ಜಿದ್ದಾ:ಪವಿತ್ರ ಹಜ್ ಹತ್ತಿರ ಬರುತ್ತಿದ್ದಂತೆ ಸೌದಿ ಅರೇಬಿಯಾದಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನೂ ಇಲ್ಲಿನ ಸರಕಾರ ಮಾಡುತ್ತಿದೆ . ಜಗತ್ತಿನ ವಿವಿಧ ದೇಶಗಳಿಂದ ಬರುವ ಹಜ್ ಯಾತ್ರರ್ತಿಗಳ ಸಂಖ್ಯೆ ಹೆಚ್ಚಿರುದರಿಂದ ಸೌದಿ ಪೊಲೀಸರಿಗೆ ಅನುಕೂಲವಾಗುವಂತ ತ್ರಿಚಕ್ರ ವಾಹನವನ್ನ ಸೌದಿ ಸರಕಾರ ನೀಡುತ್ತಿದೆ. ಇದರ ಹೆಸರು T3 Motion series electric standup vehicle (ESV) ಎಂದಾಗಿದೆ.
ಈ ವಾಹನದಲ್ಲಿ ಲ್ಯಾಪ್ ಟಾಪ್ ಸೌಲಬ್ಯ ಲೈಟಿಂಗ್, ಅಲಾರಂ ವ್ಯವಸ್ತೆ ಇದ್ದೂ ಗಂಟೆ ಗೆ ೩೫ ಕೀ ಮೀ ಚಲಿಸುವ ಈ ವಾಹನ ಆಧುನಿಕ ಸೌಲಬ್ಯಗಳನ್ನು ಒಳಗೊಂಡಿದ್ದು ಈ ವಾಹನ ವಿಶೇಷತೆ. ಇದನ್ನು California-based US ಕಂಪನಿ ತಾಯರಿಸಲ್ಪಟ್ಟ ಈ ತ್ರಿಚಕ್ರ ವಾಹನವನ್ನು ಸೌದಿ ಅರೇಬಿಯಾ ದ ಪ್ರತಿಷ್ಟಿತ ಕಂಪೆನಿಯೊಂದಲ್ಲಾದ Balubaid Automotive ಕಂಪನಿಯ ಅಬೂಬಕ್ಕರ್ ಒಮರ್ ಬಾಲೂ ಬೈದ್ ಅವರು ಈವಾಗಲೇ ೨೦ ವಾಹನಗಳನ್ನು ಸೌದಿ ಅರೇಬಿಯಾ ಕ್ಕೆ ಆಮದಿಸಿದ್ದಾರೆ.
ಈ ವಾಹನಗಳು ಆದಷ್ಟು ಬೇಗ ಜಿದ್ಧಾ ಇಸ್ಲಾಮಿಕ್ ಪೋರ್ಟ್ ತಲುಪಲಿದೆ ಎಂದುಅಬೂಬಕ್ಕರ್ ಒಮರ್ ಬಾಲೂ ಬೈದ್ ಅವರು ತಿಳಿಸಿದ್ದಾರೆ . ಹಜ್ಜ್ ಹೊತ್ತಿನಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ಎಲ್ಲಾ ತಯಾರಿಯನ್ನ ಸೌದಿ ಸರಕಾರ ನಡೆಸುತ್ತಿದೆ ಎಂದು ಸೌದಿ ಮೂಲಗಳಿಂದ ತಿಳಿದು ಬಂದಿದೆ .
No comments:
Post a Comment