Powered By Blogger

Sunday, 16 October 2011

ಆಡ್ವಾಣಿ ನೇತೃತ್ವದ ರಥಯಾತ್ರೆ 31 ರಂದು ಮಂಗಳೂರಿಗೆ



ಮಂಗಳೂರು : ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಹೊರಟಿರುವ ಎಲ್.ಕೆ.ಆಡ್ವಾಣಿ ನೇತೃತ್ವದ ರಥಯಾತ್ರೆ ಇದೆ ತಿಂಗಳ ೩೧ ರಂದು ಮಂಗಳೂರಿಗೆ ಆಗಮಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಅಕ್ಟೋಬರ್ ೩೧ ರಂದು ಬೆಳಿಗ್ಗೆ ಮಂಗಳೂರಿಗೆ ಆಗಮಿಸಲಿರುವ ಅಡ್ವಾಣಿ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಲಿದ್ದಾರೆ. ೧೦ ಗಂಟೆಗೆ ಸೆಂಟ್ರಲ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ, ಬಳಿಕ ರಥಯಾತ್ರೆ ಉಡುಪಿಯತ್ತ ಸಾಗಲಿದ್ದು, ನವೆಂಬರ್ ಒಂದರಂದು ಕಾರವಾರ ತಲುಪಲಿದೆ ಎಂದು ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರಥಯಾತ್ರೆ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸುಮಾರು ಒಂದು ಸಾವಿರ ಬಿಜೆಪಿ ಕಾರ್ಯಕರ್ತರು ಬೆಳ್ತಂಗಡಿಯಿಂದ ಪಾದಯಾತ್ರೆ ಮೂಲಕ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

No comments:

Post a Comment