Monday, 10 October 2011
ನೂರು ರೂಪಾಯಿ ದಂಡ ಕಟ್ಟಿದ ಅಮೀರ್ ಖಾನ್
ಮುಂಬೈ : ಬಾಲಿವುಡ್ ತಾರೆ ಅಮೀರ್ ಖಾನ್ ಟ್ರಾಫಿಕ್ ನಿಯಮದ ಉಲ್ಲಂಘನೆಗಾಗಿ ನೂರು ರೂಪಾಯಿ ದಂಡ ಪಾವತಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಮುಂಬೈನ ಸತಾರಾ ಪ್ರದೇಶದಲ್ಲಿ ಅಮೀರ್ ಖಾನ್ ತನ್ನ ಸಿಲ್ವರ್ ಬಣ್ಣದ ಬಿ.ಎಂ.ಡಬ್ಲ್ಯು ಕಾರಿನಲ್ಲಿ ತನ್ನ ಕುಟುಂಬದ ಜೊತೆ ವಿಹಾರಕ್ಕೆ ಹೊರಟಿದ್ದರು. ಆ ಸಮಯದಲ್ಲಿ ಅಮೀರ್ ಕಾರು ನೋ ಎಂಟ್ರಿ ಮಾರ್ಗ ಪ್ರವೇಶಿಸಿತು . ಇದನ್ನು ಕಂಡ ಟ್ರಾಫಿಕ್ ಪೋಲಿಸ್ ಅಮೀರ್ ಖಾನ್ ಅವರಿಗೆ ನೂರು ರೂಪಾಯಿ ದಂಡ ವಿಧಿಸಿರುವುದಾಗಿ ಸತಾರಾ ಟ್ರಾಫಿಕ್ ಉಸ್ತುವಾರಿ ಅಧಿಕಾರಿ ಕೆ.ಎನ್. ಪಾಟೀಲ್ ತಿಳಿಸಿದ್ದಾರೆ .
ಕಾರು ನೋ ಎಂಟ್ರಿ ರಸ್ತೆಯಲ್ಲಿ ಪ್ರವೇಶಿಸುತ್ತಿದ್ದಂತೆ ಕಾರನ್ನು ಕಂಡ ಟ್ರಾಫಿಕ್ ಪೋಲಿಸ್ ಅಧಿಕಾರಿ ಕಾರ್ ನಿಲ್ಲಿಸಿದ್ದಾರೆ. ಮತ್ತು ನೂರು ರೂಪಾಯಿ ದಂಡ ವಿಧಿಸಿದ್ದಾರೆ.ಆ ಕೂಡಲೇ ಅಲ್ಲಿಗೆ ಬಂದ ಅಮೀರ್ ಅಂಗರಕ್ಷಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು . ಕೂಡಲೇ ಆ ಸಮಯದಲ್ಲಿ ವಾಹನದಿಂದ ಇಳಿದು ಬಂದು ಮಧ್ಯಪ್ರವೇಶಿಸಿದ ಅಮೀರ್ ಖಾನ್ ನೂರು ರೂಪಾಯಿ ದಂಡ ಪಾವತಿಸಿದರು ಎಂದು ಪಾಟೀಲ್ ತಿಳಿಸಿದ್ದಾರೆ.
ಕೇಂದ್ರ ಸರಕಾರದಿಂದ ಐಷಾರಾಮಿ ಕಾರು ಉಡುಗೊರೆ ಪಡೆದ ರಾಷ್ಟ್ರಪತಿ
ನವದೆಹಲಿ : ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರಿಗೆ ಕೇಂದ್ರ ಸರಕಾರವು ೬ ಕೋಟಿ ರೂ ಮೌಲ್ಯದ ಲೀಮೂ ಮರ್ಸಿಡೀಸ್ ಬೆಂಜ್ ಎಸ್ ೬೦೦ ಎಲ್ ಫುಲ್ ಮ್ಯಾನ್ ಕಾರೊಂದನ್ನು ಗಿಫ್ಟ್ ರೂಪದಲ್ಲಿ ನೀಡಿದೆ.
ಈ ಕಾರು ಅನೇಕ ವಿಶೇಷತೆಗಳನ್ನ ಹೊಂದಿದ್ದು ಸೇನಾ ಗುಣಮಟ್ಟವನ್ನು ಹೊಂದಿದೆ. ಗುಂಡು ನಿರೋಧಕ ಶಕ್ತಿ, ಹ್ಯಾಂಡ್ ಗ್ರನೆಡ್ ಸ್ಪೋಟಕಗಳ ದಾಳಿಯನ್ನು ಎದುರಿಸುವ ಶಕ್ತಿ ಹಾಗೂ ಅತೀ ಆಧುನಿಕ ತಂತ್ರಜ್ಞಾನವನ್ನು ಓಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ರಾಯಲ್ ಸಿಮೆ ರೆಡ್ಡಿಯ ರಾಯೇಲ್ ಲೈಫ್ ಸ್ಟೈಲ್
ಜನಾರ್ದನ ರೆಡ್ಡಿ ಮೂಲತಃ ಆಂದ್ರದ ರೋಯೇಲ್ ಸೀಮೆಯವರು ಅವರಲ್ಲಿ ಕೂಡ ರೋಯೇಲ್ ಸೀಮಾ ಜನರ ಎಲ್ಲಾ ಹವಾ ಬಾವ ಅದೇ ಜಬರ್ದಸ್ತು ಅದೇ ಸ್ಟೈಲ್ ಎಲ್ಲಾ ಇತ್ತು. ರೆಡ್ಡಿ ಅವರ ಜೀವನ ಸ್ಟೈಲ್ ದೇವೇಂದ್ರನನ್ನ ನಾಚಿಸುವಂತಿತ್ತು. ಕರ್ನಾಟಕ, ಆಂದ್ರದಲ್ಲಿ ಅಕ್ರಮ ಗಣಿಗಾರಿಕೆ ಮಾಡಿ ಅದೆಷ್ಟೋ ಕೋಟಿಯಷ್ಟು ಸಂಪತ್ತನ್ನ ಲೂಟಿ ಮಾಡಿ ಮಾಡಿದಂತ ಹಣವನ್ನ ತನ್ನ ರೋಯಲ್ ಲೈಫ್ ಸ್ಟೈಲ್ ಗೆ ಬಳಸಿಕೊಂಡರು. ರೆಡ್ಡಿಯ ಮನೆ “ಕುಟೀರ” ಹೆಸರಿಗೆ ಮಾತ್ರ ಕುಟೀರ ಆದ್ರೆ ದೇವೇಂದ್ರನ ದೇವಲೋಕಕ್ಕೆ ಸವಾಲೆಸೆಯುವಂತಿತ್ತು.
ಇಂತಹ ರೆಡ್ಡಿ ಈಗ ಜೈಲಿನಲ್ಲಿ ಇದ್ದಾರೆ, ಪಾಪದ ಹಣ ಯಾವತ್ತೂ ಕ್ಷಣಿಕ ಮಾತ್ರ, ಕೊನೆ ತನಕ ಇರಲು ಸಾದ್ಯವಿಲ್ಲ ಅನ್ನೋದು ಇಲ್ಲ್ಲಿ ಸಾಬಿತಾಗುತ್ತೆ.
ಸಂಜೀವ್ ಭಟ್ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಪಾಪ್ಯುಲರ್ ಫ್ರಂಟ್ ವತಿಯಿಂದ ಪ್ರತಿಭಟನೆ
ಶಿವಮೊಗ್ಗ : ೨೦೦೨ ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ಪಾತ್ರವನ್ನು ಬಯಲಿಗೆಳೆದ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಬಂಧಿಸಿ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಗುಜರಾತ್ ಸರ್ಕಾರದ ಕ್ರಮವನ್ನು ಖಂಡಿಸಿ ಮತ್ತು ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು .
ನಗರದ ಅಮೀರ್ ಅಹ್ಮದ್ ವೃತ್ತದಿಂದ ಮೆರವಣಿಗೆ ಮೂಲಕ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಪರ್ವೇಜ್ ಅಹ್ಮದ್ , ಉಪಾಧ್ಯಕ್ಷ ತಬ್ರೀಜ್ ಮತ್ತು ಪ್ರಧಾನ ಕಾರ್ಯದರ್ಶಿ ಶಾಹಿದ್ ಖಾನ್ ವಹಿಸಿದ್ದರು .
ಸಂಜೀವ್ ಭಟ್ ಗೆ ಗುಜರಾತ್ ಐಪಿಎಸ್ ಅಧಿಕಾರಿಗಳ ಸಂಘದ ಬೆಂಬಲ
ಅಹಮದಾಬಾದ್ : ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್ ಐಪಿಎಸ್ ಅಧಿಕಾರಿಗಳ ಸಂಘ ಅಮಾನತ್ತಾಗಿ ಜೈಲಿನಲ್ಲಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಸಂಜೀವ್ ಭಟ್ ಅವರ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ . ನಿನ್ನೆ ಇಲ್ಲಿ ನಡೆದ ಐಪಿಎಸ್ ಅಧಿಕಾರಿಗಳ ಸಂಘದ ಸಭೆಯಲ್ಲಿ ಸಂಜೀವ್ ಭಟ್ ಅವರಿಗೆ ಬೆಂಬಲ ವ್ಯಕ್ತಪಡಿಸುವ ನಿರ್ಣಯ ಕೈಗೊಳ್ಳಲಾಯಿತು.
ನಿರ್ಣಯ ಕೈಗೊಂಡ ನಂತರ ಸಂಜೀವ್ ಭಟ್ ಅವರ ಮನೆಗೆ ಭೇಟಿ ನೀಡಿದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ತಂಡ ಸಂಘದ ನಿರ್ಣಯವನ್ನು ನಮಗೆ ತಿಳಿಸಿದ್ದಾಗಿ ಸಂಜೀವ್ ಭಟ್ ಪತ್ನಿ ಶ್ವೇತಾ ಹೇಳಿದ್ದಾರೆ. ಸದ್ಯಕ್ಕೆ ಜೈಲಿನಲ್ಲಿರುವ ಸಂಜೀವ್ ಭಟ್ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ.
Subscribe to:
Posts (Atom)