Powered By Blogger

Tuesday, 8 November 2011

ಮೈ ಡಿಯರ್ ಎಕ್ಸ್ ಐ ಮಿಸ್ ಯೂ ಎಂದ ವೀಣಾ ಮಲಿಕ್


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಮುಂಬೈ :  ಪಾಕಿಸ್ತಾನದ ಮೂವರು ಆಟಗಾರರು  ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿ  ಜೈಲು ಪಾಲಾಗುತ್ತಿದ್ದಂತೆ  ಅವರ ಬಗ್ಗೆ  ಅವರ  ಅನೇಕ ಮಂದಿ  ಸ್ನೇಹಿತರು  ಅಭಿಮಾನಿಗಳು  ಬೇಸರ ,ಕೋಪ  ವ್ಯಕ್ತಪಡಿಸುತ್ತಿದ್ದರೆ  ಆಸೀಫ್  ಅವರ ಮಾಜಿ  ಪ್ರೇಯಸಿ  ಪಾಕಿಸ್ತಾನಿ ಮಾಡೆಲ್ , ಬಾಲಿವುಡ್ ನಟಿ ವೀಣಾ ಮಲಿಕ್  ಕೂಡ  ಆಸೀಫ್   ಗೆ ಜೈಲು ಶಿಕ್ಷೆ ಆಗಿರುದರಿಂದ  ತೀವ್ರ  ನೊಂದಿದ್ದು ಆಸೀಫ್ ಐ ಮಿಸ್ ಯೂ ಎಂದಿದ್ದಾರೆ.
ಆಸೀಫ್ ತನ್ನ  ಜೀವನದಲ್ಲಿ ಬಂದ  ವಿಶೇಷ  ವ್ಯಕ್ತಿ  , ಇತ್ತಿಚಿನ ದಿನಗಳಲ್ಲಿ   ಆಸೀಫ್  ನಮ್ಮ ಸಂಬಂಧವನ್ನು   ಮತ್ತೆ  ಜೋಡಿಸಲು ತುಂಬಾ  ಪ್ರಯತ್ನಗಳನ್ನ  ನಡೆಸಿದ್ದರು  ಆದರೆ ನಾನೇ ಅವರನ್ನ ದೂರ ಮಾಡುತ್ತಿದ್ದೆ . ಏಕೆಂದರೆ  ಆಸೀಫ್ ಈಗ  ಬೇರೆ  ಮದುವೆ ಆಗಿದ್ದು ಅವರ  ಜೀವನದಲ್ಲಿ  ಪ್ರವೇಶಿಸಿ  ತಾನು ಕೆಟ್ಟವಳು ಅನ್ನಿಸಿ ಕೊಳ್ಳುವುದು ತನಗೆ   ಬೇಕಾಗಿರಲಿಲ್ಲ  ಎಂದು  ವೀಣಾ ಹೇಳಿದ್ದಾರೆ  . ೨೦೦೮ ರ ತನಕ  ವೀಣಾ ಮತ್ತು ಆಸೀಫ್  ಒಂದೇ ಮನೆಯಲ್ಲಿ  ವಾಸವಾಗಿದ್ದರು ಹಾಗೂ   ಮದುವೆಯಾಗುವ ಮುಂಚೆಯೇ   ಲೀವಿಂಗ್  ಟುಗೆದರ್ ಜೀವನ ನಡೆಸುತ್ತಿದ್ದರು.
ನಾನು ಆಸೀಫ್ ಜೊತೆ  ೨೦೦೮ ರ ತನಕ  ಉತ್ತಮ ಸಂಬಂಧವನ್ನು   ಹೊಂದಿದ್ದೆ . ಆತ  ಯಾವಾಗ  ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ  ಅಂತ ತಿಳಿದು ಬಂತೋ  ಅವತ್ತು ಅವರ ಸಂಬಂಧಕ್ಕೆ  ಕೊನೆ ಹಾಡಿದೆ  ಎಂದು ವೀಣಾ  ತಿಳಿಸಿದರು . ವೀಣಾ  ಬೇರ್ಪಟ್ಟ  ಬಳಿಕ  ಆಸೀಫ್ ಬೇರೆ ಮದುವೆ ಆಗಿದ್ದರು . ಆಸೀಫ್  ಗೆ  ಅನೇಕ ಬಾರಿ  ಎಚ್ಚರಿಕೆ  ನೀಡಲು ನಾನು ಬಯಸಿದ್ದೆ  ಮತ್ತು ಅದರಂತೆ ಎಚ್ಚರಿಕೆ ಕೂಡ ನೀಡಿದ್ದೆ.ಆದರೆ ಆತ  ಅದನ್ನ  ಕೇಳಲಿಲ್ಲ  . ಅದಕ್ಕೆ ನಾನೇ ಆತನಿಂದ ದೂರವಾದೆ  ಎಂದು ವೀಣಾ ಮಲಿಕ್  ತಿಳಿಸಿದರು .  ಆಸೀಫ್ ಪತ್ನಿಯ ಬಗ್ಗೆ  ಹೇಳಿದ ವೀಣಾ  ಮದುವೆಗೆ  ಮುಂಚೆ  ಅವರು ನನಗೆ  ಫೋನ್ ಮಾಡಿ ನನ್ನ ಹಾಗೂ  ಆಸೀಫ್  ಸಂಬಂಧ ದ ಬಗ್ಗೆ ವಿಚಾರಿಸಿದ್ದರು  . ಅವರನ್ನ ಆಸೀಫ್ ಜೊತೆ ಮದುವೆ  ಆಗುವಂತೆ ನಾನೇ  ಸೂಚಿಸಿದ್ದೆ .  ಆಸೀಫ್ ನ  ಈ  ಸ್ಥಿತಿ  ಗೆ ಸ್ವತಃ ಆಸೀಫ್  ಅವರೇ ಕಾರಣ  ಎಂದು  ವೀಣಾ ಬೇಸರ ವ್ಯಕ್ತ ಪಡಿಸಿದ್ದಾಳೆ .
ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)

No comments:

Post a Comment