ಮುಂಬೈ : ಬಾಲಿವುಡ್ ತಾರೆ ಅಮೀರ್ ಖಾನ್ ಟ್ರಾಫಿಕ್ ನಿಯಮದ ಉಲ್ಲಂಘನೆಗಾಗಿ ನೂರು ರೂಪಾಯಿ ದಂಡ ಪಾವತಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಮುಂಬೈನ ಸತಾರಾ ಪ್ರದೇಶದಲ್ಲಿ ಅಮೀರ್ ಖಾನ್ ತನ್ನ ಸಿಲ್ವರ್ ಬಣ್ಣದ ಬಿ.ಎಂ.ಡಬ್ಲ್ಯು ಕಾರಿನಲ್ಲಿ ತನ್ನ ಕುಟುಂಬದ ಜೊತೆ ವಿಹಾರಕ್ಕೆ ಹೊರಟಿದ್ದರು. ಆ ಸಮಯದಲ್ಲಿ ಅಮೀರ್ ಕಾರು ನೋ ಎಂಟ್ರಿ ಮಾರ್ಗ ಪ್ರವೇಶಿಸಿತು . ಇದನ್ನು ಕಂಡ ಟ್ರಾಫಿಕ್ ಪೋಲಿಸ್ ಅಮೀರ್ ಖಾನ್ ಅವರಿಗೆ ನೂರು ರೂಪಾಯಿ ದಂಡ ವಿಧಿಸಿರುವುದಾಗಿ ಸತಾರಾ ಟ್ರಾಫಿಕ್ ಉಸ್ತುವಾರಿ ಅಧಿಕಾರಿ ಕೆ.ಎನ್. ಪಾಟೀಲ್ ತಿಳಿಸಿದ್ದಾರೆ .
ಕಾರು ನೋ ಎಂಟ್ರಿ ರಸ್ತೆಯಲ್ಲಿ ಪ್ರವೇಶಿಸುತ್ತಿದ್ದಂತೆ ಕಾರನ್ನು ಕಂಡ ಟ್ರಾಫಿಕ್ ಪೋಲಿಸ್ ಅಧಿಕಾರಿ ಕಾರ್ ನಿಲ್ಲಿಸಿದ್ದಾರೆ. ಮತ್ತು ನೂರು ರೂಪಾಯಿ ದಂಡ ವಿಧಿಸಿದ್ದಾರೆ.ಆ ಕೂಡಲೇ ಅಲ್ಲಿಗೆ ಬಂದ ಅಮೀರ್ ಅಂಗರಕ್ಷಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು . ಕೂಡಲೇ ಆ ಸಮಯದಲ್ಲಿ ವಾಹನದಿಂದ ಇಳಿದು ಬಂದು ಮಧ್ಯಪ್ರವೇಶಿಸಿದ ಅಮೀರ್ ಖಾನ್ ನೂರು ರೂಪಾಯಿ ದಂಡ ಪಾವತಿಸಿದರು ಎಂದು ಪಾಟೀಲ್ ತಿಳಿಸಿದ್ದಾರೆ.
No comments:
Post a Comment