Powered By Blogger

Thursday, 10 November 2011

ಸಕಲೇಶಪುರ : 8.27000 ನೀಡಿ ಪಡೆದ ಫ್ಯಾನ್ಸಿ ಮೊಬೈಲ್ ನಂಬರ್ ನೂರು ರೂಪಾಯಿಗೆ ಇನ್ನೊಬ್ಬನ ಕೈಗೆ !


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ


ಸಕಲೇಶಪುರ : ಫ್ಯಾನ್ಸಿ ಸಿಮ್ ನಂಬರ್ ಗಾಗಿ ರೂ. ೮.೨೭ ಲಕ್ಷ ನೀಡಿ ಖರಿದಿಸಿದ ಸಿಮ್ ಅನ್ನು ಮತ್ತೊಬ್ಬ ಕೇವಲ ರೂ. ೧೦೦ ನೀಡಿ ಉಪಯೋಗಿಸುತ್ತಿರುವ ಪ್ರಕರಣ ಪಟ್ಟಣದಲ್ಲಿ ನಡೆದಿದೆ. ರಿಲೆಯನ್ಸ್ ಸಂಸ್ಥೆಯ ೮೦೮೮೮೮೮೮೮ ನಂಬರನ್ನು ಪಟ್ಟಣದ ನಿವಾಸಿ ಎಂ.ಪಿ ಬೇಗ್ ೮.೨೭ ಲಕ್ಷ ರೂಪಾಯಿಗೆ ಖರೀದಿಸಿ ಬಳಸುತ್ತಿದ್ದರು. ಇದೇ ನಂಬರನ್ನು ಹಾವೇರಿ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಸಿಮ್ ಕಳೆದು ಹೊಗಿದೆ ಎಂದು ರೂ. ೧೦೦ ನೀಡಿ ನಕಲು ಸಿಮ್ ಪಡೆದು ಬಳಸುತ್ತಿದ್ದ.  ಇದ್ದಕಿದ್ದ ಹಾಗೆ ಬೇಗ್ ರವರು ಮೋಬೈಲ್ ಸೇವೆ ಸ್ಥಗಿತ ಗೊಂಡು ಮತ್ತೊಬ್ಬ ವ್ಯಕ್ತಿ ಈ ನಂಬರನ್ನು ಉಪಯೊಗಿಸುತ್ತಿರುವ  ಬಗ್ಗೆ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂಸ್ಥೆ ತನಿಖೆ  ನಡೆಸಿ ಮತ್ತೊಂದು ನಕಲು ಸಿಮ್ ಅನ್ನು ಬೇಗ್ ರವರಿಗೆ ನೀಡಿದೆ.
ಬೇಗ್ ಅರೋಪ : ಯಾವುದೇ ಅನಾಮಿಕ ವ್ಯಕ್ತಿ ತನ್ನ ಸಿಮ್ ಕಳೆದು ಹೋಗಿದೆ ಎಂದು ದೂರು ನೀಡಿದರೆ ಅವರ ಪರಿಶೀಲಿಸದೆ ಸಿಮ್ ನೀಡುತ್ತಾರೆಂದರೆ ಈ ಬಗ್ಗೆ ನಾವು ಗಂಭೀರವಾಗಿ ಚಿಂತಿಸ ಬೇಕಾಗಿದೆ ಒಬ್ಬ ಮನುಷ್ಯನ ವ್ಯವಹಾರಿಕ ದೃಷ್ಟಿಯಿಂದ ಮಾತ್ರವಲ್ಲ ಇಂತಹ ಪ್ರಕರಣ ದೇಶದ ಭದ್ರತೆಗೂ ಮಾರಕ ನಮ್ಮ ದೂರನ್ನು ಸಂಬಂದ ಪಟ್ಟ ಇಲಾಖೆಯ ಆಧಿಕಾರಿಗಳು ಪರಿಶೀಲಿಸಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದರು.
 ವರದಿ ; ಅಕ್ಬರ್ ಜುನೈದ್ ( ವರದಿಗಾರರು .ವಿಕೆ ನ್ಯೂಸ್)

ಐಶ್ವರ್ಯ ರೈಗೆ ಮಗು ಜನಿಸುವಾಗ ಮಾಧ್ಯಮಗಳಿಗೆ ನಿಬಂಧನೆ !


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ, ಕರವಳಿ ಬೆಡಗಿ,  ಐಶ್ವರ್ಯ ರೈಗೆ ಎಂದು ಹೆರಿಗೆ ಆಗುತ್ತದೆ ? ಹುಟ್ಟುವ ಮಗು ಗಂಡೋ, ಹೆಣ್ಣೋ? ಅವಳಿ-ಜವಳೀನಾ? ಎಂಬಿತ್ಯಾದಿ ವಿಷಯಗಳ ಬಗ್ಗೆ ದಿನದಿಂದ ದಿನಕ್ಕೆ  ಸುದ್ದಿವಾಹಿನಿಗಳಲ್ಲಿ ವಿಶೇಷ ಕಾರ್ಯಕರ್ಮಗಳನ್ನು ಅಳವಡಿಸುತ್ತಿದೆ. ಕೆಲವು ಮಾಧ್ಯಮಗಳು ಜ್ಯೋತಿಷಿಗಳ ಪ್ರಕಾರ ಐಶ್ ಗೆ ಮುಂಬರುವ ನವಂಬರ ೧೧(೧೧.೧೧ ೧೧ )ವಿಶೇಷ ದಿನದಂದು  ಹೆರಿಗೆ ಖಚಿತ ಎಂದು ಹೇಳುತ್ತಿದೆ. ಈ ಮೂಲದ ಪ್ರಕಾರ  ಆ  ದಿನವೇ  ಹೆರಿಗೆ ಎಂದು ಮಾಧ್ಯಮ ವರ್ಗ ಆಸ್ಪತ್ರೆಯ ಮುಂದೆ ಸಾಲುಗಟ್ಟಿ ನಿಲ್ಲಲು ತಾಯರು ಮಾಡುತ್ತಿದೆ. ಆದರೆ ಇದೀಗ ಬಚ್ಚನ್  ಕುಟುಂಬ ಐಶ್ ಹೆರಿಗೆ ಸಂದರ್ಭ ಕೆಲವು ನಿಬಂಧನೆ ಗಳನ್ನು ಮಾದ್ಯಮಗಳ ಮುನ್ನಡೆ ಇಟ್ಟಿದೆ.ಈ ನಿಬಂಧನೆ ಹೊರ ಬರುತ್ತಿದ್ದಂತೆ ಮಾಧ್ಯಮ ವರ್ಗ ಮೂಕ ವಿಸ್ಮಿತರಾದರು.
ನಿಬಂದನೆಗಳ ಪ್ರಮುಖ ಅಂಶ ಈ ಕೆಳಗಿನಂತಿವೆ.
  •  ಹೆರಿಗೆಗೂ ಮುನ್ನ ಆ ಬಗ್ಗೆ ಯಾವುದೇ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುವ ಹಾಗಿಲ್ಲ.
  •  ಆಸ್ಪತ್ರೆ ಅಥವಾ ಐಶ್‌ ಕುಟುಂಬದ ಸದಸ್ಯರು ಅಧಿಕೃತ ಪ್ರಕಟಣೆ ಹೊರಡಿಸಿದ ಮೇಲಷ್ಟೇ ಸುದ್ದಿ ವಾಹಿನಿಯಲ್ಲಿ  ಪ್ರಕಟಿಸಬೇಕು.
  • ಮಗು ಹುಟ್ಟಿದ ಸುದ್ದಿಯನ್ನು ಬ್ರೇಕಿಂಗ್‌ ನ್ಯೂಸ್‌ ಆಗಿ ಪ್ರಸಾರ ಮಾಡುವಂತಿಲ್ಲ.
  • ಆಸ್ಪತ್ರೆ ಮುಂಭಾಗ ಅಥವಾ ಮನೆ ಮುಂದೆ ನೇರಪ್ರಸಾರದ ವಾಹನಗಳನ್ನು  ಕೊಂಡೊಯ್ಯಬಾರದು.
  •  ಮಗು ಮತ್ತು ಐಶ್ವರ್ಯ ಫೋಟೋ ತೆಗೆಯಲು ಅಧಿಕೃತವಾಗಿ ಆಹ್ವಾನ ಸಿಕ್ಕರಷ್ಟೇ ಹೋಗಬೇಕು.
  •  ಮಗುವಿನ ಎಂಎಂಎಸ್‌ ಅಥವಾ ಫೋಟೋಗಳನ್ನು ಪ್ರಕಟಿಸಬಾರದು.
  •  ಮಗುವಿನ ಭವಿಷ್ಯದ ಕುರಿತು ಯಾವುದೇ ಜ್ಯೋತಿಷ್ಯದ ಕಾರ್ಯಕ್ರಮ ಪ್ರಸಾರ ಮಾಡಕೂಡದು.
  •  11-11-2011ಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡಕೂಡದು.
  •  ಐಶ್‌ ದಾಖಲಾಗುವ ಆಸ್ಪತ್ರೆಗೆ  ಅಕ್ರಮ ಪ್ರವೇಶ ಮಾಡಬಾರದು.

ಬಂಟ್ವಾಳ : ಈದ್ ಆಚರಣೆ MITHTHABAIL JUMMA MASJID B.C.ROAD


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ನಾಡಿನೆಲ್ಲೆಡೆ ಸೋಮವಾರ ಮುಸ್ಲಿಂ ಬಾಂಧವರು ಸಂಭ್ರಮದ ಬಕ್ರಿದ್ ಹಬ್ಬವನ್ನಾಚರಿಸಿದ್ದು, ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಕೇಂದ್ರದಲ್ಲಿರುವ ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಕಂಡು ಬಂದ ಬಕ್ರೀದ್ ಸಂಭ್ರಮ.
- ಪಿ.ಎಂ.ಎ. ಪಾಣೆಮಂಗಳೂರು, (ವರದಿಗಾರರು, ವಿ ಕೆ ನ್ಯೂಸ್).

ತಸ್ಲೀಮಾ ನಸ್ರೀನ್ ಬಂಧಿಸಿ ಆಕೆಯ ವಿರುದ್ಧ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಲಿ


Posted on  by ವಿಶ್ವ ಕನ್ನಡಿಗ ನ್ಯೂಸ್

ತಸ್ಲೀಮಾ ನಸ್ರೀನ್ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಹಜ್ ಕುರಿತು ಬರೆದುಕೊಂಡ ಟ್ವೀಟ್
ಭಾರತದಲ್ಲಿದ್ದುಕೊಂಡು ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯ ಮೂಲಕ ಧರ್ಮ ವಿಶ್ವಾಸಿಗಳ ಮನನೋಯಿಸುವಂತಹ ಮಾತುಗಳನ್ನಾಡುತ್ತಾ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಶ್ರಮಿಸುತ್ತಿರುವ ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನು ಬಂಧಿಸಿ ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಭಾರತ ಸರ್ಕಾರ ಮುಂದಾಗಬೇಕಿದೆ. ತನ್ನ ಲಜ್ಜಾ ಎಂಬ ಕಾದಂಬರಿಯ ಮೂಲಕ ಇಸ್ಲಾಮಿಕ್ ವಿರೋಧಿ ವಿಚಾರಗಳನ್ನು ಬರೆದ ತಸ್ಲೀಮಾ ನಸ್ರೀನ್ ಅನ್ನು ಜನರ ಪ್ರತಿಭಟನೆಗೆ ಮಣಿದ ಬಾಂಗ್ಲಾದೇಶ ಆಕೆಯನ್ನು ಗಡೀಪಾರು ಮಾಡಿತ್ತು.
ತನ್ನ ಸ್ವಂತ ದೇಶದಿಂದ ಗಡೀಪಾರು ಗೊಂಡ ಈಕೆ ಇದೀಗ ಭಾರತ ಸರ್ಕಾರದ ಆಶ್ರಯದಲ್ಲಿ ದಿನ ಕಳೆಯುತ್ತಿದ್ದಾಳೆ. ನಮ್ಮ ತೆರಿಗೆ ಹಣದಲ್ಲಿ ವಾಸಕ್ಕೆ ಮನೆ , ಆಹಾರ ಜೊತೆಗೆ ಭದ್ರತೆಯನ್ನೂ ಸರ್ಕಾರ ಈಕೆಗೆ ನೀಡುತ್ತಿದೆ. ಇಷ್ಟಕ್ಕೇ ಈಕೆ ಸುಮ್ಮನಿದ್ದರೆ ಹೋಗಲಿ ಬಿಡಿ ಎನ್ನಬಹುದಿತ್ತು. ಆದರೆ ಇತ್ತೀಚೆಗೆ ತಸ್ಲೀಮಾ ನೀಡುತ್ತಿರುವ ಹೇಳಿಕೆಗಳು ದೇಶದಲ್ಲಿ ಆಕೆಯ ವಿರುದ್ಧ ಮುಸ್ಲಿಂ ಸಮುದಾಯದವರಲ್ಲಿ ಅಸಮಾಧಾನದ ಅಲೆಯನ್ನೇ ಮೂಡಿಸಿದೆ. ಲೇಖಕನಿಗೆ ಸ್ವಾತಂತ್ರ್ಯವಿರಬೇಕು ಎನ್ನುವುದೇನೋ ನಿಜ. ಆದರೆ ಆ ಸ್ವಾತಂತ್ರ್ಯದ ಸದುಪಯೋಗವಾಗಬೇಕು. ಇಲ್ಲಿ ತಸ್ಲೀಮಾ ಅದನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ.
ಇತ್ತೀಚಿನ ಆಕೆಯ ಹೇಳಿಕೆಗಳನ್ನು ಗಮನಿಸಿದರೆ ಆಕೆ ಭಾರತದಲ್ಲಿ ಯಾವುದೋ ಒಂದು ಶಕ್ತಿಯ ಏಜೆಂಟ್ ಆಗಿ ಈಕೆ ದೇಶದಲ್ಲಿ ಕಲಹ ಎಬ್ಬಿಸಲು ಪ್ರಯತ್ನಿಸುತ್ತಿದ್ದಾಳೆಯೇ ಎಂಬ ಸಂಶಯವನ್ನೂ ಮೂಡಿಸುತ್ತದೆ. ಕೆಲ ದಿನಗಳ ಹಿಂದೆ ಶಾರುಖ್ ಖಾನ್ ಅನ್ನು ಸಲಿಂಗಿ ಎಂದು ಕರೆದ ಈಕೆ ತಾನು ಸಹ ಸಲಿಂಗಿಯಾಗಳು ಬಯಸುವುದಾಗಿ ಲಜ್ಜೆಗೆಟ್ಟ ಹೇಳಿಕೆ ನೀಡಿದಳು . ಸತ್ಯ ಸಾಯಿ ಬಾಬಾ ನಿಧನರಾದಾಗ ಒಬ್ಬ ಜಾದುಗಾರನ ನಿಧನಕ್ಕೆ ದೇಶ ದುಃಖ ಪಡುವ ಅಗತ್ಯವಿಲ್ಲ ಎಂದಳು .
ಇತ್ತೀಚಿನ ದಿನಗಳಲ್ಲಂತೂ ಎಲ್ಲಾ ಎಲ್ಲೆಯನ್ನೂ ಮೀರಿ ಮುಸ್ಲಿಮರ ಬಕ್ರೀದ್ ಆಚರಣೆ ಮತ್ತು ಹಜ್ ಕರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ. ಇದೀಗ ಈಕೆಯನ್ನು ದೇಶದಲ್ಲಿ ಇಟ್ಟುಕೊಳ್ಳುವುದು ಸರ್ವಧರ್ಮಮವನ್ನು ಸಮಭಾವದಿಂದ ಕಾಣುವ ನಮ್ಮ ದೇಶದ ಸಂಸ್ಕೃತಿಗೆ ಒಗ್ಗುವಂತಹದಲ್ಲ. ಸರ್ಕಾರ ಕೂಡಲೇ ಈಕೆಯನ್ನು ಬಂಧಿಸಬೇಕು ಮತ್ತು ಈಕೆಯ ವಿರುದ್ಧ ಧರ್ಮ ನಿಂದನೆಯ ಪ್ರಕರಣದಡಿ ಮೊಕದ್ದಮೆ ದಾಖಲಿಸಬೇಕು. ಸರ್ಕಾರಕ್ಕೆ ಅದೂ ಸಾಧ್ಯವಿಲ್ಲ ಎನ್ನುವುದಾದರೆ ಈಕೆಯನ್ನು ದೇಶದಿಂದ ಗಡೀಪಾರು ಮಾಡಬೇಕು. ಶಾಂತಿ ಸೌಹಾರ್ದತೆ ಧರ್ಮ ನಿರಪೇಕ್ಷತೆಯ ರಾಷ್ಟ್ರದಲ್ಲಿ ಇಂತಹ ಕಿಚ್ಚು ಹಚ್ಚುವ ವಿಷ ಕನ್ಯೆಯನ್ನು ಇಟ್ಟುಕೊಳ್ಳುವುದು ಸರ್ಕಾರಕ್ಕೆ ಶೋಭೆ ತರುಂತಹದ್ದಲ್ಲ. ಜನರ ಆಕ್ರೋಶ ಭುಗಿಲೇಳುವ ಮೊದಲು ಕೇಂದ್ರದ ಯುಪಿಎ ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸುವುದು ಒಳಿತು .
ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಶ್ವ ಕನ್ನಡಿಗ ನ್ಯೂಸ್

ಸೌದಿ ಅರೇಬಿಯಾದ ರಾಜಧಾನಿಯಲ್ಲೊಂದು ಬತಾ ಎಂಬ ವಿದೇಶಿಯರ ಸಾಮ್ರಾಜ್ಯ


Posted on  by ವಿಶ್ವ ಕನ್ನಡಿಗ ನ್ಯೂಸ್

ನಿತಿನ್ ರೈ ಕುಕ್ಕುವಳ್ಳಿ .vknewz.com
ರಿಯಾದ್ :  ಸೌದಿ ಅರೇಬಿಯಾ  ಅಂದಾಕ್ಷಣ ನೆನಪಿಗೆ  ಬರೋದು  ಇಸ್ಲಾಂ ನ  ಪವಿತ್ರ  ಸ್ಥಳಗಳಾದ  ಮಕ್ಕಾ ಮತ್ತು ಮದೀನ  . ಸೌದಿ ಅರೇಬಿಯಾಕ್ಕೆ ಜೀವನ  ಅರಸಿಕೊಂಡು  ಬರೋರು ಅದೆಷ್ಟೋ  ವಿದೇಶಿಯರು .  ಸೌದಿ ಅರೇಬಿಯಾದ  ಮರಳು ಗಾಡು ಅದೆಷ್ಟೋ ಭಾರತೀಯರನ್ನು   , ಬಾಂಗ್ಲಾದೇಶಿಯರನ್ನು   ಯಮನಿಯರನ್ನು  , ಶ್ರೀಲಂಕಾ , ಪಾಕಿಸ್ತಾನಿಯರನ್ನು  ಹೀಗೆ ವಿಶ್ವದ ಹಲವು  ದೇಶದ ಕೆಲಸ ಗಾರರನ್ನು  ಕೈಬೀಸಿ ಕರೆದು ತನ್ನ ಬಳಿಯಲ್ಲಿ  ಕೆಲಸವನ್ನು   ನೀಡಿದೆ.
ಸೌದಿ  ಅರೇಬಿಯಾದ ರಾಜಧಾನಿ  ರಿಯಾದ್  ನ ಒಂದು ಸ್ಥಳ   ಮಾತ್ರ  ಸೌದಿ ಅರೇಬಿಯಾ ದಲ್ಲಿ  ಅತಿ ಹೆಚ್ಚು  ವಿದೇಶೀಯರನ್ನು   ಹೊಂದಿರುವಂತ  ಸ್ಥಳ  ಅದುವೇ ” ಬತಾ  “. ಇದೊಂದು ಮಾರುಕಟ್ಟೆ ಪ್ರದೇಶ .ಈ ಬತಾ ಎಂಬ ಪ್ರಪಂಚಕ್ಕೆ ಪ್ರವೇಶ  ಮಾಡಿದರೆ  ಬೆರಳೆಣಿಕೆಯಷ್ಟು ” ಸೌದಿ ಪ್ರಜೆಗಳು”  ಕಾಣಸಿಗುತ್ತಾರೆ . ಇನ್ನು ಆ  ಪ್ರಪಂಚ ತುಂಬಾ ತುಂಬಿರುವವರು ವಿದೇಶಿ  ಪ್ರಜೆಗಳು. ಅಂದರೆ ಭಾರತ , ಬಾಂಗ್ಲಾದೇಶ , ಪಾಕಿಸ್ತಾನ ,ಫಿಲಿಪೈನ್ ,ಯಮನಿ  ಈ ರೀತಿಯ ವಿದೇಶಿ ಪ್ರಜೆಗಳು.  ಇಲ್ಲಿನ ವ್ಯವಹಾರ ಬಹಳ ವಿಶೇಷವಾದದ್ದು .  ಬತ ದಲ್ಲಿ  ಕೇರಳ ಮಾರುಕಟ್ಟೆ ,ಬಂಗಾಳಿ ಮಾರುಕಟ್ಟೆ ,ಫಿಲಿಪೈನಿ ಮಾರುಕಟ್ಟೆ  ಹೀಗೆ ಒಂದೊಂದು ಹೆಸರಿನ ಮಾರುಕಟ್ಟೆಗಳಿವೆ. ಸೌದಿ ಯಿಂದ  ವಿದೇಶಕ್ಕೆ  ಅತಿಹೆಚ್ಚು ಹಣ  ಹೋಗುವುದು ಕೂಡ  ಇಲ್ಲಿಂದಲೇ .
ಈ ಬತಾ ಅನ್ನೋ  ಸ್ಥಳ ದಲ್ಲಿ ಅನೇಕ ರೀತಿಯ ವ್ಯಾಪಾರಗಳು ನಡಯುತ್ತದೆ . ಅಂಗಡಿ ಮುಂಗಟ್ಟು  ಹೊಂದಿ ವ್ಯಾಪಾರ  ಮಾಡುವವರ ಜೊತೆಗೆ ರಸ್ತೆ ಬದಿಯ ವ್ಯಾಪಾರವೂ ಇಲ್ಲಿ ಸಾಮಾನ್ಯ . ಹಾಗೆ ಸೌದಿ ಅರೇಬಿಯಾದಂತಹ  ಅತೀ  ಕಟ್ಟು ಪಾಡು ಇರೋ ದೇಶದಲ್ಲಿ  ಅತಿ ಹೆಚ್ಚು ಅಕ್ರಮಗಳು ನಡಯುವಂತ ಸ್ಥಳ  ಕೂಡ ಬತಾ .  ಇಲ್ಲಿ ನಡೆಯದ ವ್ಯಾಪಾರಗಲಿಲ್ಲ . ಪವಿತ್ರ  ಇಸ್ಲಾಂ ಪ್ರಕಾರ  ಬಡ್ಡಿ ದರದಲ್ಲಿ  ಹಣವನ್ನು ಕೊಡೋದು  ಅತೀ   ನೀಚ  ಕೃತ್ಯ . ಅದು ನಿಷಿದ್ಧ ಕೂಡ.  ಆದರೆ  ಈ ಬತಾದಲ್ಲಿ  ಬಡ್ಡಿ ಲೆಕ್ಕದಲ್ಲಿ  ಕೋಟಿ ಕೊಟಿ ಹಣ  ಚಲಾವಣೆಯಲ್ಲಿ  ನಡಯುತ್ತೆ ಅನ್ನುತ್ತಾರೆ ಕೆಲವರು. ಆದರೆ ಅದು ಇಲ್ಲಿನ ಆಡಳಿತದ  ಕಣ್ಣು ತಪ್ಪಿಸಿ ನಡೆಯುವ ಕಾರಣ ಹೆಚ್ಚಿನ ಈ ವ್ಯವಹಾರದ  ಜನ ಸಿಕ್ಕಿ ಬೀಳುವುದಿಲ್ಲ.  ಸಿ ಡಿ ವ್ಯಾಪಾರ ಇಲ್ಲಿನ ಮತ್ತೊಂದು ಪ್ರಮುಖ ವ್ಯವಹಾರ .  ಇದರಲ್ಲೇ ಜೀವನ  ಮಾಡೋರನ್ನ ನಾವು  ಬತಾದ ಗಲ್ಲಿ ಗಲ್ಲಿ ಯಲ್ಲಿ ನೋಡುತ್ತೇವೆ . ಮಟ್ಕಾ ದಂಧೆ  ಇಲ್ಲಿ ಅವಿರತವಾಗಿ  ನಡಯುತ್ತಿವೆ ಅನ್ನುತ್ತಾರೆ ಕೆಲವರು .
ಬತಾದಲ್ಲಿ  ಒಳ್ಳೇದು  ಇದೆ ಹಾಗೆ  ಕೆಟ್ಟದ್ದೂ  ಇದೆ . ಒಂದಂತೂ ನಿಜ  . ಕಷ್ಟಪಡುವ  ಅನೇಕ ಜನರಿಗೆ   ಜೀವನ ಕಟ್ಟಿ  ಕೊಟ್ಟಂತಹ  ಸ್ಥಳ  ಅಂದ್ರೆ ಬತಾ . ಇಲ್ಲಿ  ಮತ್ತೆ ಕೆಲವು ಘಟನೆಗಳು ಸಾಮಾನ್ಯ . ನೈಜಿರಿಯ  ಮೂಲದವರು ಇಲ್ಲಿ ಅವಿರತವಾಗಿ  ಒಂಟಿ ವಿದೇಶಿ ಯರು ಸಿಕ್ಕಿದರೆ  ದೋಚುತ್ತಾರೆ ಎಂಬ ದೂರುಗಳು ಆಗಾಗ ಕೇಳಿ ಬರುತ್ತಿರುತ್ತದೆ. ಸಾಮಾನ್ಯ  ರಾತ್ರಿ  ೧೨ ರ ನಂತರ ಇಲ್ಲಿ ಓಡಾಡುವುದು ಬಹಳ  ಕಷ್ಟದ  ವಿಷಯ . ಯಾರದೋ   ದುಡ್ಡು ಯಲ್ಲಮನ  ಜಾತ್ರೆ  ಮಾಡೋರು  ಇಲ್ಲಿ ಇದ್ದಾರೆ. ಆದರೂ ಇಲ್ಲಿ ವಿದೇಶಿ  ಯರ ಸಂಖ್ಯೆ  ಮಾತ್ರ ದಿನದಿಂದ ದಿನಕ್ಕೆ  ಹೆಚ್ಚುತ್ತಲೇ  ಇದೆ.  ಏನೇ ಆದರೂ ಸೌದಿ ಅರೇಬಿಯಾದ  ಒಳಗೊಂದು  ಪ್ರಪಂಚವನ್ನು  ಕಟ್ಟಿದ  ವಿದೇಶಿಯರ  ಸಾಮರ್ಥ್ಯವನ್ನು ಮೆಚ್ಚಲೇ ಬೇಕು.
ವಿಶೇಷ ಲೇಖನ : ನಿತಿನ್ ರೈ ಕುಕ್ಕುವಳ್ಳಿ
ವರದಿಗಾರರು .ವಿಕೆ ನ್ಯೂಸ್ . ರಿಯಾದ್