ಜಿದ್ದಾ : ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಐವರು ಭಾರತೀಯ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಮೃತ ಪಟ್ಟಿದ್ದಾರೆ.ಈ ಪೈಕಿ ನಾಲ್ವರು ಭಾರತೀಯ ಹಜ್ ಸಮಿತಿಯಿಂದ ಬಂದಿದ್ದು ಮತ್ತೊಬ್ಬರು ಖಾಸಗಿ ಪ್ರವಾಸ ನಡೆಸುವ ಸಂಸ್ಥೆಯಿಂದ ಬಂದವರು ಎಂದು ಭಾರತೀಯ ದೂತಾವಾಸ ಕಚೇರಿ ಮಂಗಳವಾರ ಸಂಜೆ ತಿಳಿಸಿದೆ.ಪವಿತ್ರ ಹಜ್ ಯಾತ್ರೆಗೆ ಭಾರತದಿಂದ ಇಲ್ಲಿಗೆ ಒಟ್ಟು 42,929 ಯಾತ್ರಾರ್ಥಿಗಳು ಬಂದಿದ್ದು . ಇವರಲ್ಲಿ 7,852 ಮಂದಿ ಮೆಕ್ಕಾ ಪಟ್ಟಣದಲ್ಲಿ ವಾಸವಾಗಿ ಉಳಿದ 35,073 ಯಾತ್ರಾರ್ಥಿಗಳು ಮದೀನಾದಲ್ಲಿ ವಾಸವಾಗಿದ್ದಾರೆ .
No comments:
Post a Comment