Powered By Blogger

Saturday, 16 August 2014

ನಿಮ್ಮ ಕೈಯಲ್ಲಿ ದುಡ್ಡು ನಿಲ್ಲೋದಿಲ್ಲ.. ಯಾಕೆ ಗೊತ್ತಾ..? ಇಲ್ಲಿವೆ ನಿಜವಾದ 5 ಕಾರಣಗಳು


ನಾವು ಇಷ್ಟು ಸಂಬಳ ಪಡೆದರೂ ದುಡ್ಡೇ ಉಳಿಸಲು ಆಗುತ್ತಿಲ್ಲವಲ್ಲ ಎಂದು ಅಲವತ್ತುಕೊಳ್ಳುವವರ ಸಂಖ್ಯೆ ಸಿಕ್ಕಾಪಟ್ಟೆ ಇದೆ. ಸಂಬಳ ಜಾಸ್ತಿಯಾದರೂ ತಿಂಗಳಾಂತ್ಯದಲ್ಲೇ ಅದೇ ಪರದಾಟ.. ಮುಂದಿನ ಸಂಬಳಕ್ಕಾಗಿ ತಡಕಾಟ... ಯಾಕೆ ಹೀಗೆ..? 1) ಕಟ್ಟದೇ ಉಳಿಸಿಕೊಳ್ಳೋದು... ಪ್ರತೀ ತಿಂಗಳು ನೀವು ಕಟ್ಟಬೇಕಾದ್ದನ್ನ ಬಾಕಿ ಉಳಿಸಿಕೊಳ್ಳುವುದು.. ನಿಗದಿತ ಅವಧಿಯೊಳಗೆ ಕಟ್ಟದೇ ದಂಡ ಹಾಕಿಸಿಕೊಂಡು ಪಾವತಿ ಮಾಡುವ ಅಭ್ಯಾಸವಿದ್ದರೆ ಕಷ್ಟಕಷ್ಟ... ನಿಮ್ಮ ಸ್ವಭಾವವನ್ನ ಬದಲಿಸಿಕೊಳ್ಳೋದು ಒಳ್ಳೇದು.. 2) ಪದೇಪದೇ ಸಾಲ ಮಾಡುವುದು.. ನಿಮ್ಮ ಅಗತ್ಯ ಮತ್ತು ಆಕಾಂಕ್ಷೆ ನಡುವಿನ ವ್ಯತ್ಯಾಸವನ್ನ ಗುರುತಿಸಿ ಮಧ್ಯಕ್ಕೆ ಗೆರೆ ಹಾಕಿಕೊಳ್ಳಿ. ನಿಮಗೆ ಅಗತ್ಯವೆನಿಸಿದ್ದಕ್ಕೆ ಮಾತ್ರ ಖರ್ಚು ಮಾಡುವ ಅಭ್ಯಾಸ ಮಾಡಿಕೊಳ್ಳಿ. ಕ್ರೆಡಿಟ್ ಕಾರ್ಟ್ ಇದೆಯಲ್ಲಾ ಅಂತ ದುಬಾರಿ ಖರೀದಿ ಮಾಡುವ ಪ್ರವೃತ್ತಿ ಇದ್ದರೆ ಈಗಲೇ ಅದರಿಂದ ಹೊರಬನ್ನಿ. ಸಾಲದ ಹೊರೆ ಹೆಚ್ಚಾದರೆ ನಿಮ್ಮ ಸೇವಿಂಗ್ ಪ್ರಮಾಣ ಕುಸಿಯುತ್ತದೆ... 3) ಶಾಪಿಂಗ್ ಹುಚ್ಚು.. ಹೊಸ ಡಿಸೈನ್ ಬಂದಿದೆ ಎಂದು ಆಕರ್ಷಕ ಜಾಹೀರಾತು ನೀಡುವ ಶಾಪಿಂಗ್ ಮಾಲ್'ಗಳತ್ತ ಕಣ್ಣು ಹಾಯಿಸದಿರುವುದೇ ಲೇಸು... ಐಟಂ ಚಂದ ಇದ್ದರೆ ಎಷ್ಟೇ ದುಡ್ಡು ಕೊಟ್ಟಾದರೂ ಅದನ್ನ ಖರೀದಿಸುವ ಛಲ ನಿಮ್ಮಲ್ಲಿದ್ದರೆ ಕಷ್ಟಕಷ್ಟ... ಐಟಂನ ಬೆಲೆ ನೋಡಿ ಖರೀದಿಸುವುದನ್ನ ರೂಢಿಸಿಕೊಳ್ಳಿ. 4) ಸಾಲದಲ್ಲೂ ಆದ್ಯತೆಗಳು... ಆದ್ಯತೆಗಳ ಮೇರೆಗೆ ನಿಮ್ಮ ಸಾಲಗಳನ್ನ ವರ್ಗೀಕರಿಸುತ್ತಿದ್ದೀರೆಂದರೆ ಸ್ವಲ್ಪ ಜಾಗೂರಕತೆಯಿಂದ ಇರುವುದು ಒಳ್ಳೆಯದು. ಯಾಕೆಂದರೆ, ನೀವು ನಿಮ್ಮ ಕೈಲಾಗುವುದಕ್ಕಿಂತ ಬಹಳ ಹೆಚ್ಚೇ ಪ್ರಮಾಣದಲ್ಲಿ ಸಾಲ ಮಾಡಿರುವುದು ಅದರ ಅರ್ಥ. ನೀವು ಮಾಡಿರುವ ಎಲ್ಲಾ ಸಾಲಗಳನ್ನ ಆದಷ್ಟೂ ಬೇಗ ತೀರಿಸುವುದರತ್ತ ಗಮನ ಹರಿಸುವುದು ಒಳ್ಳೆಯದು... 5) ಬ್ಯಾಕಪ್ ಹಣ ಇಲ್ಲ... ಸರ್ಕಾರೀ ಬಜೆಟ್'ಗಳಲ್ಲಿ ಅಥವಾ ಯಾವುದಾದರೂ ಸಂಸ್ಥೆಗಳಲ್ಲಿ ಎಮರ್ಜನ್ಸಿ ಫಂಡ್ ಅಂತ ಇಟ್ಟುಕೊಂಡಿರುತ್ತಾರೆ. ತುರ್ತು ಸಂದರ್ಭಗಳಲ್ಲಿ ಈ ಹಣ ಉಪಯೋಗಕ್ಕೆ ಬರುತ್ತದೆ. ನಿಮ್ಮಲ್ಲಿ ಇಂಥ ಬ್ಯಾಕಪ್ ಹಣ ಇಲ್ಲದಿದ್ದಲ್ಲಿ ಬಹಳ ಕಷ್ಟ. ಒಂದು ವೇಳೆ ನಿಮ್ಮ ಕೆಲಸ ಹೋದಾಗ, ಅಥವಾ ಇನ್ಯಾವುದಾದರೂ ಸಂದರ್ಭದಲ್ಲಿ ನೀವು ಆರು ತಿಂಗಳಾದರೂ ತಾಳಿಕೊಂಡು ಇರಬಲ್ಲಷ್ಟು ಬ್ಯಾಕಪ್ ಹಣ ನಿಮ್ಮಲ್ಲಿರಬೇಕು. ಹೀಗಾಗಿ, ನಿಮ್ಮ ಬ್ಯಾಕಪ್ ಹಣದ ಮೊತ್ತವನ್ನ ಏರಿಸುವುದರತ್ತಲೇ ನಿಮ್ಮ ಗಮನ ಇರಬೇಕು.