ರಿಯಾದ್ : ಸೌದಿ ಅರೇಬಿಯಾದ ಜನರಿಗೆ ಕ್ರಿಕಟ್ ಅಂದರೆ ಸರಿಯಾಗಿ ಮಾಹಿತಿ ಇಲ್ಲ. ಸೌದಿ ಅರೇಬಿಯಾದಲ್ಲಿ ೯೯ % ಜನರು ಫುಟ್ಬಾಲ್ ಪ್ರಿಯರು, ಜಗತ್ತಿನ ಯಾವ ಕಡೆ ಫುಟ್ಬಾಲ್ ನಡೆಯುತ್ತಿದ್ದರೆ ಸೌದಿ ಮಂದಿ ದೂರದರ್ಶನ ಮುಂದೆ ಹಾಜರು. ಅದೇ ಸೌದಿ ಅರೇಬಿಯಾಕ್ಕೆ ಕ್ರಿಕೆಟ್ ಜ್ವರವನ್ನ ಹಚ್ಚಲು ಏಶಿಯನ್ ಕ್ರಿಕೆಟ್ ಮಂಡಳಿ ಮುಂದಾಗಿದೆ, ಮಿಡಲ್ ಈಶ್ಟ್ ನಲ್ಲಿ ಈಗಾಗಲೇ ಕ್ರಿಕೆಟ್ ತನ್ನ ಅಸ್ತಿತ್ವವನ್ನು ಸಂಪಾದಿಸಲು ಹೊರಟಿದ್ದು ದುಬೈ, ಒಮಾನ್, ಕುವೈತ್ ಸೇರಿದಂತೆ ಅನೇಕ ಅರಬ್ ರಾಷ್ಟ್ರಗಳಲ್ಲಿ ಕ್ರಿಕೆಟ್ ಈಗಾಲೇ ಪ್ರಚಲಿತದಲ್ಲಿ ಇದೆ.
ಆದರೆ ಸೌದಿ ಅರೇಬಿಯಾದಲ್ಲಿ ಜನ ಫುಟ್ಬಾಲ್ ಗುಂಗಿನಲ್ಲಿ ತೇಲುತ್ತಿರುವಾಗ ಕ್ರಿಕೆಟ್ ಬಗ್ಗೆ ಅಷ್ಟೊಂದು ಆಸಕ್ತಿಯನ್ನು ಇಲ್ಲಿನ ಜನ ತೋರಿಸುತ್ತಿಲ್ಲ ಇದರ ಹಿನ್ನಲೆಯಲ್ಲಿ ಇದೇ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯುವ “ಗಲ್ಫ್ ಕಪ್ ” ಕ್ರಿಕೆಟ್ ಟೂರ್ನಿಯನ್ನು ಸೌದಿ ಅರೇಬಿಯಾದಲ್ಲಿ ನಡೆಸಲು ಏಶಿಯನ್ ಕ್ರಿಕೆಟ್ ಮಂಡಳಿ ವೇದಿಕೆಯನ್ನು ಸಿದ್ದಪಡಿಸಿದೆ. ಹಿಂದಿನ ವರ್ಷ ನಡೆದ ಗಲ್ಫ್ ಕಪ್ UAE ಯಲ್ಲಿ ನಡೆದು ಅಭೂತಪೂರ್ವ ಯಶಸ್ಸನ್ನು ಗಳಿಸಿತ್ತು . ಸೌದಿ ಅರೇಬಿಯಾ ಜನತೆ ಕ್ರಿಕೆಟ್ ಆಟವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕು.
No comments:
Post a Comment