ನವದೆಹಲಿ : ಅಣ್ಣಾ ಹಜಾರೆ ತಂಡದ ಸದಸ್ಯ , ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೇಲೆ ಹಲ್ಲೆ ನಡೆಸಿ ಸಿಕ್ಕಿಬಿದ್ದ ಆರೋಪಿ ಇಂದರ್ ವರ್ಮಾ ತನಿಖೆಯ ವೇಳೆ ತಾನು ಶ್ರೀರಾಮ ಸೇನೆಯ ದೆಹಲಿ ವಿಭಾಗದ ಅಧ್ಯಕ್ಷ ಎಂದು ಹೇಳಿಕೊಂಡಿದ್ದಾನೆ . ದೆಹಲಿ ನಿವಾಸಿಯಾಗಿರುವ ಇಂದರ್ ವರ್ಮಾ ತಾನು ಭಗತ್ ಸಿಂಗ್ ಕ್ರಾಂತಿ ಸೇನೆಯ ಅಧ್ಯಕ್ಷ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಜೊತೆ ಸೇರಿ ಈ ದಾಳಿ ನಡೆಸಿದ್ದು ಕಾಶ್ಮೀರ ಕುರಿತಾದ ಭೂಷಣ್ ಹೇಳಿಕೆಗೆ ಪ್ರತಿಯಾಗಿ ಈ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ .
ದಾಳಿಯ ನಂತರ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ನಂತರ ಪೊಲೀಸರಿಗೆ ಹೇಳಿಕೆ ನೀಡಿದ ಭೂಷಣ್ ಆನಂತರ ಪತ್ರಿಕಾಗೋಷ್ಠಿ ನಡೆಸಿ ದಾಳಿಗೆ ಕಾರಣರಾದ ಶ್ರೀರಾಮ ಸೇನೆ , ನೂತನ ಭಗತ್ ಸಿಂಗ್ ಕ್ರಾಂತಿ ಸೇನೆ ಹಾಗೂ ಈ ರೀತಿಯ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದರು. ತನ್ನ ಮೇಲೆ ದಾಳಿ ನಡೆಸಿದ ಒಬ್ಬ ಆರೋಪಿ ಈಗಾಗಲೇ ಪೋಲೀಸರ ವಶದಲ್ಲಿದ್ದು ದಾಳಿಗೆ ಕಾರಣರಾದ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಭೂಷಣ್ ತಿಳಿಸಿದರು .
No comments:
Post a Comment