ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದೇಕೆ?
ಇಸ್ಲಾಮಿನ ವಿಮರ್ಶಕರು ಅತಿಹೆಚ್ಚಾಗಿ ಟೀಕಿಸುವ ಅನೇಕ ವಿಷಯಗಳಲ್ಲಿ ಒಂದಾಗಿದೆ ಪ್ರವಾದಿ(ಸ)ರವರ ಬಹುಪತ್ನಿತ್ವ. ಈ ರೀತಿ ಟೀಕಿಸುವ ಅವರ ಮುಖ್ಯ ಉದ್ದೇಶವು ಪ್ರವಾದಿ(ಸ)ರವರನ್ನು ಸ್ತ್ರೀ ಲಂಪಟ ಅಥವಾ ಕಾಮುಕ ಎಂಬಂತೆ ಚಿತ್ರೀಕರಿಸುವುದಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.
ಆದರೆ ವಾಸ್ತವಿಕವಾಗಿ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದಾದರೂ ಏಕೆ? ಅವರ ಬಹುವಿವಾಹದ ಹಿಂದೆ ಸಮುದಾಯದ ಉನ್ನತಿಯನ್ನು ಬಯಸುವ ಉದ್ದೇಶವೇನಾದರೂ ಇತ್ತೇ? ಅಥವಾ ಕೇವಲ ಕಾಮೋದ್ರೇಕದಿಂದ ಅವರು ಹಲವಾರು ಬಾರಿ ವಿವಾಹವಾದರೇ?
ಪ್ರವಾದಿ(ಸ)ರವರ ಬಹುಪತ್ನಿತ್ವವನ್ನು ಟೀಕಿಸುವವರಲ್ಲಿ ಹಲವರು ಪ್ರವಾದಿ(ಸ)ರವರು ಐವತ್ತು ಮದುವೆಯಾಗಿದ್ದಾರೆಂದೂ, ಇಪ್ಪತ್ತು ಮದುವೆಯಾಗಿದ್ದಾರೆಂದೂ, ಹದಿನಾರು ಮದುವೆಯಾಗಿದ್ದಾರೆಂದೂ ಹೇಳುತ್ತಾರೆ. ಆದರೆ ಪ್ರವಾದಿ(ಸ)ರವರು ಹನ್ನೆರಡು ಬಾರಿ ಮಾತ್ರವೇ ವಿವಾಹವಾಗಿದ್ದರು. ಅವರ ಮಡದಿಯರ ಹೆಸರುಗಳು ಹೀಗಿವೆ: 1. ಖದೀಜಾ ಬಿನ್ತ್ ಖುವೈಲಿದ್ 2. ಸೌದಾ ಬಿನ್ತ್ ಝಮಅಃ 3. ಆಯಿಶಾ ಬಿನ್ತ್ ಅಬೀಬಕ್ರ್ ಸಿದ್ದೀಕ್ 4. ಹಫ್ಸಾ ಬಿನ್ತ್ ಉಮರ್ ಅಲ್‌ಫಾರೂಕ್ 5. ಝೈನಬ್ ಬಿನ್ತ್ ಖುಝೈಮಃ 6. ಉಮ್ಮು ಸಲಮಾ ಹಿಂದ್ ಬಿನ್ತ್ ಉತ್ಬಾ 7. ಝೈನಬ್ ಬಿನ್ತ್ ಜಹ್‌ಶ್ 8. ಜುವೈರಿಯಾ ಬಿನ್ತ್ ಅಲ್‌ಹಾರಿಸ್ 9. ಸಫಿಯ್ಯಾ ಬಿನ್ತ್ ಹುಯಯ್ಯ್ ಇಬ್ನ್ ಅಖ್ತಬ್ 10. ಉಮ್ಮು ಹಬೀಬಾ ರಮ್ಲಾ ಬಿನ್ತ್ ಅಬೀ ಸುಫ್ಯಾನ್ 11. ಮಾರಿಯಾ ಬಿನ್ತ್ ಶಮ್‌ಊನ್ ಅಲ್‌ಮಿಸ್ರಿಯ್ಯಃ 12. ಮೈಮೂನಾ ಬಿನ್ತ್ ಅಲ್‌ಹಾರಿಸ್.
ಇವರಲ್ಲಿ ಆಯಿಶಾ(ರ)ರವರು ಮಾತ್ರ ಕನ್ಯೆಯರಾಗಿದ್ದರು. ಉಳಿದವರೆಲ್ಲರೂ ವಿಧವೆಯರೋ ವಿವಾಹ ವಿಚ್ಛೇದಿತೆಯರೋ ಆಗಿದ್ದರು. ಪ್ರವಾದಿ(ಸ)ರವರು ಮರಣಹೊಂದಿದಾಗ ಹತ್ತು ಮಂದಿ ಪತ್ನಿಯರನ್ನು ಬಿಟ್ಟಗಲಿದ್ದರು. ಖದೀಜಾ ಮತ್ತು ಝೈನಬ್ ಅವರ ಜೀವಿತಕಾಲದಲ್ಲೇ ಮೃತಪಟ್ಟಿದ್ದರು. ಮಾರಿಯಾರವರ ಹೊರತು ಉಳಿದವರೆಲ್ಲರೂ ಅರಬಿಗಳಾಗಿದ್ದರು. ಮಾರಿಯಾ ಈಜಿಪ್ಟಿನವರಾಗಿದ್ದರು ಮತ್ತು ಕ್ರೈಸ್ತರಾಗಿದ್ದರು. ಸಫಿಯ್ಯಾ ಯಹೂದಿಯಾಗಿದ್ದರು. ಉಳಿದ ಹತ್ತು ಪತ್ನಿಯರೂ ಮುಸ್ಲಿಮರಾಗಿದ್ದರು.
ಪ್ರವಾದಿ(ಸ)ರವರು ಇಷ್ಟೊಂದು ವಿವಾಹವಾಗಿರುವುದು ಯಾತಕ್ಕೆ? ಕಾಮುಕತೆಯಿಂದಲೇ? ಬಹುಶಃ ಇಂತದೊಂದು ಸಣ್ಣ ಸಂದೇಹ ನಮ್ಮಲ್ಲೇ ಅನೇಕರಿಗಿದೆ.
ಆದರೆ ವಾಸ್ತವಿಕವಾಗಿ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದು ಕಾಮುಕತೆಯಿಂದಾಗಿರಲಿಲ್ಲವೆಂದು ಅವರ ಜೀವನ ಚರಿತ್ರೆಯನ್ನು ಒಂದು ಬಾರಿಯಾದರೂ ಓದಿರುವ ವ್ಯಕ್ತಿಗೆ ಖಂಡಿತವಾಗಿಯೂ ಅನ್ನಿಸದಿರಲಾರದು. ಯಾಕೆಂದರೆ ಅವರ ಪ್ರತಿಯೊಂದು ವಿವಾಹದ ಹಿಂದೆಯೂ ಒಂದೊಂದು ಮಹಾನ್ ತ್ಯಾಗವಿತ್ತು. ಸಾಮುದಾಯಿಕ ಕ್ಷೇಮದ ಬಯಕೆಯಿತ್ತು. ಒಂದು ಸಿದ್ಧಾಂತವನ್ನು ಉಳಿಸಿ ಬೆಳೆಸುವ ಮಹತ್ವಾಕಾಂಕ್ಷೆಯಿತ್ತು. ಆದರೆ ಈ ಹಿನ್ನೆಲೆಗಳನ್ನು ಪರಾಂಬರಿಸಿ ನೋಡದವರು ಕೇವಲ ಬಾಹ್ಯ ನೋಟದಿಂದಲೇ ವಿಧಿಯನ್ನು ಜಾರಿಗೊಳಿಸಿಬಿಡುತ್ತಾರೆ.
ಪ್ರವಾದಿ(ಸ)ರವರು ಮೊಟ್ಟಮೊದಲು ವಿವಾಹವಾದಾಗ ಅವರ ಪ್ರಾಯವು 25 ಆಗಿತ್ತು. ಆದರೆ ಆಗ ಅವರು ಆರಿಸಿದ ವಧು ಯೌವನವು ತುಂಬಿ ತುಳುಕುತ್ತಿರುವ ಯುವತಿ ಆಗಿರಲಿಲ್ಲ. ಬದಲಾಗಿ ತನಗಿಂತಲೂ 15 ವರ್ಷ ಹಿರಿಯರಾಗಿದ್ದ ಓರ್ವ ವಿಧವೆಯನ್ನಾಗಿತ್ತು! ಅದೂ ಕೂಡ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದ ಮತ್ತು ಮಕ್ಕಳನ್ನೂ ಹೊಂದಿದ್ದ 40 ವರ್ಷ ಪ್ರಾಯದ ವಿಧವೆ!! ಅವರಾಗಿದ್ದರು ಖದೀಜಾ ಬಿನ್ತ್ ಖುವೈಲಿದ್. ಮೊಟ್ಟಮೊದಲನೆಯದಾಗಿ ಇಸ್ಲಾಮ್ ಸ್ವೀಕರಿಸಿದ ಸ್ತ್ರೀ.
ಈಗ ಹೇಳಿ, ಕಾಮುಕನಾದ ಯಾವನೇ ವ್ಯಕ್ತಿಯಾದರೂ ಬಿಸಿರಕ್ತವನ್ನು ಹೊಂದಿರುವ ಯೌವನದಲ್ಲಿ ಯಾವ ರೀತಿಯ ವಧುವನ್ನು ಆರಿಸುತ್ತಿದ್ದನು? ಹದಿಹರೆಯದ ಕನ್ಯೆಯನ್ನೇ? ಅಥವಾ ಮಧ್ಯವಯಸ್ಕ ಯುವತಿಯನ್ನೇ? ಅಥವಾ ಎರಡು ಬಾರಿ ವಿವಾಹವಾಗಿರುವ ವಿಧವೆಯನ್ನೇ? ನ್ಯಾಯಯುತವಾದ ಯಾವ ಕಾರಣವೂ ಇಲ್ಲದೆ ಇಸ್ಲಾಮಿನ ಪ್ರವಾದಿಯನ್ನು ಮೂದಲಿಸುವವರು ಇದಕ್ಕೆ ಉತ್ತರಿಸಬೇಕಾಗಿದೆ! ಅಲ್‌ಅಮೀನ್ (ಪ್ರಾಮಾಣಿಕ) ಅಸ್ಸಾದಿಕ್ (ಸತ್ಯಸಂಧ) ಎಂಬ ಪರ್ಯಾಯ ನಾಮಗಳಲ್ಲಿ ಮಕ್ಕಾ ನಿವಾಸಿಗಳ ಮಧ್ಯೆ ಚಿರಪರಿಚಿತರಾಗಿದ್ದ ಮತ್ತು ಅವರು ಗೌರವಾದರಗಳೊಂದಿಗೆ ಕಾಣುತ್ತಿದ್ದ ಮಕ್ಕಾದ ಕಣ್ಮಣಿಯಾಗಿದ್ದ ಮುಹಮ್ಮದ್(ಸ)ರನ್ನು ವಿವಾಹವಾಗಲು ಮಕ್ಕಾದಲ್ಲಿ ಅಂದು ನೂರಾರು ಯುವತಿಯರು ತುದಿಗಾಲಲ್ಲಿ ನಿಂತಿರುವಾಗ ಪ್ರವಾದಿ(ಸ)ರವರು ಮಧ್ಯವಯಸ್ಸನ್ನು ದಾಟಿದ ವಿಧವೆಯನ್ನು ವಿವಾಹವಾಗಿದ್ದಾದರೂ ಏಕೆ?
ಎರಡು ಬಾರಿ ವಿವಾಹವಾಗಿದ್ದ ಖದೀಜಾರನ್ನು ಪ್ರವಾದಿ(ಸ)ರವರು ವಿವಾಹವಾಗಿದ್ದೇನೋ ಸರಿ. ಆದರೆ ಅದು ಅವರ ಸಂಪತ್ತಿನ ಮೇಲಿದ್ದ ವ್ಯಾಮೋಹದಿಂದಾಗಿತ್ತು ಎಂದು ಕೆಲವರು ಇದಕ್ಕೆ ಅಪಸ್ವರ ಎತ್ತಲೂಬಹುದು! ಹಾಗಿದ್ದರೆ ಉಟ್ಟ ಬಟ್ಟೆಯನ್ನು ಬದಲಾಯಿಸುವಂತೆ ಮಡದಿಯರನ್ನು ಬದಲಾಯಿಸುತ್ತಿದ್ದ ಅಂದಿನ ಕಾಲಘಟ್ಟದಲ್ಲಿ ಆ ಸಂಪತ್ತೆಲ್ಲವನ್ನೂ ತನ್ನ ಹೆಸರಿಗೆ ಬರೆದು ಹದಿಹರೆಯದ ಯುವತಿಯರನ್ನು ವಿವಾಹವಾಗಲು ಅವರಿಗೆ ಯಾವ ಅಡ್ಡಿಯೂ ಇದ್ದಿರಲಿಲ್ಲ. ಮಾತ್ರವಲ್ಲದೆ ಅನಾಗರಿಕ ಅರಬಿಗಳ ಸಂಸ್ಕೃತಿ ಕೂಡಾ ಹಾಗೇ ಇತ್ತು.
ಆದರೆ ಅಲ್ಲಾಹನಾಣೆ ಸತ್ಯ! ಖದೀಜಾರವರು ಮರಣಹೊಂದುವವರೆಗೆ ಅರ್ಥಾತ್ ತಮಗೆ 50 ವರ್ಷ ಪ್ರಾಯವಾಗುವವರೆಗೆ 25 ವರ್ಷಗಳ ಕಾಲ ಪ್ರವಾದಿ(ಸ)ರವರು ಬೇರೊಂದು ಹೆಣ್ಣಿನ ಕುರಿತು ಕನಸಿನಲ್ಲೂ ಇಚ್ಛೆಪಟ್ಟಿರಲಿಲ್ಲ. ಮಾತ್ರವಲ್ಲದೆ ಜಗತ್ತಿಗೇ ಮಾದರೀ ಯೋಗ್ಯವಾದ ರೀತಿಯಲ್ಲಿ ಏಕಪತ್ನೀವೃತಸ್ತರಾಗಿ ಸುಮಧುರವಾದ ಯಶಸ್ವೀ ದಾಂಪತ್ಯ ಜೀವನವನ್ನು ಅವರು ಸಾಗಿಸಿದರು. ಅವರ ದಾಂಪತ್ಯವು ಎಷ್ಟು ಚೇತೋಹಾರಿಯಾಗಿತ್ತೆಂದರೆ ಅದರ ಕುರಿತು ಪ್ರವಾದಿ(ಸ)ರವರು ಪ್ರಸ್ತಾಪಿಸಿದಾಗಲೆಲ್ಲಾ ನಮಗೆ ಅಸೂಯೆಯುಂಟಾಗುತ್ತಿತ್ತೆಂದು ಆಯಿಶಾ(ರ)ರವರು ಹೇಳಿದ್ದರು. ಈಗ ಹೇಳಿ, ಕಾಮುಕನಾದ ಓರ್ವ ವ್ಯಕ್ತಿ ಒಬ್ಬಳೇ ಒಬ್ಬಳು ಅದೂ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದ, ವಿಧವೆಯಾದ, ಮಕ್ಕಳನ್ನೂ ಹೊಂದಿದ್ದ ಪತ್ನಿಯೊಂದಿಗೆ ಸುದೀರ್ಘ 25 ವರ್ಷಗಳ ದಾಂಪತ್ಯವನ್ನು ಸಾಗಿಸಲು ಸಾಧ್ಯವೇ? ಅದೂ ಕೂಡ ದಂಪತಿಗಳ ಮಧ್ಯೆ ಒಂದಿನಿತೂ ಮನಸ್ತಾಪವುಂಟಾಗದ ರೀತಿಯಲ್ಲಿ?
ಈ ದಾಂಪತ್ಯವು ಇಲ್ಲಿಗೆ ಕೊನೆಗೊಂಡಿತೇ? ಇಲ್ಲ. ತಮ್ಮ 50ನೇ ಪ್ರಾಯದಿಂದ 52ನೇ ಪ್ರಾಯದವರೆಗೆ ಪ್ರವಾದಿ(ಸ)ರವರು ಮೃತಪಟ್ಟ ತನ್ನ ಮಡದಿಯ ಶೋಕಾಚರಣೆಯಲ್ಲೇ ಕಳೆದರು!
ಪ್ರವಾದಿ(ಸ)ರವರು ತದನಂತರ ತಮ್ಮ 52ನೇ ವಯಸ್ಸಿನಿಂದ ತೊಡಗಿ 60ನೇ ವಯಸ್ಸಿನ ಮಧ್ಯಭಾಗದಲ್ಲಿ ಹನ್ನೊಂದು ಮಂದಿಯನ್ನು ವಿವಾಹವಾಗಿದ್ದರು. ಇವು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ ನಡೆದ ವಿವಾಹಗಳಾಗಿದ್ದವು ಎಂದು ಮುಂದೆ ಓದಿದರೆ ನಿಮಗೆ ತಿಳಿದುಕೊಳ್ಳಬಹುದು.
ಈಗಾಗಲೇ ಹೇಳಿದಂತೆ ಖದೀಜಾರವರ ಮರಣಾನಂತರ ಎರಡು ವರ್ಷಗಳ ಕಾಲ ಅವರು ಒಬ್ಬಂಟಿಯಾಗಿ ಜೀವಿಸಿದ್ದರು. ನಂತರ ಅವರು ಸೌದಾ ಬಿನ್ತ್ ಝಮಅಃರನ್ನು ವಿವಾಹವಾದರು. ಬಹುಶಃ ಸೌದಾರವರು ಹದಿ ಹರೆಯದ ಕನ್ಯೆಯಾಗಿರಬಹುದು ಎಂದು ನೀವು ಊಹಿಸಿದ್ದರೆ ನಿಮ್ಮ ಊಹೆ ಖಂಡಿತ ತಪ್ಪು. ಹಾಗಾದರೆ ಅವರು ನಲ್ವತ್ತು ವರ್ಷದೊಳಗಿನ ವಿಧವೆಯಾಗಿರಬಹುದು ಎಂದು ನೀವು ಭಾವಿಸಿದ್ದರೆ ಅದು ಕೂಡ ತಪ್ಪು. ಯಾಕೆಂದರೆ ಪ್ರವಾದಿ(ಸ)ರವರು ಸೌದಾರವರನ್ನು ವಿವಾಹವಾದಾಗ ಅವರು 65 ವರ್ಷ ಪ್ರಾಯದ ಬಡ ವಿಧವೆಯಾಗಿದ್ದರು!
ತಮ್ಮ 52ನೇ ವಯಸ್ಸಿನಲ್ಲಿ 65 ವರ್ಷದ ಸೌದಾರನ್ನು ಪ್ರವಾದಿ(ಸ)ರವರು ವಿವಾಹವಾಗಿದ್ದು ಖಂಡಿತವಾಗಿಯೂ ಏನಾದರೂ ತೀಟೆಯನ್ನು ತೀರಿಸುವ ಉದ್ದೇಶದಿಂದಾಗಿರಲಿಲ್ಲವೆಂಬುದು ಸ್ಪಷ್ಟ. ಹಾಗಾದರೆ 65 ವರ್ಷದ ವಿಧವೆಯನ್ನು ವಿವಾಹವಾಗಬೇಕಾದ ಅನಿವಾರ್ಯತೆಯು ಪ್ರವಾದಿ(ಸ)ರವರಿಗೇನಿತ್ತು? ಪ್ರವಾದಿ(ಸ) ರವರ ತ್ಯಾಗದ ಮಹತ್ವವು ಇಲ್ಲಿ ನಮಗೆ ಮನದಟ್ಟಾಗುತ್ತದೆ.
ಇಸ್ಲಾಮ್ ಸ್ವೀಕರಿಸಿದ ಮಹಿಳೆಯರಲ್ಲಿ ಮೊಟ್ಟಮೊದಲು ವಿಧವೆಯಾದವರಾಗಿದ್ದರು ಸೌದಾ! ಓರ್ವ ವಿಧವೆಯ ಹೃದಯದ ಆಳದಲ್ಲಿರುವ ವೇದನೆಗಳನ್ನೂ, ಅಬಲೆಯಾಗಿರುವ ಆಕೆಯ ಪರಿಸ್ಥಿತಿಯನ್ನೂ, ಮಾನಸಿಕ ತಳಮಳಗಳನ್ನೂ ಇತರೆಲ್ಲರಿಗಿಂತಲೂ ಚೆನ್ನಾಗಿ ಪ್ರವಾದಿ(ಸ)ರವರು ಅರಿತಿದ್ದರು. ಒಂದು ಸಮೂಹವನ್ನು ಸರ್ವ ದಿಸೆಗಳಿಂದಲೂ ಒಳಿತಿನ ಪಾರಮ್ಯತೆಯೆಡೆಗೆ ಮುನ್ನಡೆಸುವ ನಾಯಕತ್ವವನ್ನು ವಹಿಸಿಕೊಂಡವರಾಗಿದ್ದರು ಅವರು. ಅವರು ಯಾವುದೇ ಒಳಿತನ್ನು ಆದೇಶಿಸಿದರೂ ಇಂದಿನ ಅನೇಕ ಜನನಾಯಕರಂತೆ ಅದನ್ನು ಕೇವಲ ಬಾಯಿಮಾತಿಗೆ ಸೀಮಿತವಾಗಿಸುತ್ತಿರಲಿಲ್ಲ. ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸಗಳನ್ನಿಟ್ಟು ಭಂಡ ನಾಯಕನಂತೆ ಮೆರೆದವರಾಗಿರಲಿಲ್ಲ ಅವರು. ಬದಲಾಗಿ ಅವರು ತಮ್ಮ ಅನುಯಾಯಿಗಳಿಗೆ ಏನನ್ನಾದರೂ ಆದೇಶಿಸಿದರೆ ಅದನ್ನು ಮೊಟ್ಟಮೊದಲು ತಮ್ಮ ಜೀವನದಲ್ಲಿ ಪ್ರಾಯೋಗಿಕಗೊಳಿಸುತ್ತಿದ್ದರು. ಅದೇ ರೀತಿ ಏನಾದರೂ ಕೆಡುಕಿನಿಂದ ಅವರು ತಮ್ಮ ಅನುಯಾಯಿಗಳನ್ನು ವಿರೋಧಿಸಿದರೆ ಮೊಟ್ಟಮೊದಲು ಆ ಕೆಡುಕಿನಿಂದ ಸ್ವತಃ ತಾವು ದೂರವಿರುತ್ತಿದ್ದರು.
ಓರ್ವ ಮಹಿಳೆ ವಿಧವೆಯಾದರೆ ಅದು ಅವಳ ಇಳಿವಯಸ್ಸಿನಲ್ಲಾಗಿದ್ದರೂ ಕೂಡ ಇಸ್ಲಾಮ್ ಆಕೆಯನ್ನು ಅವಗಣಿಸುವುದಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿಕೊಡುವ ತವಕವು ಅವರಲ್ಲಿತ್ತು. ಅದಕ್ಕಾಗಿ ಅವರು ಆರಿಸಿಕೊಂಡ ದಾರಿ ಕೂಡ ಅನುಪಮವಾಗಿತ್ತು. ಒಂದು ವೇಳೆ ಪ್ರವಾದಿ(ಸ)ರವರು ಕಾಮುಕರಾಗಿದ್ದರೆ ತಮ್ಮ ಯಾರಾದರೂ ಅನುಯಾಯಿಗೆ ಕೈಸನ್ನೆ ಮಾಡುವ ಮೂಲಕ ಆ ವಿಧವೆಯನ್ನು ವಿವಾಹವಾಗುವಂತೆ ಅದೇಶಿಸಬಹುದಿತ್ತು! ಆದರೆ ಅವರು ಹಾಗೆ ಮಾಡದೆ ತಾವೇ ಸ್ವತಃ ವಿವಾಹವಾದರು. ಇದು ಅವರು ಜಗತ್ತಿಗೆ ತೋರಿಸಿಕೊಟ್ಟ ಅನರ್ಘ್ಯವಾದ ತ್ಯಾಗವಾಗಿತ್ತೇ ಹೊರತು ಕಾಮೋದ್ರೇಕ ಶಮನವಾಗಿರಲಿಲ್ಲ. ಇದಾಗಿತ್ತು ಪ್ರವಾದಿ(ಸ)ರವರ ಎರಡನೇ ವಿವಾಹದ ಕಾರಣ.
ಪ್ರವಾದಿ(ಸ)ರವರ ವಿವಾಹಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಒಂದು ಮುಹಮ್ಮದ್ ಎಂಬ ವ್ಯಕ್ತಿಯಾಗಿ ಅವರು ಮಾಡಿಕೊಂಡ ವಿವಾಹ. ಎರಡು ಮುಹಮ್ಮದ್ ಎಂಬ ಪ್ರವಾದಿಯಾಗಿ ಅವರು ಮಾಡಿಕೊಂಡ ವಿವಾಹಗಳು. ಖದೀಜಾರವರ ವಿವಾಹವು ಮೊದಲ ವಿಧದಲ್ಲಿ ಸೇರಿದರೆ ಉಳಿದ ಹನ್ನೊಂದು ವಿವಾಹಗಳೂ ಎರಡನೆಯ ವಿಧದಲ್ಲಿ ಸೇರುತ್ತವೆ.
ಮತಪ್ರಚಾರ ಕಾರ್ಯದಂಗವಾಗಿ ತನ್ನ ಅನುಯಾಯಿಗಳೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸುವುದಕ್ಕಾಗಿ ಅವರೊಂದಿಗೆ ವೈವಾಹಿಕ ಸಂಬಂಧಗಳನ್ನು ಸ್ಥಾಪಿಸುವುದು ಅಂದು ಅತ್ಯಗತ್ಯವಾಗಿತ್ತು. ಅದಕ್ಕಾಗಿ ಅವರು ತಮ್ಮ ಅನುಯಾಯಿಗಳಲ್ಲೇ ಶ್ರೇಷ್ಠರಾದ ಅಬೂ ಬಕ್ರ್ ಸಿದ್ದೀಕ್(ರ)ರವರ ಮಗಳಾದ ಆಯಿಶಾರನ್ನು ಮತ್ತು ಉಮರ್ ಇಬ್ನುಲ್ ಖತ್ತಾಬ್(ರ)ರವರ ಮಗಳಾದ ಹಫ್ಸಾರನ್ನು ವಿವಾಹವಾದರು. ಖದೀಜಾರಿಂದಾಗಿ ತನಗುಂಟಾದ ಮಕ್ಕಳಲ್ಲಿ ಈರ್ವರನ್ನು ಉಸ್ಮಾನ್ ಇಬ್ನ್ ಅಪ್ಫಾನ್(ರ)ಗೆ ಮತ್ತು ತಮ್ಮ ಮುದ್ದಿನ ಮಗಳಾದ ಫಾತಿಮಾರನ್ನು ಅಲೀ ಇಬ್ನ್ ಅಬೀ ತಾಲಿಬ್(ರ)ಗೆ ವಿವಾಹ ಮಾಡಿಸಿಕೊಟ್ಟರು. ಪ್ರವಾದಿ(ಸ)ರವರನ್ನು ವಿವಾಹವಾಗುವಾಗ ಹಫ್ಸಾರವರ ಪ್ರಾಯವು 40 ಆಗಿತ್ತು ಮತ್ತು ಅವರು ವಿಧವೆಯಾಗಿದ್ದರು.
ಝೈನಬ್ ಬಿನ್ತ್ ಖುಝೈಮಾರವರ ಪತಿ ಉಹ್ದ್ ಯುದ್ಧದಲ್ಲಿ ಮೃತಪಟ್ಟರು. ತನ್ನಿಮಿತ್ತ ಅವರು ಒಂಟಿಯೂ ಆಶ್ರಯರಹಿತರೂ ಆದರು. ಕೃಶಶರೀರಿಯಾಗಿದ್ದ ಆಕೆಗೆ ಪ್ರವಾದಿ(ಸ)ರವರು ಬಾಳನ್ನು ನೀಡಿದರು. ವಿವಾಹದ ನಂತರ ಕೆಲವೇ ಸಮಯದಲ್ಲಿ ಅವರು ಮೃತಪಟ್ಟರು.
ಉಮ್ಮು ಸಲಮಾ 65 ವರ್ಷ ಪ್ರಾಯದ ವಿಧವೆಯಾಗಿದ್ದರು. ಅಬೂ ಬಕ್ರ್, ಉಮರ್ ಮೊದಲಾದವರ ವಿವಾಹ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದರು. ಆದರೆ ಪ್ರವಾದಿ(ಸ)ರವರು ವಿವಾಹ ಪ್ರಸ್ತಾಪವಿಟ್ಟಾಗ ಅವರು ಅದನ್ನು ಸ್ವೀಕರಿಸಿದರು.
ಝೈನಬ್ ಬಿನ್ತ್ ಜಹ್‌ಶ್ ಪ್ರವಾದಿ(ಸ)ರವರ ದತ್ತುಪುತ್ರ ಝೈದ್‌ರವರ ಪತ್ನಿಯಾಗಿದ್ದರು. ಝೈದ್ ಆಕೆಗೆ ವಿಚ್ಛೇದನೆ ನೀಡಿದ್ದರಿಂದಾಗಿ ಪ್ರವಾದಿ(ಸ)ರವರು ಆಕೆಯನ್ನು ವಿವಾಹವಾದರು. ಇದು ದತ್ತು ಪುತ್ರರು ತಮ್ಮ ಪತ್ನಿಯರನ್ನು ವಿಚ್ಛೇದಿಸಿದರೆ ಅವರನ್ನು ವಿವಾಹವಾಗುವುದನ್ನು ಇಸ್ಲಾಮ್ ವಿರೋಧಿಸುವುದಿಲ್ಲ ಎಂಬುದನ್ನು ತೋರಿಸಿಕೊಡುವ ಸಲುವಾಗಿತ್ತು.
ಪ್ರವಾದಿ(ಸ)ರವರ ವಿವಾಹಗಳ ಹಿಂದೆ ರಾಜಕೀಯ ಕಾರಣಗಳೂ ಇದ್ದವು. ಯಹೂದ ಪ್ರದೇಶವಾದ ಖೈಬರನ್ನು ಜಯಿಸಿದಾಗ ಅದರ ಅರಸನಾಗಿದ್ದ ಹುಯಯ್ಯ್ ಮತ್ತು ಅವರ ಮಗಳು ಸಫಿಯ್ಯಾ ಮುಸ್ಲಿಮರಿಗೆ ಖೈದಿಗಳಾಗಿ ಲಭಿಸಿದರು. ಶತ್ರು ದೇಶದ ಓರ್ವ ಮಹಿಳೆಯು ಯುದ್ಧಖೈದಿಯಾಗಿ ಲಭಿಸಿದರೆ ಅಂದಿನ ಅನಾಗರಿಕ ಕಾಲದ ಸೇನಾನಾಯಕನು ಏನು ಮಾಡುತ್ತಿದ್ದನು? ಆದರೆ ಪ್ರವಾದಿ(ಸ)ರವರು ಮಾಡಿದ್ದೇನು?
ಹೆಣ್ಣಿನ ಆತ್ಮಾಭಿಮಾನವನ್ನು ಸಂರಕ್ಷಿಸುವುದರಲ್ಲಿ ಪ್ರವಾದಿ(ಸ)ರವರಿಗಿಂತ ಮಿಗಿಲಾದ ವ್ಯಕ್ತಿತ್ವವು ಈ ಜಗತ್ತಿನಲ್ಲಿ ಬೇರಾವುದಾದರೂ ಇದೆಯೇ? ಖಂಡಿತವಾಗಿಯೂ ಇಲ್ಲ. ಅರಸನ ಮಗಳಾದ ಸಫಿಯ್ಯಾರನ್ನು ಕನಿಷ್ಠ ಪಕ್ಷ ತನ್ನ ಯಾರಾದರೂ ಅನುಯಾಯಿಗೆ ವಿವಾಹ ಮಾಡಿಕೊಟ್ಟು ನೆಮ್ಮದಿಯಾಗಿರಬಹುದಿತ್ತು. ಆದರೆ ಪ್ರವಾದಿ(ಸ)ರವರ ಮಾದರಿಯು ಅದಾಗಿರಲಿಲ್ಲ. ಇಸ್ಲಾಮನ್ನು ಪ್ರವೇಶಿಸಿದ ಅರಸನ ಮಗಳನ್ನು ಅಪಮಾನಿಸಲು ಅವರು ಇಚ್ಛೆಪಡಲಿಲ್ಲ. ಇಸ್ಲಾಮಿನಲ್ಲಿ ಓರ್ವ ಹೆಣ್ಣಿಗೆ ಲಭಿಸಬಹುದಾದ ಅತ್ಯುನ್ನತವಾದ ಸ್ಥಾನವಾದ ತನ್ನ ಹೃದಯದರಮನೆಯಲ್ಲಿ ಆಕೆಗೆ ಜಾಗವನ್ನು ನೀಡಿದರು. ಆಕೆಯ ಗೌರವಕ್ಕೆ ಎಳ್ಳಷ್ಟು ಚ್ಯುತಿಯುಂಟಾಗದ ರೀತಿಯಲ್ಲಿ ಆಕೆಯ ಅನುಮತಿಯೊಂದಿಗೆ ಆಕೆಯನ್ನು ವಿವಾಹವಾದರು.
ಜುವೈರಿಯ್ಯಾ ಮತ್ತು ಮಾರಿಯಾರನ್ನು ಪ್ರವಾದಿ(ಸ)ರವರು ವಿವಾಹವಾಗಿದ್ದು ಹೊಸ ಪ್ರದೇಶಗಳೊಂದಿಗೆ ತನ್ನ ಬಾಂಧವ್ಯವನ್ನು ವೃದ್ಧಿಪಡಿಸುವ ಉದ್ದೇಶದಿಂದಾಗಿತ್ತು. ಅವರು ಜುವೈರಿಯ್ಯಾರನ್ನು ವಿವಾಹವಾದಾಗ ಆಕೆಯ ಜನಾಂಗವಾದ ಬನೂ ಮುಸ್ತಲಕ್ ಸಂಪೂರ್ಣವಾಗಿ ಇಸ್ಲಾಮ್ ಸ್ವೀಕರಿಸಿದರು. ಮಾರಿಯಾರನ್ನು ವಿವಾಹವಾದಾಗ ಸಂಪೂರ್ಣ ಈಜಿಪ್ಟ್ ಅವರಿಗೆ ಬೆಂಗಾವಲಾಗಿ ನಿಂತಿತು.
ಆಯಿಶಾರವರ ಹೊರತು ಇತರ ಮಡದಿಯರೆಲ್ಲರೂ ವಿಧವೆಗಳೋ ವಿಚ್ಛೇದಿತೆಯರೋ ಆಗಿದ್ದರೆಂದು ಹೇಳಿದ್ದೆನಲ್ಲವೇ? ಆದ್ದರಿಂದಲೇ ಕೆಲವರು ಅವರ ಬಗ್ಗೆ ಸೊಲ್ಲೆತ್ತದೆ ಆಯಿಶಾರವರ ಮೇಲೆ ತಮ್ಮ ಟೀಕಾಪ್ರಹಾರವನ್ನು ಹರಿಸುತ್ತಾರೆ. ಪ್ರವಾದಿ(ಸ)ರವರು ಆಯಿಶಾರನ್ನು ವಿವಾಹವಾದಾಗ ಆಕೆ ಒಂಬತ್ತು ವರ್ಷದ ಹುಡುಗಿಯಾಗಿದ್ದಳು ಎಂಬುದಾಗಿದೆ ಅವರು ಈ ರೀತಿ ಟೀಕಿಸಲು ಕಾರಣ!
ವಾಸ್ತವಿಕವಾಗಿ ಒಂಬತ್ತು ವರ್ಷದ ಹುಡುಗಿಯನ್ನು ಪ್ರವಾದಿ(ಸ)ರವರು ವಿವಾಹವಾದುದರಲ್ಲಿ ಅಸಂಗತವಾದುದು ಏನೂ ಇಲ್ಲ. ಒಂಬತ್ತು ವರ್ಷದ ಹುಡುಗಿಯರು ಯಾರೂ ಮೆಚ್ಯೂರ್ ಆಗುವುದಿಲ್ಲ ಎಂದೆನ್ನುವವರಿಗೆ ಸಮಕಾಲೀನ ಜಗತ್ತಿನ ಏನೇನೂ ತಿಳಿದಿಲ್ಲವೆಂದೇ ಭಾವಿಸಬೇಕಾಗಿದೆ! ಒಂಬತ್ತು ವರ್ಷವೇಕೆ ಆರೇಳು ವರ್ಷದ ಹೆಣ್ಣು ಮಕ್ಕಳು ಲೈಂಗಿಕತೆಯಲ್ಲಿ ತೊಡಗುವುದು ಅಮೇರಿಕಾದಂತಹ ಮುಂದುವರಿದ ದೇಶಗಳಲ್ಲಿ ನಿತ್ಯಸುದ್ದಿಯಾಗಿದೆ. ಎಂಟು ವರ್ಷ ಪ್ರಾಯದ ಹುಡುಗಿ ಗರ್ಭಧರಿಸುವುದನ್ನು ಆಧುನಿಕ ವೈದ್ಯ ಶಾಸ್ತ್ರವಂತೂ ನಿಷೇಧಿಸಿಲ್ಲ. ಇದಕ್ಕನುಸೃತವಾಗಿ ಇಂತಹ ಚಿಕ್ಕ ವಯಸ್ಸಿನ ಮಕ್ಕಳು ಗರ್ಭಧರಿಸುವುದನ್ನು ಅಪರೂಪಕೊಮ್ಮೆಯಾದರೂ ನಾವು ಆಲಿಸುತ್ತಲೂ ಓದುತ್ತಲೂ ಇದ್ದೇವೆ. ಆದ್ದರಿಂದ ಆಯಿಶಾರನ್ನು ಟೀಕಿಸುವವರ ಉದ್ದೇಶವು ಇಸ್ಲಾಮಿನೊಂದಿಗಿರುವ ಕುರುಡು ದ್ವೇಷವಲ್ಲದೆ ಬೇರೇನೂ ಅಲ್ಲವೆಂದು ಇದರಿಂದ ತಿಳಿದುಕೊಳ್ಳಬಹುದಾಗಿದೆ.
ಪ್ರವಾದಿ(ಸ)ರವರು ಎಳೆಯ ಪ್ರಾಯದ ಆಯಿಶಾರನ್ನು ವಿವಾಹವಾಗಿದ್ದನ್ನು ಅವರ ಪರಮ ಶತ್ರುಗಳಾಗಿದ್ದ ಕುರೈಶರು ಅಂದು ವಿರೋಧಿಸಿರಲಿಲ್ಲ. ಯಾಕೆಂದರೆ ಮರುಭೂಮಿಯ ಹವಾಮಾನ ವೈಪರೀತ್ಯ ದಿಂದಾಗಿ ಹುಡುಗಿಯೊಬ್ಬಳು ಬಹುಬೇಗನೇ ಮೆಚ್ಯೂರ್ ಆಗುತ್ತಾಳೆಂದು ಅನಕ್ಷರಸ್ಥರಾಗಿದ್ದರೂ ಅನುಭವ ಜ್ಞಾನದ ಮೂಲಕ ಆ ಅನಾಗರಿಕ ಅರಬರಿಗೆ ಗೊತ್ತಿತ್ತು! ಇಲ್ಲದಿದ್ದರೆ ತಮಗೆ ಲಭ್ಯವಾಗುವ ಎಲ್ಲಾ ಸಂದರ್ಭಗಳನ್ನೂ ಬಳಸಿ ಅತಿ ಕಠಿಣವಾದ ಶಬ್ಧಗಳಲ್ಲಿ ಪ್ರವಾದಿ(ಸ)ರವರನ್ನು ಟೀಕಿಸುತ್ತಿದ್ದ ಅವರು ಒಂದೇ ಒಂದು ಬಾರಿಯೂ ಆಯಿಶಾರವರ ವಿವಾಹದ ಕುರಿತು ಸೊಲ್ಲೆತ್ತಿರಲಿಲ್ಲ. ಅನಾಗರಿಕ ಅರಬರನ್ನು ಬಿಡಿ. ತಮ್ಮ ಬಳಿ ದೇವಗ್ರಂಥವಿದೆಯೆಂದು ಸ್ವಯಂ ಕೊಚ್ಚಿಕೊಳ್ಳುತ್ತಿದ್ದ ಪ್ರವಾದಿ(ಸ)ರವರ ಕಠಿಣ ಶತ್ರುಗಳಾದ ಅಂದಿನ ಯಹೂದ ಕ್ರೈಸ್ತರಲ್ಲೊಳಪಟ್ಟ ಯಾವೊಬ್ಬನೂ ಕೂಡ ಈ ವಿಷಯದಲ್ಲಿ ಪ್ರವಾದಿ(ಸ)ರವರನ್ನು ಟೀಕಿಸಿರಲಿಲ್ಲ.
ಹಾಗಾದರೆ ಎಳೆಯ ವಯಸ್ಸಿನ ಕನ್ಯೆಯಾದ ಆಯಿಶಾರನ್ನು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಪ್ರವಾದಿ(ಸ)ರವರು ವಿವಾಹವಾದುದಾದರೂ ಏಕೆ? ಉತ್ತರ ಸ್ಪಷ್ಟ. ಜಗತ್ತಿನ ಅತಿಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ನೀವು ತೆರೆದು ನೋಡಿ. ನಿಮಗೆ ಲಭಿಸುವುದು ಕೇವಲ ಅವರ ಬಹಿರಂಗ ಜೀವನದ ಕುರಿತಿರುವ ಸಂಗತಿಗಳು ಮಾತ್ರವಾಗಿದೆ. ಅವರ ಖಾಸಗಿ ಬದುಕು ಮತ್ತು ಮಡದಿಯರೊಂದಿಗಿನ ಸರಸ ಸಲ್ಲಾಪ, ಸಂಭೋಗ ಮುಂತಾದ ಅತ್ಯಂತ ಖಾಸಗಿ ಬದುಕಿನ ಬಗ್ಗೆ ನಿಮಗೆ ಏನಾದರೂ ಮಾಹಿತಿಗಳು ಲಭಿಸುತ್ತದೆಯೇ? ಖಂಡಿತವಾಗಿಯೂ ಇಲ್ಲ. ಹೆಚ್ಚಿನೆಲ್ಲಾ ಮಹಾನ್ ವ್ಯಕ್ತಿಗಳ ಖಾಸಗಿ ಬದುಕನ್ನು ಅನ್ವೇಷಿಸತೊಡಗಿದರೆ ನಮಗೆ ದೊರಕುವ ಫಲಿತಾಂಶಗಳು ಅತ್ಯಂತ ಅರೋಚಕವಾಗಿರಬಹುದೆಂದು ಬೇರೆ ಹೇಳಬೇಕಾಗಿಲ್ಲ! ಆದರೆ ಪ್ರವಾದಿ(ಸ)ರವರ ಜೀವನಚರಿತ್ರೆಯು ಇದಕ್ಕೆ ವ್ಯತಿರಿಕ್ತವಾಗಿದೆ. ಈಗಾಗಲೇ ಹೇಳಿದಂತೆ ಪ್ರವಾದಿ(ಸ)ರವರು ಅಂತ್ಯದಿನದವರೆಗಿರುವ ಮುಸ್ಲಿಮರಿಗೆ ಮಾತ್ರವಲ್ಲ ಸಂಪೂರ್ಣ ಮನುಷ್ಯಕುಲಕ್ಕೆ ಮಾದರಿಯಾಗಬೇಕಾದ ಪ್ರವಾದಿಯಾಗಿ ಅಲ್ಲಾಹನಿಂದ ನಿಯೋಗಿಸಲ್ಪಟ್ಟವರಾಗಿದ್ದರು. ಆದ್ದರಿಂದ ಅವರ ಬಹಿರಂಗ ಬದುಕು ಹೇಗೆ ಕನ್ನಡಿಯಲ್ಲಿರುವ ಪ್ರತಿಬಿಂಬದಂತೆ ಹಗಲು ಬೆಳಕಿನಷ್ಟು ಸ್ಪಷ್ಟವಾಗಿ ನಮಗೆ ಲಭಿಸಿದೆಯೋ ಅಷ್ಟೇ ಸ್ಪಷ್ಟವಾಗಿ ಅವರ ಅತ್ಯಂತ ಖಾಸಗಿ ಬದುಕಿನ ಮಾಹಿತಿಗಳೂ ನಮಗೆ ಲಭಿಸಿವೆ! ಇದು ಹೇಗೆ ಸಾಧ್ಯವಾಯಿತೆಂದು ನೀವು ಕೇಳಬಹುದು! ಅದು ಆಯಿಶಾ ಮುಂತಾದ ಅವರ ಪತ್ನಿಯರ ಕೊಡುಗೆಯಾಗಿತ್ತು!
ಆಯಿಶಾರವರು ಅತ್ಯಂತ ಬುದ್ಧಿ ಶಾಲಿಯೂ ಚಾಣಾಕ್ಷೆಯೂ ಆಗಿದ್ದರು. ಯಾವೊಂದು ವಿಷಯವನ್ನಾದರೂ ಸೂಕ್ಷ್ಮವಾಗಿ ಗ್ರಹಿಸುವುದರಲ್ಲಿ ಅವರು ಅದ್ವಿತೀಯರಾಗಿದ್ದರು. ಹನ್ನೆರಡು ಮಂದಿ ಮಡದಿಯರಲ್ಲಿ ಪ್ರವಾದಿ(ಸ)ರವರ ಖಾಸಗಿ ಜೀವನವನ್ನು ಆಯಿಶಾರವರಂತೆ ಸೂಕ್ಷ್ಮವಾಗಿ ಕಲಿತವರು ಬೇರೊಬ್ಬರಿರಲಿಲ್ಲ. ಆದ್ದರಿಂದಲೇ ಪ್ರವಾದಿ(ಸ)ರವರ ಖಾಸಗಿ ಜೀವನದ ಕುರಿತು ಮುಸ್ಲಿಮರು ಆದ್ಯತೆಯನ್ನು ನೀಡುವುದು ಆಯಿಶಾರವರು ವರದಿ ಮಾಡುವ ಹದೀಸ್‌ಗಳಿಗಾಗಿದೆ.
ಆಯಿಶಾರವರು ಇನ್ನೂ ಎಳೆಯ ವಯಸ್ಸಿನವರಾಗಿದ್ದುದರಿಂದ ಪ್ರವಾದಿ(ಸ)ರವರ ಮರಣಾನಂತರ ಸುಮಾರು 42 ವರ್ಷಗಳ ಕಾಲ ಅವರು ಜೀವಿಸಿದ್ದರು. ಅವರಷ್ಟು ದೀರ್ಘಕಾಲ ಪ್ರವಾದಿ(ಸ)ರವರ ಬೇರೊಂದು ಪತ್ನಿ ಬದುಕಿರಲಿಲ್ಲ. ಆದ್ದರಿಂದಲೇ ಸಂಭೋಗಕ್ರಿಯೆ ಮುಂತಾದ ಪ್ರವಾದಿ(ಸ)ರವರ ಅತ್ಯಂತ ಖಾಸಗಿ ಬದುಕಿನ ಕುರಿತು ಮಹತ್ವವಾದ ಮಾಹಿತಿಗಳನ್ನು ಅನ್ವೇಷಿಸಿ ಅಸಂಖ್ಯ ಮಂದಿ ಆಯಿಶಾರವರ ಮನೆಗೆ ಧಾವಿಸುತ್ತಿದ್ದರು. ಆದ್ದರಿಂದ ಸುಮಾರು 42 ವರ್ಷಗಳ ಕಾಲ ಅವರು ಈ ಸಮುದಾಯದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು! ಆ ಎಳೆಯ ಪ್ರಾಯದಲ್ಲಿ ಒಂದು ವೇಳೆ ಪ್ರವಾದಿ(ಸ)ರವರು ಆಯಿಶಾರನ್ನು ವಿವಾಹವಾಗದಿರುತ್ತಿದ್ದರೆ ಅದೆಷ್ಟೋ ಉಪಯುಕ್ತವಾದ ಮಾಹಿತಿಗಳು ನಮ್ಮಿಂದ ಮರೆಯಾಗಿರುತ್ತಿತ್ತೋ ಏನೋ! ಆದ್ದರಿಂದ ಆಯಿಶಾರವರ ಎಳೆಯ ಪ್ರಾಯವು ನಮಗೆ ಮಹದುಪಕಾರವನ್ನು ಮಾಡಿದೆಯೆಂದರೆ ಅದೆಂದೂ ಉತ್ಪ್ರೇಕ್ಷೆಯಾಗಲಾರದು.
ಹಾಗಾದರೆ ಆಯಿಶಾರವರಿಗೆ ಸುಮಾರು ಹದಿನೆಂಟು ಪ್ರಾಯವಾಗುವವರೆಗಾದರೂ ಪ್ರವಾದಿ(ಸ)ರವರಿಗೆ ಕಾಯಬಹುದಾಗಿತ್ತಲ್ಲವೇ ಎಂದು ನೀವು ಕೇಳಬಹುದು. ಆದರೆ ಇದೊಂದು ಅಪ್ರಸ್ತುತ ಪ್ರಶ್ನೆಯಾಗಿದೆ. ಯಾಕೆಂದರೆ ಒಂಬತ್ತನೇ ವಯಸ್ಸಿನಲ್ಲಿ ವಿವಾಹವಾದರೂ ಪ್ರವಾದಿ(ಸ)ರವರು ಆಕೆಯೊಂದಿಗೆ ದಾಂಪತ್ಯವನ್ನು ಆರಂಭಿಸಿದ್ದು ಆಕೆಗೆ ಹನ್ನೊಂದು ಪ್ರಾಯ ತುಂಬಿದ ನಂತರವಾಗಿತ್ತು. ಆದ್ದರಿಂದ ಪ್ರವಾದಿ(ಸ)ರವರೊಂದಿಗೆ ಆಯಿಶಾರಿಗೆ ಲಭಿಸಿದ ದಾಂಪತ್ಯ ಬದುಕು ಕೇವಲ ಎಂಟು ವರ್ಷಗಳಷ್ಟು ಮಾತ್ರವಾಗಿದ್ದವು. ಅವರ ವಯಸ್ಸು ಹೆಚ್ಚಿದಂತೆ ಅವರಿಗೆ ಲಭಿಸುವ ದಾಂಪತ್ಯ ಬದುಕು ಕ್ಷೀಣಿಸುತ್ತಲೇ ಸಾಗುತ್ತದೆ. ಹದಿನೆಂಟನೇ ವಯಸ್ಸಿನಲ್ಲಿ ವಿವಾಹವಾಗಿದ್ದರೆ ಅವರಿಗೆ ಲಭಿಸಬಹುದಾದ ದಾಂಪತ್ಯ ಬದುಕು ಕೇವಲ ಒಂದು ವರ್ಷ ಮಾತ್ರವಾಗಿರುತ್ತಿತ್ತು. ಅವರು ಅಷ್ಟೊಂದು ಬುದ್ಧಿಶಾಲಿಯಾಗಿದ್ದೂ ಕೂಡ ಈ ಒಂದು ವರ್ಷದ ಅವಧಿಯಲ್ಲಿ ಪ್ರವಾದಿ(ಸ)ರವರ ಸಂಪೂರ್ಣ ಖಾಸಗಿ ಬದುಕನ್ನು ಕಲಿಯಲು ಅವರಿಗೆ ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ.
ಇದಾಗಿವೆ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಲು ಇದ್ದ ಕಾರಣಗಳು. ಪೂರ್ವಗ್ರಹ ಮತ್ತು ಪಕ್ಷಪಾತವನ್ನು ಮಾರು ದೂರವಿಟ್ಟು ಸತ್ಯವನ್ನು ಕಂಡುಕೊಳ್ಳಬೇಕೆಂಬ ಅದಮ್ಯ ಆಕಾಂಕ್ಷೆಯಿರುವ ಯಾವನೇ ವ್ಯಕ್ತಿಗೂ ಪ್ರವಾದಿ(ಸ)ರವರ ವಿವಾಹಗಳಲ್ಲಿ ಯಾವ ಕೊರತೆಯೂ ಕಾಣಲಾರದು.
No comments:
Post a Comment