ಮುಂಬೈ : ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿ ಹಲವು ಸಮಯ ಜೈಲು ಕಂಬಿಯ ಹಿಂದೆ ಇದ್ದ ಹಿಂದಿ ಚಿತ್ರ ನಟ ಶೈನಿ ಆಹುಜಾ ಜಾಮೀನಿನ ಮೇಲೆ ಬಿಡುಗಡೆ ಆಗಿ ಬಂದ ನಂತರ ಈಗ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿದ್ದು ಶೈನಿ ಅಹುಜಾ ನಟಿಸುತ್ತಿರುವ ಹೊಸ ಚಿತ್ರ ” ಗೂಸ್ಟ್ “ ಚಿತ್ರ ದ ನಾಯಕಿ ಸಯಾಲಿ ಭಗತ್ ಶೈನಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ . ಶೂಟಿಂಗ್ ಸಂದರ್ಭದಲ್ಲಿ ವಿನಾ ಕಾರಣ ನನ್ನ ಮೈ ಮುಟ್ಟೋದು ಅಸಭ್ಯ ರೀತಿ ಯಲ್ಲಿ ವರ್ತಿಸಿ ತನಗೆ ಮಾನಸಿಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅಪಾದಿಸಿದ್ದಾರೆ.
ಈ ಘಟನೆ ಏಪ್ರಿಲ್ ನಲ್ಲೇ ನಡೆದಿದ್ದು ವಿಷಯ ತಿಳಿದ ಅಹುಜಾ ಹೆಂಡತಿ ತನಗೆ ಫೋನ್ ಮಾಡಿ ಈ ವಿಚಾರವನ್ನು ಪೊಲೀಸರಿಗೆ ಹಾಗೂ ಮಾಧ್ಯಮದವರಿಗೆ ತಿಳಿಸಬಾರದು ಎಂದು ಬೇಡಿಕೊಂಡಳು . ಹಾಗೇ ನಾನು ಇದುವರೆಗೂ ಸುಮ್ಮನಿದ್ದೆ . ಆದರೆ ಅಹುಜಾ ಉಪಟಳ ಜಾಸ್ತಿ ಆಯಿತು . ಅದಕ್ಕಾಗಿ ಈಗ ಮಾಧ್ಯಮದ ಮುಂದೆ ಹೇಳಿಕೊಂಡೆ ಎಂದಿದ್ದಾರೆ .ನಂತರ ಅಹುಜಾ ಹೆಂಡತಿ ಅನುಪಮ ತನಗೆ ಫೋನ್ ಮಾಡಿ ಬೆದರಿಕೆ ಒಡ್ಡಿದ್ದಾಳೆ ಎಂದು ಆರೋಪಿಸಿದ್ದಾಳೆ . ಹಿಂದಿನ ಪ್ರಕರಣ ದಲ್ಲಿ ಪತಿ ಯ ವಿರುದ್ಧವಾಗಿದ್ದ ಅನುಪಮ ಈ ವಿಚಾರದಲ್ಲಿ ತನ್ನ ಪತಿ ಭಾಗಿಯಾಗಿಲ್ಲ ಎಂದು ಪತಿಯ ಪರವಾಗಿ ನಿಂತಿದ್ದಾಳೆ .
ಇಪ್ಪತ್ತೇಳರ ಹರೆಯದ ಸಯಾಲಿ ಭಗತ್ ಆರೋಪ ಇಷ್ಟಕ್ಕೇ ನಿಂತಿಲ್ಲ. ಬಾಲಿವುಡ್ ಚಿತ್ರರಂಗಕ್ಕೆ ನಾನು ಪ್ರವೇಶ ಮಾಡುವಾಗ ನನ್ನ ವಯಸ್ಸು ಇಪ್ಪತ್ತಾಗಿತ್ತು. ಈ ಏಳು ವರ್ಷದಲ್ಲಿ ನಾನು ಅನೇಕ ರೀತಿಯ ಲೈಂಗಿಕ ಕಿರುಕುಳವನ್ನು ಇಲ್ಲಿ ಎದುರಿಸಿರುವುದಾಗಿ ಸಹ ಹೇಳಿಕೊಂಡಿದ್ದಾಳೆ. ಈ ಕಾರಣಕ್ಕಾಗಿ ನೊಂದು ನಾನು ಇನ್ನು ಮುಂದೆ ಚಿತ್ರರಂಗದಿಂದ ವಿದಾಯ ಹೇಳುವುದಾಗಿಯೂ ಹೇಳಿದ್ದಾಳೆ . ಆಕೆಯ ಪ್ರಕಾರ ಟೀನು ವರ್ಮಾ ಅವರ ದಿಸ್ ವೀಕೆಂಡ್ ಚಿತ್ರ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾನು ಅವರ ಆಶೀರ್ವಾದ ಪಡೆಯಲು ಅವರ ಕಾಲಿಗೆ ಬಿದ್ದಾಗ ಅಮಿತಾಬ್ ನನ್ನ ಎದೆಗೆ ಕೈ ಹಾಕಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾಳೆ. ಎಪ್ಪತ್ತು ವರ್ಷದ ನನ್ನ ಅಜ್ಜನ ವಯಸ್ಸಿನ ಈ ನಟನ ವರ್ತನೆ ನನಗೆ ಒಂದು ರೀತಿಯಲ್ಲಿ ಆಘಾತ ಉಂಟು ಮಾಡಿತು ಎಂದಿದ್ದಾಳೆ . ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಸಹ ನನ್ನನ್ನು ಚಿತ್ರದ ಕುರಿತಾಗಿ ಮಾತುಕತೆಗೆ ಕಚೇರಿಗೆ ಕರೆದು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ . ಈ ರೀತಿಯ ಹಲವು ಕೆಟ್ಟ ಅನುಭವಗಳ ಕಾರಣ ಬಾಲಿವುಡ್ ಚಿತ್ರರಂಗದಿಂದ ದೂರ ಹೋಗುವುದಾಗಿ ಹೇಳಿದ್ದಾಳೆ .
No comments:
Post a Comment