ಮೂವತ್ತು ವರ್ಷ ಸೌದಿಯಲ್ಲಿ ದುಡಿದ ವ್ಯಕ್ತಿಯೊಬ್ಬರು ಇನ್ನು ಊರಿಗೆ ಹೋಗಿ ಸೆಟ್ಲ್ ಆಗುವುದೆಂದು ತೀರ್ಮಾನಿಸಿ ಮಕ್ಕಾಗೆ ಹೋಗಿ ಉಮ್ರಾ ಮಾಡಿ ಬಂದರು. ಆ ಸಂತೋಷ ವಾರ್ತೆಯನ್ನು ಮನೆಗೆ ಹೇಳೋಣ ಎಂದು ಫೋನ್ ಎತ್ತಿದವರು ಐದೇ ನಿಮಿಷದಲ್ಲಿ ಕಣ್ಣೆವೆ ತುಂಬಿಕೊಂಡು ಬಂದು ಕಂಪನಿಗೆ ಕೊಟ್ಟ ರಾಜಿನಾಮೆ ಪತ್ರ ವಾಪಸ್ ಪಡೆದುಕೊಂಡು ಬಿಟ್ರು.
"ಈ ವಯಸ್ಸಿನಲ್ಲಿ ಬಂದು ಇಲ್ಲಿ ಇನ್ನೇನು ಮಾಡ್ತೀರಾ ? ಅಲ್ಲೇ ಇದ್ರೆ ಸಂಬಳವಾದರೂ ಸಿಗುತ್ತಲ್ಲ" ಎಂಬ ಉತ್ತರ ಆ ಕಡೆಯಿಂದ ಸಿಕ್ಕಿತ್ತಂತೆ.
->ಆ ಕಡೆಯವರು ನೋಡಿದ್ದು ಇವರ ಹಣವನ್ನೇ ಹೊರತು ಈ ಕಡೆ ಇರುವ ಇವರನ್ನಲ್ಲ ಎಂಬುದು ಅವರಿಗೆ ವೇದ್ಯವಾಗಿತ್ತು.