Powered By Blogger

Tuesday 18 October 2011

ಯುಡಿಯೂರಪ್ಪ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ , ಆಸ್ಪತ್ರೆಯಿಂದ ಮತ್ತೆ ಪರಪ್ಪನ ಅಗ್ರಹಾರಕ್ಕೆ ?



ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯುಡಿಯೂರಪ್ಪ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ ೨೦ ಕ್ಕೆ ಮುಂದೂಡಿದೆ. ಅರ್ಜಿಯ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಪಿಂಟೋ ದೂರುದಾರ ಸಿರಾಜಿನ್ ಭಾಷಾ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿದಾಗ ಅವರ ಸಮಯಾವಕಾಶ ಕೋರಿದ ಹಿನ್ನಲೆಯಲ್ಲಿ ಕೋರ್ಟ್ ಈ ತೀರ್ಪು ನೀಡಿದೆ. ಇದರಿಂದಾಗಿ ಮಧ್ಯಂತರ ಜಾಮೀನಿನ ನಿರೀಕ್ಷೆಯಲ್ಲಿದ್ದ ಯುಡಿಯೂರಪ್ಪ ನಿರಾಸೆ ಅನುಭವಿಸಬೇಕಾಗಿದೆ.
ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುಡಿಯೂರಪ್ಪನವರಿಗೆ ಖ್ಯಾತ ಸರ್ಜನ್ ಡಾ : ಮಂಜುನಾಥ್ ನಿನ್ನೆ ಎಂಜಿಯೋಗ್ರಾಫಿ ಸಹಿತ ವಿವಿಧ ಪರೀಕ್ಷಗಳನ್ನು ನಡೆಸಿದ್ದು ಯುಡಿಯೂರಪ್ಪನವರಿಗೆ ಹೃದಯದಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ ಎಂದಿದ್ದಾರೆ. ನಿನ್ನೆಯೇ ಈ ಕುರಿತು ಹೇಳಿಕೆ ನೀಡಿದ್ದ ಡಾ ಮಂಜುನಾಥ್ ಮಂಗಳವಾರ ಸಂಜೆ ಯುಡಿಯೂರಪ್ಪ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು ಎಂದಿದ್ದರು. ಇದೀಗ ಯಡ್ಡಿ ಜಾಮೀನು ಅರ್ಜಿ ಸಹ ಮುಂದೂಡಲಾಗಿದ್ದು ಆಸ್ಪತ್ರೆಯಿಂದ ನೇರವಾಗಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.

No comments:

Post a Comment