ಟೆಕ್ಸಾಸ್ : ತನ್ನ ಫೇಸ್ ಬುಕ್ ಪುಟದಲ್ಲಿ ತನ್ನ ತಾಯಿಯ ಮರಣದ ವಾರ್ಷಿಕ ಅನುಸ್ಮರಣೆಯ ಕುರಿತಾದ ಬರೆದ ಸಂದೇಶವನ್ನು ಲೈಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮೆಕ್ಸಿಕೋ ನಗರದಿಂದ ವರದಿಯಾಗಿದೆ. ಮೂವತ್ತಾರು ವರ್ಷದ ಬೆನಿಟೊ ಅಪಾಲಿನಾರ್ ಎಂಬ ಈ ವ್ಯಕ್ತಿ ತೀರಿಕೊಂಡ ತನ್ನ ತಾಯಿಯ ನೆನೆಪಿನಲ್ಲಿ ಆಕೆಯ ನಿಧನದ ವಾರ್ಷಿಕೋತ್ಸವದಂದು ತನ್ನ ಫೇಸ್ ಬುಕ್ ಪುಟದಲ್ಲಿ ಸಂದೇಶ ಬರೆದಿದ್ದ. ಈ ಸಂದೇಶವನ್ನು ಆತನ ಅನೇಕ ಮಿತ್ರರು ಲೈಕ್ ಮಾಡಿದ್ದರು.
ಆದರೆ ಆತನ ಪತ್ನಿ ಮಾತ್ರ ಈ ಸಂದೇಶವನ್ನು ನೋಡಿಯೂ ಲೈಕ್ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಆತ ಇಡೀ ಫೇಸ್ ಬುಕ್ ಗೆಳೆಯರ ಹಿಂಡೇ ತನ್ನ ಸಂದೇಶವನ್ನು ಲೈಕ್ ಮಾಡಿದೆ. ಆದರೆ ನೀನು ಮಾತ್ರ ಬೇಕೆಂದೇ ನನ್ನ ತಾಯಿಯ ಮೇಲಿನ ದ್ವೇಷದಿಂದ ಲೈಕ್ ಮಾಡಿಲ್ಲ ಎಂದು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆತನ ಪತ್ನಿ ಮೆಕ್ಸಿಕೋ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಈ ದಂಪತಿಗಳು ಮದುವೆಯಾಗಿ ಈಗಾಗಲೇ ಹದಿನೈದು ವರ್ಷವಾಗಿದೆ. ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.
No comments:
Post a Comment