Powered By Blogger

Sunday, 13 November 2011

ಮಂಗಳೂರು : ಗುರುಪುರ ರವೀಂದ್ರ ಚೂರಿ ಇರಿತ ಪ್ರಕರಣದ ಆರೋಪಿಗಳ ಶೀಘ್ರ ಬಂಧನಕ್ಕೆ ಕ್ರಮ – ಕಮೀಷನರ್


ಮಂಗಳೂರಿಗೆ ಶಾಪವಾದ 11/11/11... ಮಂಗಳೂರಿನಲ್ಲಿ ಸತತ ಮೂರುದಿನಗಳಿಂದ ಹೆಚ್ಚುತ್ತಿರುವ ಅಪರಾಧ ಪ್ರಕರಣ -ಮೊದಲ ದಿನ ಜೋಡಿಕೊಲೆ... ಮರುದಿನವೇ ಅಪಘಾತದಲ್ಲಿ ಇಬ್ಬರ ದುರ್ಮರಣ - ಇದೀಗ ಮೂರನೇ ಪ್ರಕರಣದಲ್ಲಿ ಸಾವು ಬದುಕಿನ ಹೋರಾಟದಲ್ಲಿ ರಿಕ್ಷಾ ಚಾಲಕ...


ಮಂಗಳೂರು,ನವೆಂಬರ್.13:ಮಾರುತಿ ಓಮ್ನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಿಕ್ಷಾ ಚಾಲಕನನ್ನು ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾದ ಘಟನೆ ಗುರುಪುರ ಕೈಕಂಬ ಕಂದಾವರದಲ್ಲಿ ಇಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಸಂಭವಿಸಿದೆ.

ಬಾಡಿಗೆಗೆ ತೆರಳಿದ್ದ ಸ್ಥಳೀಯ ರಿಕ್ಷಾ ಚಾಲಕ ರವೀಂದ್ರ(29)ಎಂಬಾತನನ್ನು ಕಂದಾವರ ಒಳ ರಸ್ತೆಯಲ್ಲಿ ಬರುತ್ತಿದ್ದಾಗ ಸಿಲ್‌ವರ್ ಬಣ್ಣದ ಮಾರುತಿ ಓಮ್ನಿ (ಕೆ.ಎ.19 ಪಿ.2528)ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯ ಗೊಂಡಿದ್ದ ರವೀಂದ್ರರನ್ನು ನಗರದ ಸಿಟಿ ಆಸ್ಪತ್ರೆಗೆ ದಾಖಲುಪಡಿಸಲಾಗಿದೆ.ತಲೆ,ಮುಖ, ಕೈ,ಕಾಲುಗಳಿಗೆ ಬಲವಾದ ಏಟುಗಳಾಗಿದ್ದು ತೀವ್ರ ನಿಗಾ ಘಟಕದಲ್ಲಿಡಲಾಗಿದೆ.ಕೂಡಲೇ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ವಿವಾಹಿತರಾಗಿರುವ ರಂವೀಂದ್ರ ಅವರು ಬಜರಂಗದಳದ ಸಕ್ರೀಯ ಕಾರ್ಯಕರ್ತರಾಗಿದ್ದರು ಎನ್ನಲಾಗಿದೆ.

ಇದೀಗ ಗುರುಪುರ ಪರಿಸರದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ರಿಕ್ಷಾ ಚಾಲಕರು ಬಲವಾಂತವಾಗಿ ಬಂದ್‌ಗೊಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರಿಂದ ವ್ಯಾಪಾಕ ಪೊಲೀಸ್ ಬಿಗಿ ಬಂದೋ ಬಸ್ತ್ ಗೊಳಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಅಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಡಿದ್ದಾರೆ.ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments:

Post a Comment