Powered By Blogger

Friday, 11 November 2011

ಮಂಗಳೂರಿನಲ್ಲಿ ಡಬಲ್ ಮರ್ಡರ್ ! ವಾಮಂಜೂರು ರೋಹಿ ಕೊಲೆ ಆರೋಪಿಗಳು ಫಿನಿಶ್


Posted on  by ವಿಶ್ವ ಕನ್ನಡಿಗ ನ್ಯೂಸ್

ಮಂಗಳೂರು : ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದೆ. ಇಂದು ಮಧ್ಯಾಹ್ನ ಒಂದು ಮೂವತ್ತರ ಸುಮಾರಿಗೆ ನಡೆದ ಘಟನೆಯಲ್ಲಿ ವಾಮಂಜೂರು ರೋಹಿ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಮುರುಗೇಶ್ (೩೫) ಮತ್ತು ಉಪೇಂದ್ರ (೩೩) ಎಂಬುವವರನ್ನು ಆಟೋದಲ್ಲಿ ಬಂದ ದುಷ್ಕರ್ಮಿಗಳು  ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ . ಮಂಗಳೂರು ಸಮೀಪದ ಮೂಡುಶೆಡ್ಡೆಯ ಶಿವನಗರ ದೇವಿ ಟೆಂಪಲ್ ಬಳಿ ಈ ಘಟನೆ ನಡೆದಿದ್ದು ಹಂತಕರ ತಲವಾರಿನೇಟಿಗೆ ಗಂಭೀರವಾಗಿ ಗಾಯಗೊಂಡ ಮುರುಗೇಶ್ ಸ್ಥಳದಲ್ಲೇ ಪ್ರಾಣ ಬಿಟ್ಟರೆ ಉಪೇಂದ್ರ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.
೨೦೦೯ ರಲ್ಲಿ ವಾಮಂಜೂರು ಜ್ಯೋತಿ ನಗರದಲ್ಲಿ ಮಂಗಳೂರಿನ ರೌಡಿ ವಾಮಂಜೂರು ರೋಹಿಯನ್ನು ತಲವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು . ಈ ಪ್ರಕರಣದಲ್ಲಿ ಇವರಿಬ್ಬರೂ ಆರೋಪಿಗಳಾಗಿದ್ದರು. ಇವರೂ ಸಹ ರೌಡಿ ಶೀಟರ್ ಪಟ್ಟಿಯಲ್ಲಿದ್ದಾರೆ . ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಧಾವಿಸಿದ್ದು ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ.

No comments:

Post a Comment