ಮುಂಬೈ : ಬಾಲಿವುಡ್ ಹಾಟ್ ನಟಿ ಮಲ್ಲಿಕಾ ಶರಾವತ್ ಇಂದು ಮೂವತ್ತು ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ಸೋಮವಾರ ಲಾಸ್ ಎಂಜಲೀಸ್ ನ ತಮ್ಮ ಗೆಳತಿ ಗೆಳೆಯರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಮಲ್ಲಿಕಾ ತನ್ನ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದ್ದಾಳೆ.
೨೦೦೩ ರಲ್ಲಿ ಖ್ವಾಯಿಶ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಮಲ್ಲಿಕಾ ಆನತರ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾಳೆ.ಬಾಲಿವುಡ್ ಜೊತೆಗೆ ಹಾಲಿವುಡ್ ನಲ್ಲೂ ಮಿಂಚಿರುವ ಈಕೆ ಇದೀಗ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾಳೆ.
ಶಾರುಕ್ ಖಾನ್ ಸಲಿಂಗಿ ಎಂದ ತಸ್ಲೀಮಾ ನಸ್ರೀನ್
ನವದೆಹಲಿ : ಬಾಂಗ್ಲಾ ದೇಶದ ವಿವಾದಾಸ್ಪದ ಲೇಖಕಿ ತಸ್ಲೀಮಾ ನಸ್ರೀನ್ ಈಗ ತಮ್ಮ ಹೇಳಿಕೆಯಿಂದ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಬಾಲಿವುಡ್ ಬಾದಶಹ ಶಾರುಖ್ ಖಾನ್ ಸಲಿಂಗ ಕಾಮಿ ಎಂದು ಆಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾಳೆ. ಶಾರುಖ್ ಖಾನ್ ಸಲಿಂಗಿ ಎಂದು ಹಲವರು ಹೇಳಿದ್ದನ್ನು ನಾನು ಕೇಳಿದ್ದಾನೆ . ತನ್ನ ಬಗ್ಗೆಯೂ ಸ್ವತಃ ಬರೆದುಕೊಂಡಿರುವ ಈಕೆ ನಾನು ಸಹ ಸಲಿಂಗಿಯಾಗಳು ಬಯಸುತ್ತೇನೆ ಎಂದು ಬರೆದುಕೊಂಡಿದ್ದು ಈ ಹೇಳಿಕೆಗಳು ವಿವಾದ ಸೃಷ್ಟಿಸಿದೆ.
ಸದಾ ವಿವಾದಗಳ ಮೂಲಕ ಹೆಸರು ಗಳಿಸುತ್ತಾ ಬಂದ ತಸ್ಲೀಮಾ ಈ ಹಿಂದೆ ಇಸ್ಲಾಮಿಕ್ ಸಂಪ್ರದಾಯದ ವಿರುದ್ಧ ಲಜ್ಜಾ ಎಂಬ ಕಾದಂಬರಿ ಬರೆಯುವ ಮೂಲಕ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದ್ದಳು . ಆನಂತರ ಆಕೆಯನ್ನು ಬಾಂಗ್ಲಾ ದೇಶದಿಂದ ಗಡೀಪಾರು ಮಾಡಲಾಗಿತ್ತು. ಆನಂತರ ಆಕೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಆಶ್ರಯ ಪಡೆದಿದ್ದಾಳೆ. ಈ ಹಿಂದೆ ಮುಸ್ಲಿಂ ಪುರುಷ ನಾಲ್ಕು ವಿವಾಹವಾಗಬಹುದಾದರೆ ಮಹಿಳೆಯೂ ನಾಲ್ಕು ಪತಿಯನ್ನು ಹೊಂದಲು ಅವಕಾಶ ನೀಡಬೇಕು ಎಂಬ ಹೇಳಿಕೆಯನ್ನೂ ಈಕೆ ನೀಡಿದ್ದಳು.
No comments:
Post a Comment