Powered By Blogger

Friday, 11 November 2011

ಮುಸ್ಲಿಂ ಯುವಕನ ಮನೆಯಲ್ಲಿ ಹಿಂದೂ ಯುವತಿ : ತುಂಬೆಯಲ್ಲಿ ಆತಂಕದ ಪರಿಸ್ಥಿತಿ


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ಹಿಂದೂ ಸಮುದಾಯದ ಯುವತಿಯೋರ್ವಳು ಮುಸ್ಲಿಂ ಸಮುದಾಯದ ಯುವಕನ ಮನೆಯಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಗುರುವಾರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿದ ಘಟನೆ ತುಂಬೆಯಲ್ಲಿ ನಡೆದಿದ್ದು, ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.
ರಾಯಿ ಗ್ರಾಮದ ಯುವತಿ ಸವಿತಾ ಎಂಬಾಕೆ ತುಂಬೆಯ ಅಹಮ್ಮದ್ ಎಂಬವರ ಮನೆಯಲ್ಲಿರುವುದನ್ನು ಅರಿತ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿದ್ದರು. ಮಾಹಿತಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಮಂಗಳೂರು ನಿವಾಸಿ ಸಂತೋಷ್ ಎಂಬಾತ ಯುವತಿಯನ್ನು ಆಲ್ಬಂ ತಯಾರಿಕೆಯ ನೆಪದಲ್ಲಿ ಕರೆದುಕೊಂಡು ಹೋಗಿದ್ದು, ಬಳಿಕ ತುಂಬೆಯಲ್ಲಿ ಅಹಮ್ಮದ್ ಎಂಬವರ ಮನೆಯಲ್ಲಿ ಕುಳ್ಳಿರಿಸಿ ಹೋಗಿದ್ದ ಎನ್ನಲಾಗಿದೆ.
- ಪಿ.ಎಂ.ಎ. ಪಾಣೆಮಂಗಳೂರು, (ವರದಿಗಾರರು, ವಿ ಕೆ ನ್ಯೂಸ್).

ದಾವೂದ್ ಇಬ್ರಾಹಿಂ ಗೆ ಮುಂಬಯಿಯಲ್ಲಿ ಮಣ್ಣಾಗುವ ಆಸೆ


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಮುಂಬಯಿ: ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ  ಪಾತಕ ಲೋಕದ ಮೂಲಕ ಮುಂಬೈ ಮಹಾ ನಗರವನ್ನೇ ರಕ್ತಧೋಕುಳಿ  ಹರಿಸಿದ ಈ ಪತಾಕಿ ಇದೇ ನಗರದಲ್ಲಿ ತನ್ನ ಕೊನೆಯ ಆಸೆಯನ್ನು ನೆರವೇರಿಸಲು  ವ್ಯಕ್ತಪಡಿಸಿದ್ದಾನೆ ಎಂದು ಕ್ರೈಂ ವರದಿಯೊಂದು ತಿಳಿಸಿದೆ. ದಾವೂದ್ ನ ಆರೋಗ್ಯ ತೀರ ಹದೆಗೆಟ್ಟಿದ್ದು,ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಹೃದಯಾಘಾತಗಳಾಗಿವೆ. ತನ್ನ ಮರಣಾನಂತರ ಹುಟ್ಟೂರಾದ ರತ್ನಗಿರಿ ಜಿಲ್ಲೆಯ ಖೇಡ್ ಎಂಬಲ್ಲಿ ಅಥವಾ ತನ್ನ ಬಾಲ್ಯ ಜೀವನ ಕಳೆದ ಮುಂಬೈ ಮಹಾ ನಗರದಲ್ಲಿ ದಫನ ಮಾಡುವಂತೆ ಸೂಚಿಸಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದಿದ.
೮೬ ಹರೆಯ ತುಂಬಿದ ದಾವೂದ್ ಇದೀಗ ಪಾಕಿಸ್ತಾನದ ಕರಾಚಿ ಯಲ್ಲಿ ದಿನದ ೨೪ ತಾಸುಗಳು ವೈದ್ಯರ ನಿಗಾದಲಿದ್ದಾನೆ.ಎರಡನೇ ಹೃದಯಾಘಾತವಾದ ಬಳಿಕ ದಾವೂದ್ ಕಿರಿಯ ಸಹೋದರನ ಮಗಳನ್ನು ಮದುವೆ ನಿಗಧಿಯಾದ ದಿನಾಂಕದಿಂದ ಮೊದಲೇ ಮದುವೆ ಮಾಡಿ ಮುಗಿಸಿದ್ದಾನೆ. ದಾವೂದ್ ಮಗಳನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಮಗನೊಂದಿಗೆ ನೆರವೇರಿಸಿದ್ದರೆ,ಮಗ ಇಂಗ್ಲೆಂಡ್ ಉದ್ಯಮಿಯೊಬ್ಬರ ಮಗಳ ಕೈ ಹಿಡಿದಿದ್ದಾನೆ. ದಾವೂದ್ ತನ್ನ ಅಂತ್ಯಭಿಲಾಷೆಯನ್ನು ಭಾರತ ಮಣ್ಣಲೇ ಮಾಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದು ಮುಂಬೈ ಕ್ರೈಂ ಬ್ರಾಂಚ್ ಗೂ ತಿಳಿದಿರುತ್ತದೆ.

ಮಂಗಳೂರಿನಲ್ಲಿ ಡಬಲ್ ಮರ್ಡರ್ ! ವಾಮಂಜೂರು ರೋಹಿ ಕೊಲೆ ಆರೋಪಿಗಳು ಫಿನಿಶ್


Posted on  by ವಿಶ್ವ ಕನ್ನಡಿಗ ನ್ಯೂಸ್

ಮಂಗಳೂರು : ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದೆ. ಇಂದು ಮಧ್ಯಾಹ್ನ ಒಂದು ಮೂವತ್ತರ ಸುಮಾರಿಗೆ ನಡೆದ ಘಟನೆಯಲ್ಲಿ ವಾಮಂಜೂರು ರೋಹಿ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಮುರುಗೇಶ್ (೩೫) ಮತ್ತು ಉಪೇಂದ್ರ (೩೩) ಎಂಬುವವರನ್ನು ಆಟೋದಲ್ಲಿ ಬಂದ ದುಷ್ಕರ್ಮಿಗಳು  ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ . ಮಂಗಳೂರು ಸಮೀಪದ ಮೂಡುಶೆಡ್ಡೆಯ ಶಿವನಗರ ದೇವಿ ಟೆಂಪಲ್ ಬಳಿ ಈ ಘಟನೆ ನಡೆದಿದ್ದು ಹಂತಕರ ತಲವಾರಿನೇಟಿಗೆ ಗಂಭೀರವಾಗಿ ಗಾಯಗೊಂಡ ಮುರುಗೇಶ್ ಸ್ಥಳದಲ್ಲೇ ಪ್ರಾಣ ಬಿಟ್ಟರೆ ಉಪೇಂದ್ರ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.
೨೦೦೯ ರಲ್ಲಿ ವಾಮಂಜೂರು ಜ್ಯೋತಿ ನಗರದಲ್ಲಿ ಮಂಗಳೂರಿನ ರೌಡಿ ವಾಮಂಜೂರು ರೋಹಿಯನ್ನು ತಲವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು . ಈ ಪ್ರಕರಣದಲ್ಲಿ ಇವರಿಬ್ಬರೂ ಆರೋಪಿಗಳಾಗಿದ್ದರು. ಇವರೂ ಸಹ ರೌಡಿ ಶೀಟರ್ ಪಟ್ಟಿಯಲ್ಲಿದ್ದಾರೆ . ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಧಾವಿಸಿದ್ದು ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ.

ಮಂಗಳೂರು : ಡಬಲ್ ಮರ್ಡರ್ ಆರೋಪಿಗಳಾದ ರಘು , ಗೋಪಾಲ್ , ಫೈಝಲ್ ಅರೆಸ್ಟ್


Posted on  by ವಿಶ್ವ ಕನ್ನಡಿಗ ನ್ಯೂಸ್

ಮಂಗಳೂರು :ಮೂಡುಶೆಡ್ಡೆ ಇಂದು ಮಧ್ಯಾಹ್ನ ನಡೆದ ವಾಮಂಜೂರು ರೋಹಿ ಹತ್ಯೆ ಆರೋಪಿಗಳ  ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಶೆಡ್ಡೆಯ ರಘು, ಶಿವನಗರದ ಗೋಪಾಲ್ ಹಾಗೂ ಮೂಡುಶೆಡ್ಡೆಯ ಫೈಝಲ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ .ಮಧ್ಯಾಹ್ನ ೧.೩೦ ಕ್ಕೆ ಕೊಲೆ ನಡೆಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದು ಕಂಟ್ರೋಲ್ ರೂಂನ ಸಹಕಾರದೊಂದಿಗೆ ನಗರಾದ್ಯಂತ ನಾಕಾಬಂಧಿ ನಡೆಸಿ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಹಾಗೂ ಕೊಲೆಯಾದವರು ಈ ಹಿಂದೆ ಒಂದೇ ಗುಂಪಿನಲ್ಲಿದ್ದವರು. 2002ರಲ್ಲಿ ಪಿಲಿಕುಳದಲ್ಲಿ ನಡೆದ ನಾಗೇಶ್ ಪೂಜಾರಿ ಎಂಬಾತನ ಕೊಲೆ ಪ್ರಕರಣದ ಆರೋಪಿಗಳು.ಇದೇ ಗುಂಪಿನ ಕೆಲವು ಸದಸ್ಯರು 2009ರ ಹೊತ್ತಿಗೆ ಪ್ರತ್ಯೇಕಗೊಂಡಿದ್ದರು.ಪ್ರತ್ಯೇಕಗೊಂಡ ಗುಂಪು ವಾಮಂಜೂರು ರೋಹಿಯ ಕೊಲೆ ನಡೆಸಿತ್ತು ಎಂದು ಪೋಲಿಸ್ ಕಮೀಷನರ್  ಸೀಮಂತಕುಮಾರ್ ಸಿಂಗ್ ವಿವರ ನೀಡಿದ್ದಾರೆ .