Powered By Blogger

Thursday 13 October 2011

ಹಜ್ ನಿರ್ವಹಿಸಲು ತಲುಪಿದ ಮೂವತ್ತನಾಲ್ಕು ಸಾವಿರಕ್ಕೂ ಅಧಿಕ ಭಾರತೀಯರು



ಜಿದ್ದಾ  ( ಸೌದಿ ಅರೇಬಿಯಾ) :ಪವಿತ್ರ ಹಜ್ ನಿರ್ವಹಿಸಲು ಭಾರತದಿಂದ ಒಟ್ಟು ಮೂವತ್ತನಾಲ್ಕು ಸಾವಿರದ ಏಳುನೂರ ಎರಡು ಯಾತ್ರಿಗಳು ಈಗಾಗಲೇ ಸೌದಿ ಅರೇಬಿಯಾಕ್ಕೆ ಬಂದಿಳಿದಿದ್ದಾರೆ . ಭಾರತದ ವಿವಿಧ ನಗರಗಳಿಂದ ಒಟ್ಟು ನೂರ ಇಪ್ಪತ್ತೇಳು ಭಾರತೀಯ  ವಿಮಾನಗಳಲ್ಲಿ ಈ ಯಾತ್ರಿಕರು ಬಂದಿದ್ದು ಇವರ ಪೈಕಿ ಶನಿವಾರದವರೆಗೆ ೧೮೨೩ ಯಾತ್ರಿಗಳು ಮಕ್ಕಾ ನಗರದಲ್ಲೂ ೩೨೮೭೯ ಯಾತ್ರಿಗಳು ಮದೀನಾ ನಗರದಲ್ಲೂ ಇದ್ದಾರೆ ಎಂದು ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ . ಮೊದಲು ಬಂದ ಹಲವು ಯಾತ್ರಿಗಳು ಈಗಾಗಲೇ ಮಕ್ಕಾ ನಗರದಿಂದ ಮದೀನಾ ನಗರಕ್ಕೆ ಪ್ರಯಾಣಿಸಿದ್ದಾರೆ.
ಮಂಗಳೂರಿನಿಂದ ಬಂದ ಹಜ್ ತಂಡದಲ್ಲಿ ಒಟ್ಟು ೧೬೦ ಯಾತ್ರಾರ್ಥಿಗಳಿದ್ದು , ನವದೆಹಲಿಯಿಂದ ಬಂದ ಯಾತ್ರಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಸರ್ಕಾರಿ ಹಜ್ ಸಮಿತಿಯ ಮುಖಾಂತರ ಮತ್ತು ಹಲವು ಖಾಸಗಿ ಹಜ್ ಅಪರೇಟರ್ ಕಂಪೆನಿಗಳ ಮೂಲಕ ಈ ಯಾತ್ರಾರ್ಥಿಗಳು ಮಕ್ಕಾ ತಲುಪಿದ್ದಾರೆ.  ವಿಶ್ವದ ಬಹುತೇಕ ರಾಷ್ಟ್ರಗಳಿಂದ ಹಜ್ ಯಾತ್ರಾರ್ಥಿಗಳು ಮಕ್ಕಾ ಮದೀನಾ ತಲುಪಿದ್ದು ಈಗಾಗಲೇ ಅನಧಿಕೃತವಾಗಿ ಪಾಸ್ ಇಲ್ಲದೇ ಮಕ್ಕಾ ನಗರ ಪ್ರವೇಶಿಸುವುದನ್ನು ತಡೆಗಟ್ಟಲು ಮಕ್ಕಾ ಪ್ರವೇಶ ದ್ವಾರದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಹಜ್ ನಿರ್ವಹಿಸಲು ಅನುಮತಿ ಪತ್ರ ಹೊಂದಿರುವವರಿಗೆ ಮಾತ್ರ ಮಕ್ಕಾ ನಗರಕ್ಕೆ ಪ್ರವೇಶ ನೀಡಲಾಗುತ್ತಿದೆ.

AZAAN


ಫೇಸ್ ಬುಕ್ ನಲ್ಲಿ ಬರೆದ ಸಂದೇಶವನ್ನು ಲೈಕ್ ಮಾಡದ ಪತ್ನಿಗೆ ಹಲ್ಲೆ



ಟೆಕ್ಸಾಸ್ : ತನ್ನ ಫೇಸ್ ಬುಕ್ ಪುಟದಲ್ಲಿ ತನ್ನ ತಾಯಿಯ ಮರಣದ ವಾರ್ಷಿಕ ಅನುಸ್ಮರಣೆಯ ಕುರಿತಾದ ಬರೆದ ಸಂದೇಶವನ್ನು ಲೈಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮೆಕ್ಸಿಕೋ ನಗರದಿಂದ  ವರದಿಯಾಗಿದೆ. ಮೂವತ್ತಾರು ವರ್ಷದ ಬೆನಿಟೊ ಅಪಾಲಿನಾರ್ ಎಂಬ ಈ ವ್ಯಕ್ತಿ ತೀರಿಕೊಂಡ ತನ್ನ ತಾಯಿಯ ನೆನೆಪಿನಲ್ಲಿ ಆಕೆಯ ನಿಧನದ ವಾರ್ಷಿಕೋತ್ಸವದಂದು ತನ್ನ ಫೇಸ್ ಬುಕ್ ಪುಟದಲ್ಲಿ ಸಂದೇಶ ಬರೆದಿದ್ದ. ಈ ಸಂದೇಶವನ್ನು ಆತನ ಅನೇಕ ಮಿತ್ರರು ಲೈಕ್ ಮಾಡಿದ್ದರು.
ಆದರೆ ಆತನ ಪತ್ನಿ ಮಾತ್ರ ಈ ಸಂದೇಶವನ್ನು ನೋಡಿಯೂ ಲೈಕ್ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಆತ ಇಡೀ ಫೇಸ್ ಬುಕ್ ಗೆಳೆಯರ ಹಿಂಡೇ ತನ್ನ ಸಂದೇಶವನ್ನು ಲೈಕ್ ಮಾಡಿದೆ. ಆದರೆ ನೀನು ಮಾತ್ರ ಬೇಕೆಂದೇ ನನ್ನ ತಾಯಿಯ ಮೇಲಿನ ದ್ವೇಷದಿಂದ ಲೈಕ್ ಮಾಡಿಲ್ಲ ಎಂದು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆತನ ಪತ್ನಿ ಮೆಕ್ಸಿಕೋ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಈ ದಂಪತಿಗಳು ಮದುವೆಯಾಗಿ ಈಗಾಗಲೇ ಹದಿನೈದು ವರ್ಷವಾಗಿದೆ. ಪತ್ನಿ ನೀಡಿದ ದೂರಿನ ಆಧಾರದ ಮೇಲೆ  ಪೊಲೀಸರು ಈತನನ್ನು ಬಂಧಿಸಿದ್ದಾರೆ.

Prashant Bhushan Attacked For His Kashmir Statement

“ರಾಂಪಣ್ಣ “ನ ಪತ್ನಿ ಇನ್ನಿಲ್ಲ..



ಮಂಗಳೂರು :ಕಂಕನಾಡಿ “ರಾಂಪಣ್ಣ ” ಎಂದೇ ಖ್ಯಾತರಾಗಿದ್ದ ದಿ / ಜಪ್ಪಿನಮೊಗರು ರಾಮಪ್ಪನ ಪತ್ನಿ ಕಮಲಾ ರವರು ಜಪ್ಪಿನ ಮೊಗರು ಮೊಗೆರು ಮನೆಯ ಸ್ವಗ್ರಹದಲ್ಲಿ ನಿಧನರಾದರು .ಇವರಿಗೆ ೮೨ ವಯಸಾಗಿತ್ತು.
ರಾಮಪ್ಪ ರಂತೆಯೇ ಸಮಾಜ ಸೇವಾ ರಂಗದಲ್ಲಿ ಕೂಡ ತೊಡಗಿದ್ದರು .ಬಡವರಿಗೆ ಹೊಟ್ಟೆ ತುಂಬಾ ಊಟ ಕೊಡುವ ಜನತಾ ಹೋಟೆಲನ್ನು ಕಂಕನಾಡಿಯಲ್ಲಿ ಸ್ಥಾಪಿಸಿದ್ದ ರಾಮಪ್ಪ ರ ದಾರಿಯಲ್ಲಿಯೇ ಕಮಲಾ ರವರು ಕೂಡ ತೊಡಗಿದ್ದರು .ಮೃತರ ಅಂತಿಮ ದರ್ಶನಕ್ಕೆ ಸಾವಿರಾರು ಮಂದಿ ಜಮಾಯಿಸಿದರು.ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ ,ಕಾಂಗ್ರೆಸ್ಸ್ ನಾಯಕ ಹರಿಕೃಷ್ಣ ಬಂಟ್ವಾಳ್. ಅಲ್ಲದೆ ಹಲವು ವ್ಯಕ್ತಿಗಳು ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ನೌಕರರಿಗೆ ಕೆಲಸ ಬದಲಾಯಿಸುವಾಗ ಬೇಕಾಗಿದ್ದ ನೋ ಅಬ್ಜೆಕ್ಷನ್ ಸರ್ಟಿಫಿಕೆಟ್ ನಿಯಮ ರದ್ದು ಪಡಿಸಿದ ಯುಎಇ



ದುಬೈ : ಇಲ್ಲಿನ ವಿದೇಶಿ ಕಾರ್ಮಿಕರು ತಮ್ಮ ಕೆಲಸವನ್ನು ಒಂದು ಕಂಪೆನಿ ಅಥವಾ ಮಾಲೀಕನಿಂದ ಇನ್ನೊಂದು ಕಂಪೆನಿ ಅಥವಾ ಮಾಲೀಕನಿಗೆ ಬದಲಾಯಿಸುವಾಗ ಪಡೆಯಬೇಕಿದ್ದ ನೋ ಅಬ್ಜೆಕ್ಷನ್ ಸರ್ಟಿಫಿಕೆಟ್ ನಿಯಮವನ್ನು ಯು.ಎ.ಇ. ಕಾರ್ಮಿಕ ಇಲಾಖೆ ರದ್ದು ಪಡಿಸಿದೆ. ಇನ್ನು ಮುಂದೆ ಕೆಲಸ ಬದಲಾಯಿಸುವವರು ತಮ್ಮ ಹಳೆಯ ಮಾಲೀಕರಿಂದ ಈ ಸರ್ಟಿಫಿಕೆಟ್ ಪಡೆಯುವ ಅವಶ್ಯಕತೆ ಇರುವುದಿಲ್ಲ.
ಸೋಮವಾರ ನಡೆದ ಕಾರ್ಮಿಕ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಇಲ್ಲಿರುವ ಭಾರತೀಯರ ಸಹಿತ ಲಕ್ಷಾಂತರ ವಿದೇಶಿ ಕಾರ್ಮಿಕರಿಗೆ ಈ ನೂತನ ನಿಯಮ ಅನುಕೂಲವಾಗಲಿದೆ .

ಶಸ್ತ್ರಕ್ರಿಯೆಗೆ ಒಳಪಡಲಿರುವ ಸೌದಿ ರಾಜ



ರಿಯಾದ್ : ಸೌದಿ ಅರೇಬಿಯಾ ರಾಜ ಅಬ್ಧುಲ್ಲ ರವರು ಮುಂದಿನ  ದಿನಗಳಲ್ಲಿ ಶಸ್ತ್ರ ಕ್ರಿಯೆಗೆ ಒಳಪದಲಿದ್ದಾರೆ ಎಂದು ಸೌದಿ ಅರೇಬಿಯಾ ದ ಅರೇಬಿಕ್ ಪತ್ರಿಕೆ ಯೊಂದು ವರದಿ ಮಾಡಿದೆ. ಕಳೆದ ವರ್ಷ ಅಮೆರಿಕದಲ್ಲಿ ಚಿಕತ್ಸೆ ಪಡೆದು ವಾಪಾಸಾಗಿದ್ದ ರಾಜ ಅಬ್ಧುಲ್ಲ ರ  ಅರೋಗ್ಯಮಟ್ಟದಲ್ಲಿ ಸುದಾರಣೆ ಗೊಂಡಿತ್ತು .
ಇತ್ತಿಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿನ ಅನಾರೋಗ್ಯದಿಂದ ರಾಜ ಬಳಲುತ್ತಿದ್ದಾರೆ ಎಂದು  ಪತ್ರಿಕೆ ವರದಿ ಮಾಡಿದೆ . ೮೮ ರ ವಯೋಮಿತಿಯ ರಾಜ ಅಬ್ದುಲ್ಲ ಅತೀ  ಶ್ರೀಮಂತ ರಾಜ ಮನೆತನದ ವ್ಯಕ್ತಿ. ಸೌದಿ ಅರೇಬಿಯಾ ಆರ್ಥಿಕವಾಗಿ ಬಲಗೊಳ್ಳಲು ರಾಜ ಅಬ್ದುಲ್ಲ ರ  ಕೊಡುಗೆ ಅಪಾರವಾಗಿದೆ.

ಟೀಮ್ ಅಣ್ಣಾ ತಂಡದ ಸದಸ್ಯ ಪ್ರಶಾಂತ್ ಭೂಷಣ್ ಮೇಲೆ ಅವರ ಕಛೇರಿಯಲ್ಲೇ ಹಲ್ಲೆ

ಪವಿತ್ರ ಹಜ್ ಹೊತ್ತಿನಲ್ಲಿ ಸೌದಿ ಅರೇಬಿಯಾ ಪೊಲೀಸರಿಗೆ ವಿಶೇಷ ತ್ರಿಚಕ್ರ ವಾಹನ



 
ಜಿದ್ದಾ:ಪವಿತ್ರ ಹಜ್ ಹತ್ತಿರ ಬರುತ್ತಿದ್ದಂತೆ ಸೌದಿ ಅರೇಬಿಯಾದಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನೂ ಇಲ್ಲಿನ ಸರಕಾರ ಮಾಡುತ್ತಿದೆ . ಜಗತ್ತಿನ ವಿವಿಧ ದೇಶಗಳಿಂದ ಬರುವ ಹಜ್ ಯಾತ್ರರ್ತಿಗಳ ಸಂಖ್ಯೆ ಹೆಚ್ಚಿರುದರಿಂದ ಸೌದಿ ಪೊಲೀಸರಿಗೆ ಅನುಕೂಲವಾಗುವಂತ ತ್ರಿಚಕ್ರ ವಾಹನವನ್ನ ಸೌದಿ ಸರಕಾರ ನೀಡುತ್ತಿದೆ. ಇದರ ಹೆಸರು T3 Motion series electric standup vehicle (ESV) ಎಂದಾಗಿದೆ.
 
ಈ ವಾಹನದಲ್ಲಿ ಲ್ಯಾಪ್ ಟಾಪ್ ಸೌಲಬ್ಯ ಲೈಟಿಂಗ್, ಅಲಾರಂ ವ್ಯವಸ್ತೆ ಇದ್ದೂ ಗಂಟೆ ಗೆ ೩೫ ಕೀ ಮೀ  ಚಲಿಸುವ ಈ ವಾಹನ ಆಧುನಿಕ ಸೌಲಬ್ಯಗಳನ್ನು ಒಳಗೊಂಡಿದ್ದು ಈ ವಾಹನ ವಿಶೇಷತೆ. ಇದನ್ನು California-based US ಕಂಪನಿ ತಾಯರಿಸಲ್ಪಟ್ಟ ಈ ತ್ರಿಚಕ್ರ ವಾಹನವನ್ನು ಸೌದಿ ಅರೇಬಿಯಾ ದ ಪ್ರತಿಷ್ಟಿತ ಕಂಪೆನಿಯೊಂದಲ್ಲಾದ  Balubaid Automotive ಕಂಪನಿಯ ಅಬೂಬಕ್ಕರ್ ಒಮರ್ ಬಾಲೂ ಬೈದ್ ಅವರು ಈವಾಗಲೇ ೨೦ ವಾಹನಗಳನ್ನು ಸೌದಿ ಅರೇಬಿಯಾ ಕ್ಕೆ ಆಮದಿಸಿದ್ದಾರೆ.
 
ಈ ವಾಹನಗಳು ಆದಷ್ಟು ಬೇಗ ಜಿದ್ಧಾ ಇಸ್ಲಾಮಿಕ್ ಪೋರ್ಟ್ ತಲುಪಲಿದೆ ಎಂದುಅಬೂಬಕ್ಕರ್ ಒಮರ್ ಬಾಲೂ ಬೈದ್ ಅವರು ತಿಳಿಸಿದ್ದಾರೆ . ಹಜ್ಜ್ ಹೊತ್ತಿನಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ಎಲ್ಲಾ ತಯಾರಿಯನ್ನ ಸೌದಿ ಸರಕಾರ ನಡೆಸುತ್ತಿದೆ ಎಂದು ಸೌದಿ ಮೂಲಗಳಿಂದ ತಿಳಿದು ಬಂದಿದೆ .

ಪ್ರಶಾಂತ್ ಭೂಷಣ್ ಮೇಲೆ ದಾಳಿ ನಡೆಸಿದ ಆರೋಪಿ ಶ್ರೀರಾಮ ಸೇನೆ ದೆಹಲಿ ಘಟಕದ ಅಧ್ಯಕ್ಷ



ನವದೆಹಲಿ : ಅಣ್ಣಾ ಹಜಾರೆ ತಂಡದ ಸದಸ್ಯ , ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೇಲೆ ಹಲ್ಲೆ ನಡೆಸಿ ಸಿಕ್ಕಿಬಿದ್ದ ಆರೋಪಿ ಇಂದರ್ ವರ್ಮಾ ತನಿಖೆಯ ವೇಳೆ ತಾನು ಶ್ರೀರಾಮ ಸೇನೆಯ ದೆಹಲಿ ವಿಭಾಗದ ಅಧ್ಯಕ್ಷ ಎಂದು ಹೇಳಿಕೊಂಡಿದ್ದಾನೆ . ದೆಹಲಿ ನಿವಾಸಿಯಾಗಿರುವ ಇಂದರ್ ವರ್ಮಾ ತಾನು  ಭಗತ್ ಸಿಂಗ್ ಕ್ರಾಂತಿ ಸೇನೆಯ ಅಧ್ಯಕ್ಷ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಜೊತೆ ಸೇರಿ ಈ ದಾಳಿ ನಡೆಸಿದ್ದು ಕಾಶ್ಮೀರ ಕುರಿತಾದ ಭೂಷಣ್ ಹೇಳಿಕೆಗೆ ಪ್ರತಿಯಾಗಿ ಈ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ .
ದಾಳಿಯ ನಂತರ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ನಂತರ ಪೊಲೀಸರಿಗೆ ಹೇಳಿಕೆ ನೀಡಿದ ಭೂಷಣ್ ಆನಂತರ ಪತ್ರಿಕಾಗೋಷ್ಠಿ ನಡೆಸಿ ದಾಳಿಗೆ ಕಾರಣರಾದ ಶ್ರೀರಾಮ ಸೇನೆ , ನೂತನ ಭಗತ್ ಸಿಂಗ್ ಕ್ರಾಂತಿ ಸೇನೆ ಹಾಗೂ ಈ ರೀತಿಯ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದರು. ತನ್ನ ಮೇಲೆ ದಾಳಿ ನಡೆಸಿದ ಒಬ್ಬ ಆರೋಪಿ ಈಗಾಗಲೇ ಪೋಲೀಸರ ವಶದಲ್ಲಿದ್ದು ದಾಳಿಗೆ ಕಾರಣರಾದ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಭೂಷಣ್ ತಿಳಿಸಿದರು .

ಹಜ್ಜ್ ಯಾತ್ರೆ ಕೈಗೊಂಡ ೫ ಮಂದಿ ಭಾರತೀಯರು ಮೃತ



ಜಿದ್ದಾ : ಪವಿತ್ರ  ಹಜ್ ಯಾತ್ರೆ ಕೈಗೊಂಡಿರುವ ಐವರು ಭಾರತೀಯ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಮೃತ ಪಟ್ಟಿದ್ದಾರೆ.ಈ ಪೈಕಿ ನಾಲ್ವರು ಭಾರತೀಯ ಹಜ್ ಸಮಿತಿಯಿಂದ ಬಂದಿದ್ದು ಮತ್ತೊಬ್ಬರು ಖಾಸಗಿ ಪ್ರವಾಸ ನಡೆಸುವ ಸಂಸ್ಥೆಯಿಂದ ಬಂದವರು ಎಂದು ಭಾರತೀಯ ದೂತಾವಾಸ ಕಚೇರಿ ಮಂಗಳವಾರ ಸಂಜೆ ತಿಳಿಸಿದೆ.ಪವಿತ್ರ  ಹಜ್ ಯಾತ್ರೆಗೆ ಭಾರತದಿಂದ ಇಲ್ಲಿಗೆ ಒಟ್ಟು 42,929 ಯಾತ್ರಾರ್ಥಿಗಳು  ಬಂದಿದ್ದು . ಇವರಲ್ಲಿ 7,852 ಮಂದಿ ಮೆಕ್ಕಾ ಪಟ್ಟಣದಲ್ಲಿ ವಾಸವಾಗಿ ಉಳಿದ  35,073 ಯಾತ್ರಾರ್ಥಿಗಳು   ಮದೀನಾದಲ್ಲಿ  ವಾಸವಾಗಿದ್ದಾರೆ .