Posted on November 19, 2011 by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ
ಉಪ್ಪಿನಂಗಡಿ : ಜುಲೈ ತಿಂಗಳಿನಲ್ಲಿ ಉಪ್ಪಿನಂಗಡಿ ಪುಳಿತ್ತಾಡಿ ಎಂಬಲ್ಲಿ ನಡೆದ ಆಯಿಷಾ (೨೫) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಸುಲೈಮಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈನಲ್ಲಿ ಆಯಿಷಾ ಅವರನ್ನು ನೀರಿನ ಹೊಂಡಕ್ಕೆ ತಳ್ಳಿ ಕೊಲೆ ಮಾಡಲಾಗಿತ್ತು. ಈ ಕುರಿತು ಆಕೆಯ ತಂದೆ ಸಂಶಯ ವ್ಯಕ್ತಪಡಿಸಿ ಆಕೆಯ ಪತಿ ಸುಲೈಮಾನ್ ವಿರುದ್ಧ ದೂರು ನೀಡಿದ್ದರು .
ಆಯಿಷಾ ಅವರನ್ನು ಗಲ್ಫ್ ಉದ್ಯೋಗಿಯಾಗಿದ್ದ ಸುಲೈಮಾನ್ ಗೆ ನಾಲ್ಕು ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು . ಇವರಿಗೆ ಮೂರು ವರ್ಷದ ಮಗಳು ಸಹ ಇದ್ದಾಳೆ. ಸುಲೈಮಾನ್ ಆಯಿಷಾಗೆ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದ್ದು ಬೇರೆ ಮದುವೆ ಆಗುವ ಉದ್ದೇಶದಿಂದ ಆಕೆಯನ್ನು ಹೊಂಡಕ್ಕೆ ತಳ್ಳಿ ಕಾಲು ಜಾರಿ ಬಿದ್ದಳು ಅನ್ನುವ ಕಥೆ ಕಟ್ಟಿದ್ದ. ಇದೀಗ ಆರೋಪಿ ಪೋಲೀಸರ ಕೈಗೆ ಸಿಕ್ಕಿದ್ದು ತನಿಖೆ ಮುಂದುವರೆದಿದೆ.
No comments:
Post a Comment