Powered By Blogger

Saturday, 29 October 2011

BMW ಕಂಪೆನಿಯಿಂದ ಎಲೆಕ್ಟ್ರಿಕ್ ಸ್ಕೂಟರ್


ದುಬೈ : ಜಗತ್ತಿನ ಖ್ಯಾತ ವಾಹನ ತಯಾರಿಕಾ ಕಂಪೆನಿ ಬಿ .ಎಂ. ಡಬ್ಲ್ಯೂ ಇ ಎಲೆಕ್ಟ್ರಾನಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುತ್ತಿದ್ದು ಅದು ಗ್ರಾಹಕರನ ಮನಗೆಲ್ಲಲಿದೆ  ಎಂಬ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ . ಈ ಸ್ಕೂಟರ್ ಬ್ಯಾಟರಿ ಅನ್ನು ಮೊಬೈಲ್ ಮಾದರಿಯಲ್ಲಿ ಮನೆಯ ವಿದ್ಯುಚ್ಚಕ್ತಿ ಮೂಲಕ ರೀಚಾರ್ಜ್ ಮಾಡಬಹುದಾಗಿದ್ದು ಮೂರು ಗಂಟೆಯ ರೀಚಾರ್ಜಿನಲ್ಲಿ ಸುಮಾರು ೬೦ ಮೈಲಿ ದೂರ ಸಂಚರಿಸಲಿದೆ.
ಗ್ರಾಮೀಣ ಪ್ರದೇಶದ ಚಿಕ್ಕಪುಟ್ಟ ರಸ್ತೆಯಲ್ಲಿ ಸಂಚರಿಸುವ ಗ್ರಾಹಕರಿಗೆ ಈ ಸ್ಕೂಟರ್ ಹೆಚ್ಚು ಉಪಕಾರಿಯಾಗಲಿದ್ದು ಅವರನ್ನು ಗಮನದಲ್ಲಿಟ್ಟು ಇದನ್ನು ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿದೆ. ಸ್ಕೂಟರ್ ನಲ್ಲಿ ಎಲ್ .ಸಿ .ಡಿ ಸ್ಕ್ರೀನ್ ಇದ್ದು ಹಿಂಬದಿಯ ದೃಶ್ಯಗಳು ಅದರಲ್ಲಿ ಮೂಡಿಬರಲಿವೆ. ಈ ಕಾರಣದಿಂದ ಸೈಡ್ ಮಿರರ್ ಬಳಸುವ ಅವಶ್ಯಕತೆ ಇರುವುದಿಲ್ಲ. ಎಲ್.ಸಿ.ಡಿ ಮುಖಾಂತರವೇ ಸ್ಕೂಟರಿನ ವೇಗ , ಬ್ಯಾಟರಿ ಸಾಮರ್ಥ್ಯ ಹಾಗೂ ಇತರ ಮಾಹಿತಿಗಳು ಮೂಡಿಬರಲಿವೆ.

No comments:

Post a Comment