Powered By Blogger

Saturday, 15 October 2011

ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದವರನ್ನು ಅಭಿನಂದಿಸಿದ ಬಾಳಾ ಠಾಕ್ರೆ


ಮುಂಬೈ : ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ , ಟೀಮ್ ಅಣ್ಣಾ ಹಜಾರೆ ಸದಸ್ಯ ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಶಿವಸೇನೆಯ ಮುಖ್ಯಸ್ಥ ಬಾಳಾ ಠಾಕ್ರೆ ಅಭಿನಂದಿಸಿದ್ದಾರೆ. ಶುಕ್ರವಾರ ಪಕ್ಷದ ಮುಖವಾಣಿ ದೊಪಹರ್ ಕಾ ಸಾಮ್ನಾ ಪತ್ರಿಕೆಯಲ್ಲಿ ಈ ದಾಳಿಯ ವಿಷಯ ಪ್ರಸ್ತಾಪಿಸಿರುವ ಅವರು ಶಹಬ್ಬಾಸ್ ! ನಿಮ್ಮ ಕೃತ್ಯ ಸರಿಯಾಗಿದೆ . ಯಾರು ದೇಶ ವಿಭಜಿಸುವ ಮಾತುಗಳನ್ನು ಆಡುತ್ತಾರೋ ಅವರಿಗೆ ಇದೇ ರೀತಿ ಪಾಠ ಕಲಿಸಬೇಕಿದೆ ಎಂದಿದ್ದಾರೆ.
ದೇಶ ವಿಭಜನೆ ಕುರಿತು ಮಾತನಾಡುವ ಜನಗಳಿಗೆ ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯದಿಂದ ಹೆದರಿಕೆ ಉಂಟಾಗಲಿದೆ . ಈ ರೀತಿಯ ಮಾತುಗಳನ್ನು ಆಡುವ ಜನರಿಗೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಪಾಠ ಕಲಿಸಲು ಜನರು ಮುಂದಾಗಬೇಕಿದೆ ಎಂದಿದ್ದಾರೆ. ಕಾಶ್ಮೀರ ಕುರಿತ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಒಬ್ಬ ಶ್ರೀರಾಮ ಸೇನೆ ಮತ್ತು ಇಬ್ಬರು ಭಗತ್ ಸಿಂಗ್ ಕ್ರಾಂತಿ ಸೇನೆಯ ಕಾರ್ಯಕರ್ತರು ಸುಪ್ರೀಂ ಕೋರ್ಟ್ ಆವರಣದಲ್ಲಿರುವ ಭೂಷಣ್ ಕಚೇರಿಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದರು.

ಹುಣ್ಣಿಮೆ ರಾತ್ರಿಯಲ್ಲಿ ತಾಜ್ ಮಹಲ್ ನಲ್ಲಿ ಪ್ರತ್ಯಕ್ಷಗೊಂಡ ದೀಪಿಕಾ ಪಡುಕೋಣೆ



ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ತಾಜ್ ಮಹಲ್ ಅಂದರೆ ಅದೇನೋ ಹುಚ್ಚು ಪ್ರೀತಿ, ಅನೇಕ ಬಾರಿ ತಾಜ್ ಗೆ ಭೇಟಿ ಕೊಟ್ಟಿದ್ದಾರೆ. ಆದರೆ ಈ ಸಲ ಭೇಟಿ ಕೊಟ್ಟದ್ದು “ಹುಣ್ಣಿಮೆ ರಾತ್ರಿ”ಯಂದು,ಅದು ಕೂಡ ಒಬ್ಬಳೇ ಅಲ್ಲ ಅವಳ ಜೊತೆ”ಅನಾಮಿಕ”ವ್ಯಕ್ತಿಯೊಬ್ಬರಿದ್ದರು. ಸುಮಾರು ೧ ಘಂಟೆಗಳ ಕಾಲ ತಾಜ್ ರಾತ್ರಿಯ ಸವಿಯನ್ನು ಸವಿದ ದೀಪಿಕಾ “ಅನಾಮಿಕ” ವ್ಯಕ್ತಿಯ ಜೊತೆ ಸಲ್ಲಾಪವಾಡಿದರು.ಆ ಅನಾಮಿಕ ವ್ಯಕ್ತಿ ಯಾರೆಂಬುದು ಇನ್ನೆಷ್ಟೇ ಗೊತ್ತಗಬೇಕಾಗಿದೆ.
ಸಿದ್ದಾರ್ತ್ ಮಲ್ಲ್ಯ ನಿಂದ ದೀಪಿಕಾ ದೂರ ಸರಿದಿದ್ದಾರೆ ಅನ್ನೋದಕ್ಕೆ ಈ ಹುಣ್ಣಿಮೆ ರಾತ್ರಿಯು ಮತ್ತಷ್ಟು ಪುಷ್ಟಿಯನ್ನ ನೀಡಿದೆ. ತಾಜ್ ನಲ್ಲಿ ಹುಣ್ಣಿಮೆ ರಾತ್ರಿ ಬಹಳ ವಿಶೇಷವಾದ ದಿನ ೫೦ ಜೋಡಿ ಗುಂಪಿಗೆ ೩೦ ನಿಮಿಷಗಳ ಕಾಲ ತಾಜ್ ನ ಸೌಂದರ್ಯವನ್ನು ಸವಿಯಲು ಅವಕಾಶ ಮಾಡಿಕೊಡಲಾಗುತ್ತೆ. ಹುಣ್ಣಿಮೆ ರಾತ್ರಿ ಯಲ್ಲಿ ಚೆಂದುಳ್ಳಿ ಚೆಲುವೆ ಜೊತೆ ಕಾಣಿಸಿಕೊಂಡ ಅನಾಮಿಕ ಯಾರಿರಬಹುದು ಅನ್ನೋದು ಸಿದ್ದಾರ್ತ್ ಮಲ್ಯ ಸೇರಿದಂತೆ ಅನೇಕ ಬಾಲಿವುಡ್ ಜನರ ಪ್ರಶ್ನೆ ಕೂಡ ಆಗಿರಬಹುದು.

ಭಾರತೀಯರ ಮನ ಸೆಳೆಯುತ್ತಿರುವ 2,69,999 ಬೆಲೆಯ ನೂತನ ಕಾರು ಹ್ಯುಂಡೈ EON

ಹೈದರಾಬಾದ್ : ಹ್ಯುಂಡೈ ಕಂಪೆನಿ ಭಾರತದಲ್ಲಿ ನೂತನ EON  ಕಾರನ್ನು ಬಿಡುಗಡೆ ಮಾಡಿದ್ದು ಕಾರು ಭಾರತೀಯರ ಮನ ಸೆಳೆಯುತ್ತಿದೆ . ಕಾರಿನಲ್ಲಿ ೮೧೪ ಸಿಸಿ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದ್ದು ಐದು ಸ್ಪೀಡ್ ಗೇರ್ ಗಳನ್ನು ಹೊಂದಿದೆ. ಪ್ರತೀ ಲೀಟರಿಗೆ ಇಪ್ಪತ್ತೊಂದು ಕಿ.ಮೀ ಮೈಲೇಜ್ ಸಹ ಕೊಡುತ್ತದೆ.
ಕಾರಿನ ಒಳಭಾಗದಲ್ಲಿ ಆರಾಮವಾಗಿ ಕೂರಲು ವಿಶಾಲವಾದ ಸ್ಥಳವಾಕಾಶವಿದ್ದು ಲಗೇಜ್ ಇಡಲು ಸೂಕ್ತ ಸ್ಥಳವನ್ನು ಹೊಂದಿದೆ. ಪವರ್ ವಿಂಡೋ , ಒಳಭಾಗದಿಂದಲೇ ಸೆಟ್ ಮಾಡ ಬಹುದಾದ ಮಿರರ್ ,ಸೆಂಟ್ರಲ್ ಲಾಕಿಂಗ್  ವ್ಯವಸ್ಥೆ ಇದ್ದು ಕಾರಿನ ಬೆಲೆ ಕೇವಲ ಎರಡು ಲಕ್ಷದ ಅರವತ್ತೊಂಬತ್ತು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ರೂಪಾಯಿಯಿಂದ ಪ್ರಾರಂಭವಾಗಲಿದೆ. ವಿಶ್ವ ಕನ್ನಡಿಗ ನ್ಯೂಸ್ ಓದುಗರಿಗಾಗಿ ಈ ನೂತನ ಕಾರಿನ ಕೆಲ ಝಲಕ್ ಅನ್ನು ಇಲ್ಲಿ ಹಾಕಿದ್ದೇವೆ. ಒಮ್ಮೆ ನೋಡಿ …….

ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು




ನವದೆಹಲಿ : ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿ ಪೋಲಿಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ಮೂವರು ಆರೋಪಿಗಳಿಗೆ ದೆಹಲಿ ಮೆಟ್ರೋಪಾಲಿನ್ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ತಲಾ ಇಪ್ಪತ್ತೈದು ಸಾವಿರ ಬಾಂಡ್ ಆಧಾರದ ಮೇಲೆ ಮೂವರೂ ಆರೋಪಿಗಳಿಗೆ ಜಾಮೀನು ನೀಡಿದರು . ಆರೋಪಿಗಳು ಸುಪ್ರೀಂ ಕೋರ್ಟ್ ಪರಿಸರದಲ್ಲಿ ಪ್ರವೇಶಿಸಬಾರದು ಎಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಸುದೇಶ್ ಕುಮಾರ್ ಆರೋಪಿಗಳಿಗೆ ಸೂಚನೆ ನೀಡಿದರು .
ದೆಹಲಿ ಪೊಲೀಸರು ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ದೆಹಲಿ ಶ್ರೀ ರಾಮ ಸೇನೆ ಘಟಕದ ಅಧ್ಯಕ್ಷ ಇಂದರ್ ವರ್ಮಾ , ಭಗತ್ ಸಿಂಗ್ ಕ್ರಾಂತಿ ಸೇನೆಯ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಹಾಗೂ ವಿಷ್ಣು ಗುಪ್ತಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದರಾದರೂ ನ್ಯಾಯಾಲಯ ಅದನ್ನು ತಿರಸ್ಕರಿಸಿತು. ಎಲ್ಲಾ ಮೂವರು ಆರೋಪಿಗಳು ದೆಹಲಿ ನಿವಾಸಿಗಳಾಗಿದ್ದು ಅವರ ಸಮರ್ಪಕ ವಿಳಾಸ ಪಡೆಯಲಾಗಿದ್ದು ಈಗಾಗಲೇ ಆರೋಪಿಗಳು ಎರಡು ದಿನ ಪೋಲಿಸ್ ವಶದಲ್ಲಿ ಕಳೆದಿದ್ದು ಅವರ ಮೇಲೆ ದಾಖಲಿಸಿದ ಪ್ರಕರಣದ ಅನುಸಾರ ಅದಕ್ಕಿಂತ ಹೆಚ್ಚು ದಿನ ನ್ಯಾಯಾಂಗ ಬಂಧನ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು .

ಕೇವಲ 1,700 ರೂ ಗೆ ಟ್ಯಾಬ್ಲೆಟ್ ಕಂಪ್ಯೂಟರ್ !!


ನವದೆಹಲಿ : ವಾಣಿಜ್ಯ ಉತ್ಪನ್ನವಾಗಿ, ಸಬ್ಸಿಡಿಯಿಲ್ಲದೆಯೂ ಮೂರು ಸಾವಿರ ಬೆಲೆಯಲ್ಲಿ ಜನರಿಗೆ ಲಭ್ಯವಾಗುವ ನಿರೀಕ್ಷೆಯಿರುವ ಆಕಾಶ್ ಟ್ಯಾಬ್ಲೆಟ್ ಸಾಧನ, ಬಿಡುಗಡೆಯಾಗಿ ಸುದ್ದಿಯಲ್ಲಿದೆ. ವಾಣಿಜ್ಯ ಮಾದರಿಯಲ್ಲಿ ಸೆಲ್‌ಪೋನ್ ಮಾಡೆಮ್ ಇರುವ ಕಾರಣ, ಇದರಲ್ಲಿ ಅಂತರ್ಜಾಲವನ್ನು ಮೊಬೈಲ್ ಜಾಲದ ಮೂಲಕವೂ ಪಡೆಯಬಹುದು. ಸರಕಾರಕ್ಕೆ ಒದಗಿಸುವ ಮಾದರಿಯಲ್ಲಿ ವೈ-ಫೈ ಮೂಲಕ ಅಂತರ್ಜಾಲ ಪಡೆಯಬೇಕಷ್ಟೆ. ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆ ಹೊಂದಿದ ಟ್ಯಾಬ್ಲೆಟ್ ಇನ್ನೆರಡು ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಬಹುದು. ಡೇಟಾವಿಂಡ್ ಕಂಪೆನಿಯಿದನ್ನು ತಯಾರಿಸಿದೆ. ಚೀನೀ ಬಿಡಿಭಾಗಗಳೇ ಅದು ಅಗ್ಗವಾಗಿರುವ ಗುಟ್ಟು. ವಿದ್ಯಾರ್ಥಿಗಳಿಗೆ ವಿನಾಯಿತಿ ದರ 1,700 ರುಪಾಯಿ. ಆಕಾಶ್ ಹೆಸರಿನ ಈ ಟ್ಯಾಬ್ಲೆಟ್ ಯಾವಾಗ ಕೈ ಸೇರುತ್ತದೆ ಎಂದು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದಾರೆ.
ಆಕಾಶ್ ವಿಶೇಷತೆಗಳು : 256 ಎಂಬಿ RAM, 7 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ, ನಿಸ್ತಂತು ಇಂಟರ್ ನೆಟ್ ಸೌಲಭ್ಯ, ಮಲ್ಟಿಮೀಡಿಯಾ ಪ್ಲೇಯರ್, ಕೀಬೋರ್ಡ್ ಕೂಡ ಜೋಡಿಸಬಹುದು, 2 ಜಿಬಿ ಇನ್ ಬಿಲ್ಟ್ ಮೆಮೊರಿ, 32 ಜಿಬಿ ವರೆಗೆ ವಿಸ್ತರಿಸಬಹುದು, ಬ್ಯಾಟರಿ ಬ್ಯಾಕಪ್ 3 ಗಂಟೆ.
ಜಗತ್ತಿಗೆ ಅತೀ ಅಗ್ಗದ ನ್ಯಾನೊ ಕಾರು ಪರಿಚಯಿಸಿಕೊಟ್ಟ ನಮ್ಮ ದೇಶ ಇದೀಗ ಅಗ್ಗದ ಟ್ಯಾಬ್ಲೆಟ್ ಕಂಪ್ಯೂಟರ್ ಕೂಡಾ ಪರಿಚಯಿಸಲು ಹೊರಟಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ಸಂಗತಿಯಾಗಿದೆ.