Sunday, 25 December 2011
ಪಕ್ಷಕ್ಕೆ ಒಬ್ಬನೇ ನಾಯಕ ಇರಬೇಕು – ಮಾಜಿ ಸಿ ಎಂ, ಆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ – ಸಿ ಎಂ
Posted on December 25, 2011 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಬೆಂಗಳೂರು : ಒಂದು ಪಕ್ಷಕ್ಕೆ ಒಬ್ಬನೇ ನಾಯಕ ಇರಬೇಕು. ಬಿಜೆಪಿ ಅಂದ್ರೆ ಯಡಿಯೂರಪ್ಪ ಎಂಬ ನಂಬಿಕೆಯನ್ನು ಜನ ಸಾಮಾನ್ಯರಲ್ಲಿ ಮೂಡಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅವರು ದಾವಣಗೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ಪಕ್ಷ, ಒಂದು ಮನೆ, ಒಂದು ಸಂಸ್ಥೆ ಅಂದ ಮೇಲೆ ಅದಕ್ಕೆ ಒಬ್ಬನೇ ಯಜಮಾನ ಇರಬೇಕು. ಹಲವು ಮಂದಿ ಯಜಮಾನರು ಇದ್ದರೆ ಅಲ್ಲಿ ಯಾವುದು ಸರಿಯಾಗಿ ನಡೆಯುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯವರ ಈ ಹೇಳಿಕೆಗೆ ಗ್ರಹ ಕಚೇರಿ `ಕೃಷ್ಣಾ`ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸದಾನಂದಗೌಡ, ರಾಜ್ಯದಲ್ಲಿ ಏಕವ್ಯಕ್ತಿಯ ನಾಯಕತ್ವ ಬೇಕೊ ಅಥವಾ ಸಾಮೂಹಿಕ ನಾಯಕತ್ವ ಬೇಕೊ ಎಂಬುದನ್ನು ಒಬ್ಬ ವ್ಯಕ್ತಿ ನಿರ್ಧರಿಸಲು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡ್ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಷಯದಲ್ಲಿ ನಾನು ತಲೆಹಾಕುವುದಿಲ್ಲ ಎಂದು ಹೇಳಿದರು.
Monday, 19 December 2011
ತಾಯಿ ತಂದೆಯ ಪ್ರೀತಿ ಮಗುವಿಗೆಷ್ಟು ಮುಖ್ಯ?
ಮಗುವಿಗೆ ತಾಯಿ ತಂದೆ ಅಥವಾ ಪೋಷಕರ ಪ್ರೀತಿ, ಮಮತೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವ ಅಗತ್ಯವಿರದು. ಹುಟ್ಟಿದಾಗ ಮಾಂಸದ ಮುದ್ದೆಯಂತಿದ್ದು ನಿರ್ಭಾವ ಜೀವಿಯಾದ ಮಗು ಬೆಳೆದು, ನವರಸ ಭಾವ ತುಂಬಿದ ಮನುಷ್ಯನಾಗ ಬೇಕಾದರೆ ಕೇವಲ ಊಟ ಕೊಟ್ಟರೆ ಸಾಲದು. ಆರೋಗ್ಯ ಸೂಸುವ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರೀತಿಯ ಪಾತ್ರ ಅದ್ವಿತೀಯ.
ಪ್ರಾಯೋಗಿಕ ಅಧ್ಯಯನವೊಂದರಲ್ಲಿ ಕಪಿ ಮರಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ ಎರಡು ಗುಂಪಿಗೂ ಸಮಾನ ರೀತಿಯಲ್ಲಿ ಪುಷ್ಟಿಕರ ಆಹಾರ ಮತ್ತಿತರ ಸೌಲಭ್ಯಗಳನ್ನು ಕೊಡಲಾಯಿತು. ಒಂದು ಗುಂಪಿಗೆ ನಿಯಮಿತ ಅವಧಿಯಲ್ಲಿ ತಾಯಿಯೊಂದಿ ಗಿರಲು ಅವಕಾಶ ಕೊಡಲಾಯಿತು. ಇನ್ನೊಂದು ಗುಂಪಿಗೆ ಈ ಅವಕಾಶ ನೀಡಲಿಲ್ಲ. ಕೆಲವು ತಿಂಗಳುಗಳ ನಂತರ ತಾಯಿಯೊಂದಿಗಿರುವ ಅವಕಾಶ ಪಡೆದ ಕಪಿ ಮರಿಗಳು ಆರೋಗ್ಯಪೂರ್ಣವಾಗಿ ಕುಣಿದಾಡುತ್ತಿದ್ದರೆ, ತಾಯಿಯೊಂದಿಗೆ ಇರಲು ಅವಕಾಶವಿರದ ಮರಿಗಳು ಪೌಷ್ಟಿಕ ಆಹಾರವನ್ನು ತಿಂದು ಕೂಡ, ಸೊರಗಿ ಒಣಕಲಾಗಿ, ಮಂಕುಬಡಿದಂತೆ ಮೂಲೆಯಲ್ಲಿ ಕುಳಿತಿರುತ್ತಿದ್ದವು.ಇದೇ ರೀತಿ ತಂದೆ-ತಾಯಿ ಇಲ್ಲದೆಯೋ ಅಥವಾ ದೂರದಲ್ಲಿದ್ದು, ಅವರ ಪ್ರೀತಿಯಿಂದ ವಂಚಿತರಾದ ಮಕ್ಕಳನ್ನು ಮತ್ತು ತಂದೆ, ತಾಯಿಗಳಿದ್ದೂ ಅವರ ಪ್ರೀತಿ ಸಿಗದ ಮಕ್ಕಳನ್ನು ಸತತವಾಗಿ ಅಧ್ಯಯನ ಮಾಡಿದ ಬೌಲ್ಟಿ ಅವರಂತಹ ಅನೇಕ ಮನೋವಿಜ್ಞಾನಿಗಳು, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರೀತಿ, ಮಮತೆ, ಆಸರೆಗಳ ಆವಶ್ಯಕತೆಯನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ. ಹೆತ್ತವರ/ಪೋಷಕರ ಪ್ರೀತಿ ಸಿಗದ ಮಕ್ಕಳ ಬೌದ್ಧಿಕ ಬೆಳವಣಿಗೆ ಕೂಡ ಕುಂಠಿತ ವಾಗುವುದಲ್ಲದೆ, ಈ ಮಕ್ಕಳ ವ್ಯಕ್ತಿತ್ವ ದೋಷಪೂರ್ಣ ವಾಗುತ್ತದೆ.ಇಂಥ ಮಕ್ಕಳು ಸಮಾಜದೊಂದಿಗೆ ಹೊಂದಿ ಕೊಂಡು ಬಾಳಲು ಬೇಕಾದ ಕೌಶಲ-ಚತುರತೆಗಳನ್ನು ಕಲಿಯುವುದಿಲ್ಲ. ಅದರ ಬದಲು ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಸ್ವಾರ್ಥ ಹಾಗೂ ಸ್ವಸಂತೋಷಕ್ಕೋಸ್ಕರ ಇತರರನ್ನು, ವ್ಯಭಿಚಾರ ಮುಂತಾದ ಲೈಂಗಿಕ ಅಪರಾಧಗಳನ್ನು ಮಾಡುವುದು ಇತ್ಯಾದಿ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗಿರುವ ಸಂಭವವೇ ಹೆಚ್ಚು.ಅನೇಕ ಅಪರಾಧಿಗಳ ಪೂರ್ವ ಚರಿತ್ರೆಯನ್ನು ಅವಲೋಕಿಸಿದಾಗ, ಈ ವಾದಕ್ಕೆ ಸಾಕಷ್ಟು ಪುರಾವೆ ದೊರೆಯುತ್ತದೆ. ಇವರಲ್ಲಿ ಅನೇಕ ಮಂದಿ ಚಿಕ್ಕಂದಿನಲ್ಲಿ ಪ್ರೀತಿ, ಮಮತೆಯಿಂದ ವಂಚಿತರಾಗಿದ್ದುದು ಕಂಡುಬರುತ್ತದೆ. ಪ್ರೀತಿ, ಮಮತೆ ಜೀವನದ ಎಲ್ಲ ಹಂತಗಳಲ್ಲಿ ಆವಶ್ಯಕವಾದರೂ, ವ್ಯಕ್ತಿಯ ಜೀವನದ ಮೊದಲ ನಾಲ್ಕೈದು ವರ್ಷಗಳಲ್ಲಿ ಇವುಗಳ ಕೊರತೆ ಯುಂಟಾದರೆ, ಅದರ ಪರಿಣಾಮ ಶಾಶ್ವತ ಹಾಗೂ ವ್ಯಕ್ತಿಯ ಇಡೀ ಜೀವಮಾನದುದ್ದಕ್ಕೂ ಅದರ ಕರಾಳ ಛಾಯೆ ಪಸರಿಸುತ್ತದೆ ಎಂದು ಮನೋವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಪ್ರಾಯೋಗಿಕ ಅಧ್ಯಯನವೊಂದರಲ್ಲಿ ಕಪಿ ಮರಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ ಎರಡು ಗುಂಪಿಗೂ ಸಮಾನ ರೀತಿಯಲ್ಲಿ ಪುಷ್ಟಿಕರ ಆಹಾರ ಮತ್ತಿತರ ಸೌಲಭ್ಯಗಳನ್ನು ಕೊಡಲಾಯಿತು. ಒಂದು ಗುಂಪಿಗೆ ನಿಯಮಿತ ಅವಧಿಯಲ್ಲಿ ತಾಯಿಯೊಂದಿ ಗಿರಲು ಅವಕಾಶ ಕೊಡಲಾಯಿತು. ಇನ್ನೊಂದು ಗುಂಪಿಗೆ ಈ ಅವಕಾಶ ನೀಡಲಿಲ್ಲ. ಕೆಲವು ತಿಂಗಳುಗಳ ನಂತರ ತಾಯಿಯೊಂದಿಗಿರುವ ಅವಕಾಶ ಪಡೆದ ಕಪಿ ಮರಿಗಳು ಆರೋಗ್ಯಪೂರ್ಣವಾಗಿ ಕುಣಿದಾಡುತ್ತಿದ್ದರೆ, ತಾಯಿಯೊಂದಿಗೆ ಇರಲು ಅವಕಾಶವಿರದ ಮರಿಗಳು ಪೌಷ್ಟಿಕ ಆಹಾರವನ್ನು ತಿಂದು ಕೂಡ, ಸೊರಗಿ ಒಣಕಲಾಗಿ, ಮಂಕುಬಡಿದಂತೆ ಮೂಲೆಯಲ್ಲಿ ಕುಳಿತಿರುತ್ತಿದ್ದವು.
Sunday, 18 December 2011
ವಿಧಾನ ಸಭೆಯಲ್ಲಿ ಯುವತಿಯರ ಅಪಹರಣ ಪ್ರಕರಣ ಪ್ರಸ್ತಾಪಿಸಿದ ಮಲ್ಲಿಕಾ ಪ್ರಸಾದ್ , ಲವ್ ಜಿಹಾದಿಗೆ ಮರು ಜೀವ ?
Posted on December 17, 2011 by ವಿಶ್ವ ಕನ್ನಡಿಗ ನ್ಯೂಸ್
ಬೆಂಗಳೂರು :ವಿಧಾನ ಸಭೆಯಲ್ಲಿ ಯುವತಿಯರ ಅಪಹರಣ ಪ್ರಕರಣ ಪ್ರಸ್ತಾಪಿಸಿದ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿಕೆಯಿಂದ ಕರಾವಳಿ ಜಿಲ್ಲೆಯ ಬಿಜೆಪಿ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಬಿಜೆಪಿ ಸದಸ್ಯರು ಹಿಂದು ಯುವತಿಯರನ್ನು ಮುಸ್ಲಿಂ ಯುಕವರು ನಂಬಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ಆಪಾದಿಸಿದರೆ, ಕಾಂಗ್ರೆಸ್ ಸದಸ್ಯರು ಕೋಮುಭಾವನೆ ಪ್ರಚೋದಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶೂನ್ಯ ವೇಳೆಯಲ್ಲಿ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ವಿಷಯ ಪ್ರಸ್ತಾಪಿಸಿ, ಕರಾವಳಿ ಜಿಲ್ಲೆಗಳಲ್ಲಿ ಯುವತಿಯರ ಅಪಹರಣ ಪ್ರಕರಣಗಳು ಹೆಚ್ಚಾಗಿವೆ. ಈ ವರ್ಷದ ಜನವರಿಯಿಂದ ನವೆಂಬರ್ ಅಂತ್ಯಕ್ಕೆ ೮೪ ಯುವತಿಯರು ನಾಪತ್ತೆಯಾಗಿದ್ದಾರೆ. ಇವರಲ್ಲಿ ೬೯ ಯುವತಿಯರು ಕಾಣಿಸಿಕೊಂಡಿದ್ದು, ಅವರೆಲ್ಲರೂ ಪ್ರೀತಿ, ಪ್ರೇಮದ ಬಲೆಗೆ ಬಿದ್ದಿರುವುದು ಕಂಡು ಬಂತು. ಅಲ್ಲದೇ ಇದೇ ಸೋಗಿನಲ್ಲಿ ಯುವಕರು ಯುವತಿಯರ ಮಾರಾಟದಲ್ಲೂ ತೊಡಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಉಪಸಭಾಧ್ಯಕ್ಷ ಯೋಗೀಶ್ ಭಟ್, ಸರ್ಕಾರ ಈ ಬಗ್ಗೆ ಗಂಭೀರ ಕ್ರಮ ಜರುಗಿಸಬೇಕು. ಇದೊಂದು ಸಮಸ್ಯೆಯಾಗಿದೆ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್‌ನ ರಮಾನಾಥ ರೈ, ಇದು ಕೋಮು ಸೌಹಾರ್ದತೆ ಹದಗೆಡಿಸುವ ಪ್ರಯತ್ನವಾಗಿದೆ. ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂದು ಆಪಾದಿಸಿ ಹಲ್ಲೆ ನಡೆಸಲಾಗುತ್ತಿದೆ. ಹೀಗೆ ಹಲ್ಲೆಗೊಳಗಾದವರು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಒತ್ತಾಯಿಸಿದರು. ಇದಕ್ಕೆ ಅಭಯ್ ಚಂದ್ರಜೈನ್ ಮತ್ತಿತರರು ಧನಿಗೂಡಿಸಿದರು.
ಸುಳ್ಯ ಶಾಸಕ ಎಸ್. ಅಂಗಾರ, ಲವ್ ಜಿಹಾದಿ ಹೆಸರಿನಲ್ಲಿ ಹಿಂದೂ ಯುವತಿಯರ ಅಪಹರಣ ನಡೆಯುತ್ತಿದೆ. ನಿನ್ನೆ ನಮ್ಮ ಕ್ಷೇತ್ರದಲ್ಲಿ ಇಂತಹ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಮುಂದಾದಾಗ ಚುನಾಯಿತ ಪ್ರತಿನಿಧಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಸುಳ್ಯದಲ್ಲಿ ನಡೆದ ಜಾರ್ಖಂಡ್ ಮೂಲದ ವೇಶ್ಯಾವೃತ್ತಿ ಯುವತಿಯರ ಜೊತೆಗೆ ಸಿಕ್ಕಿ ಬಿದ್ದ ಮುಸ್ಲಿಂ ಯುವಕರ ವಿಷಯ ಮುಂದಿಟ್ಟು ಈ ಮೂಲಕ ಲವ್ ಜಿಹಾದ್ ವಿಷಯಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನವನ್ನು ಅಂಗಾರ ಮಾಡಿದರು.
ಕಳೆದ ಬಾರಿ ಸಹ ಜಿಲ್ಲೆಯಲ್ಲಿ ಇದೇ ರೀತಿ ಹುಡುಗಿಯರು ಲವ್ ಜಿಹಾದಿಗೆ ಸಿಕ್ಕಿ ಪರಾರಿಯಾಗಿದ್ದಾರೆ ಎಂದು ಇದೇ ಸಂಘಟನೆಗಳು ಆರೋಪಿಸಿದಾಗ ಬರೋಬ್ಬರಿ ಸುಮಾರು ಇಪ್ಪತ್ತೆಂಟು ಯುವತಿಯರ ಲವ್ ಮಾಡಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಸರಣಿ ಹಂತಕ ಸಯನೈಡ್ ಮೋಹನ ಸಿಕ್ಕಿ ಬಿದ್ದದ್ದನ್ನು ಸ್ಮರಿಸಬಹುದು . ಇದೀಗ ಮತ್ತೆ ಲವ್ ಜಿಹಾದಿಗೆ ಜೀವ ತುಂಬುವ ಮರು ಪ್ರಯತ್ನಗಳು ನಡೆಯುತ್ತಿವೆ .
ಪುತ್ತೂರು ಜಯಂತ್ ರೈ ಕೊಲೆ ಆರೋಪಿ ಖುಲಾಸೆ
Posted on December 18, 2011 by ಸಲೀಂ,ಅಮ್ಚಿನಡ್ಕ,ಪುತ್ತೂರು.
ಪುತ್ತೂರು ರಾಜಕೀಯವಲಯದಲ್ಲಿ ಅಲ್ಲೋಲಕಲ್ಲೋಲವನ್ನುಂಟುಮಾಡಿದ ಜಯಂತ್ ರೈ ಯವರು ಇನ್ನೋಮ್ಮೆ ಸುದ್ದಿಯಾಗಿದ್ದಾರೆ. ಹದಿನೇಳು ವರ್ಷಗಳ ಹಿಂದೆ ಸಂಭವಿಸಿದ ಕೊಲೆ ಪ್ರಕರಣದ ಆರೋಪಿ ಭೂಗತ ಪಾತಕಿ ಫ್ರಾನ್ಸಿಸ್ ಸಿಲ್ವೆಸ್ಟರ್ ಕುಟಿನ್ಹೋನನ್ನು ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಖುಲಾಸೆಗೊಳಿಸಿದೆ. 1994 ನ. 24 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿ ಆಗಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಅಬ್ದುಲ್ಲಾ, ಮೂಸ ಕುಂಞಿ ಮತ್ತು ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಜಯಂತ್ ರೈ ಅವರು ನಿಂತು ಚರ್ಚಿಸುತ್ತಿದ್ದಾಗ ಸುನಿಲ್ ಡಿ’ಸೋಜಾ ಎಂಬಾತ ಬಂದು ಪಿಸ್ತೂಲಿನಿಂದ ಜಯಂತ್ ರೈ ಅವರ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದ್ದ. ಓಡಿ ತಪ್ಪಿಸಿಕೊಳ್ಳಲೆತ್ನಿಸಿದ್ದ ಸುನಿಲ್ ಡಿ’ಸೋಜಾನನ್ನು ಮೂಸಾ ಕುಂಞಿ ಮತ್ತು ಇತರರು ಸೇರಿ ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದರು. ತೀವ್ರ ಗಾಯಗೊಂಡಿದ್ದ ಜಯಂತ್ ರೈ ಚಿಕಿತ್ಸೆ ಫಲಕಾರಿಯಾಗದೆ ಅದೇ ತಿಂಗಳ 27 ರಂದು ಸಾವನ್ನಪ್ಪಿದ್ದರು. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಾನಂಭದಲ್ಲಿ ಕೊಲೆ ಯತ್ನ ಮತ್ತು ಬಳಿಕ ಕೊಲೆ ಕೇಸು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಈ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಅಮರ್ ಆಳ್ವ ಕೊಲೆಗೆ ಪ್ರತೀಕಾರವಾಗಿ ಜಯಂತ್ ರೈ ಕೊಲೆ ನಡೆದಿದೆ ಮತ್ತು ಆರೋಪಿ ಸುನಿಲ್ ಡಿ’ಸೋಜಾ ಭೂಗತ ಪಾತಕಿಗಳಾದ ಫ್ರಾನ್ಸಿಸ್ ಕುಟಿನ್ಹೊ ಮತ್ತು ರಮೇಶ್ ಪೂಜಾರಿ ಸೂಚನೆ ಮೇರೆಗೆ ಈ ಕೃತ್ಯವನ್ನು ಎಸಗಿದ್ದಾನೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಫ್ರಾನ್ಸಿಸ್ ಡಿ’ಸೋಜಾ, ರಮೇಶ್ ಪೂಜಾರಿ ಮತ್ತು ಸುನಿಲ್ ಡಿ’ಸೋಜಾ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿ ದೋಷಾರೋಪಣ ಪಟ್ಟಿಯನ್ನು ತನಿಖಾಧಿಕಾರಿಯಾಗಿದ್ದ ಡಿ.ವೈ.ಎಸ್.ಪಿ. ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಮುಂದುವರಿಯುತ್ತಿದ್ದಾಗಲೇ ಸುನಿಲ್ ಡಿ’ಸೋಜಾ ಕೊಲೆಯಾಗಿದ್ದ ಹಾಗೂ ಇತರ ಆರೋಪಿಗಳ ವಿರುದ್ಧದ ಕೇಸು ಖುಲಾಸೆಗೊಂಡಿತ್ತು. ಆದರೆ ಆಗ ತಲೆ ಮರೆಸಿಕೊಂಡಿದ್ದ ಫ್ರಾನ್ಸಿಸ್ ಕುಟಿನ್ಹೋನನ್ನು ಬೇರೆ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದು, ತನಿಖೆಗೆ ಬಾಕಿ ಇದ್ದ ಜಯಂತ್ ರೈ ಪ್ರಕರಣಕ್ಕಾಗಿ ನ್ಯಾಯಾಲಯದ ಬಾಡಿ ವಾರಂಟ್‌ನಲ್ಲಿ ಮಂಗಳೂರಿಗೆ ಕರೆ ತರಲಾಗಿತ್ತು. ಇತ್ತೀಚೆಗೆ ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವ ಶಂಕರೇ ಗೌಡ ಅವರು ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿ ಫ್ರಾನ್ಸಿಸ್ ಸಿಲ್ವೆಸ್ಟರ್ ಕುಟಿನ್ಹೋನನ್ನು ಖುಲಾಸೆಗೊಳಿಸಿ ತೀರ್ಪಿತ್ತರು.
Saturday, 17 December 2011
ಗೂಗಲ್ ಪ್ಲಸ್ ನಲ್ಲಿ ಫೇಸ್ ಬುಕ್ ಸ್ಥಾಪಕ ಮಾರ್ಕ್?
ಕ್ಯಾಲಿಫೋರ್ನಿಯಾ ಜು 4: Hi everyone, I just wanted everyone to say that facebook is the best and google+ it never will be!ಎಂದು ಧೈರ್ಯವಾಗಿ ಗೂಗಲ್ ಪ್ಲಸ್ ನಲ್ಲಿ ಖಾತೆ ತೆರೆದು ಪೋಸ್ಟ್ ಮಾಡಿದ್ದು ಬೇರೆ ಯಾರು ಅಲ್ಲ, ಫೇಸ್ ಬುಕ್ ಎಂಬ ಮಾಯಾಜಾಲದ ಸೃಷ್ಟಿಕರ್ತ ಮಾರ್ಕ್ ಝುಕರ್ ಬರ್ಗ್. ಫೇಸ್ ಬುಕ್ ಕಿಲ್ಲರ್ ಎಂದೇ ಕರೆಯಲ್ಪಡುತ್ತಿರುವ ಗೂಗಲ್ ನ ಇತ್ತೀಚಿನ ಉತ್ಪನ್ನ ಗೂಗಲ್ ಪ್ಲಸ್ನಲ್ಲಿ ಮಾರ್ಕ್ ಝುಕರ್ ಬರ್ಗ್ ಕೂಡಾ ಕಾಣಿಸಿಕೊಂಡಿದ್ದಾರೆ.
ಒಂದಲ್ಲ ಎರಡು ಖಾತೆಗಳಲ್ಲಿ ಮಾರ್ಕ್ ಇದ್ದಾನೆ Palo Alto, CA ಎಂಬ ಅಡ್ರೆಸ್ ಹೊಂದಿರುವ ಒಂದು ಖಾತೆಯ ಸರ್ಕಲ್ ನಲ್ಲಿ 39 ಇದ್ದು, 21213 ಮಾರ್ಕ್ ಆಗಿದ್ದಾರೆ. ಆದರೆ ಇದು ನಿಜವಾದ ಖಾತೆ ಎಂಬುದರ ಬಗ್ಗೆ ಅನುಮಾನವಿದೆ. ಟ್ವಿಟ್ಟರ್ ನಲ್ಲಿರುವಂತೆ ಟ್ರಸ್ಟೆಡ್ ಖಾತೆಗಳ ಪರಿಶೀಲನೆ ಇನ್ನೂ ಗೂಗಲ್ ಗೆ ಕಾಲಿಟ್ಟಿಲ್ಲ.
ಕೋಟ್ಯಾಧೀಶ್ವರ ಮಾರ್ಕ್ ಹೆಸರು ಬಳಸಿಕೊಂಡು ಯಾರೋ ಕುಹಕವಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಮಾರ್ಕ್ ನ ಗೂಗಲ್ ಪ್ಲಸ್ ಖಾತೆಯಲ್ಲಿ ಮಾತ್ರ ತಮಾಷೆ ಕಮೆಂಟ್ ಗಳು ಸಿಗುತ್ತಿವೆ. ಸ್ವಾರಸ್ಯದ ಸಂಗತಿ ಎಂದರೆ, ಕೆಲ ತಿಂಗಳುಗಳಿಂದ ಗೂಗಲ್ ನ ಅನೇಕ ಉದ್ಯೋಗಳು ಫೇಸ್ ಬುಕ್ ಗೆ ವಲಸೆ ಹೋಗಿದ್ದರು. ಈಗ ಮಾರ್ಕ್ ಗೂಢಚಾರನ ರೀತಿ ಗೂಗಲ್ ಪ್ಲಸ್ ಬಳಸುತ್ತಿದ್ದಾನೆಯೇ? ಅದು ತನ್ನ ಹೆಸರಲ್ಲೇ? ಸ್ಪಷ್ಟವಾಗಿ ಹೇಳಲು ಬರದು.
ಕಳೆದ ವಾರ ಆರಂಭವಾಅದ್ ಗೂಗಲ್ ಪ್ಲಸ್ ತ್ವರಿತವಾಗಿ ಜನಪ್ರಿಯತೆ ಗಳಿಸಿತ್ತಿರುವುದು ಸಂಸ್ಥೆಗೆ ತಲೆ ನೋವಾಗಿದೆ. ಪ್ಲಸ್ ಹೇಗೆ ವರ್ಕ್ ಆಗುತ್ತೆ ಎಂದು ತಿಳಿಯಲು ಕೆಲ ಆಹ್ವಾನಿತರಿಗೆ ಮಾತ್ರ ಸೇವೆ ಒದಗಿಸಲಾಗಿತ್ತು. ಈಗ ಅದನ್ನು ನಿಲ್ಲಿಸಲಾಗಿದೆ. ಸದ್ಯಕ್ಕೆ ಇನ್ವಿಟೇಷನ್ ಕಳಿಸುವುದು ನಿಂತಿದೆ. ಮತ್ತೆ ಯಾವಾಗ ಆರಂಭವಾಗುತ್ತದೋ ಹೇಳಲು ಬರದು ಎನ್ನುತ್ತಾರೆ ಗೂಗಲ್ ಸಂಸ್ಥೆಯ ವಿಕ್ ಗುನ್ ಡೋತ್ರಾ.ಒಟ್ಟಿನಲ್ಲಿ ಬಳಕೆದಾರರಿಗೆ ಇನ್ಮುಂದೆ ಹಬ್ಬ, ಫೇಸ್ ಬುಕ್, ಗೂಗಲ್ ಪ್ಲಸ್ ನಿಮ್ಮ ಆಯ್ಕೆ ಯಾವುದು?
ಒಂದಲ್ಲ ಎರಡು ಖಾತೆಗಳಲ್ಲಿ ಮಾರ್ಕ್ ಇದ್ದಾನೆ Palo Alto, CA ಎಂಬ ಅಡ್ರೆಸ್ ಹೊಂದಿರುವ ಒಂದು ಖಾತೆಯ ಸರ್ಕಲ್ ನಲ್ಲಿ 39 ಇದ್ದು, 21213 ಮಾರ್ಕ್ ಆಗಿದ್ದಾರೆ. ಆದರೆ ಇದು ನಿಜವಾದ ಖಾತೆ ಎಂಬುದರ ಬಗ್ಗೆ ಅನುಮಾನವಿದೆ. ಟ್ವಿಟ್ಟರ್ ನಲ್ಲಿರುವಂತೆ ಟ್ರಸ್ಟೆಡ್ ಖಾತೆಗಳ ಪರಿಶೀಲನೆ ಇನ್ನೂ ಗೂಗಲ್ ಗೆ ಕಾಲಿಟ್ಟಿಲ್ಲ.
ಕಳೆದ ವಾರ ಆರಂಭವಾಅದ್ ಗೂಗಲ್ ಪ್ಲಸ್ ತ್ವರಿತವಾಗಿ ಜನಪ್ರಿಯತೆ ಗಳಿಸಿತ್ತಿರುವುದು ಸಂಸ್ಥೆಗೆ ತಲೆ ನೋವಾಗಿದೆ. ಪ್ಲಸ್ ಹೇಗೆ ವರ್ಕ್ ಆಗುತ್ತೆ ಎಂದು ತಿಳಿಯಲು ಕೆಲ ಆಹ್ವಾನಿತರಿಗೆ ಮಾತ್ರ ಸೇವೆ ಒದಗಿಸಲಾಗಿತ್ತು. ಈಗ ಅದನ್ನು ನಿಲ್ಲಿಸಲಾಗಿದೆ. ಸದ್ಯಕ್ಕೆ ಇನ್ವಿಟೇಷನ್ ಕಳಿಸುವುದು ನಿಂತಿದೆ. ಮತ್ತೆ ಯಾವಾಗ ಆರಂಭವಾಗುತ್ತದೋ ಹೇಳಲು ಬರದು ಎನ್ನುತ್ತಾರೆ ಗೂಗಲ್ ಸಂಸ್ಥೆಯ ವಿಕ್ ಗುನ್ ಡೋತ್ರಾ.ಒಟ್ಟಿನಲ್ಲಿ ಬಳಕೆದಾರರಿಗೆ ಇನ್ಮುಂದೆ ಹಬ್ಬ, ಫೇಸ್ ಬುಕ್, ಗೂಗಲ್ ಪ್ಲಸ್ ನಿಮ್ಮ ಆಯ್ಕೆ ಯಾವುದು?
Subscribe to:
Posts (Atom)