Powered By Blogger

Tuesday, 22 November 2011

ಏರ್ ಇಂಡಿಯಾ ಪಕ್ಷಿ ಆಕಾಶದಲ್ಲಿ ಹಾರಲು ………………30ಸಾವಿರ ಕೋಟಿ ಬೇಕಂತೆ…!


Posted on  by ಸಲೀಂ,ಅಮ್ಚಿನಡ್ಕ,ಪುತ್ತೂರು.

ನವದೆಹಲಿ, ನ.22: ಸರಕಾರಿ ಒಡೆತನದ ಏರ್ ಇಂಡಿಯಾ ವಿಮಾನಗಳು ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸರ್ಕಾರದ ಸಹಾಯ ಹಸ್ತ ಚಾಚುತ್ತಿದೆ. ಪ್ರಸಕ್ತ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಇನ್ನೂ ಆರ್ಥಿಕ ಬಿಕ್ಕಟ್ಟಿನ ಪಂಜರದಿಂದ ಹೊರ ಬಂದಿಲ್ಲ . ಈ ನಡುವೆ ಏರ್ ಇಂಡಿಯಾ ವಿಮಾನಗಳು ಸರ್ಕಾರದ ಸಹಾಯವನ್ನು ಬೇಡುತ್ತಿದೆ.
ಉನ್ನತ ಮಟ್ಟದ ಕಾರ್ಯದರ್ಶಿಗಲ ಸಭೆಯಲ್ಲಿ ಏರ್ ಇಂಡಿಯಾ ಪುನುರುತ್ಥಾನಕ್ಕೆ ಸುಮಾರು 30,000 ಕೋಟಿ ರು ನೀಡಲು ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಏರ್ ಇಂಡಿಯಾ ಸಂಸ್ಥೆ ಮತ್ತೆ ಲಾಭದಾಯಕ ಸ್ಥಿತಿಗೆ ಮರಳುವವರೆಗೂ ಸರ್ಕಾರದ ಬಂಡವಾಳ ಹೂಡಿಕೆ ಮುಂದುವರೆಸಲಿದೆಯೇ ಎಂಬುದರ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಆದರೆ, ಈ ಬೇಲ್ ಔಟ್ ಯೋಜನೆಗೆ ಹಲವರ ವಿರೋಧ ವ್ಯಕ್ತವಾಗಿದೆ. ಏರ್ ಲೈನ್ ಗೆ ಸಹಾಯ ಹಸ್ತ ಚಾಚುವ ಮೂಲಕ ಖಾಸಗಿಯವರಿಗೆ ತನ್ನ ಷೇರುಗಳನ್ನು ಮಾರಾಟ ಮಾಡುವುದೇ ಸರ್ಕಾರದ ಉದ್ದೇಶ ಎನ್ನಲಾಗುತ್ತಿದೆ. 
ಏರ್ ಇಂಡಿಯಾ ಸಂಸ್ಥೆ 2018ರ ಆರ್ಥಿಕ ವರ್ಷದ ಕೊನೆಗೆ ಲಾಭದಾಯಕ ಸಂಸ್ಥೆಯಾಗಿ ಹೊರ ಹೊಮ್ಮಲಿದೆ ಎಂದು ಸಮಿತಿ ಲೆಕ್ಕಾಚಾರ ಹಾಕಿ ಹೇಳುತ್ತಿದೆ. ಲೀಸ್ ಆಧಾರದ ಮೇಲೆ ಏರ್ ಕ್ರಾಫ್ಟ್ ಬಳಸುವ ಬಗ್ಗೆ ಕೂಡಾ ಚಿಂತಿಸಲಾಗಿದೆ.
ಕಳೆದ ದಶಕದಲ್ಲಿ ನಾಗರೀಕ ವಿಮಾನಯಾನ ಕ್ಷೇತ್ರದಲ್ಲಿ ಗೋ ಇಂಡಿಗೋ ಸಂಸ್ಥೆ ಮಾತ್ರ ಸ್ವಲ್ಪಮಟ್ಟಿನ ಲಾಭ ಪಡೆದಿದೆ. ಉಳಿದಂತೆ ಕಿಂಗ್ ಫಿಷರ್ ಸೇರಿ ಎಲ್ಲಾ ಸಂಸ್ಥೆಗಳು ನಷ್ಟದಲ್ಲೇ ವಿಮಾನವನ್ನು ಆಕಾಶದಲ್ಲಿ ಹಾರಿಸುತ್ತಿದೆ.