ಚೆನ್ನೈ : ಚಾಂಪಿಯನ್ಸ್ ಲೀಗ್ ಟ್ವೆಂಟಿ-೨೦ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಖೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡವು ವಿಜಯ್ ಮಲ್ಯ ಮಾಲೀಕತ್ವದ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ೩೧ ರನ್ ಗಳಿಂದ ಸೋಲಿಸುವ ಮೂಲಕ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿತು.
ಭಾನುವಾರ ಚನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಭಜನ್ ಸಿಂಗ್ ನಾಯಕತ್ವದ ಮುಂಬೈ ಇಂಡಿಯನ್ಸ್ ನಿಗದಿತ ೨೦ ಓವರ್ ಗಳಲ್ಲಿ ೧೩೯ ರನ್ ಗಳಿಗೆ ಅಲೌಟ್ ಆಗಿ ರಾಯಲ್ ಚಾಲೆಂಜರ್ ಬೆಂಗಳೂರಿಗೆ ೧೪೦ ರನ್ ಗಳ ಗುರಿಯನ್ನು ನೀಡಿತು. ಮುಂಬೈ ಪರ ಫ್ರಾಂಕ್ಲಿನ್ ೪೧ ರನ್ ಗಳಿಸಿದರು. ಬೌಲಿಂಗ್ ನಲ್ಲಿ ಬೆಂಗಳೂರು ಪರ ರಾಜು ಬಟ್ಕಳ್ ೩ ವಿಕೆಟ್ ಕಿತ್ತರೆ ನಾಯಕ ವೆಟ್ಟೊರಿ ೨ ವಿಕೆಟ್ ಕಿತ್ತರು.
೧೪೦ ರನ್ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡವು ಮುಂಬೈಯ ಕರಾರುವಕ್ಕಾದ ಬೌಲಿಂಗ್ ಮುಂದೆ ತತ್ತರಿಸಿ ಒಂದರ ಮೇಲೊಂದರಂತೆ ವಿಕೆಟ್ ಕಳೆದು ಕೊಳ್ಳುತ್ತಾ ೧೯.೨ ಓವರ್ ಗಳಲ್ಲಿ ೧೦೮ ರನ್ ಗಳಿಗೆ ಅಲೌಟ್ ಆಗುವುದರೊಂದಿಗೆ ಸೋಲನ್ನಪ್ಪಿತು. ಬೆಂಗಳೂರು ಪರ ಅತೀ ಹೆಚ್ಚು ಎಂದರೆ ದಿಲ್ಶಾನ್ ೨೭ ರನ್ ಬಾರಿಸಿದರು. ಮುಂಬೈ ಪರ ಬೌಲಿಂಗ್ ನಲ್ಲಿ ನಾಯಕ ಹರ್ಭಜನ್ ೩ ವಿಕೆಟ್ ಕಿತ್ತರೆ, ಮಾಲಿಂಗ, ಅಬೂ ನಚಿಂ ಹಾಗೂ ಯುಜ್ವೆಂದ್ರ ಚಹಲ್ ತಳ ೨ ವಿಕೆಟ್ ಕೀಳುವ ಮೂಲಕ ನಾಯಕನಿಗೆ ಸಾಥ್ ನೀಡಿದರು.
ವಿಜಯಿ ಮುಂಬೈ ತಂಡವು ೧೧.೬ ಕೋಟಿ ರೂ ಬಹುಮಾನ ಮೊತ್ತ ಗಳಿಸಿದರೆ, ರನ್ನರ್ ಅಪ್ ಬೆಂಗಳೂರು ತಂಡಕ್ಕೆ ೬ ಕೋಟಿ ರೂ ಲಭಿಸಿತು. ಮುಂಬೈ ನಾಯಕ ಹರ್ಭಜನ್ ಸಿಂಗ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದು ಕೊಂಡರೆ ಅದೇ ತಂಡದ ಲಸಿತ್ ಮಾಲಿಂಗ ಸರಣಿ ಶ್ರೇಷ್ಟ ಪ್ರಶಸ್ತಿ ತನ್ನದಾಗಿಸಿಕೊಂಡರು. ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಡೇವಿಡ್ ವಾರ್ನರ್ ಅವರಿಗೆ ಗೋಲ್ಡನ್ ಬ್ಯಾಟ್ ಪಡೆದುಕೊಂಡರು.
WELL DONE MUMBAI INDIANS GUYZ' GOOD JOB
ReplyDeleteDEAR FRIENDS COMMENTS PLEASE
ReplyDelete