Powered By Blogger

Saturday 15 October 2011

ಕೇವಲ 1,700 ರೂ ಗೆ ಟ್ಯಾಬ್ಲೆಟ್ ಕಂಪ್ಯೂಟರ್ !!


ನವದೆಹಲಿ : ವಾಣಿಜ್ಯ ಉತ್ಪನ್ನವಾಗಿ, ಸಬ್ಸಿಡಿಯಿಲ್ಲದೆಯೂ ಮೂರು ಸಾವಿರ ಬೆಲೆಯಲ್ಲಿ ಜನರಿಗೆ ಲಭ್ಯವಾಗುವ ನಿರೀಕ್ಷೆಯಿರುವ ಆಕಾಶ್ ಟ್ಯಾಬ್ಲೆಟ್ ಸಾಧನ, ಬಿಡುಗಡೆಯಾಗಿ ಸುದ್ದಿಯಲ್ಲಿದೆ. ವಾಣಿಜ್ಯ ಮಾದರಿಯಲ್ಲಿ ಸೆಲ್‌ಪೋನ್ ಮಾಡೆಮ್ ಇರುವ ಕಾರಣ, ಇದರಲ್ಲಿ ಅಂತರ್ಜಾಲವನ್ನು ಮೊಬೈಲ್ ಜಾಲದ ಮೂಲಕವೂ ಪಡೆಯಬಹುದು. ಸರಕಾರಕ್ಕೆ ಒದಗಿಸುವ ಮಾದರಿಯಲ್ಲಿ ವೈ-ಫೈ ಮೂಲಕ ಅಂತರ್ಜಾಲ ಪಡೆಯಬೇಕಷ್ಟೆ. ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆ ಹೊಂದಿದ ಟ್ಯಾಬ್ಲೆಟ್ ಇನ್ನೆರಡು ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಬಹುದು. ಡೇಟಾವಿಂಡ್ ಕಂಪೆನಿಯಿದನ್ನು ತಯಾರಿಸಿದೆ. ಚೀನೀ ಬಿಡಿಭಾಗಗಳೇ ಅದು ಅಗ್ಗವಾಗಿರುವ ಗುಟ್ಟು. ವಿದ್ಯಾರ್ಥಿಗಳಿಗೆ ವಿನಾಯಿತಿ ದರ 1,700 ರುಪಾಯಿ. ಆಕಾಶ್ ಹೆಸರಿನ ಈ ಟ್ಯಾಬ್ಲೆಟ್ ಯಾವಾಗ ಕೈ ಸೇರುತ್ತದೆ ಎಂದು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದಾರೆ.
ಆಕಾಶ್ ವಿಶೇಷತೆಗಳು : 256 ಎಂಬಿ RAM, 7 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ, ನಿಸ್ತಂತು ಇಂಟರ್ ನೆಟ್ ಸೌಲಭ್ಯ, ಮಲ್ಟಿಮೀಡಿಯಾ ಪ್ಲೇಯರ್, ಕೀಬೋರ್ಡ್ ಕೂಡ ಜೋಡಿಸಬಹುದು, 2 ಜಿಬಿ ಇನ್ ಬಿಲ್ಟ್ ಮೆಮೊರಿ, 32 ಜಿಬಿ ವರೆಗೆ ವಿಸ್ತರಿಸಬಹುದು, ಬ್ಯಾಟರಿ ಬ್ಯಾಕಪ್ 3 ಗಂಟೆ.
ಜಗತ್ತಿಗೆ ಅತೀ ಅಗ್ಗದ ನ್ಯಾನೊ ಕಾರು ಪರಿಚಯಿಸಿಕೊಟ್ಟ ನಮ್ಮ ದೇಶ ಇದೀಗ ಅಗ್ಗದ ಟ್ಯಾಬ್ಲೆಟ್ ಕಂಪ್ಯೂಟರ್ ಕೂಡಾ ಪರಿಚಯಿಸಲು ಹೊರಟಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ಸಂಗತಿಯಾಗಿದೆ.

No comments:

Post a Comment