ಮೈಸೂರು : ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್.ಡಿ.ಪಿ.ಐ ) ವತಿಯಿಂದ ಗುರುವಾರದಂದು ಮೈಸೂರಿನಲ್ಲಿ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಮೈಸೂರು ಹುಲಿ ಶಹೀದ್ ಎ ಮಿಲ್ಲತ್ ಹಝರತ್ ಟಿಪ್ಪು ಸುಲ್ತಾನ್ (ರ.ಅ) ರವರ ಉರೂಸ್ ಶರೀಫ್ ಅನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ ಹನ್ನೊಂದು ಗಂಟೆಗೆ ಮಿಶನ್ ಆಸ್ಪತ್ರೆ ಸರ್ಕಲ್ ನಿಂದ ಹೊರಟ ಮೆರವಣಿಗೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡರು. ಮೆರವಣಿಗೆಯಲ್ಲಿ ಟಿಪ್ಪು ಆಡಳಿತಾವಧಿಯ ಧ್ವಜಗಳನ್ನು ಹಾಗೂ ಎಸ್ .ಡಿ.ಪಿ.ಐ ಪಕ್ಷದ ಧ್ವಜಗಳನ್ನು ಹಿಡಿದ ಕಾರ್ಯಕರ್ತರ ಜೊತೆ ಟಿಪ್ಪು ವೇಷ ಧರಿಸಿದ್ದ ಪುಟಾಣಿ ಮಕ್ಕಳು ಸಹ ಗಮನ ಸೆಳೆದರು. ಮಿಶನ್ ಆಸ್ಪತ್ರೆ ಸರ್ಕಲ್ ನಿಂದ ಹೊರಟ ಈ ಮೆರವಣಿಗೆ ಅಶೋಕ ರಸ್ತೆಯ ಮೀಲಾದ್ ಬಾಗ್ ಸರ್ಕಲ್ ನಲ್ಲಿ ಕೊನೆಗೊಂಡಿತು.
ಕಾರ್ಯಕ್ರಮದಲ್ಲಿ ಎಸ್.ಡಬ್ಲ್ಯೂ.ಸಿ ಯ ಜನಾಬ್ ಶಬೀರ್ ಮುಸ್ತಫಾ , ಎಸ್.ಡಿ.ಪಿ.ಐ ಮೈಸೂರು ಜಿಲ್ಲಾಧ್ಯಕ್ಷರಾದ ಮಹಮ್ಮದ್ ಫೈಸಲ್ , ಕಾರ್ಯದರ್ಶಿ ಮತೀನ್ ಬೇಗ್ , ಖಜಾಂಚಿ ಫಜಲುಲ್ಲಾ , ಎಸ್.ಡಿ.ಪಿ.ಐ ಚಾಮರಾಜ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ತಬ್ರೀಜ್ ಸೇಟ್ , ೩೯ ನೇ ವಾರ್ಡಿನ ಅಧ್ಯಕ್ಷ ಇಕ್ಬಾಲ್ , ಪಿ.ಎಫ್.ಐ ಅಧ್ಯಕ್ಷ ಅತಾವುಲ್ಲಾ ಪಾಲ್ಗೊಂಡಿದ್ದರು . ಟಿಪ್ಪು ಜಯಂತಿಯನ್ನು ಸರ್ಕಾರ ರಜಾ ದಿನವನ್ನಾಗಿ ಘೋಷಣೆ ಮಾಡಬೇಕು ಮತ್ತು ರಾಜ್ಯದ ಯಾವುದಾದರೂ ವಿಮಾನ ನಿಲ್ಧಾಣವೊಂದಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
No comments:
Post a Comment