ಆಂದ್ರದ ರೋಯೇಲ್ ಸೀಮೆ ಅನ್ನೋ ಹೆಸರು ಕೇಳಿದಾಕ್ಷಣ ಅಲ್ಲಿನ ಜನರು ಅವರ ಧಿಮಾಕು ಕಡಕ್ ವ್ಯಕ್ತಿತ್ವ ಆಡಂಬರ ಜೀವನ ಕಣ್ಣೆದುರು ಬಂದು ಹೋಗುತ್ತೆ. ರೋಯೇಲ್ ಸೀಮೆಯ ಬಗ್ಗೆ ಗೊತ್ತಿಲ್ಲದಿದ್ದರೆ ತೆಲುಗು ಚಿತ್ರಗಳನ್ನ ನೋಡಿದರೆ ಗೊತ್ತಾಗುತ್ತೆ ಅಲ್ಲಿನ ಜನ ಜನ ನಾಯಕ ಹೇಗಿರುತ್ತಾನೆ ಎಂದು. ಹೌದು ನಾವು ಹೇಳ ಹೊರಟಿದ್ದು ಕರ್ನಾಟಕದ ಮಾಜಿ ಮಂತ್ರಿ ಹಾಗೂ ಪ್ರಸ್ತುತ ಚಂಚಳಗೊಂಡ ಜೈಲ್ ನಲ್ಲಿ ಇರೋ ಜನಾರ್ದನ ರೆಡ್ಡಿ ಗಾರು ಅವರ ಬಗ್ಗೆ.
ಜನಾರ್ದನ ರೆಡ್ಡಿ ಮೂಲತಃ ಆಂದ್ರದ ರೋಯೇಲ್ ಸೀಮೆಯವರು ಅವರಲ್ಲಿ ಕೂಡ ರೋಯೇಲ್ ಸೀಮಾ ಜನರ ಎಲ್ಲಾ ಹವಾ ಬಾವ ಅದೇ ಜಬರ್ದಸ್ತು ಅದೇ ಸ್ಟೈಲ್ ಎಲ್ಲಾ ಇತ್ತು. ರೆಡ್ಡಿ ಅವರ ಜೀವನ ಸ್ಟೈಲ್ ದೇವೇಂದ್ರನನ್ನ ನಾಚಿಸುವಂತಿತ್ತು. ಕರ್ನಾಟಕ, ಆಂದ್ರದಲ್ಲಿ ಅಕ್ರಮ ಗಣಿಗಾರಿಕೆ ಮಾಡಿ ಅದೆಷ್ಟೋ ಕೋಟಿಯಷ್ಟು ಸಂಪತ್ತನ್ನ ಲೂಟಿ ಮಾಡಿ ಮಾಡಿದಂತ ಹಣವನ್ನ ತನ್ನ ರೋಯಲ್ ಲೈಫ್ ಸ್ಟೈಲ್ ಗೆ ಬಳಸಿಕೊಂಡರು. ರೆಡ್ಡಿಯ ಮನೆ “ಕುಟೀರ” ಹೆಸರಿಗೆ ಮಾತ್ರ ಕುಟೀರ ಆದ್ರೆ ದೇವೇಂದ್ರನ ದೇವಲೋಕಕ್ಕೆ ಸವಾಲೆಸೆಯುವಂತಿತ್ತು.
ಅ ಭರ್ಜರಿ ಅರಮನೆ ಬರೋಬ್ಬರಿ ೫ ಎಕರೆ ಪ್ರದೇಶವನ್ನ ಆವರಿಸಿಕೊಂಡ ಈ ಬಂಗಲೆ ಪೂರ್ತಿ ಏರ್ ಕಂಡೀಶನ್ ನಿಂದ ಕೊಡಿದೆ, ಬಂಗಲೆಯಲ್ಲಿ ಸಿನಿಮಾ ಥಿಯೇಟರ್ ಕೂಡ ಇತ್ತು, ಮನೆ ಪ್ರವೇಶ ಅಸ್ಟೊಂದು ಸುಲಭವಾಗಿರಲಿಲ್ಲ, ರೆಡ್ಡಿಯ ಅತೀ ಆಪ್ತರಿಗೆ ಮಾತ್ರ ಬಂಗಲೆ ಪ್ರವೇಶವಿತ್ತು, ಮನೆಯಲ್ಲಿ ಇದ್ದ ವಸ್ತುಗಳು ಯಾವುದೂ ಭಾರತದಲ್ಲ ಎಲ್ಲಾ ವಿದೇಶಿ, ಒಂದೊಂದು ವಸ್ತುವು ಕೋಟಿ ಕೋಟಿ ಬೆಲೆ ಬಾಳುವಂತದ್ದು, ರೆಡ್ಡಿ ಮನೆಯ ಹಾಲ್ ನಲ್ಲಿ ಒಂದು ತಿರುಪತಿ ತಿಮ್ಮಪ್ಪನ ಫೋಟೋ ಇತ್ತು ಅದರ ಬೆಲೆ ಎಷ್ಟು ಗೊತ್ತಾ ? ಬರೋಬ್ಬರಿ ಒಂದು ಕೋಟಿ ರೂಪಾಯಿ, ತಿರುಪತಿ ತಿಮ್ಮಪ್ಪನ ಪರಮ ಭಕ್ತರು ಕೊಡ ಹೌದು ರೆಡ್ಡಿ ಬ್ರದರ್ಸ್. ರೆಡ್ಡಿಗೆ ಅವರ ಮನೆಯಲ್ಲಿ ಕಡಿಮೆ ಅಂದರೆ ಒಂದು ಕೋಟಿ ನಗದು ಇರಬೇಕಿತ್ತು, ಇಲ್ಲಾ ಅಂದ್ರೆ ರೆಡ್ಡಿಗೆ ನೆಮ್ಮದಿ ಇರುತ್ತಿರಲಿಲ್ಲವಂತೆ. ಸಿ ಬಿ ಐ ನವರು ಡಾಳಿ ಮಾಡುವಾಗಲೂ ಅವರಿಗೆ ಒಂದು ಕೋಟಿ ನಗದು ರೆಡ್ಡಿ ಮನೆಯಲ್ಲಿ ಸಿಕ್ಕಿತು. ರೆಡ್ಡಿ ಕುಳಿತು ಕೊಳ್ಳುತ್ತಿದುದು ಸಿಂಹಾಸನದ ಮೇಲೆ, ಆ ಸಿಂಹಾಸನದ ಬೆಲೆ ಕೇವಲ ೨ ಕೋಟಿ, ಯಾರಾದರು ವಿ ಐ ಪಿ ಗಳು ಮನೆಗೆ ಬಂದರೆ ಆ ಸಿಂಹಾಸನದಲ್ಲಿ ಕುಳಿತು ಮಾತಾಡೋದು ರೆಡ್ಡಿ ಸ್ಟೈಲ್ ರೆಡ್ಡಿ. ಅವರಿಗೆ ಚಿನ್ನ ಅಂದ್ರೆ ಅಪಾರವಾದ ಪ್ರೀತಿ, ಆದರೆ ಮೈಮೇಲೆ ಒಂದು ತೊಟ್ಟು ಚಿನ್ನವನ್ನ ರೆಡ್ಡಿ ದರಿಸುತ್ತಿರಲಿಲ್ಲ, ಚಿನ್ನದ ತಟ್ಟೆಯಲ್ಲೇ ರೆಡ್ಡಿ ಊಟ ಮಾಡ್ತಿದ್ರು. ರೆಡ್ಡಿ ಮನೆಯವರು ಚಿನ್ನದ ಬಟ್ಟಲಿನಲ್ಲಿ ಊಟ ಮಾಡ್ತಿದ್ರು ಕುಡಿಯುವ ನೀರಿನ ಲೋಟ ಬೆಳ್ಳಿದ್ದು ಜನಾರ್ದನ ರೆಡ್ಡಿ ಯವರ ಮನೆ ಹೆಸರು “ಚಿನ್ನ” ಅಂತ ಚಿನ್ನ ಅಂದ್ರೆ ತೆಲುಗಿನಲ್ಲಿ ಬಂಗಾರ ಅಂತ. ರೆಡ್ಡಿ ಜಗತ್ತಿನ ಐಶಾರಾಮಿ ಕಾರ್ ಗಳನ್ನ ಹೊಂದಿದ್ದ. ಐಶಾರಾಮಿ ಬಸ್ ಒಂದಿತ್ತು ಅದರ ಹೆಸರು “ರುಕ್ಮಿಣಿ” ಹೆಲಿಕಾಪ್ಟರ್ ಹೆಸರು ಕೂಡ “ರುಕ್ಮಿಣಿ”, ಅವರು ಅತೀ ಹೆಚ್ಚು ಪ್ರಿತಿಸುತಿದ್ದುದು ಆ ಹೆಲಿಕಾಪ್ಟರ್ ಅನ್ನು. ಅವ್ರು ಅತೀ ಹೆಚ್ಚು ರುಕ್ಮಿಣಿಯನ್ನ ಬಳಸಿಕೊಂಡದ್ದು ಬೆಂಗಳೂರ್ ಟು ಬಳ್ಳಾರಿ ಮಾರ್ಗದಲ್ಲಿ. ಬೆಂಗಳೂರಿಗೆ ಹೋಗಿ ಬರಲು ತಗಲುತ್ತಿದ್ದ ವೆಚ್ಚ ರೆಡ್ಡಿ ಪ್ರಕಾರ ಜುಜುಬಿ ೬೦,೦೦೦. ರೆಡ್ಡಿ ಡ್ರೆಸಿಂಗ್ ಸ್ಟೈಲ್ ಕೂಡ ಅಷ್ಟೇ ಐಶಾರಾಮಿ ಅವರ ಹತ್ತಿರ ೩೦೦ ಕ್ಕೂ ಹೆಚ್ಚು ಸೂಟುಗಳಿದ್ದವು.
ಇದು ರೆಡ್ಡಿ ಲೈಫ್ ಸ್ಟೈಲ್, ಬಳ್ಳಾರಿಯನ್ನ ಲೂಟಿ ಮಾಡಿದ ರೆಡ್ಡಿಗಳು ಒಂದು ಹೊತ್ತಿನಲ್ಲಿ ಇಡೀ ಕರ್ನಾಟಕಕವನ್ನ ತಮ್ಮ ಮುಷ್ಟಿಯಲ್ಲಿ ಇಟ್ಟಿದ್ದರು. ಯಡಿಯೂರಪ್ಪ ಅವರ ಕುರ್ಚಿಯನ್ನ ಅನೇಕ ಬಾರಿ ಅಲುಗಾಡಿಸಿ ತಾವೆಷ್ಟು ಪವರ್ ಫುಲ್ ಅನ್ನೋದನ್ನ ತೋರಿಸಿದ್ದರು ಈ ಜನಾರ್ದನ ರೆಡ್ಡಿ.
ಇಂತಹ ರೆಡ್ಡಿ ಈಗ ಜೈಲಿನಲ್ಲಿ ಇದ್ದಾರೆ, ಪಾಪದ ಹಣ ಯಾವತ್ತೂ ಕ್ಷಣಿಕ ಮಾತ್ರ, ಕೊನೆ ತನಕ ಇರಲು ಸಾದ್ಯವಿಲ್ಲ ಅನ್ನೋದು ಇಲ್ಲ್ಲಿ ಸಾಬಿತಾಗುತ್ತೆ.
No comments:
Post a Comment