Posted on November 9, 2011 by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).
ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ, ಕರವಳಿ ಬೆಡಗಿ, ಐಶ್ವರ್ಯ ರೈಗೆ ಎಂದು ಹೆರಿಗೆ ಆಗುತ್ತದೆ ? ಹುಟ್ಟುವ ಮಗು ಗಂಡೋ, ಹೆಣ್ಣೋ? ಅವಳಿ-ಜವಳೀನಾ? ಎಂಬಿತ್ಯಾದಿ ವಿಷಯಗಳ ಬಗ್ಗೆ ದಿನದಿಂದ ದಿನಕ್ಕೆ ಸುದ್ದಿವಾಹಿನಿಗಳಲ್ಲಿ ವಿಶೇಷ ಕಾರ್ಯಕರ್ಮಗಳನ್ನು ಅಳವಡಿಸುತ್ತಿದೆ. ಕೆಲವು ಮಾಧ್ಯಮಗಳು ಜ್ಯೋತಿಷಿಗಳ ಪ್ರಕಾರ ಐಶ್ ಗೆ ಮುಂಬರುವ ನವಂಬರ ೧೧(೧೧.೧೧ ೧೧ )ವಿಶೇಷ ದಿನದಂದು ಹೆರಿಗೆ ಖಚಿತ ಎಂದು ಹೇಳುತ್ತಿದೆ. ಈ ಮೂಲದ ಪ್ರಕಾರ ಆ ದಿನವೇ ಹೆರಿಗೆ ಎಂದು ಮಾಧ್ಯಮ ವರ್ಗ ಆಸ್ಪತ್ರೆಯ ಮುಂದೆ ಸಾಲುಗಟ್ಟಿ ನಿಲ್ಲಲು ತಾಯರು ಮಾಡುತ್ತಿದೆ. ಆದರೆ ಇದೀಗ ಬಚ್ಚನ್ ಕುಟುಂಬ ಐಶ್ ಹೆರಿಗೆ ಸಂದರ್ಭ ಕೆಲವು ನಿಬಂಧನೆ ಗಳನ್ನು ಮಾದ್ಯಮಗಳ ಮುನ್ನಡೆ ಇಟ್ಟಿದೆ.ಈ ನಿಬಂಧನೆ ಹೊರ ಬರುತ್ತಿದ್ದಂತೆ ಮಾಧ್ಯಮ ವರ್ಗ ಮೂಕ ವಿಸ್ಮಿತರಾದರು.
ನಿಬಂದನೆಗಳ ಪ್ರಮುಖ ಅಂಶ ಈ ಕೆಳಗಿನಂತಿವೆ.
- ಹೆರಿಗೆಗೂ ಮುನ್ನ ಆ ಬಗ್ಗೆ ಯಾವುದೇ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುವ ಹಾಗಿಲ್ಲ.
- ಆಸ್ಪತ್ರೆ ಅಥವಾ ಐಶ್ ಕುಟುಂಬದ ಸದಸ್ಯರು ಅಧಿಕೃತ ಪ್ರಕಟಣೆ ಹೊರಡಿಸಿದ ಮೇಲಷ್ಟೇ ಸುದ್ದಿ ವಾಹಿನಿಯಲ್ಲಿ ಪ್ರಕಟಿಸಬೇಕು.
- ಮಗು ಹುಟ್ಟಿದ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡುವಂತಿಲ್ಲ.
- ಆಸ್ಪತ್ರೆ ಮುಂಭಾಗ ಅಥವಾ ಮನೆ ಮುಂದೆ ನೇರಪ್ರಸಾರದ ವಾಹನಗಳನ್ನು ಕೊಂಡೊಯ್ಯಬಾರದು.
- ಮಗು ಮತ್ತು ಐಶ್ವರ್ಯ ಫೋಟೋ ತೆಗೆಯಲು ಅಧಿಕೃತವಾಗಿ ಆಹ್ವಾನ ಸಿಕ್ಕರಷ್ಟೇ ಹೋಗಬೇಕು.
- ಮಗುವಿನ ಎಂಎಂಎಸ್ ಅಥವಾ ಫೋಟೋಗಳನ್ನು ಪ್ರಕಟಿಸಬಾರದು.
- ಮಗುವಿನ ಭವಿಷ್ಯದ ಕುರಿತು ಯಾವುದೇ ಜ್ಯೋತಿಷ್ಯದ ಕಾರ್ಯಕ್ರಮ ಪ್ರಸಾರ ಮಾಡಕೂಡದು.
- 11-11-2011ಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡಕೂಡದು.
- ಐಶ್ ದಾಖಲಾಗುವ ಆಸ್ಪತ್ರೆಗೆ ಅಕ್ರಮ ಪ್ರವೇಶ ಮಾಡಬಾರದು.
No comments:
Post a Comment