Powered By Blogger

Friday 2 September 2011

MOHAMMAD AYAN MANGALORE REPORTING


ಇಸ್ಲಾಮ್ ಹಂದಿ ಮಾಂಸ (Pork) ಸೇವನೆಯನ್ನು ನಿಷಿದ್ಧಗೊಳಿಸಿದೆ ಎಂಬುದು ಎಲ್ಲರೂ ತಿಳಿದಿರುವ ವಿಚಾರವಾಗಿದೆ. ಹಂದಿ ಮಾಂಸವು ತ್ಯಾಜ್ಯ ಯೋಗ್ಯವೇ ಸರಿ ಎಂಬುದನ್ನು ಈ ಕೆಳಗಿನ ಅಂಶಗಳು ಸ್ಪಷ್ಟಪಡಿಸುತ್ತವೆ.
1. ಕುರ್‌ಆನ್‌ನಲ್ಲಿ ಹಂದಿ ಮಾಂಸ ನಿಷೇಧ:
ಕುರ್‌ಆನ್ ನಾಲ್ಕು ಸ್ಥಳಗಳಲ್ಲಿ ಹಂದಿ ಮಾಂಸ ಸೇವನೆಯನ್ನು ನಿಷಿದ್ಧಗೊಳಿಸಿದೆ.
ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರ ಹೆಸರಿನಲ್ಲಿ ಕೊಯ್ಯಲ್ಪಟ್ಟ ಪ್ರಾಣಿ ನಿಮಗೆ ನಿಷಿದ್ಧವಾಗಿದೆ. (5/3)
ಒಬ್ಬ ಮುಸ್ಲಿಮನಿಗೆ ಒಂದು ವಸ್ತು ಅಥವಾ ವಿಷಯವನ್ನು ತೊರೆಯಲು ಕುರ್‌ಆನ್‌ನ ಚಿಕ್ಕದೊಂದು ಸೂಕ್ತಿಯೇ ಧಾರಾಳ ಸಾಕು. ಕುರ್‌ಆನ್ ಹೇಳಿತೆಂದರೆ ಮುಗಿಯಿತು.
ನಿಷೇಧವನ್ನು ವಿಧಿಸುವ ಕುರ್‌ಆನ್‌ನ ಇತರ ಸೂಕ್ತಿಗಳು: 2/173; 6/145; 16/115.

2. ಹಂದಿ ಮಾಂಸವನ್ನು ನಿಷೇಧಿಸುವ ಬೈಬಲ್:
ಈ ಬಗ್ಗೆ ಓರ್ವ ಕ್ರೈಸ್ತನಿಗೆ ಬೈಬಲ್ ಮೂಲಕ ಮನವರಿಕೆ ಮಾಡಿಕೊಟ್ಟರೆ ಅದುವೇ ಧಾರಾಳವಾಗಬಹುದು ಎಂದು ನನ್ನ ಅನಿಸಿಕೆ. ಈ ಕೆಳಗಿನ ಸ್ಥಳಗಳಲ್ಲಿ ಬೈಬಲ್ ಕೂಡಾ ಹಂದಿ ಮಾಂಸವನ್ನು ನಿಷೇಧಿಸುತ್ತದೆ.
ಹಂದಿಯ ಗೊರಸು ಸೀಳಿಯದೆ; ಆದರೂ ಅದು ಮೆಲುಕುಹಾಕುವದಿಲ್ಲವಾದದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು; ಇವುಗಳನ್ನು ಅಶುದ್ಧವೆಂದೆಣಿಸಬೇಕು. (ಯಾಜಕಕಾಂಡ 11/7-8)
ಹಂದಿಯ ಗೊರಸು ಸೀಳಿದ್ದರೂ ಅದು ಮೆಲುಕುಹಾಕುವದಿಲ್ಲವಾದದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಕೂಡದು; ಇವುಗಳ ಹೆಣವನ್ನು ಮುಟ್ಟಕೂಡದು. (ಧರ್ಮೋಪದೇಶಕಾಂಡ 14/8)
ಯೆಶಾಯ ಪುಸ್ತಕದ 65ನೇ ಅಧ್ಯಾಯದ 2, 3 ವಚನಗಳಲ್ಲೂ ಹಂದಿ ಮಾಂಸ ನಿಷೇಧಿಸಲ್ಪಟ್ಟಿದೆ.

3. ಹಂದಿ ಮಾಂಸದಿಂದ ಹಲವು ರೋಗಗಳು:
ಇಲ್ಲಿ ತಿಳಿಸಿದ ಕುರ್‌ಆನ್ ಹಾಗೂ ಬೈಬಲ್‌ನ ಸೂಕ್ತಿಗಳು ಮುಸ್ಲಿಮ್ ಹಾಗೂ ಕ್ರೈಸ್ತ ಸಹೋದರರಿಗೆ ಸಾಕಾಗಬಹುದಾದರೂ ಅನ್ಯ ಧರ್ಮೀಯರು ಹಾಗೂ ನಿರೀಶ್ವರವಾದಿಗಳು ಇದನ್ನು ಒಪ್ಪಲಾರರು. ಇವರಿಗೆ ಮನವರಿಕೆ ಮಾಡಬೇಕಾದಲ್ಲಿ ಯುಕ್ತಿ ಹಾಗೂ ವಿಜ್ಞಾನದ ನೆರವು ಬೇಕಾಗುತ್ತದೆ. ಹಂದಿ ಮಾಂಸ ಸೇವನೆಯಿಂದ ಸುಮಾರು ಎಪ್ಪತ್ತು ವಿಧದ ರೋಗಗಳು ಬಾಧಿಸುವ ಸಾಧ್ಯತೆಗಳಿವೆ. ಮನುಷ್ಯ ದೇಹವು Round worm, Pin worm, Hook worm ಮುಂತಾದ ರೋಗಕಾರಕ ಕ್ರಿಮಿಗಳ ತಾಣಗಳಾಗಿ ಮಾರ್ಪಡಬಹುದು. Taenia Solium ಎಂಬುದು ಅತ್ಯಂತ ಅಪಾಯಕಾರಿಯಾಗಿದ್ದು ಇದನ್ನು ಆಡುಭಾಷೆಯಲ್ಲಿ Tape worm ಎನ್ನಲಾಗುತ್ತದೆ. ಅತ್ಯಂತ ಉದ್ದವಾಗಿರುವ ಇದರ ತಾಣವೇ ಕರುಳು. ರಕ್ತಪ್ರವಾಹವನ್ನು ಪ್ರವೇಶಿಸುವ ಇದರ ಮೊಟ್ಟೆಗಳು ದೇಹದ ಎಲ್ಲಾ ಅಂಗಗಳನ್ನೂ ಸೇರಬಲ್ಲುದು. ಇದು ಮೆದುಳನ್ನು ಪ್ರವೇಶಿಸಿದಲ್ಲಿ ಜ್ಞಾಪಕಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹೃದಯವನ್ನು ಪ್ರವೇಶಿಸಿದಲ್ಲಿ ಹೃದಯಾಘಾತವೂ, ಕಣ್ಣುಗಳನ್ನು ಪ್ರವೇಶಿಸಿದಲ್ಲಿ ಅಂಧತ್ವ ಮತ್ತು ಪಿತ್ತಕೋಶವನ್ನು ಪ್ರವೇಶಿಸಿದಲ್ಲಿ ಅದನ್ನೂ ಘಾಸಿಗೊಳಿಸುವ ಸಾಧ್ಯತೆಗಳಿವೆ. ಹೀಗೆ ಇದು ದೇಹದ ಎಲ್ಲಾ ಅಂಗಗಳನ್ನೂ ಬಾಧಿಸುವ ಅಪಾಯವಿದೆ.
Trichura tichurasis ಎಂಬುದು ಹಂದಿ ಮಾಂಸದ ಮೂಲಕ ಹರಡುವ ಇನ್ನೊಂದು ಅತ್ಯಂತ ಅಪಾಯಕಾರೀ ಹುಳವಾಗಿದೆ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿದಲ್ಲಿ ಇಂತಹ ಹುಳಗಳಿಂದ ಮುಕ್ತಿ ಹೊಂದಬಹುದು ಎಂದು ಬಹಳಷ್ಟು ಜನರು ಭಾವಿಸಿಕೊಂಡಿರುವರು. ವಾಸ್ತವಿಕವಾಗಿ ಇದೊಂದು ತಪ್ಪು ತಿಳುವಳಿಕೆ ಮಾತ್ರ. ಅಮೇರಿಕಾದ ಸಂಶೋಧನಾ ಶಿಬಿರಗಳಲ್ಲಿ ನಡೆದ ಸಂಶೋಧನೆಗಳು ಬೇಯಿಸಿ ಬಚಾವಾಗುವ ತಂತ್ರಗಳ ಪೊಳ್ಳುತನವನ್ನು ಬಯಲಿಗೆಳೆದಿವೆ. Trichura tichurasis ಪೀಡಿತರಾದ 24 ರೋಗಿಗಳಲ್ಲಿ 20 ಮಂದಿ ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿಯೇ ತಿಂದಿದ್ದರು. ಇದು ಹಂದಿ ಮಾಂಸದಲ್ಲಿರುವ ರೋಗಾಣು ಮೊಟ್ಟೆಗಳು (ova) ಕುದಿಯುವ ಉಷ್ಣತೆಯಲ್ಲಿ ನಾಶ ಹೊಂದಲಾರವು ಎಂಬುದನ್ನು ಸ್ಪಷ್ಟಪಡಿಸುತ್ತದೆ.

4. ಕೊಬ್ಬು ಶೇಖರಣಾ ಅಂಶ ಹಂದಿ ಮಾಂಸದಲ್ಲಿ ಅತ್ಯಧಿಕ:
ಹಂದಿ ಮಾಂಸದಲ್ಲಿ ಸ್ನಾಯುವರ್ಧಕ ಅಂಶಗಳು ಅತ್ಯಲ್ಪ ಮತ್ತು ಕೊಬ್ಬಿನಾಂಶಗಳು ಅತ್ಯಧಿಕವಾಗಿವೆ. ಕೊಬ್ಬಿನ ಅಂಶಗಳು ರಕ್ತನಾಳಗಳಲ್ಲಿ ಶೇಖರಿಸಲ್ಪಟ್ಟು ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತಕ್ಕೆ ಕಾರಣವಾಗುತ್ತವೆ. ಅಮೇರಿಕಾದ 50 ಶೇಕಡಕ್ಕಿಂತಲೂ ಅಧಿಕ ಮಂದಿಗೆ ಅಧಿಕ ರಕ್ತದೊತ್ತಡ (hypertension) ಇರುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ.

5. ಹಂದಿ ಪ್ರಾಣಿಗಳಲ್ಲೇ ಅತ್ಯಂತ ಕೊಳಕು:
ಹಂದಿಯು ಜಗತ್ತಿನ ಅತ್ಯಂತ ಕೊಳಕು ಪ್ರಾಣಿಗಳ ಪೈಕಿ ಒಂದಾಗಿದೆ. ಇದು ಕೊಳಕಿನಲ್ಲಿಯೇ ಜೀವಿಸಿ ಬೆಳೆಯುವ ಪ್ರಾಣಿಯಾಗಿದೆ. ನನ್ನ ಅನಿಸಿಕೆಯಂತೆ ಹಂದಿಯು ದೇವನು ಸೃಷ್ಟಿಸಿದ ಅತ್ಯುತ್ತಮ ಜಾಡಮಾಲಿಯಾಗಿದೆ. ಸುಸಜ್ಜಿತ ಪಾಯಿಖಾನೆಗಳಿಲ್ಲದ ಹಳ್ಳಿಗರು ತೆರೆದ ಮೈದಾನದಲ್ಲೇ ಪ್ರಕೃತಿಯ ಕರೆಗೆ ಓಗೊಡುವರು. ಹಂದಿಗಳು ಕ್ಷಣಾರ್ಧದಲ್ಲೇ ಅದನ್ನು ತಿಂದು ಸ್ವಚ್ಛ ಮಾಡುತ್ತವೆ.
ಮುಂದುವರಿದ ರಾಷ್ಟ್ರಗಳಾದ ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಹಂದಿಗಳನ್ನು ಸುವ್ಯವಸ್ಥಿತ ರೀತಿಯಲ್ಲಿ, ಶುದ್ಧ ಪರಿಸರದಲ್ಲಿ ಸಾಕುತ್ತಾರೆ ಎಂಬ ವಾದ ಕೆಲವರಿಗಿದೆ. ಆದರೆ ಅವುಗಳನ್ನು ಶುದ್ಧವಾಗಿಡಲು ನೀವೆಷ್ಟೇ ಪ್ರಯತ್ನ ಮಾಡಿದರೂ ಅದು ತನ್ನ ಪ್ರಕೃತಿದತ್ತ ಕೊಳಕುತನವನ್ನು ಬಿಡಲಾರದು. ತನ್ನ ಸಂಗಾತಿಯ ಮ್ಲೇಚ್ಛವನ್ನು, ಅದೂ ಸಿಗದಿದ್ದಲ್ಲಿ  ತನ್ನ ಸ್ವಂತದ್ದನ್ನೇ ಸ್ವಾಹಾ ಮಾಡಿ ಮುಗಿಸುತ್ತದೆ!

6. ಹಂದಿಯು ಅತ್ಯಂತ ಲಜ್ಜಾಹೀನ ಪ್ರಾಣಿ:
ಹಂದಿಯು ಜಗತ್ತಿನ ಅತ್ಯಂತ ಲಜ್ಜಾಹೀನ ಪ್ರಾಣಿಯೂ ಆಗಿದೆ. ತನ್ನ ಸಂಗಾತಿಯ ಜೊತೆ ಕಾಮಕೇಳಿ ನಡೆಸಲು ತನ್ನ ಗೆಳೆಯರನ್ನೇ ಅಹ್ವಾನಿಸಿ ಖುಷಿಪಡುವ ಏಕೈಕ ಪ್ರಾಣಿಯಾಗಿದೆ. ಅಮೇರಿಕನ್ನರ ಪೈಕಿ ಹೆಚ್ಚಿನವರು ಹಂದಿ ಮಾಂಸ ಪ್ರಿಯರು. ಇವರಲ್ಲಿ ಚಾಲ್ತಿಯಲ್ಲಿರುವ ನೃತ್ಯಕೂಟಗಳ ಬಳಿಕ ಪತ್ನಿಯರ ವಿನಿಮಯ (swapping) ಎಂಬ ಕಾರ್ಯಕ್ರಮವೂ ಇರುತ್ತದೆ. ಈ ರಾತ್ರಿ ನಿನ್ನ ಪತ್ನಿ ನನಗೆ, ನನ್ನ ಪತ್ನಿ ನಿನಗೆ ಎಂದಾಗಿದೆ ಇದು. ಸೇವಿಸುವ ಆಹಾರವು ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ ಎಂಬ ಇವರ ಸಂಶೋಧನೆಯು ಇವರಿಗೇ ತಿರುಮಂತ್ರವಾಗಿದೆ. ಹಂದಿ ಮಾಂಸ ತಿನ್ನುವವರಿಗೆ ಅದರದೇ ಸ್ವಭಾವವೂ ಅಂಟಿಕೊಂಡಿದೆ. ಅಮೇರಿಕದವರನ್ನು ಉನ್ನತರೆಂದು ಭ್ರಮಿಸಿಕೊಂಡಿರುವ ಭಾರತೀಯರಾದ ನಾವು ಕೆಲವು ವರ್ಷಗಳ ಬಳಿಕ ಅವರ ಬೆನ್ನು ಹತ್ತುತ್ತೇವೆ. Island Magazine ಒಂದರ ವರದಿಯಂತೆ ಮುಂಬಯಿಯ ಶ್ರೀಮಂತ ವರ್ತುಲಗಳಲ್ಲಿ swapping ಪದ್ಧತಿಯು ಸಾಮಾನ್ಯವಾಗಿದೆ.

MUSSANJE MATHU - Kannada

HATS UP SONU- AYYU'S FEV...

SONU NIGAM KANNADA HITS 2011

MOHAMMAD RAFI SHAB GOLDEN HIT - AYAN CHOICE

MOHAMMAD RAFI SHAB The Golden Voice Ever

AYYU'S MASTI PHOTO'S
























Woh Kisi Aur Sy Mil K - Phir Bewafai

Bewafaai Sad Song

Bewafaai

Aye asmaan tu bata de (full song) by bewafai

AYAN ON ROCK MOOD










VIKRAM D'SOUZA: ನೋವು ಇಲ್ಲದ ಮನಸ್ಸು .......

VIKRAM D'SOUZA: ನೋವು ಇಲ್ಲದ ಮನಸ್ಸು .......: ನೂರಾರು ಬಾರಿ ಹರಿದು ಬರೆದ ಕವಿತೆ . .......ನಿನಗೆಂದು ಮೂಡಿಬಂದ ಕವಿತೆ. ಹೃದಯದ ಆಳದ ವ್ಯಥೆಯನ್ನು ......ಬಿಚ್ಚಿಟ್ಟ ಕವಿತೆಯನ್ನು ಒಂದು ಸಾರಿ ಅರ್ಥೈಸು ಅದನ್ನು . ...

MISS U PAPA

DEAR LOVING PAPA I MISS U


YOUR LOVING PRINCE
AYAN

ಗೆಳಯರೇ ನೀವು ಯಾವ ಥರದ ಮುಸ್ಲಿಂ ? ನಿಮ್ಮ ಕಾಮೆಂಟ್ಸ್ ತಿಳಿಸಿ, ಈ ಪ್ರಶ್ನೆ ನನ್ನ ಒಬ್ಬ ಚಾಟ್ ಫ್ರೆಂಡ್ ನನ್ನ ಹತ್ರ ಕೇಳಿದರು, ನನ್ನ ಹತ್ತಿರ ಇದರ ಉತ್ತರ ಇಲ್ಲಾ ಅದಕೊಸ್ಕರ ನಿಮ್ಮ ಹತ್ತಿರ ಕೇಳುತ್ತಿದ್ದೇನೆ


AYAN MANGALORE


HI DEAR HOW ARE YOU