Powered By Blogger

Thursday, 13 October 2011

ಹಜ್ ನಿರ್ವಹಿಸಲು ತಲುಪಿದ ಮೂವತ್ತನಾಲ್ಕು ಸಾವಿರಕ್ಕೂ ಅಧಿಕ ಭಾರತೀಯರು



ಜಿದ್ದಾ  ( ಸೌದಿ ಅರೇಬಿಯಾ) :ಪವಿತ್ರ ಹಜ್ ನಿರ್ವಹಿಸಲು ಭಾರತದಿಂದ ಒಟ್ಟು ಮೂವತ್ತನಾಲ್ಕು ಸಾವಿರದ ಏಳುನೂರ ಎರಡು ಯಾತ್ರಿಗಳು ಈಗಾಗಲೇ ಸೌದಿ ಅರೇಬಿಯಾಕ್ಕೆ ಬಂದಿಳಿದಿದ್ದಾರೆ . ಭಾರತದ ವಿವಿಧ ನಗರಗಳಿಂದ ಒಟ್ಟು ನೂರ ಇಪ್ಪತ್ತೇಳು ಭಾರತೀಯ  ವಿಮಾನಗಳಲ್ಲಿ ಈ ಯಾತ್ರಿಕರು ಬಂದಿದ್ದು ಇವರ ಪೈಕಿ ಶನಿವಾರದವರೆಗೆ ೧೮೨೩ ಯಾತ್ರಿಗಳು ಮಕ್ಕಾ ನಗರದಲ್ಲೂ ೩೨೮೭೯ ಯಾತ್ರಿಗಳು ಮದೀನಾ ನಗರದಲ್ಲೂ ಇದ್ದಾರೆ ಎಂದು ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ . ಮೊದಲು ಬಂದ ಹಲವು ಯಾತ್ರಿಗಳು ಈಗಾಗಲೇ ಮಕ್ಕಾ ನಗರದಿಂದ ಮದೀನಾ ನಗರಕ್ಕೆ ಪ್ರಯಾಣಿಸಿದ್ದಾರೆ.
ಮಂಗಳೂರಿನಿಂದ ಬಂದ ಹಜ್ ತಂಡದಲ್ಲಿ ಒಟ್ಟು ೧೬೦ ಯಾತ್ರಾರ್ಥಿಗಳಿದ್ದು , ನವದೆಹಲಿಯಿಂದ ಬಂದ ಯಾತ್ರಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಸರ್ಕಾರಿ ಹಜ್ ಸಮಿತಿಯ ಮುಖಾಂತರ ಮತ್ತು ಹಲವು ಖಾಸಗಿ ಹಜ್ ಅಪರೇಟರ್ ಕಂಪೆನಿಗಳ ಮೂಲಕ ಈ ಯಾತ್ರಾರ್ಥಿಗಳು ಮಕ್ಕಾ ತಲುಪಿದ್ದಾರೆ.  ವಿಶ್ವದ ಬಹುತೇಕ ರಾಷ್ಟ್ರಗಳಿಂದ ಹಜ್ ಯಾತ್ರಾರ್ಥಿಗಳು ಮಕ್ಕಾ ಮದೀನಾ ತಲುಪಿದ್ದು ಈಗಾಗಲೇ ಅನಧಿಕೃತವಾಗಿ ಪಾಸ್ ಇಲ್ಲದೇ ಮಕ್ಕಾ ನಗರ ಪ್ರವೇಶಿಸುವುದನ್ನು ತಡೆಗಟ್ಟಲು ಮಕ್ಕಾ ಪ್ರವೇಶ ದ್ವಾರದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಹಜ್ ನಿರ್ವಹಿಸಲು ಅನುಮತಿ ಪತ್ರ ಹೊಂದಿರುವವರಿಗೆ ಮಾತ್ರ ಮಕ್ಕಾ ನಗರಕ್ಕೆ ಪ್ರವೇಶ ನೀಡಲಾಗುತ್ತಿದೆ.

AZAAN


ಫೇಸ್ ಬುಕ್ ನಲ್ಲಿ ಬರೆದ ಸಂದೇಶವನ್ನು ಲೈಕ್ ಮಾಡದ ಪತ್ನಿಗೆ ಹಲ್ಲೆ



ಟೆಕ್ಸಾಸ್ : ತನ್ನ ಫೇಸ್ ಬುಕ್ ಪುಟದಲ್ಲಿ ತನ್ನ ತಾಯಿಯ ಮರಣದ ವಾರ್ಷಿಕ ಅನುಸ್ಮರಣೆಯ ಕುರಿತಾದ ಬರೆದ ಸಂದೇಶವನ್ನು ಲೈಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮೆಕ್ಸಿಕೋ ನಗರದಿಂದ  ವರದಿಯಾಗಿದೆ. ಮೂವತ್ತಾರು ವರ್ಷದ ಬೆನಿಟೊ ಅಪಾಲಿನಾರ್ ಎಂಬ ಈ ವ್ಯಕ್ತಿ ತೀರಿಕೊಂಡ ತನ್ನ ತಾಯಿಯ ನೆನೆಪಿನಲ್ಲಿ ಆಕೆಯ ನಿಧನದ ವಾರ್ಷಿಕೋತ್ಸವದಂದು ತನ್ನ ಫೇಸ್ ಬುಕ್ ಪುಟದಲ್ಲಿ ಸಂದೇಶ ಬರೆದಿದ್ದ. ಈ ಸಂದೇಶವನ್ನು ಆತನ ಅನೇಕ ಮಿತ್ರರು ಲೈಕ್ ಮಾಡಿದ್ದರು.
ಆದರೆ ಆತನ ಪತ್ನಿ ಮಾತ್ರ ಈ ಸಂದೇಶವನ್ನು ನೋಡಿಯೂ ಲೈಕ್ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಆತ ಇಡೀ ಫೇಸ್ ಬುಕ್ ಗೆಳೆಯರ ಹಿಂಡೇ ತನ್ನ ಸಂದೇಶವನ್ನು ಲೈಕ್ ಮಾಡಿದೆ. ಆದರೆ ನೀನು ಮಾತ್ರ ಬೇಕೆಂದೇ ನನ್ನ ತಾಯಿಯ ಮೇಲಿನ ದ್ವೇಷದಿಂದ ಲೈಕ್ ಮಾಡಿಲ್ಲ ಎಂದು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆತನ ಪತ್ನಿ ಮೆಕ್ಸಿಕೋ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಈ ದಂಪತಿಗಳು ಮದುವೆಯಾಗಿ ಈಗಾಗಲೇ ಹದಿನೈದು ವರ್ಷವಾಗಿದೆ. ಪತ್ನಿ ನೀಡಿದ ದೂರಿನ ಆಧಾರದ ಮೇಲೆ  ಪೊಲೀಸರು ಈತನನ್ನು ಬಂಧಿಸಿದ್ದಾರೆ.

Prashant Bhushan Attacked For His Kashmir Statement

“ರಾಂಪಣ್ಣ “ನ ಪತ್ನಿ ಇನ್ನಿಲ್ಲ..



ಮಂಗಳೂರು :ಕಂಕನಾಡಿ “ರಾಂಪಣ್ಣ ” ಎಂದೇ ಖ್ಯಾತರಾಗಿದ್ದ ದಿ / ಜಪ್ಪಿನಮೊಗರು ರಾಮಪ್ಪನ ಪತ್ನಿ ಕಮಲಾ ರವರು ಜಪ್ಪಿನ ಮೊಗರು ಮೊಗೆರು ಮನೆಯ ಸ್ವಗ್ರಹದಲ್ಲಿ ನಿಧನರಾದರು .ಇವರಿಗೆ ೮೨ ವಯಸಾಗಿತ್ತು.
ರಾಮಪ್ಪ ರಂತೆಯೇ ಸಮಾಜ ಸೇವಾ ರಂಗದಲ್ಲಿ ಕೂಡ ತೊಡಗಿದ್ದರು .ಬಡವರಿಗೆ ಹೊಟ್ಟೆ ತುಂಬಾ ಊಟ ಕೊಡುವ ಜನತಾ ಹೋಟೆಲನ್ನು ಕಂಕನಾಡಿಯಲ್ಲಿ ಸ್ಥಾಪಿಸಿದ್ದ ರಾಮಪ್ಪ ರ ದಾರಿಯಲ್ಲಿಯೇ ಕಮಲಾ ರವರು ಕೂಡ ತೊಡಗಿದ್ದರು .ಮೃತರ ಅಂತಿಮ ದರ್ಶನಕ್ಕೆ ಸಾವಿರಾರು ಮಂದಿ ಜಮಾಯಿಸಿದರು.ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ ,ಕಾಂಗ್ರೆಸ್ಸ್ ನಾಯಕ ಹರಿಕೃಷ್ಣ ಬಂಟ್ವಾಳ್. ಅಲ್ಲದೆ ಹಲವು ವ್ಯಕ್ತಿಗಳು ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.