Powered By Blogger

Wednesday, 26 October 2011

ಪ್ರವಾಸಿ ಇಂಗ್ಲೆಂಡ್ ವಿರುದ್ದ ಸರಣಿ ಕ್ಲೀನ್‌ಸ್ವೀಪ್‌ ಮಾಡಿ ಸೇಡು ತೀರಿಸಿ ಕೊಂಡ ಭಾರತ

ವಿಜಯದ ಸಂಭ್ರಮದಲ್ಲಿ ಟೀಂ ಇಂಡಿಯಾ..
ಕೋಲ್ಕತಾ : ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ದ ಸರಣಿಯ ಕೊನೆಯ ಪಂದ್ಯವನ್ನೂ ಗೆಲ್ಲುವ ಮೂಲಕ ಟೀಂ ಇಂಡಿಯಾದ ಕ್ಲೀನ್‌ಸ್ವೀಪ್‌ ಕನಸು ನನಸಾಗಿದೆ. ಸತತ ಐದೂ ಪಂದ್ಯದಲ್ಲೂ ದಾಖಲಿಸಿದ ಈ ಅಮೋಘ ಗೆಲುವಿನೊಂದಿಗೆ ಧೋನಿ ಪಡೆ ಕಳೆದ ಇಂಗ್ಲಂಡ್‌ ಪ್ರವಾಸದಲ್ಲಿ ಅನುಭವಿಸಿದ್ದ ಮುಖಭಂಗಕ್ಕೆ ಮುಯ್ಯಿ ತೀರಿಸಿಕೊಂಡಿದೆ.
ಸರಣಿ ಶ್ರೇಷ್ಟ ಧೋನಿ ಬ್ಯಾಟಿಂಗ್ ಭಂಗಿ.
ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ಸಾಗಿದ ಮುಖಾಮುಖೀಯಲ್ಲಿ ಆಲ್‌ರೌಂಡ್‌ ನಿರ್ವಹಣೆ ತೋರಿದ ಭಾರತ ತಂಡ ಆಂಗ್ಲರನ್ನು 95 ರನ್‌ ಅಂತರದಿಂದ ಪರಾಭವಗೊಳಿಸಿದೆ. ಟಾಸ್‌ ಸೋತು ಬ್ಯಾಟಿಂಗಿಗೆ ಇಳಿದ ಭಾರತ ತಂಡ ಮಧ್ಯಮ ಸರದಿಯ ಕುಸಿತದ ನಡುವೆ ನಾಯಕ ಧೋನಿ ಅವರ ಜವಾಬ್ದಾರಿಯುತ (69 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಿತ ಅಜೇಯ 75 ರನ್‌) ಆಟದೊಂದಿಗೆ ನಿಗದಿತ ೫೦ ಓವರ್ ಗಳಲ್ಲಿ ೮ ವಿಕೆಟಿಗೆ ೨೭೧ ರನ್‌ ಪೇರಿಸಿತು.
೨೭೨ ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲಂಡ್‌ ತಂಡ ಭರ್ಜರಿ ಆರಂಭ ಕಂಡರೂ ಅನಂತರ ಭಾರತೀಯ ಸ್ಪಿನ್ನರ್ ಗಳ ಬೌಲಿಂಗಿಗೆ ತತ್ತರಿಸಿ ೩೭ ಓವರ್ ಗಳಲ್ಲಿ ಕೇವಲ ೧೭೬ ರನ್ನಿಗೆ ಸರ್ವಪತನ ಕಂಡಿತು. ರವೀಂದ್ರ ಜಡೇಜ ೩೩ ರನ್ನಿಗೆ ೪ ವಿಕೆಟ್‌ ಕಿತ್ತು ಆಂಗ್ಲರಿಗೆ ಕಡಿವಾಣ ಹಾಕಿದರೆ, ಆರ್. ಅಶ್ವಿ‌ನ್‌ ೩ ವಿಕೆಟ್‌ ಪಡೆದರು.
ಪಂದ್ಯಶ್ರೇಷ್ಟ ಜಡೇಜ.
ಇಂಗ್ಲಂಡ್‌ ತಂಡ ಮೊದಲ ೨೦ ಓವರ್ ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ೧೨೯ ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ೨೧ನೇ ಓವರ್ ಎಸೆದ ಯುವ ವೇಗಿ ವರುಣ್‌ ಆರೋನ್‌ ಕುಕ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವುದರೊಂದಿಗೆ ಆಂಗ್ಲರ ಕುಸಿತಕ್ಕೆ ನಾಂದಿ ಹಾಡಿದರು. ನಂತರ ಸ್ಪಿನ್ನರ್ ಗಳಾದ ಜಡೇಜ-ಅಶ್ವಿ‌ನ್‌ ಜೋಡಿಗೆ ನಲುಗಿದ ಪ್ರವಾಸಿಗಳ ಉಳಿದ ಹತ್ತು ವಿಕೆಟ್‌ಗಳು ಕೇವಲ ೪೭ ರನ್‌ ಅಂತರದಲ್ಲಿ ಉರುಳಿದವು.
ನಾಲ್ಕು ವಿಕೆಟ್ ಹಾಗೂ ೨೧ ರನ್ ಗಳಿಸಿದ್ದ ರವಿಂದ್ರ ಜಡೇಜ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರೆ, ಸರಣಿಯುದ್ದಕ್ಕೂ ನಾಯಕನ ಆಟವಾಡಿದ ಧೋನಿ ಸರಣಿ ಶ್ರೇಷ್ಟ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದೇ ೨೯ ರ ಶನಿವಾರ ಇಂಗ್ಲೆಂಡ್ ವಿರುದ್ದದ ಏಕೈಕ T-೨೦ ಪಂದ್ಯ ನಡೆಯಲಿದೆ.

ರಸ್ತೆಗೆ ಬರಲಿದೆ ಮಹೀಂದ್ರ ಮೋಟರ್ಸ್ ರವರ ಹೊಸ XUV500


ಮಹೀಂದ್ರ ಮೋಟರ್ಸ್ ಕಂಪನಿಯವರಿಂದ ರಸ್ತೆಗೆ ಬರಲಿದೆ ಹೊಸ ಸ್ಪೋರ‍್ಟ್ ಯುಟಿಲಿಟಿ ವಾಹನ XUV500. ಈಗಾಗಲೇ ಭಾರಿ ಬೇಡಿಕೆಯಿಂದ ಆನ್‍ಲೈನ್ ಬುಕ್ಕಿಂಗ್ ಮುಗಿದು ಹೊಸ ಬುಕ್ಕಿಂಗ್ ಸ್ವೀಕರೀಸುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ತಮ್ಮ  ಬೊಲೆರೋ, ಸ್ಕೋರ‍್ಫಿಯೋ ಮಾಡೆಲ್ ನ ಬೃಹತ್ ಬೇಡಿಕೆಯ ನಂತರ ತನ್ನ ಹೊಸ XUV5OO ಆವೃತ್ತಿಯು ಶೀಘ್ರ ರಸ್ತೆಗೆ ಬರಲಿದೆ. ಈ ಮಾಡೆಲ್ ಗೆ ಚಿರತೆಯ ಕೆಲವು ಲಕ್ಷಣಗಳಿಂದ ನಿರ್ಮಿಸಲಾಗಿದೆ. ಇದರ ಬೆಲೆ ಸುಮಾರು ರೂ 11 ಲಕ್ಷವಾಗಲಿದೆ.

ಉತ್ತರ ಭಾರತೀಯರು ಮತ್ತು ನಿರುಪಮ್ ತಾಕತ್ತಿದ್ದರೆ ಮುಂಬೈ ಬಂದ್ ಮಾಡಿ ತೋರಿಸಲಿ – ಶಿವಸೇನೆ ಸವಾಲು



ಮುಂಬೈ : ಉತ್ತರ ಭಾರತೀಯರು ಮುಂಬೈನ ದಿನನಿತ್ಯದ ಸೇವೆ ನೀಡುವ ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದು ಅವರೇನಾದರೂ ವಿಶ್ರಾಂತಿ ಪಡೆಯಲು ಮನಸ್ಸು ಮಾಡಿ ಕೆಲಸ ಸ್ಥಗಿತಗೊಳಿಸಿದರೆ ಮುಂಬೈ ಬಂದ್ ಆಗಲಿದೆ ಎಂಬ ಕಾಂಗ್ರೆಸ್ ಸಂಸದ ಸಂಜಯ್ ನಿರುಪಮ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಕಾರ್ಯಾಧ್ಯಕ್ಷ ಉದ್ಭವ್ ಠಾಕ್ರೆ ಸಂಜಯ್ ನಿರುಪಮ್ ಮತ್ತು ಅವರ ಕಾಂಗ್ರೆಸ್ ಪಕ್ಷ ಮತ್ತು ಉತ್ತರ ಭಾರತೀಯರಿಗೆ ತಾಕತ್ತಿದ್ದರೆ ಮುಂಬೈ ಬಂದ್ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ನಿರುಪಮ್ ಹೇಳಿಗೆ ಖಂಡನೆ ವ್ಯಕ್ತಪಡಿಸಿದ ಅವರು ನಿರುಪಮ್ ಏನಾದರೂ ಮುಂಬೈ ಬಂದ್ ಮಾಡಲು ಯತ್ನಿಸಿದರೆ ಅವರಿಗೆ ಶಿವಸೇನೆ ತಕ್ಕ ಪಾಠ ಕಲಿಸಲಿದೆ ಎಂದೂ ಸಹ ಎಚ್ಚರಿಸಿದ್ದಾರೆ. ನಿರುಪಮ್ ಹೇಳಿಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಆಕ್ಷೇಪ ವ್ಯಕ್ತಪಡಿಸಿದೆ

ದೀಪಾವಳಿಯ ಶುಭ ದಿನವಾದ ಇಂದು ದೀಪ ಹಚ್ಚಲು ಬಂದ ‘ರಾ-ಒನ್’


ಭಾರತಿಯ ಚಿತ್ರ ಲೋಕದ ಬಾದಶ ಶಾರುಖ್ ಖಾನ್ ಅಭಿನಯದ ರಾ-ಒನ್ ಚಿತ್ರ ಇಂದು ೫ ಸಾವಿರ ಚಿತ್ರ ಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆ ಗೊಂಡಿತು. ದೀಪಾವಳಿಯ ಶುಭ ದಿನವಾದ ಇಂದು  ಬಿಡುಗಡೆಗೊಂಡ ಈ ಚಿತ್ರದ ಮೊದಲ ಪ್ರದರ್ಶನವನ್ನು ಸುಮಾರು ೧೫ ಲಕ್ಷ ಜನ ವೀಕ್ಷಿಸುವರು ಎಂದು ಸಮೀಕ್ಷೆಯೊಂದು ತಿಳಿಸಿದೆ. ಬಾಡಿ ಗಾರ್ಡ್ ಚಿತ್ರದ ನಂತರ  ಅತೀ  ಹೆಚ್ಚು ಚಿತ್ರ ಮಂದಿರದಲ್ಲಿ ಬಿಡುಗಡೆ ಗೊಂಡ ಚಿತ್ರ. ರಾ ಒನ್ ದೀಪಾವಳಿ ದಿನವಾದ ಇಂದು ಬಿಡುಗಡೆಗೊಂಡ ಈ ಚಿತ್ರ ಶಾರುಖ್ ಖಾನ್ ಜೀವನದಲ್ಲಿ ದೀಪವನ್ನ ಬೆಳಗಿಸಬಹುದು ಅನ್ನೋದು ಸಿನಿ ಪ್ರಿಯರ ಮಾತು.

ಲಿಬಿಯಾವನ್ನು ಜಗತ್ತಿಗೆ ತೋರಿಸಿದ ಗದ್ದಾಫಿ ಕುತಂತ್ರಿಗಳ ಸಂಚಿಗೆ ಬಲಿಯಾದರೇ ?

 
೧೯೫೦  ರಲ್ಲಿ ಲಿಬಿಯಾ ಜಗತ್ತಿನ ಬಡ ರಾಷ್ಟ್ರಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿತ್ತು . ಆದರೆ  ಇಂದು ೨೦೧೧ ರಲ್ಲಿ   ಜಗತ್ತು  ಲಿಬಿಯಾ  ಕಡೆ ನೋಡುತ್ತಿದೆ .  ವಿಶ್ವದ ಶ್ರೀಮಂತ  ರಾಷ್ಟ್ರಗಳ  ಸಾಲಿನಲ್ಲಿ  ಲಿಬಿಯಾ  ಕೂಡ ಬಂದು ನಿಂತಿದೆ  . ಈಗಿನ ಲಿಬಿಯಾದ  ಯಾವೊಬ್ಬ ವ್ಯಕ್ತಿಯೂ ಬಡವನಲ್ಲ . ಈ ಬದಲಾವಣೆಗೆ ಗದ್ದಾಫಿ ಅನ್ನೋ ಸರ್ವಾಧಿಕಾರಿ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ .  ಗದ್ದಾಫಿಗೆ ಒಂದು ಕಾಲದಲ್ಲಿ  ತಲೆ ಬಾಗುತ್ತಿದ್ದ ಅಲ್ಲಿನ ಜನ  ಒಂದು ದಿನ  ಗದ್ದಾಫಿಯ ತಲೆಯನ್ನೇ   ತೆಗೆಯುತ್ತಾರೆ  ಅನ್ನೋದು  ಯಾರೂ  ಊಹಿಸಿರಲು ಸಾಧ್ಯವಿಲ್ಲ.
ಹಾಗಾದರೆ ಗದ್ದಾಫಿ ಅಷ್ಟೊಂದು ಕ್ರೂರಿಯೇ ? ಅಥವಾ ಸ್ವಾರ್ಥಿಯೇ ?  ಹಾಗೇನಾದರೂ ಆಗಿದ್ದರೆ ಲಿಬಿಯಾ  ಅಷ್ಟೊಂದು ಶ್ರೀಮಂತ ರಾಷ್ಟ್ರವಾಗಲು ಸಾಧ್ಯವೇ ? ಈಗ ಎಲ್ಲರೂ   ಗದ್ದಾಫಿಯನ್ನು ದ್ವೇಷಿಸುವವರೇ ಜೊತೆಗೆ ದೂಷಿಸುವವರೇ. ಆದರೆ  ನೇರ ದೃಷ್ಟಿಯಿಂದ ನೋಡಿದರೆ ಲಿಬಿಯಾದ  ಇಷ್ಟೊಂದು  ಶ್ರೀಮಂತಿಕೆಗೆ   ಗದ್ದಾಫಿ ಆಡಳಿತ ಕಾರಣ . ಗದ್ದಾಫಿ   ಸರಕಾರ  ಅಲ್ಲಿ ಮಾಡಿರೋ ಕಾನೂನು  ಹಾಗೂ ಜನರಿಗೆ ನೀಡಿರುವ ಸೌಲಭ್ಯಗಳನ್ನು ನೋಡಿದರೆ ಗದ್ದಾಫಿ   ಕ್ರೂರಿ ,  ಸರ್ವಾಧಿಕಾರಿ   ಅನ್ನೋದು  ಊಹಿಸಲು ಸಾದ್ಯವಿಲ್ಲ .


ಲಿಬಿಯಾದ ಯಾವದೇ ಒಬ್ಬ ವ್ಯಕ್ತಿ  ಒಂದು ಮನೆ ಕಟ್ಟಬೇಕಿದ್ದರೆ  ಅದರ ಖರ್ಚಿನ ಅರ್ಧದಷ್ಟು ಹಣವನ್ನು ಗದ್ದಾಫಿ  ಸರ್ಕಾರ ನೀಡುತ್ತಿತ್ತು . ಹೊಸದಾಗಿ  ಮದುವೆಯಾದ ದಂಪತಿಗಳಿಗೆ  ಸರ್ಕಾರದ ವತಿಯಿಂದ ೫೦೦೦೦ ಡಾಲರ್ ಹಣವನ್ನು ಅವರ ಜೀವನೋಪಾಯಕ್ಕಾಗಿ ನೀಡಲಾಗುತ್ತಿತ್ತು . ವಿದ್ಯಾಭ್ಯಾಸ ಉಚಿತವಾಗಿ ನೀಡಿತ್ತು , ವಿದ್ಯುಚಕ್ತಿ ಬಳಕೆಗೆ ಯಾವುದೇ ರೀತಿಯಲ್ಲಿ ಹಣ ಪಾವತಿಸ ಬೇಕಿರಲಿಲ್ಲ. ಅದೂ ಸಂಪೂರ್ಣ ಉಚಿತವಾಗಿತ್ತು. ಸರಕಾರವನ್ನ  ಪ್ರಶ್ನಿಸುವ ಅಧಿಕಾರವನ್ನು ಸಹ ಗದ್ದಾಫಿ ಜನರಿಗೆ  ನೀಡಿದ್ದರು . ಇನ್ನು   ಲಿಬಿಯಾದ ಯಾವನೇ ಒಬ್ಬ ಪ್ರಜೆಗೆ  ಸಾಲ  ಅನ್ನೋದು  ಇಲ್ಲ  . ಸಾಲ  ಹೊಂದಿರದ ಜನರನ್ನ  ಹೊಂದಿರುವ ರಾಷ್ಟ್ರ  ಲಿಬಿಯಾ . ವಿದೇಶಗಳಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಹೋಗುವವರಿಗೆ ವಿದ್ಯಾಭ್ಯಾಸ ಉಚಿತವಾಗಿತ್ತು. ಹಾಗೆ ಹೋಗುವವರಿಗೆ ಮತ್ತು ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಭತ್ಯೆ ನೀಡಲಾಗುತ್ತಿತ್ತು.ಈ ರೀತಿ ಇನ್ನೂ  ಅನೇಕ ಸವಲತ್ತುಗಳನ್ನ  ಜನರಿಗೆ ಗದ್ದಾಫಿ   ನೀಡಿದ್ದರು  .
ತನ್ನ ಜನರಿಗೆ ಇಷ್ಟೊಂದು ಸವಲತ್ತುಗಳನ್ನು  ನೀಡಿದ ಗದ್ದಾಫಿ ಕ್ರೂರಿಯೇ ?  ಆದರೆ ಗದ್ದಾಫಿಗೆ ತನ್ನದೇ ಆದ  ಕೆಲವೊಂದು ನ್ಯೂನ್ಯತೆಗಳು ಇದ್ದವು .  ನ್ಯೂನ್ಯತೆಗಳು  ಇಲ್ಲದ ಮನುಷ್ಯ   ಜಗತ್ತಿನಲ್ಲಿ  ಇರಲು ಸಾದ್ಯವೇ ?   ಗದ್ದಾಫಿಯ ಸುತ್ತ  ಹುಡುಗಿಯರು  ಅಂಗರಕ್ಷಕರಾಗಿ ಇರುತ್ತಿದ್ದರು , ಗದ್ದಾಫಿ ಆಡಂಬರದ ಜೀವನ  ನಡೆಸುತ್ತಿದ್ದರು . ಹೀಗೆ  ಕೆಲವು ಆಪಾದನೆ ಗಳು  ಇದ್ದವು  . ಇದರ ಲಾಭವನ್ನು ಪಡೆದ  ಕೆಲವರು  ಗದ್ದಾಫಿಯನ್ನ ಕ್ರೂರಿ  ಹಿಂಸಾ ಪ್ರಿಯ ಎಂದು ಅಲ್ಲಿನ ಜನರ ತಲೆ ಕೆಡಿಸಿ  ಆತನ ವಿರುದ್ದ ಅಲ್ಲಿನ ಜನ  ತಿರುಗಿ ಬೀಳುವ ರೀತಿಯಲ್ಲಿ  ಮಾಡಿದರು. ಹಾಗೆ ತಿರುಗಿ ಬಿದ್ದ ಕೆಲ ಜನಗಳಿಗೆ ವಿದೇಶೀ ಶಕ್ತಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಜೊತೆ ಗದ್ದಾಫಿ ವಿರುದ್ಧ ದಾಳಿಗೆ ವೈಮಾನಿಕ ನೆರವನ್ನೂ ನೀಡಿತು . ಅವರಿಗೆ ಬೇಕಿದ್ದದ್ದು   ಅಲ್ಲಿನ ಸಂಪತ್ತು   . ಗದ್ದಾಫಿ ಅಧಿಕಾರದಲ್ಲಿ ಇದ್ದಾಗ ಅದು ಸಾಧ್ಯವಾಗಿರಲಿಲ್ಲ. ಲಿಬಿಯಾವನ್ನ ತನ್ನ  ವಶಕ್ಕೆ ಪಡೆಯಲು  ಮಾಡಿದಂತ ಕೆಲವೊಂದು  ರಾಷ್ಟ್ರಗಳ ಒಳ ಸಂಚಿಗೆ ಗದ್ದಾಫಿ  ಬಲಿಯಾದದ್ದು   ಒಂದು   ಕಹಿ  ಕನಸಿನಂತೆ  ಕಂಡು ಬರುತ್ತೆ . ಈಗ ಲಿಬಿಯಾವನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಆ ದುಷ್ಟ ಶಕ್ತಿಗಳು ಸಂಪತ್ತು ಹೊಂದಿರುವ  ಇನ್ನಷ್ಟು ರಾಷ್ಟ್ರಗಳನ್ನು  ತನ್ನ ವಶಕ್ಕೆ ಹಾಕಿಕೊಳ್ಳಲು  ಬೇರೇನಾದರೂ ಕಾರಣಗಳನ್ನ  ಹುಡುಕುವುದರಲ್ಲಿ  ಯಾವುದೇ  ಸಂದೇಹವಿಲ್ಲ .
- ನಿತಿನ್ ರೈ ಕುಕ್ಕುವಳ್ಳಿ. ರಿಯಾದ್ ( ವರದಿಗಾರರು . ವಿಕೆನ್ಯೂಸ್)

ಗಡಾಫಿ ಜೀವನದ ಕೆಲ ಮಹತ್ವಪೂರ್ಣ ಚಿತ್ರಗಳು …

ಟ್ರಿಪೋಲಿ : ಹತ್ಯೆಯಾದ ಲಿಬಿಯಾದ ಮಾಜಿ ಆಡಳಿತಾಧಿಕಾರಿ ಮಮ್ಮರ್ ಗಡಾಫಿ ಜೀವನದ ಕೆಲ ಮಹತ್ವಪೂರ್ಣ ಸಂದರ್ಭದ ಚಿತ್ರಗಳು ಇಲ್ಲಿವೆ. ನೀವೊಮ್ಮೆ ನೋಡಿ

1969ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದ ಚಿತ್ರ