ಬೆಂಗಳೂರು : ದಲಿತ್ ಪ್ಯಾಂಥರ್ಸ್ ಆಫ್ ಇಂಡಿಯಾ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆದಿತ್ಯವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಬಸವಶ್ರೀ” ಪ್ರಶಸ್ತಿ ಸ್ವೀಕರಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಮಾತನಾಡುತ್ತಾ ದಲಿತರು ಮತ್ತು ಮುಸ್ಲಿಮರು ಒಂದಾದರೆ ದೇಶದಲ್ಲಿ ಸಾಮಾಜಿಕ ಕ್ರಾಂತಿ ದೊಡ್ಡ ಮಟ್ಟಿನಲ್ಲಿ ನಡೆಸಬಹುದು ಎಂದರು.
ದಲಿತರು ಮತ್ತು ಮುಸ್ಲಿಮರನ್ನು ದಮನಿಸುವ ನಿಟ್ಟಿನಲ್ಲಿ ವ್ಯವಸ್ತಿತ ಷಡ್ಯಂತರಗಳು ನಡೆಸಲಾಗುತ್ತಿವೆ. ದಲಿತರು ಮತ್ತು ಮುಸ್ಲಿಮರು ಭಾರತದ ನಿಜವಾದ ಮೂಲ ವಾಸಿಗಳು ಎಂದ ಅವರು, ನಾವು ಯಾವುದೇ ಆಸ್ತಿಮಾಡುವ ಉದ್ದೇಶದ ಹೋರಾಟ ಅಲ್ಲ ಸಂವಿದಾನ ನಮಗೆ ನೀಡಿದ ನ್ಯಾಯ, ಸಮಾನತೆಯ ಹಕ್ಕುಗಳಿಗಾಗಿ ಹಿಂದುಳಿದವರ, ತುಳಿತಕ್ಕೊಳಗಾದ ಸಮುದಾಯಗಳಿಗೆ ಮೂಲಭೂತ ಸೌಕರ್ಯಗಳು ಸಾಮಾಜಿಕ ನ್ಯಾಯಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ನಮ್ಮನ್ನು ಮೇಲ್ವರ್ಗದವರು ತುಳಿಯುತ್ತಲೇ ಬಂದಿದ್ದಾರೆ ಅವರ ವಿರುದ್ದ ದಲಿತರು ಧ್ವನಿ ಎತ್ತಿದರೆ ನಕ್ಸಲೀಯರು ಎಂದೂ ಮುಸ್ಲಿಮರನ್ನು ಭಯೋದ್ಪಾದಕರೆಂದು ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸಮುದಾಯಗಳ ಮದ್ಯೆ ಮೆಲ್ವರ್ಗಗಳು ವೈಮನಸ್ಸು ಉಂಟು ಮಾಡುವ ಷಡ್ಯಂತ್ರ ದ ಭಾಗವಾಗಿ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಮತ್ತು ಸ್ವಾತಂತ್ರ್ಯ ವೀರ ಹೋರಾಟಗಾರ ಟಿಪ್ಪು ಸುಲ್ತಾನ್ ರ ವಿರುದ್ದ ಅಪಪ್ರಚಾರಗಳು ನಡೆಸಲಾಗುತ್ತಿದೆ ಅದಕ್ಕೆಲ್ಲ ಕಿವಿ ಕೊಡಬಾರದು ಟಿಪ್ಪು ಒಬ್ಬ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಎಂಬುವುದು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಈ ಸಮಾರಂಭದಲ್ಲಿ ಕರ್ನಾಟಕ ಜನಾಂದೋಲನದ ರಾಜ್ಯಾದ್ಯಕ್ಷ ಮರಿಯಪ್ಪ, ದಲಿತ್ ಪ್ಯಾಂಥರ್ಸ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಗರಾಜ್ ಮತ್ತು ಸಂಘಟನೆಯ ಗಣ್ಯರು ಪಾಲ್ಗೊಂಡಿದ್ದರು.
No comments:
Post a Comment