Powered By Blogger

Tuesday, 8 November 2011

ಮತ್ತೆ ಮುಸ್ಲಿಮರ ಧಾರ್ಮಿಕ ಭಾವನೆ ಕೆದಕಿದ ತಸ್ಲೀಮಾ ! ಈ ಬಾರಿ ದೇವರ ಅಸ್ತಿತ್ವಕ್ಕೆ ಸವಾಲು !


Posted on  by ವಿಶ್ವ ಕನ್ನಡಿಗ ನ್ಯೂಸ್

ಈ ಹಿಂದೆ ಹೈದರಾಬಾದಿನಲ್ಲಿ ಪ್ರತಿಭಟನಾಕಾರರಿಂದ ತಸ್ಲೀಮಾ ಒದೆ ತಿಂದ ದೃಶ್ಯ
ನವದೆಹಲಿ : ಸದಾ ಮುಸ್ಲಿಂ ಹಾಗೂ ಇಸ್ಲಾಂ ವಿರೋಧಿ ಬರವಣಿಗೆಗಳ ಮೂಲಕ ಪ್ರಚಾರ ಪಡೆದ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಇಂದು ಮತ್ತೊಂದು ರೀತಿಯ ಹೇಳಿಕೆಯ ವಿವಾದ ಹುಟ್ಟುಹಾಕಿದ್ದಾರೆ. ಇಡೀ ದೇಶ ಇಂದು ಸಂಭ್ರಮದಿಂದ ಬಕ್ರೀದ್ ಆಚರಿಸಿ ಬಲಿದಾನದ ಸಂಕೇತವಾಗಿ ಕುರ್ಬಾನಿ ನೀಡುತ್ತಿದ್ದರೆ ಇತ್ತ ತಸ್ಲೀಮಾ ಸಾವಿರಾರು ಮೂಕ ಪ್ರಾಣಿಗಳ  ಬಲಿ ಬಯಸುವ ಅಲ್ಲಾಹ್ ಹೇಗೆ ಮಹಾನ್ ಆಗಲು ಸಾಧ್ಯ ಎಂಬ ಹೇಳಿಕೆ ನೀಡಿ ಮತ್ತೆ ಮುಸ್ಲಿಮರ ಧಾರ್ಮಿಕ ಭಾವನೆ ಕೆದಕಿದ್ದಾರೆ.
 ಈಕೆ ಈ ಹಿಂದೆ ವಿವಾದಾತ್ಮಕ ಮುಸ್ಲಿಂ  ವಿರೋಧಿ ಲಜ್ಜಾ ಕಾದಂಬರಿ ಬರೆಯುವ ಮೂಲಕ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಬಾಂಗ್ಲಾದೇಶದಿಂದ ಗಡಿಪಾರುಗೊಂಡಿದ್ದಳು. ತದನಂತರ ಭಾರತದಲ್ಲಿ ಆಶ್ರಯ ಪಡೆದಿರುವ ತಸ್ಲೀಮಾ ತನ್ನ ಮುಸ್ಲಿಂ ವಿರೋಧಿ ಬರವಣಿಗೆ ಮುಂದುವರೆಸುತ್ತಾ ಬಂದಿದ್ದಾಳೆ. ಈ ಹಿಂದೆ ಹೈದರಾಬಾದಿನಲ್ಲಿ ಈಕೆ ಭಾಗವಹಿಸಿದ್ದ ಸಮಾರಂಭವೊಂದರಲ್ಲಿ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಕಾರ್ಯಕರ್ತರು ಈಕೆಯ ಮೇಲೆ ಹಲ್ಲೆ ನಡೆಸಿ ಈಕೆಯನ್ನು ಭಾರತದಿಂದ ಗಡಿಪಾರು ಮಾಡುವಂತೆ ಸಹ ಒತ್ತಾಯಿಸಿದ್ದರು.
ಮುಸ್ಲಿಂ ಪುರುಷರು ನಾಲ್ಕು ವಿವಾಹವಾಗಲು ಸಾಧ್ಯವಾಗುವುದಾದರೆ ಮಹಿಳೆ ನಾಲ್ಕು ಪುರುಷರನ್ನು ಮದುವೆ ಏಕಾಗಬಾರದು ಎಂದು ಈ ಹಿಂದೆ ಈಕೆ ಹೇಳಿದ್ದಳು.  ಸನ್ಮಾರ್ಗದಲ್ಲಿ ನಡೆದ ಪುರುಷರಿಗೆ ಸ್ವರ್ಗದಲ್ಲಿ ಎಪ್ಪತ್ತೆರಡು ಸ್ವರ್ಗವಾಸಿ ಕನ್ಯೆಯರು ಸಿಗುತ್ತಾರೆ ಎಂಬ ವಚನವೊಂದನ್ನು ಹಿಯಾಳಿಸಿದ್ದ ಈಕೆ ಈ ಭಾಗ್ಯ ಮಹಿಳೆಯರಿಗೆ ಇಲ್ಲ. ಆದ ಕಾರಣ ಮಹಿಳೆಯರು ಭೂಲೋಕದಲ್ಲೇ ಎಪ್ಪತ್ತೆರಡು ಪುರುಷರ ಜೊತೆ ಸೆಕ್ಸ್ ಮಾಡಬಹುದು ಎಂದಿದ್ದಳು. ಈ ರೀತಿ ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದ ಈಕೆ ಬಾರಿ ಸಾವಿರಾರು ಮೂಕ ಪ್ರಾಣಿಗಳ  ಬಲಿಪಡೆಯುವ ಅಲ್ಲಾಹ್ ಹೇಗೆ ಮಹಾನ್ ಆಗಲು ಸಾಧ್ಯ. ಈ ಬಲಿಗಾಗಿ ಅಲ್ಲಾಹ್ ಈ ಪ್ರಾಣಿಗಳ ಕ್ಷಮೆ ಕೇಳಬೇಕು ಎಂದಿದ್ದಾಳೆ.

1 comment: