Posted on November 11, 2011 by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).
ಮುಂಬಯಿ: ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಪಾತಕ ಲೋಕದ ಮೂಲಕ ಮುಂಬೈ ಮಹಾ ನಗರವನ್ನೇ ರಕ್ತಧೋಕುಳಿ ಹರಿಸಿದ ಈ ಪತಾಕಿ ಇದೇ ನಗರದಲ್ಲಿ ತನ್ನ ಕೊನೆಯ ಆಸೆಯನ್ನು ನೆರವೇರಿಸಲು ವ್ಯಕ್ತಪಡಿಸಿದ್ದಾನೆ ಎಂದು ಕ್ರೈಂ ವರದಿಯೊಂದು ತಿಳಿಸಿದೆ. ದಾವೂದ್ ನ ಆರೋಗ್ಯ ತೀರ ಹದೆಗೆಟ್ಟಿದ್ದು,ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಹೃದಯಾಘಾತಗಳಾಗಿವೆ. ತನ್ನ ಮರಣಾನಂತರ ಹುಟ್ಟೂರಾದ ರತ್ನಗಿರಿ ಜಿಲ್ಲೆಯ ಖೇಡ್ ಎಂಬಲ್ಲಿ ಅಥವಾ ತನ್ನ ಬಾಲ್ಯ ಜೀವನ ಕಳೆದ ಮುಂಬೈ ಮಹಾ ನಗರದಲ್ಲಿ ದಫನ ಮಾಡುವಂತೆ ಸೂಚಿಸಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದಿದ.
೮೬ ಹರೆಯ ತುಂಬಿದ ದಾವೂದ್ ಇದೀಗ ಪಾಕಿಸ್ತಾನದ ಕರಾಚಿ ಯಲ್ಲಿ ದಿನದ ೨೪ ತಾಸುಗಳು ವೈದ್ಯರ ನಿಗಾದಲಿದ್ದಾನೆ.ಎರಡನೇ ಹೃದಯಾಘಾತವಾದ ಬಳಿಕ ದಾವೂದ್ ಕಿರಿಯ ಸಹೋದರನ ಮಗಳನ್ನು ಮದುವೆ ನಿಗಧಿಯಾದ ದಿನಾಂಕದಿಂದ ಮೊದಲೇ ಮದುವೆ ಮಾಡಿ ಮುಗಿಸಿದ್ದಾನೆ. ದಾವೂದ್ ಮಗಳನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಮಗನೊಂದಿಗೆ ನೆರವೇರಿಸಿದ್ದರೆ,ಮಗ ಇಂಗ್ಲೆಂಡ್ ಉದ್ಯಮಿಯೊಬ್ಬರ ಮಗಳ ಕೈ ಹಿಡಿದಿದ್ದಾನೆ. ದಾವೂದ್ ತನ್ನ ಅಂತ್ಯಭಿಲಾಷೆಯನ್ನು ಭಾರತ ಮಣ್ಣಲೇ ಮಾಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದು ಮುಂಬೈ ಕ್ರೈಂ ಬ್ರಾಂಚ್ ಗೂ ತಿಳಿದಿರುತ್ತದೆ.
No comments:
Post a Comment