Powered By Blogger

Thursday 10 November 2011

ಸೌದಿ ಅರೇಬಿಯಾದ ರಾಜಧಾನಿಯಲ್ಲೊಂದು ಬತಾ ಎಂಬ ವಿದೇಶಿಯರ ಸಾಮ್ರಾಜ್ಯ


Posted on  by ವಿಶ್ವ ಕನ್ನಡಿಗ ನ್ಯೂಸ್

ನಿತಿನ್ ರೈ ಕುಕ್ಕುವಳ್ಳಿ .vknewz.com
ರಿಯಾದ್ :  ಸೌದಿ ಅರೇಬಿಯಾ  ಅಂದಾಕ್ಷಣ ನೆನಪಿಗೆ  ಬರೋದು  ಇಸ್ಲಾಂ ನ  ಪವಿತ್ರ  ಸ್ಥಳಗಳಾದ  ಮಕ್ಕಾ ಮತ್ತು ಮದೀನ  . ಸೌದಿ ಅರೇಬಿಯಾಕ್ಕೆ ಜೀವನ  ಅರಸಿಕೊಂಡು  ಬರೋರು ಅದೆಷ್ಟೋ  ವಿದೇಶಿಯರು .  ಸೌದಿ ಅರೇಬಿಯಾದ  ಮರಳು ಗಾಡು ಅದೆಷ್ಟೋ ಭಾರತೀಯರನ್ನು   , ಬಾಂಗ್ಲಾದೇಶಿಯರನ್ನು   ಯಮನಿಯರನ್ನು  , ಶ್ರೀಲಂಕಾ , ಪಾಕಿಸ್ತಾನಿಯರನ್ನು  ಹೀಗೆ ವಿಶ್ವದ ಹಲವು  ದೇಶದ ಕೆಲಸ ಗಾರರನ್ನು  ಕೈಬೀಸಿ ಕರೆದು ತನ್ನ ಬಳಿಯಲ್ಲಿ  ಕೆಲಸವನ್ನು   ನೀಡಿದೆ.
ಸೌದಿ  ಅರೇಬಿಯಾದ ರಾಜಧಾನಿ  ರಿಯಾದ್  ನ ಒಂದು ಸ್ಥಳ   ಮಾತ್ರ  ಸೌದಿ ಅರೇಬಿಯಾ ದಲ್ಲಿ  ಅತಿ ಹೆಚ್ಚು  ವಿದೇಶೀಯರನ್ನು   ಹೊಂದಿರುವಂತ  ಸ್ಥಳ  ಅದುವೇ ” ಬತಾ  “. ಇದೊಂದು ಮಾರುಕಟ್ಟೆ ಪ್ರದೇಶ .ಈ ಬತಾ ಎಂಬ ಪ್ರಪಂಚಕ್ಕೆ ಪ್ರವೇಶ  ಮಾಡಿದರೆ  ಬೆರಳೆಣಿಕೆಯಷ್ಟು ” ಸೌದಿ ಪ್ರಜೆಗಳು”  ಕಾಣಸಿಗುತ್ತಾರೆ . ಇನ್ನು ಆ  ಪ್ರಪಂಚ ತುಂಬಾ ತುಂಬಿರುವವರು ವಿದೇಶಿ  ಪ್ರಜೆಗಳು. ಅಂದರೆ ಭಾರತ , ಬಾಂಗ್ಲಾದೇಶ , ಪಾಕಿಸ್ತಾನ ,ಫಿಲಿಪೈನ್ ,ಯಮನಿ  ಈ ರೀತಿಯ ವಿದೇಶಿ ಪ್ರಜೆಗಳು.  ಇಲ್ಲಿನ ವ್ಯವಹಾರ ಬಹಳ ವಿಶೇಷವಾದದ್ದು .  ಬತ ದಲ್ಲಿ  ಕೇರಳ ಮಾರುಕಟ್ಟೆ ,ಬಂಗಾಳಿ ಮಾರುಕಟ್ಟೆ ,ಫಿಲಿಪೈನಿ ಮಾರುಕಟ್ಟೆ  ಹೀಗೆ ಒಂದೊಂದು ಹೆಸರಿನ ಮಾರುಕಟ್ಟೆಗಳಿವೆ. ಸೌದಿ ಯಿಂದ  ವಿದೇಶಕ್ಕೆ  ಅತಿಹೆಚ್ಚು ಹಣ  ಹೋಗುವುದು ಕೂಡ  ಇಲ್ಲಿಂದಲೇ .
ಈ ಬತಾ ಅನ್ನೋ  ಸ್ಥಳ ದಲ್ಲಿ ಅನೇಕ ರೀತಿಯ ವ್ಯಾಪಾರಗಳು ನಡಯುತ್ತದೆ . ಅಂಗಡಿ ಮುಂಗಟ್ಟು  ಹೊಂದಿ ವ್ಯಾಪಾರ  ಮಾಡುವವರ ಜೊತೆಗೆ ರಸ್ತೆ ಬದಿಯ ವ್ಯಾಪಾರವೂ ಇಲ್ಲಿ ಸಾಮಾನ್ಯ . ಹಾಗೆ ಸೌದಿ ಅರೇಬಿಯಾದಂತಹ  ಅತೀ  ಕಟ್ಟು ಪಾಡು ಇರೋ ದೇಶದಲ್ಲಿ  ಅತಿ ಹೆಚ್ಚು ಅಕ್ರಮಗಳು ನಡಯುವಂತ ಸ್ಥಳ  ಕೂಡ ಬತಾ .  ಇಲ್ಲಿ ನಡೆಯದ ವ್ಯಾಪಾರಗಲಿಲ್ಲ . ಪವಿತ್ರ  ಇಸ್ಲಾಂ ಪ್ರಕಾರ  ಬಡ್ಡಿ ದರದಲ್ಲಿ  ಹಣವನ್ನು ಕೊಡೋದು  ಅತೀ   ನೀಚ  ಕೃತ್ಯ . ಅದು ನಿಷಿದ್ಧ ಕೂಡ.  ಆದರೆ  ಈ ಬತಾದಲ್ಲಿ  ಬಡ್ಡಿ ಲೆಕ್ಕದಲ್ಲಿ  ಕೋಟಿ ಕೊಟಿ ಹಣ  ಚಲಾವಣೆಯಲ್ಲಿ  ನಡಯುತ್ತೆ ಅನ್ನುತ್ತಾರೆ ಕೆಲವರು. ಆದರೆ ಅದು ಇಲ್ಲಿನ ಆಡಳಿತದ  ಕಣ್ಣು ತಪ್ಪಿಸಿ ನಡೆಯುವ ಕಾರಣ ಹೆಚ್ಚಿನ ಈ ವ್ಯವಹಾರದ  ಜನ ಸಿಕ್ಕಿ ಬೀಳುವುದಿಲ್ಲ.  ಸಿ ಡಿ ವ್ಯಾಪಾರ ಇಲ್ಲಿನ ಮತ್ತೊಂದು ಪ್ರಮುಖ ವ್ಯವಹಾರ .  ಇದರಲ್ಲೇ ಜೀವನ  ಮಾಡೋರನ್ನ ನಾವು  ಬತಾದ ಗಲ್ಲಿ ಗಲ್ಲಿ ಯಲ್ಲಿ ನೋಡುತ್ತೇವೆ . ಮಟ್ಕಾ ದಂಧೆ  ಇಲ್ಲಿ ಅವಿರತವಾಗಿ  ನಡಯುತ್ತಿವೆ ಅನ್ನುತ್ತಾರೆ ಕೆಲವರು .
ಬತಾದಲ್ಲಿ  ಒಳ್ಳೇದು  ಇದೆ ಹಾಗೆ  ಕೆಟ್ಟದ್ದೂ  ಇದೆ . ಒಂದಂತೂ ನಿಜ  . ಕಷ್ಟಪಡುವ  ಅನೇಕ ಜನರಿಗೆ   ಜೀವನ ಕಟ್ಟಿ  ಕೊಟ್ಟಂತಹ  ಸ್ಥಳ  ಅಂದ್ರೆ ಬತಾ . ಇಲ್ಲಿ  ಮತ್ತೆ ಕೆಲವು ಘಟನೆಗಳು ಸಾಮಾನ್ಯ . ನೈಜಿರಿಯ  ಮೂಲದವರು ಇಲ್ಲಿ ಅವಿರತವಾಗಿ  ಒಂಟಿ ವಿದೇಶಿ ಯರು ಸಿಕ್ಕಿದರೆ  ದೋಚುತ್ತಾರೆ ಎಂಬ ದೂರುಗಳು ಆಗಾಗ ಕೇಳಿ ಬರುತ್ತಿರುತ್ತದೆ. ಸಾಮಾನ್ಯ  ರಾತ್ರಿ  ೧೨ ರ ನಂತರ ಇಲ್ಲಿ ಓಡಾಡುವುದು ಬಹಳ  ಕಷ್ಟದ  ವಿಷಯ . ಯಾರದೋ   ದುಡ್ಡು ಯಲ್ಲಮನ  ಜಾತ್ರೆ  ಮಾಡೋರು  ಇಲ್ಲಿ ಇದ್ದಾರೆ. ಆದರೂ ಇಲ್ಲಿ ವಿದೇಶಿ  ಯರ ಸಂಖ್ಯೆ  ಮಾತ್ರ ದಿನದಿಂದ ದಿನಕ್ಕೆ  ಹೆಚ್ಚುತ್ತಲೇ  ಇದೆ.  ಏನೇ ಆದರೂ ಸೌದಿ ಅರೇಬಿಯಾದ  ಒಳಗೊಂದು  ಪ್ರಪಂಚವನ್ನು  ಕಟ್ಟಿದ  ವಿದೇಶಿಯರ  ಸಾಮರ್ಥ್ಯವನ್ನು ಮೆಚ್ಚಲೇ ಬೇಕು.
ವಿಶೇಷ ಲೇಖನ : ನಿತಿನ್ ರೈ ಕುಕ್ಕುವಳ್ಳಿ
ವರದಿಗಾರರು .ವಿಕೆ ನ್ಯೂಸ್ . ರಿಯಾದ್

No comments:

Post a Comment