Powered By Blogger

Saturday, 17 December 2011

ಗೂಗಲ್ ಪ್ಲಸ್ ನಲ್ಲಿ ಫೇಸ್ ಬುಕ್ ಸ್ಥಾಪಕ ಮಾರ್ಕ್?

Mark Zuckerberg in Google Plusಕ್ಯಾಲಿಫೋರ್ನಿಯಾ ಜು 4: Hi everyone, I just wanted everyone to say that facebook is the best and google+ it never will be!ಎಂದು ಧೈರ್ಯವಾಗಿ ಗೂಗಲ್ ಪ್ಲಸ್ ನಲ್ಲಿ ಖಾತೆ ತೆರೆದು ಪೋಸ್ಟ್ ಮಾಡಿದ್ದು ಬೇರೆ ಯಾರು ಅಲ್ಲ, ಫೇಸ್ ಬುಕ್ ಎಂಬ ಮಾಯಾಜಾಲದ ಸೃಷ್ಟಿಕರ್ತ ಮಾರ್ಕ್ ಝುಕರ್ ಬರ್ಗ್. ಫೇಸ್ ಬುಕ್ ಕಿಲ್ಲರ್ ಎಂದೇ ಕರೆಯಲ್ಪಡುತ್ತಿರುವ ಗೂಗಲ್ ನ ಇತ್ತೀಚಿನ ಉತ್ಪನ್ನ ಗೂಗಲ್ ಪ್ಲಸ್ನಲ್ಲಿ ಮಾರ್ಕ್ ಝುಕರ್ ಬರ್ಗ್ ಕೂಡಾ ಕಾಣಿಸಿಕೊಂಡಿದ್ದಾರೆ. 

ಒಂದಲ್ಲ ಎರಡು ಖಾತೆಗಳಲ್ಲಿ ಮಾರ್ಕ್ ಇದ್ದಾನೆ Palo Alto, CA ಎಂಬ ಅಡ್ರೆಸ್ ಹೊಂದಿರುವ ಒಂದು ಖಾತೆಯ ಸರ್ಕಲ್ ನಲ್ಲಿ 39 ಇದ್ದು, 21213 ಮಾರ್ಕ್ ಆಗಿದ್ದಾರೆ. ಆದರೆ ಇದು ನಿಜವಾದ ಖಾತೆ ಎಂಬುದರ ಬಗ್ಗೆ ಅನುಮಾನವಿದೆ. ಟ್ವಿಟ್ಟರ್ ನಲ್ಲಿರುವಂತೆ ಟ್ರಸ್ಟೆಡ್ ಖಾತೆಗಳ ಪರಿಶೀಲನೆ ಇನ್ನೂ ಗೂಗಲ್ ಗೆ ಕಾಲಿಟ್ಟಿಲ್ಲ.

ಕೋಟ್ಯಾಧೀಶ್ವರ ಮಾರ್ಕ್ ಹೆಸರು ಬಳಸಿಕೊಂಡು ಯಾರೋ ಕುಹಕವಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಮಾರ್ಕ್ ನ ಗೂಗಲ್ ಪ್ಲಸ್ ಖಾತೆಯಲ್ಲಿ ಮಾತ್ರ ತಮಾಷೆ ಕಮೆಂಟ್ ಗಳು ಸಿಗುತ್ತಿವೆ. ಸ್ವಾರಸ್ಯದ ಸಂಗತಿ ಎಂದರೆ, ಕೆಲ ತಿಂಗಳುಗಳಿಂದ ಗೂಗಲ್ ನ ಅನೇಕ ಉದ್ಯೋಗಳು ಫೇಸ್ ಬುಕ್ ಗೆ ವಲಸೆ ಹೋಗಿದ್ದರು. ಈಗ ಮಾರ್ಕ್ ಗೂಢಚಾರನ ರೀತಿ ಗೂಗಲ್ ಪ್ಲಸ್ ಬಳಸುತ್ತಿದ್ದಾನೆಯೇ? ಅದು ತನ್ನ ಹೆಸರಲ್ಲೇ? ಸ್ಪಷ್ಟವಾಗಿ ಹೇಳಲು ಬರದು.

ಕಳೆದ ವಾರ ಆರಂಭವಾಅದ್ ಗೂಗಲ್ ಪ್ಲಸ್ ತ್ವರಿತವಾಗಿ ಜನಪ್ರಿಯತೆ ಗಳಿಸಿತ್ತಿರುವುದು ಸಂಸ್ಥೆಗೆ ತಲೆ ನೋವಾಗಿದೆ. ಪ್ಲಸ್ ಹೇಗೆ ವರ್ಕ್ ಆಗುತ್ತೆ ಎಂದು ತಿಳಿಯಲು ಕೆಲ ಆಹ್ವಾನಿತರಿಗೆ ಮಾತ್ರ ಸೇವೆ ಒದಗಿಸಲಾಗಿತ್ತು. ಈಗ ಅದನ್ನು ನಿಲ್ಲಿಸಲಾಗಿದೆ. ಸದ್ಯಕ್ಕೆ ಇನ್ವಿಟೇಷನ್ ಕಳಿಸುವುದು ನಿಂತಿದೆ. ಮತ್ತೆ ಯಾವಾಗ ಆರಂಭವಾಗುತ್ತದೋ ಹೇಳಲು ಬರದು ಎನ್ನುತ್ತಾರೆ ಗೂಗಲ್ ಸಂಸ್ಥೆಯ ವಿಕ್ ಗುನ್ ಡೋತ್ರಾ.ಒಟ್ಟಿನಲ್ಲಿ ಬಳಕೆದಾರರಿಗೆ ಇನ್ಮುಂದೆ ಹಬ್ಬ, ಫೇಸ್ ಬುಕ್, ಗೂಗಲ್ ಪ್ಲಸ್ ನಿಮ್ಮ ಆಯ್ಕೆ ಯಾವುದು?

WELCOME MY WEBSITE