Powered By Blogger

Saturday, 15 October 2011

ಭಾರತೀಯರ ಮನ ಸೆಳೆಯುತ್ತಿರುವ 2,69,999 ಬೆಲೆಯ ನೂತನ ಕಾರು ಹ್ಯುಂಡೈ EON

ಹೈದರಾಬಾದ್ : ಹ್ಯುಂಡೈ ಕಂಪೆನಿ ಭಾರತದಲ್ಲಿ ನೂತನ EON  ಕಾರನ್ನು ಬಿಡುಗಡೆ ಮಾಡಿದ್ದು ಕಾರು ಭಾರತೀಯರ ಮನ ಸೆಳೆಯುತ್ತಿದೆ . ಕಾರಿನಲ್ಲಿ ೮೧೪ ಸಿಸಿ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದ್ದು ಐದು ಸ್ಪೀಡ್ ಗೇರ್ ಗಳನ್ನು ಹೊಂದಿದೆ. ಪ್ರತೀ ಲೀಟರಿಗೆ ಇಪ್ಪತ್ತೊಂದು ಕಿ.ಮೀ ಮೈಲೇಜ್ ಸಹ ಕೊಡುತ್ತದೆ.
ಕಾರಿನ ಒಳಭಾಗದಲ್ಲಿ ಆರಾಮವಾಗಿ ಕೂರಲು ವಿಶಾಲವಾದ ಸ್ಥಳವಾಕಾಶವಿದ್ದು ಲಗೇಜ್ ಇಡಲು ಸೂಕ್ತ ಸ್ಥಳವನ್ನು ಹೊಂದಿದೆ. ಪವರ್ ವಿಂಡೋ , ಒಳಭಾಗದಿಂದಲೇ ಸೆಟ್ ಮಾಡ ಬಹುದಾದ ಮಿರರ್ ,ಸೆಂಟ್ರಲ್ ಲಾಕಿಂಗ್  ವ್ಯವಸ್ಥೆ ಇದ್ದು ಕಾರಿನ ಬೆಲೆ ಕೇವಲ ಎರಡು ಲಕ್ಷದ ಅರವತ್ತೊಂಬತ್ತು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ರೂಪಾಯಿಯಿಂದ ಪ್ರಾರಂಭವಾಗಲಿದೆ. ವಿಶ್ವ ಕನ್ನಡಿಗ ನ್ಯೂಸ್ ಓದುಗರಿಗಾಗಿ ಈ ನೂತನ ಕಾರಿನ ಕೆಲ ಝಲಕ್ ಅನ್ನು ಇಲ್ಲಿ ಹಾಕಿದ್ದೇವೆ. ಒಮ್ಮೆ ನೋಡಿ …….

ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು




ನವದೆಹಲಿ : ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿ ಪೋಲಿಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ಮೂವರು ಆರೋಪಿಗಳಿಗೆ ದೆಹಲಿ ಮೆಟ್ರೋಪಾಲಿನ್ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ತಲಾ ಇಪ್ಪತ್ತೈದು ಸಾವಿರ ಬಾಂಡ್ ಆಧಾರದ ಮೇಲೆ ಮೂವರೂ ಆರೋಪಿಗಳಿಗೆ ಜಾಮೀನು ನೀಡಿದರು . ಆರೋಪಿಗಳು ಸುಪ್ರೀಂ ಕೋರ್ಟ್ ಪರಿಸರದಲ್ಲಿ ಪ್ರವೇಶಿಸಬಾರದು ಎಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಸುದೇಶ್ ಕುಮಾರ್ ಆರೋಪಿಗಳಿಗೆ ಸೂಚನೆ ನೀಡಿದರು .
ದೆಹಲಿ ಪೊಲೀಸರು ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ದೆಹಲಿ ಶ್ರೀ ರಾಮ ಸೇನೆ ಘಟಕದ ಅಧ್ಯಕ್ಷ ಇಂದರ್ ವರ್ಮಾ , ಭಗತ್ ಸಿಂಗ್ ಕ್ರಾಂತಿ ಸೇನೆಯ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಹಾಗೂ ವಿಷ್ಣು ಗುಪ್ತಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದರಾದರೂ ನ್ಯಾಯಾಲಯ ಅದನ್ನು ತಿರಸ್ಕರಿಸಿತು. ಎಲ್ಲಾ ಮೂವರು ಆರೋಪಿಗಳು ದೆಹಲಿ ನಿವಾಸಿಗಳಾಗಿದ್ದು ಅವರ ಸಮರ್ಪಕ ವಿಳಾಸ ಪಡೆಯಲಾಗಿದ್ದು ಈಗಾಗಲೇ ಆರೋಪಿಗಳು ಎರಡು ದಿನ ಪೋಲಿಸ್ ವಶದಲ್ಲಿ ಕಳೆದಿದ್ದು ಅವರ ಮೇಲೆ ದಾಖಲಿಸಿದ ಪ್ರಕರಣದ ಅನುಸಾರ ಅದಕ್ಕಿಂತ ಹೆಚ್ಚು ದಿನ ನ್ಯಾಯಾಂಗ ಬಂಧನ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು .

ಕೇವಲ 1,700 ರೂ ಗೆ ಟ್ಯಾಬ್ಲೆಟ್ ಕಂಪ್ಯೂಟರ್ !!


ನವದೆಹಲಿ : ವಾಣಿಜ್ಯ ಉತ್ಪನ್ನವಾಗಿ, ಸಬ್ಸಿಡಿಯಿಲ್ಲದೆಯೂ ಮೂರು ಸಾವಿರ ಬೆಲೆಯಲ್ಲಿ ಜನರಿಗೆ ಲಭ್ಯವಾಗುವ ನಿರೀಕ್ಷೆಯಿರುವ ಆಕಾಶ್ ಟ್ಯಾಬ್ಲೆಟ್ ಸಾಧನ, ಬಿಡುಗಡೆಯಾಗಿ ಸುದ್ದಿಯಲ್ಲಿದೆ. ವಾಣಿಜ್ಯ ಮಾದರಿಯಲ್ಲಿ ಸೆಲ್‌ಪೋನ್ ಮಾಡೆಮ್ ಇರುವ ಕಾರಣ, ಇದರಲ್ಲಿ ಅಂತರ್ಜಾಲವನ್ನು ಮೊಬೈಲ್ ಜಾಲದ ಮೂಲಕವೂ ಪಡೆಯಬಹುದು. ಸರಕಾರಕ್ಕೆ ಒದಗಿಸುವ ಮಾದರಿಯಲ್ಲಿ ವೈ-ಫೈ ಮೂಲಕ ಅಂತರ್ಜಾಲ ಪಡೆಯಬೇಕಷ್ಟೆ. ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆ ಹೊಂದಿದ ಟ್ಯಾಬ್ಲೆಟ್ ಇನ್ನೆರಡು ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಬಹುದು. ಡೇಟಾವಿಂಡ್ ಕಂಪೆನಿಯಿದನ್ನು ತಯಾರಿಸಿದೆ. ಚೀನೀ ಬಿಡಿಭಾಗಗಳೇ ಅದು ಅಗ್ಗವಾಗಿರುವ ಗುಟ್ಟು. ವಿದ್ಯಾರ್ಥಿಗಳಿಗೆ ವಿನಾಯಿತಿ ದರ 1,700 ರುಪಾಯಿ. ಆಕಾಶ್ ಹೆಸರಿನ ಈ ಟ್ಯಾಬ್ಲೆಟ್ ಯಾವಾಗ ಕೈ ಸೇರುತ್ತದೆ ಎಂದು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದಾರೆ.
ಆಕಾಶ್ ವಿಶೇಷತೆಗಳು : 256 ಎಂಬಿ RAM, 7 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ, ನಿಸ್ತಂತು ಇಂಟರ್ ನೆಟ್ ಸೌಲಭ್ಯ, ಮಲ್ಟಿಮೀಡಿಯಾ ಪ್ಲೇಯರ್, ಕೀಬೋರ್ಡ್ ಕೂಡ ಜೋಡಿಸಬಹುದು, 2 ಜಿಬಿ ಇನ್ ಬಿಲ್ಟ್ ಮೆಮೊರಿ, 32 ಜಿಬಿ ವರೆಗೆ ವಿಸ್ತರಿಸಬಹುದು, ಬ್ಯಾಟರಿ ಬ್ಯಾಕಪ್ 3 ಗಂಟೆ.
ಜಗತ್ತಿಗೆ ಅತೀ ಅಗ್ಗದ ನ್ಯಾನೊ ಕಾರು ಪರಿಚಯಿಸಿಕೊಟ್ಟ ನಮ್ಮ ದೇಶ ಇದೀಗ ಅಗ್ಗದ ಟ್ಯಾಬ್ಲೆಟ್ ಕಂಪ್ಯೂಟರ್ ಕೂಡಾ ಪರಿಚಯಿಸಲು ಹೊರಟಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ಸಂಗತಿಯಾಗಿದೆ.

Friday, 14 October 2011

Jis din se juda wo hum se hoye-Pankaj Uddas

ಸೌದಿ ಅರೇಬಿಯಾಕ್ಕೆ ಕ್ರಿಕೆಟ್ ಜ್ವರ ಹಚ್ಚಲಿರುವ ಏಶಿಯನ್ ಕ್ರಿಕೆಟ್ ಮಂಡಳಿ



ರಿಯಾದ್ : ಸೌದಿ ಅರೇಬಿಯಾದ ಜನರಿಗೆ ಕ್ರಿಕಟ್ ಅಂದರೆ ಸರಿಯಾಗಿ ಮಾಹಿತಿ ಇಲ್ಲ. ಸೌದಿ ಅರೇಬಿಯಾದಲ್ಲಿ ೯೯ % ಜನರು ಫುಟ್ಬಾಲ್ ಪ್ರಿಯರು, ಜಗತ್ತಿನ ಯಾವ ಕಡೆ ಫುಟ್ಬಾಲ್ ನಡೆಯುತ್ತಿದ್ದರೆ ಸೌದಿ ಮಂದಿ ದೂರದರ್ಶನ ಮುಂದೆ ಹಾಜರು. ಅದೇ ಸೌದಿ ಅರೇಬಿಯಾಕ್ಕೆ ಕ್ರಿಕೆಟ್ ಜ್ವರವನ್ನ ಹಚ್ಚಲು ಏಶಿಯನ್ ಕ್ರಿಕೆಟ್ ಮಂಡಳಿ ಮುಂದಾಗಿದೆ, ಮಿಡಲ್ ಈಶ್ಟ್ ನಲ್ಲಿ ಈಗಾಗಲೇ ಕ್ರಿಕೆಟ್ ತನ್ನ ಅಸ್ತಿತ್ವವನ್ನು ಸಂಪಾದಿಸಲು ಹೊರಟಿದ್ದು ದುಬೈ, ಒಮಾನ್, ಕುವೈತ್ ಸೇರಿದಂತೆ ಅನೇಕ ಅರಬ್ ರಾಷ್ಟ್ರಗಳಲ್ಲಿ ಕ್ರಿಕೆಟ್ ಈಗಾಲೇ ಪ್ರಚಲಿತದಲ್ಲಿ ಇದೆ.
ಆದರೆ ಸೌದಿ ಅರೇಬಿಯಾದಲ್ಲಿ ಜನ ಫುಟ್ಬಾಲ್ ಗುಂಗಿನಲ್ಲಿ ತೇಲುತ್ತಿರುವಾಗ ಕ್ರಿಕೆಟ್ ಬಗ್ಗೆ ಅಷ್ಟೊಂದು ಆಸಕ್ತಿಯನ್ನು ಇಲ್ಲಿನ ಜನ ತೋರಿಸುತ್ತಿಲ್ಲ ಇದರ ಹಿನ್ನಲೆಯಲ್ಲಿ ಇದೇ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯುವ “ಗಲ್ಫ್ ಕಪ್ ” ಕ್ರಿಕೆಟ್ ಟೂರ್ನಿಯನ್ನು ಸೌದಿ ಅರೇಬಿಯಾದಲ್ಲಿ ನಡೆಸಲು ಏಶಿಯನ್ ಕ್ರಿಕೆಟ್ ಮಂಡಳಿ ವೇದಿಕೆಯನ್ನು ಸಿದ್ದಪಡಿಸಿದೆ. ಹಿಂದಿನ ವರ್ಷ ನಡೆದ ಗಲ್ಫ್ ಕಪ್ UAE ಯಲ್ಲಿ ನಡೆದು ಅಭೂತಪೂರ್ವ ಯಶಸ್ಸನ್ನು ಗಳಿಸಿತ್ತು . ಸೌದಿ ಅರೇಬಿಯಾ ಜನತೆ ಕ್ರಿಕೆಟ್ ಆಟವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕು.