Powered By Blogger

Wednesday, 26 October 2011

ಲಿಬಿಯಾವನ್ನು ಜಗತ್ತಿಗೆ ತೋರಿಸಿದ ಗದ್ದಾಫಿ ಕುತಂತ್ರಿಗಳ ಸಂಚಿಗೆ ಬಲಿಯಾದರೇ ?

 
೧೯೫೦  ರಲ್ಲಿ ಲಿಬಿಯಾ ಜಗತ್ತಿನ ಬಡ ರಾಷ್ಟ್ರಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿತ್ತು . ಆದರೆ  ಇಂದು ೨೦೧೧ ರಲ್ಲಿ   ಜಗತ್ತು  ಲಿಬಿಯಾ  ಕಡೆ ನೋಡುತ್ತಿದೆ .  ವಿಶ್ವದ ಶ್ರೀಮಂತ  ರಾಷ್ಟ್ರಗಳ  ಸಾಲಿನಲ್ಲಿ  ಲಿಬಿಯಾ  ಕೂಡ ಬಂದು ನಿಂತಿದೆ  . ಈಗಿನ ಲಿಬಿಯಾದ  ಯಾವೊಬ್ಬ ವ್ಯಕ್ತಿಯೂ ಬಡವನಲ್ಲ . ಈ ಬದಲಾವಣೆಗೆ ಗದ್ದಾಫಿ ಅನ್ನೋ ಸರ್ವಾಧಿಕಾರಿ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ .  ಗದ್ದಾಫಿಗೆ ಒಂದು ಕಾಲದಲ್ಲಿ  ತಲೆ ಬಾಗುತ್ತಿದ್ದ ಅಲ್ಲಿನ ಜನ  ಒಂದು ದಿನ  ಗದ್ದಾಫಿಯ ತಲೆಯನ್ನೇ   ತೆಗೆಯುತ್ತಾರೆ  ಅನ್ನೋದು  ಯಾರೂ  ಊಹಿಸಿರಲು ಸಾಧ್ಯವಿಲ್ಲ.
ಹಾಗಾದರೆ ಗದ್ದಾಫಿ ಅಷ್ಟೊಂದು ಕ್ರೂರಿಯೇ ? ಅಥವಾ ಸ್ವಾರ್ಥಿಯೇ ?  ಹಾಗೇನಾದರೂ ಆಗಿದ್ದರೆ ಲಿಬಿಯಾ  ಅಷ್ಟೊಂದು ಶ್ರೀಮಂತ ರಾಷ್ಟ್ರವಾಗಲು ಸಾಧ್ಯವೇ ? ಈಗ ಎಲ್ಲರೂ   ಗದ್ದಾಫಿಯನ್ನು ದ್ವೇಷಿಸುವವರೇ ಜೊತೆಗೆ ದೂಷಿಸುವವರೇ. ಆದರೆ  ನೇರ ದೃಷ್ಟಿಯಿಂದ ನೋಡಿದರೆ ಲಿಬಿಯಾದ  ಇಷ್ಟೊಂದು  ಶ್ರೀಮಂತಿಕೆಗೆ   ಗದ್ದಾಫಿ ಆಡಳಿತ ಕಾರಣ . ಗದ್ದಾಫಿ   ಸರಕಾರ  ಅಲ್ಲಿ ಮಾಡಿರೋ ಕಾನೂನು  ಹಾಗೂ ಜನರಿಗೆ ನೀಡಿರುವ ಸೌಲಭ್ಯಗಳನ್ನು ನೋಡಿದರೆ ಗದ್ದಾಫಿ   ಕ್ರೂರಿ ,  ಸರ್ವಾಧಿಕಾರಿ   ಅನ್ನೋದು  ಊಹಿಸಲು ಸಾದ್ಯವಿಲ್ಲ .


ಲಿಬಿಯಾದ ಯಾವದೇ ಒಬ್ಬ ವ್ಯಕ್ತಿ  ಒಂದು ಮನೆ ಕಟ್ಟಬೇಕಿದ್ದರೆ  ಅದರ ಖರ್ಚಿನ ಅರ್ಧದಷ್ಟು ಹಣವನ್ನು ಗದ್ದಾಫಿ  ಸರ್ಕಾರ ನೀಡುತ್ತಿತ್ತು . ಹೊಸದಾಗಿ  ಮದುವೆಯಾದ ದಂಪತಿಗಳಿಗೆ  ಸರ್ಕಾರದ ವತಿಯಿಂದ ೫೦೦೦೦ ಡಾಲರ್ ಹಣವನ್ನು ಅವರ ಜೀವನೋಪಾಯಕ್ಕಾಗಿ ನೀಡಲಾಗುತ್ತಿತ್ತು . ವಿದ್ಯಾಭ್ಯಾಸ ಉಚಿತವಾಗಿ ನೀಡಿತ್ತು , ವಿದ್ಯುಚಕ್ತಿ ಬಳಕೆಗೆ ಯಾವುದೇ ರೀತಿಯಲ್ಲಿ ಹಣ ಪಾವತಿಸ ಬೇಕಿರಲಿಲ್ಲ. ಅದೂ ಸಂಪೂರ್ಣ ಉಚಿತವಾಗಿತ್ತು. ಸರಕಾರವನ್ನ  ಪ್ರಶ್ನಿಸುವ ಅಧಿಕಾರವನ್ನು ಸಹ ಗದ್ದಾಫಿ ಜನರಿಗೆ  ನೀಡಿದ್ದರು . ಇನ್ನು   ಲಿಬಿಯಾದ ಯಾವನೇ ಒಬ್ಬ ಪ್ರಜೆಗೆ  ಸಾಲ  ಅನ್ನೋದು  ಇಲ್ಲ  . ಸಾಲ  ಹೊಂದಿರದ ಜನರನ್ನ  ಹೊಂದಿರುವ ರಾಷ್ಟ್ರ  ಲಿಬಿಯಾ . ವಿದೇಶಗಳಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಹೋಗುವವರಿಗೆ ವಿದ್ಯಾಭ್ಯಾಸ ಉಚಿತವಾಗಿತ್ತು. ಹಾಗೆ ಹೋಗುವವರಿಗೆ ಮತ್ತು ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಭತ್ಯೆ ನೀಡಲಾಗುತ್ತಿತ್ತು.ಈ ರೀತಿ ಇನ್ನೂ  ಅನೇಕ ಸವಲತ್ತುಗಳನ್ನ  ಜನರಿಗೆ ಗದ್ದಾಫಿ   ನೀಡಿದ್ದರು  .
ತನ್ನ ಜನರಿಗೆ ಇಷ್ಟೊಂದು ಸವಲತ್ತುಗಳನ್ನು  ನೀಡಿದ ಗದ್ದಾಫಿ ಕ್ರೂರಿಯೇ ?  ಆದರೆ ಗದ್ದಾಫಿಗೆ ತನ್ನದೇ ಆದ  ಕೆಲವೊಂದು ನ್ಯೂನ್ಯತೆಗಳು ಇದ್ದವು .  ನ್ಯೂನ್ಯತೆಗಳು  ಇಲ್ಲದ ಮನುಷ್ಯ   ಜಗತ್ತಿನಲ್ಲಿ  ಇರಲು ಸಾದ್ಯವೇ ?   ಗದ್ದಾಫಿಯ ಸುತ್ತ  ಹುಡುಗಿಯರು  ಅಂಗರಕ್ಷಕರಾಗಿ ಇರುತ್ತಿದ್ದರು , ಗದ್ದಾಫಿ ಆಡಂಬರದ ಜೀವನ  ನಡೆಸುತ್ತಿದ್ದರು . ಹೀಗೆ  ಕೆಲವು ಆಪಾದನೆ ಗಳು  ಇದ್ದವು  . ಇದರ ಲಾಭವನ್ನು ಪಡೆದ  ಕೆಲವರು  ಗದ್ದಾಫಿಯನ್ನ ಕ್ರೂರಿ  ಹಿಂಸಾ ಪ್ರಿಯ ಎಂದು ಅಲ್ಲಿನ ಜನರ ತಲೆ ಕೆಡಿಸಿ  ಆತನ ವಿರುದ್ದ ಅಲ್ಲಿನ ಜನ  ತಿರುಗಿ ಬೀಳುವ ರೀತಿಯಲ್ಲಿ  ಮಾಡಿದರು. ಹಾಗೆ ತಿರುಗಿ ಬಿದ್ದ ಕೆಲ ಜನಗಳಿಗೆ ವಿದೇಶೀ ಶಕ್ತಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಜೊತೆ ಗದ್ದಾಫಿ ವಿರುದ್ಧ ದಾಳಿಗೆ ವೈಮಾನಿಕ ನೆರವನ್ನೂ ನೀಡಿತು . ಅವರಿಗೆ ಬೇಕಿದ್ದದ್ದು   ಅಲ್ಲಿನ ಸಂಪತ್ತು   . ಗದ್ದಾಫಿ ಅಧಿಕಾರದಲ್ಲಿ ಇದ್ದಾಗ ಅದು ಸಾಧ್ಯವಾಗಿರಲಿಲ್ಲ. ಲಿಬಿಯಾವನ್ನ ತನ್ನ  ವಶಕ್ಕೆ ಪಡೆಯಲು  ಮಾಡಿದಂತ ಕೆಲವೊಂದು  ರಾಷ್ಟ್ರಗಳ ಒಳ ಸಂಚಿಗೆ ಗದ್ದಾಫಿ  ಬಲಿಯಾದದ್ದು   ಒಂದು   ಕಹಿ  ಕನಸಿನಂತೆ  ಕಂಡು ಬರುತ್ತೆ . ಈಗ ಲಿಬಿಯಾವನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಆ ದುಷ್ಟ ಶಕ್ತಿಗಳು ಸಂಪತ್ತು ಹೊಂದಿರುವ  ಇನ್ನಷ್ಟು ರಾಷ್ಟ್ರಗಳನ್ನು  ತನ್ನ ವಶಕ್ಕೆ ಹಾಕಿಕೊಳ್ಳಲು  ಬೇರೇನಾದರೂ ಕಾರಣಗಳನ್ನ  ಹುಡುಕುವುದರಲ್ಲಿ  ಯಾವುದೇ  ಸಂದೇಹವಿಲ್ಲ .
- ನಿತಿನ್ ರೈ ಕುಕ್ಕುವಳ್ಳಿ. ರಿಯಾದ್ ( ವರದಿಗಾರರು . ವಿಕೆನ್ಯೂಸ್)

ಗಡಾಫಿ ಜೀವನದ ಕೆಲ ಮಹತ್ವಪೂರ್ಣ ಚಿತ್ರಗಳು …

ಟ್ರಿಪೋಲಿ : ಹತ್ಯೆಯಾದ ಲಿಬಿಯಾದ ಮಾಜಿ ಆಡಳಿತಾಧಿಕಾರಿ ಮಮ್ಮರ್ ಗಡಾಫಿ ಜೀವನದ ಕೆಲ ಮಹತ್ವಪೂರ್ಣ ಸಂದರ್ಭದ ಚಿತ್ರಗಳು ಇಲ್ಲಿವೆ. ನೀವೊಮ್ಮೆ ನೋಡಿ

1969ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದ ಚಿತ್ರ

No comments:

Post a Comment