ಹೊರಿಸಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬ ಕಾರಣ ನೀಡಿ ಅವರನ್ನು ಖುಲಾಸೆಗೊಳಿಸಿದ್ದಾರೆ . ಪ್ರಕರಣದ ಇನ್ನೊಬ್ಬ ಆರೋಪಿ ಮಹಮ್ಮದ್ ಫಾರೂಕ್ ಎಂಬಾತ ತಲೆ ಮರೆಸಿಕೊಂಡಿದ್ದು ಇದುವರೆಗೂ ಪೊಲೀಸರಿಗೆ ಸಿಕ್ಕಿಲ್ಲ. ಆತ ವಿದೇಶಕ್ಕೆ ಪಾಲಾಯನ ಮಾಡಿರಬಹುದು ಎಂಬ ಶಂಕೆಯನ್ನು ಪೋಲಿಸ್ ಮೂಲಗಳು ವ್ಯಕ್ತಪಡಿಸಿದ್ದವು.

ವಿಶ್ವ ಕನ್ನಡ ಕಂದ ನೀನೆಷ್ಟು ಚಂದ . ಮಕ್ಕಳ ದಿನಾಚರಣೆ ಅಂಗವಾಗಿ ವಿಕೆ ನ್ಯೂಸ್ ಮುದ್ದು ಕಂದ ಸ್ಪರ್ಧೆ


ದುಬೈ : ಮಕ್ಕಳ ದಿನಾಚರಣೆ ಅಂಗವಾಗಿ ವಿಶ್ವ ಕನ್ನಡಿಗ ನ್ಯೂಸ್ ‘ ವಿಶ್ವ ಕನ್ನಡ ಕಂದ ನೀನೆಷ್ಟು ಚಂದ ‘ ಎಂಬ ಮುದ್ದುಕಂದ ಸ್ಪರ್ಧೆಯನ್ನು ಆಯೋಜಿಸಿದ್ದು ಐದು ವರ್ಷದೊಳಗಿನ ಮಕ್ಕಳ ಭಾವಚಿತ್ರವನ್ನು ಈ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ನವೆಂಬರ್ ಹದಿನಾಲ್ಕರ ಮಕ್ಕಳ ದಿನಾಚರಣೆಯಂದು ವಿಜೇತರ ಆಯ್ಕೆ ನಡೆಯಲಿದೆ.
ಸ್ಪರ್ಧೆಗೆ ನಿಬಂಧನೆಗಳು ಇಂತಿವೆ
1. ಮಕ್ಕಳ ವಯೋಮಿತಿ ಐದು ವರ್ಷದೊಳಗಿರಬೇಕು .ಮಗುವಿನ ಹೆಸರು , ವಯಸ್ಸು ಮತ್ತು ಹಾಲಿ  ವಾಸವಿರುವ  ಊರಿನ ಹೆಸರನ್ನು ನಮೂದಿಸಬೇಕು  .
2. ಮಕ್ಕಳ ಭಾವ ಚಿತ್ರವನ್ನು vknewz@gmail.com ಎಂಬ ಈ ಮೇಲ್ ವಿಳಾಸಕ್ಕೆ ಕಳುಹಿಸಬೇಕು .
3. ಭಾವಚಿತ್ರ ಕಳುಹಿಸಲು ನವೆಂಬರ್ 12  ಕೊನೆಯ ದಿನ
4. ನವೆಂಬರ್ ಹನ್ನೆರಡರ ನಂತರ ಬಂದ ಭಾವಚಿತ್ರವನ್ನು ಪರಿಗಣಿಸಲಾಗುವುದಿಲ್ಲ .
5. ಒಂದು ಮಗುವಿನ ಕೇವಲ ಒಂದು ಭಾವಚಿತ್ರವನ್ನು ಮಾತ್ರ ಕಳುಹಿಸಬೇಕು.
6. ಭಾವಚಿತ್ರದ ಜೊತೆ ತಮ್ಮ ಸಂಪರ್ಕ ಈ ಮೇಲ್ ವಿಳಾಸವನ್ನು ನಮೂದಿಸಿರಿ .
7. ಸ್ಪರ್ಧೆಯಲ್ಲಿ ಪ್ರಥಮ , ದ್ವಿತೀಯ , ತೃತೀಯ ಬಹುಮಾನವಿದೆ .
8. ವಿಜೇತರ ಆಯ್ಕೆಯನ್ನು ವಿಕೆ ನ್ಯೂಸ್ ಆಯ್ಕೆ ಮಾಡಿದ ತಂಡ ನಡೆಸಲಿದೆ .
9. ವಿಜೇತ ಮಕ್ಕಳ ಭಾವಚಿತ್ರವನ್ನು ಒಂದು ತಿಂಗಳ ಕಾಲ ವಿಕೆ ನ್ಯೂಸ್ ಮುಖಪುಟದಲ್ಲಿ ಪ್ರಕಟಿಸಲಾಗುವುದು .
10. ಪ್ರಥಮ ಬಹುಮಾನ 2000  ರೂಪಾಯಿ ದ್ವಿತೀಯ ಮತ್ತು ತೃತೀಯ ವಿಜೇತರು ಕ್ರಮವಾಗಿ 1000  ರೂಪಾಯಿ ಮತ್ತು 500  ರೂಪಾಯಿ ಬಹುಮಾನ ಪಡೆಯಲಿದ್ದಾರೆ .

ಇನ್ನೇಕೆ ತಡ ಮಾಡುವಿರಿ….. ತಮ್ಮ ಮುದ್ದು ಕಂದನ ಭಾವಚಿತ್ರವನ್ನು ಈ ಮೇಲ್ ಮಾಡಿ
‘ ವಿಶ್ವ ಕನ್ನಡ ಕಂದ ನೀನೆಷ್ಟು ಚಂದ ‘ ಸ್ಪರ್ಧೆಯಲ್ಲಿ ಭಾಗವಹಿಸಿರಿ

MOHAMMAD AYAN MANGALORE

CONVERT YOUR ANY CURRENCY TO RUPEES, CLICK THE LINK JOIN OUR BLOG